ಬ್ರೇಕಿಂಗ್ ನ್ಯೂಸ್
06-09-23 10:57 pm Mangalore Correspondent ಕರಾವಳಿ
ಮಂಗಳೂರು, ಸೆ.6: ಕೋವಿಡ್ ಬಳಿಕ ಮಂಗಳೂರು ನಗರದಲ್ಲಿ ಸಂಚಾರ ನಿಲ್ಲಿಸಿದ್ದ 13 ಸರಕಾರಿ ಬಸ್ ಗಳನ್ನು ಮರು ಜಾರಿಗೊಳಿಸಬೇಕೆಂದು ಕಾಂಗ್ರೆಸ್ ಜಿಲ್ಲಾ ಕಾನೂನು ಘಟಕದ ಅಧ್ಯಕ್ಷ ಮನೋರಾಜ್ ರಾಜೀವ ನೀಡಿರುವ ಮನವಿಯನ್ನು ರಾಜ್ಯ ಸರಕಾರ ಪುರಸ್ಕರಿಸಿದೆ. ಸೆ.7ರಿಂದಲೇ ದಿನಕ್ಕೊಂದು ಬಸ್ಸಿನಂತೆ 13 ರೂಟ್ ಗಳಲ್ಲಿಯೂ ಸರಕಾರಿ ಬಸ್ ಇಳಿಸುವುದಾಗಿ ಮಂಗಳೂರು ಸಾರಿಗೆ ಡಿಪೋ ಅಧಿಕಾರಿ ರಾಜೇಶ್ ಶೆಟ್ಟಿ ತಿಳಿಸಿದ್ದಾರೆ.
ಇದರಂತೆ, ಶಕ್ತಿನಗರದಿಂದ ಸ್ಟೇಟ್ ಬ್ಯಾಂಕಿಗೆ ಸೆ.7ರಂದು ಬೆಳಗ್ಗೆ 9.45ಕ್ಕೆ ಹೊಸತಾಗಿ ಸರಕಾರಿ ಬಸ್ ಸಂಚಾರ ನಡೆಸಲಿದೆ. ಇದರ ಉದ್ಘಾಟನೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಮಾಡಲಿದ್ದಾರೆ. 13 ಬಸ್ ಗಳಲ್ಲಿ ಮಂಗಳೂರು ವಯಾ ಸುರತ್ಕಲ್ ನಿಂದ ಕಟೀಲು, ಮಂಗಳೂರಿನಿಂದ ಸೋಮೇಶ್ವರ, ಮಂಗಳೂರು ರೈಲ್ವೇ ಸ್ಟೇಶನ್ನಿಂದ ಬಜ್ಪೆ, ಸ್ಟೇಟ್ ಬ್ಯಾಂಕ್ ವೃತ್ತದಿಂದ ಶಕ್ತಿನಗರ, ಕುಂಜತ್ ಬೈಲ್, ಕಾಟಿಪಳ್ಳ, ಕೈಕಂಬ, ಪಿಲಿಕುಳ, ಮಂಗಳಪೇಟೆ, ಬಜಾಲ್ ಚರ್ಚ್, ಫೈಸಲ್ ನಗರ, ತಲಪಾಡಿ, ಕೀನ್ಯಾಕ್ಕೆ ಸರಕಾರಿ ಬಸ್ ಸಂಚಾರ ಇತ್ತು.
ಈ ಪೈಕಿ 11 ಬಸ್ ಗಳು ನರ್ಮ್ ಯೋಜನೆಯಡಿ ಮಂಗಳೂರು ನಗರಕ್ಕೆ ಮಂಜೂರಾಗಿದ್ದ ಸರಕಾರಿ ಬಸ್ಗಳಾಗಿದ್ದವು. ಒಟ್ಟು 22 ನರ್ಮ್ ಬಸ್ ಗಳಲ್ಲಿ ಕೋವಿಡ್ ಬಳಿಕ ಬಹುತೇಕ ಬಸ್ ಗಳನ್ನು ನಿಲ್ಲಿಸಲಾಗಿತ್ತು. ಇದೀಗ ರಾಜ್ಯ ಕಾಂಗ್ರೆಸ್ ಸರಕಾರ ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಸಂಚಾರಕ್ಕೆ ಅವಕಾಶ ಕಲ್ಪಿಸಿದೆ. ಎರಡು ತಿಂಗಳ ಹಿಂದೆಯೇ ಈ ಯೋಜನೆ ಆರಂಭಗೊಂಡಿದ್ದರೂ, ಮಂಗಳೂರು ನಗರದಲ್ಲಿ ಖಾಸಗಿ ಬಸ್ಸುಗಳೇ ಹೆಚ್ಚಿರುವುದರಿಂದ ಇದರ ಲಾಭ ಮಂಗಳೂರಿನ ಮಂದಿಗೆ ಸಿಕ್ಕಿರಲಿಲ್ಲ. ಹೀಗಾಗಿ ನಿಂತು ಹೋಗಿದ್ದ ಈ ಹಿಂದೆ ಸಂಚಾರ ಮಾಡುತ್ತಿದ್ದ ಬಸ್ ಗಳನ್ನು ಮತ್ತೆ ಸಂಚರಿಸುವಂತೆ ಮಾಡಬೇಕೆಂದು ವಕೀಲರೂ ಆಗಿರುವ ಮನೋರಾಜ್ ರಾಜೀವ ಅವರು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಮನವರಿಕೆ ಮಾಡಿದ್ದರು. ಅಲ್ಲದೆ, ಮುಖ್ಯಮಂತ್ರಿ ಆದಿಯಾಗಿ ಅಧಿಕಾರಿ ವರ್ಗಕ್ಕೂ ಮನವಿಯನ್ನು ನೀಡಿದ್ದರು. ಅದರ ಫಲವಾಗಿ ಈಗ ಮತ್ತೆ ಸರಕಾರಿ ಬಸ್ ಗಳನ್ನು ಓಡಿಸಲು ಮಂಗಳೂರು ಕೆಎಸ್ಸಾರ್ಟಿಸಿ ಡಿಪೋ ಒಪ್ಪಿಕೊಂಡಿದೆ.
13 new government buses added to Mangalore city under Shakthi Yogana.
28-11-24 10:41 pm
Bangalore Correspondent
Karkala Drowning, Udupi News; ಕಾರ್ಕಳದ ದುರ್ಗಾ...
28-11-24 09:41 pm
ಲಾಕಪ್ ಡೆತ್ ; ನಾಲ್ವರು ಪೊಲೀಸರಿಗೆ ಏಳು ವರ್ಷ ಜೈಲು...
28-11-24 05:04 pm
MLA Gaviyappa, DK Shivakumar: ಯಾವುದೇ ಕಾರಣಕ್ಕೂ...
26-11-24 10:46 pm
Shivamogga, Monkey fever, Dinesh Gundu Rao: ಮ...
26-11-24 10:23 pm
27-11-24 02:00 pm
HK News Desk
ರಸ್ತೆ ಬದಿ ಮಲಗಿದ್ದ ಅಲೆಮಾರಿ ಗುಂಪಿನ ಮೇಲಿಂದ ಹರಿದ...
27-11-24 12:36 pm
ಕ್ಯುಆರ್ ಕೋಡ್ ಸಹಿತ ಹೊಸ ನಮೂನೆಯ ಪ್ಯಾನ್ 2.0 ಜಾರಿ...
26-11-24 09:43 pm
BJP Devendra Fadnavis, Eknath Shinde: ಮಹಾರಾಷ್...
26-11-24 07:32 pm
ಪ್ರವಾಸೋದ್ಯಮ ಇಲಾಖೆಗೆ ನಿಗದಿಪಡಿಸಿದ್ದ ದರ್ಶನ ಟಿಕೆಟ...
23-11-24 11:07 pm
28-11-24 09:58 pm
Mangalore Correspondent
Mangalore, DFYI protest, Anupam Agarwal: ಪೊಲೀ...
28-11-24 06:05 pm
VHP, Mangalore, Bangladesh: ಬಾಂಗ್ಲಾದೇಶದಲ್ಲಿ ಹ...
28-11-24 03:24 pm
Belthangady suicide, Crime, Mangalore; ನಂಬಿಸಿ...
28-11-24 02:13 pm
Mangalore, Anupam Agarwal, Ramanatha Rai: ರಸ್...
28-11-24 01:56 pm
27-11-24 03:36 pm
HK News Desk
Mangalore, Robbery, Crime : ಕೊಲ್ಯದ ಜಾಯ್ ಲ್ಯಾಂ...
27-11-24 01:11 pm
Mangalore crime, ACP Dhanya Nayak, Drugs: ಎಸಿ...
26-11-24 03:10 pm
ಹುಬ್ಬಳ್ಳಿ ದರೋಡೆ ಪ್ರಕರಣದಲ್ಲಿ ಮಂಗಳೂರು ನಂಟು ; ಉಳ...
25-11-24 06:17 pm
Honeytrap Bangalore, Crime, Udupi: ಪ್ರೊಫೆಸರ್...
24-11-24 04:33 pm