Ganesh Chaturthi 2023, Mangalore, Udupi schools colleges holiday: ಗಣೇಶ ಚತುರ್ಥಿ ; ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಸೆ.19ರಂದೇ ರಜೆ ಘೋಷಣೆ 

16-09-23 08:30 pm       Mangalore Correspondent   ಕರಾವಳಿ

ಈ ಬಾರಿ ಗಣೇಶ ಚತುರ್ಥಿಗೆ ಕರಾವಳಿಯ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಸೆ.19 ರಂದೇ ರಜೆ ಘೋಷಣೆ ಮಾಡಲಾಗಿದೆ.

ಮಂಗಳೂರು, ಸೆ.16: ಈ ಬಾರಿ ಗಣೇಶ ಚತುರ್ಥಿಗೆ ಕರಾವಳಿಯ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಸೆ.19 ರಂದೇ ರಜೆ ಘೋಷಣೆ ಮಾಡಲಾಗಿದೆ. 

ರಾಜ್ಯದಾದ್ಯಂತ ಸೆ.18ರಂದು ಗಣೇಶ ಚತುರ್ಥಿ ರಜೆಯಿದ್ದರೆ, ಕರಾವಳಿಯಲ್ಲಿ ಮಾತ್ರ 19ರಂದು ಚೌತಿ ತಿಥಿಯ ಪ್ರಕಾರ ಗಣೇಶೋತ್ಸವ ಆಚರಣೆಯಾಗುತ್ತದೆ. ಹಾಗಾಗಿ, ಸಾರ್ವತ್ರಿಕ ರಜೆಯನ್ನು ಬದಲು ಮಾಡಬೇಕೆಂದು ಈ ಭಾಗದ ಜನಪ್ರತಿನಿಧಿಗಳು ರಾಜ್ಯ ಸರ್ಕಾರವನ್ನು ಆಗ್ರಹಿಸಿದ್ದರು. ಅದರಂತೆ, ಸ್ಥಳೀಯ ಪರಿಸ್ಥಿತಿ ಅನುಸರಿಸಿ ರಜೆಯ ಬಗ್ಗೆ ನಿರ್ಧರಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಇಲ್ಲಿನ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದರು. 

ಮುಖ್ಯಮಂತ್ರಿ ಸೂಚನೆಯಂತೆ, ಎರಡೂ ಜಿಲ್ಲೆಗಳ ಜಿಲ್ಲಾಧಿಕಾರಿ ರಜೆಯನ್ನು ಮಾರ್ಪಡಿಸಿ ಸೆ.19 ರಂದು ರಜೆ ಘೋಷಿಸಿ ಆದೇಶ ಮಾಡಿದ್ದಾರೆ. ಶಾಲೆ, ಕಾಲೇಜು, ಇತರೇ ಸರ್ಕಾರಿ ಕಚೇರಿ, ಬ್ಯಾಂಕ್ ಎಲ್ಲ ಕಚೇರಿಗಳಿಗೂ ಇದು ಅನ್ವಯ ಆಗಲಿದೆ. ಎರಡು ದಿನಗಳ ಹಿಂದೆಯಷ್ಟೆ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್, ರಜೆಯನ್ನು ಮಾರ್ಪಡಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದರು. ಇದರೊಂದಿಗೆ ರಜೆಯ ಗೊಂದಲ ನಿವಾರಣೆ ಆದಂತಾಗಿದೆ.

Ganesh Chaturthi 2023, Mangalore and Udupi schools and colleges declared holiday from September 19.