ಬ್ರೇಕಿಂಗ್ ನ್ಯೂಸ್
17-09-23 09:36 pm Mangalore Correspondent ಕರಾವಳಿ
ಮಂಗಳೂರು, ಸೆ.17: ಸ್ವಾತಂತ್ರ್ಯ ಕಾಲದಲ್ಲಿ ಜನರನ್ನು ಒಟ್ಟುಗೂಡಿಸಲು ಮೊದಲ ಬಾರಿಗೆ ಸಾರ್ವಜನಿಕ ಗಣೇಶೋತ್ಸವ ಆಚರಣೆಗೆ ಬಂದಿತ್ತು. ಆದರೆ, ಮಂಗಳೂರಿನ ಈ ಕುಟುಂಬ ಅದಕ್ಕೂ ಮೊದಲಿನಿಂದಲೇ ಗಣೇಶನ ಮೂರ್ತಿಗಳನ್ನು ತಯಾರಿಸುವ ಕಾಯಕ ಮಾಡಿಕೊಂಡು ಬಂದಿದೆ. ಈ ಕುಟುಂಬದ ಸದಸ್ಯರು ಪ್ರತಿ ವರ್ಷ ತಮ್ಮೆಲ್ಲಾ ಕೆಲಸಗಳನ್ನು ಬದಿಗೊತ್ತಿ ತಿಂಗಳ ಕಾಲ ಮೂರ್ತಿ ತಯಾರಿಕೆಯಲ್ಲಿ ತೊಡಗುತ್ತಾರೆ.
ಅವರದ್ದು ದಣಿವರಿಯದ ಕಾಯಕ. ವಯಸ್ಸು ಮಾಗಿದರೂ ಗಣಪತಿ ತಯಾರಿಕೆಯಲ್ಲಿ ಬಿಟ್ಟೂ ಬಿಡದ ತನ್ಮಯತೆ. ಮಂಗಳೂರಿನ ಮಣ್ಣಗುಡ್ಡದಲ್ಲಿರುವ ರಾಮಚಂದ್ರ ರಾವ್ ಕುಟುಂಬಸ್ಥರು ನಾಲ್ಕು ತಲೆಮಾರುಗಳಿಂದಲೂ ಕಳೆದ 94 ವರ್ಷಗಳಿಂದ ಪ್ರತಿ ವರ್ಷ ಗಣಪತಿ ತಯಾರಿಸುತ್ತ ಬಂದಿದ್ದಾರೆ. ಹಾಗಂತ, ಇವರೇನೂ ಗಣಪತಿ ಮೂರ್ತಿ ತಯಾರಿಸಿ ಮಾರುವ ವ್ಯಾಪಾರಿಗಳಲ್ಲ. ಕಲಾವಿದರೂ ಅಲ್ಲ. ಗಣೇಶನ ಮೇಲಿನ ಭಕ್ತಿ, ನಿಷ್ಠೆಯಿಂದಲೇ ಇವರ ಕುಟುಂಬಸ್ಥರೆಲ್ಲ ಸೇರಿ ಪ್ರತಿ ವರ್ಷ ಗಣಪತಿ ಮೂರ್ತಿ ತಯಾರಿಸುತ್ತಾರೆ.
ಸತತ 94 ವರ್ಷದಿಂದ ರಾಯರ ಕುಟುಂಬ ನಿರಂತರವಾಗಿ ಈ ಸೇವೆ ಮಾಡಿಕೊಂಡು ಬಂದಿದೆ. ಪ್ರತಿ ಬಾರಿಯೂ ಮೊದಲೇ ಬಂದು ಆರ್ಡರ್ ಕೊಟ್ಟವರಿಗೆ ಮಾತ್ರ ಇವರು ಆವೆ ಮಣ್ಣಿನಿಂದ ತಯಾರಿಸಿದ ಮೂರ್ತಿಗಳನ್ನು ಮಾಡಿಕೊಡುತ್ತಾರೆ. ಗಣೇಶ ಹುಟ್ಟಿದ ಚಿತ್ರಾ ನಕ್ಷತ್ರ ಅಂದರೆ, ಒಂದು ತಿಂಗಳ ಹಿಂದಿನಿಂದಲೇ ಇವರು ಗಣಪತಿ ಮೂರ್ತಿ ತಯಾರಿಯಲ್ಲಿ ತೊಡಗುತ್ತಾರೆ. ಗಣೇಶೋತ್ಸವದ ಚೌತಿ ನಕ್ಷತ್ರದ ವೇಳೆಗೆ ಗಣಪತಿ ಮೂರ್ತಿಗಳು ರೆಡಿಯಾಗುತ್ತವೆ.
ಮಂಗಳೂರು, ಉಡುಪಿ, ಕಾಸರಗೋಡು ಜಿಲ್ಲೆಯಲ್ಲಿ ಬಹುತೇಕರು ಇವರು ತಯಾರಿಸಿದ ಗಣಪತಿ ಮೂರ್ತಿಗಳನ್ನೇ ಒಯ್ಯುತ್ತಾರೆ. ಮಂಗಳೂರಿನ ಸಂಘನಿಕೇತನದಲ್ಲಿ ನಡೆಯುವ ಸಾರ್ವಜನಿಕ ಗಣೇಶೋತ್ಸವಕ್ಕೆ 76 ವರ್ಷಗಳಿಂದಲೂ ಇವರೇ ದೊಡ್ಡ ಗಾತ್ರದ ಗಣೇಶನ ಮೂರ್ತಿ ತಯಾರಿಸಿ ಕೊಡುತ್ತಾರೆ. ಈ ಬಾರಿಯೂ ಇವರಿಗೆ 260 ಕಡೆಗಳಿಂದ ಗಣೇಶನ ಮೂರ್ತಿಗೆ ಬೇಡಿಕೆ ಬಂದಿತ್ತು. ದೇಶ- ವಿದೇಶದಲ್ಲಿ ನೆಲೆಸಿರುವ ಇವರ ಕುಟುಂಬದ ಅಜ್ಜನಿಂದ ತೊಡಗಿ ಮಕ್ಕಳು, ಮೊಮ್ಮಕ್ಕಳು, ಮರಿ ಮಕ್ಕಳೆಲ್ಲ ಈ ಒಂದು ತಿಂಗಳಲ್ಲಿ ತಮ್ಮ ಕೆಲಸವನ್ನೆಲ್ಲ ಬದಿಗಿಟ್ಟು ಗಣಪತಿ ತಯಾರಿಯಲ್ಲಿ ಜೊತೆಯಾಗುತ್ತಾರೆ. ಈ ಬಾರಿ ಅಮೆರಿಕದ ಕ್ಯಾಲಿಫೋರ್ನಿಯಾಕ್ಕೂ ಇವರು ತಯಾರಿಸಿದ ಗಣೇಶನ ಮೂರ್ತಿ ರವಾನೆಯಾಗಿದೆ. ನಾನಾ ಕಡೆಗಳಲ್ಲಿ ಪೂಜಿಸುವ ಗಣಪತಿ ಮೂರ್ತಿಗಳನ್ನು ನೋಡಲು ಜನರೂ ಆಗಮಿಸುತ್ತಾರೆ.
ಹೀಗಾಗಿ ಇವರ ಮನೆಯ ಅಂಗಳದಲ್ಲೀಗ ಗಣಪತಿ ಮೂರ್ತಿಗಳೆಲ್ಲ ತುಂಬಿಕೊಂಡಿವೆ. ಹತ್ತು ಇಂಚು ಎತ್ತರದಿಂದ ತೊಡಗಿ ಹತ್ತಡಿ ಎತ್ತರದ ವರೆಗೂ ಗಣಪತಿ ಮೂರ್ತಿಗಳು ರೆಡಿಯಾಗಿ ನಿಂತಿವೆ. ಗಣಪತಿ ಬಪ್ಪಾ ಮೋರ್ಯಾ ಎನ್ನುತ್ತಲೇ ಇಲ್ಲಿಂದ ನೂರಾರು ಮಂದಿ ಗಣಪತಿ ಮೂರ್ತಿಗಳನ್ನು ಎತ್ತಿಕೊಂಡು ತಮ್ಮ ಮನೆಗಳಿಗೆ ಒಯ್ಯುತ್ತಾರೆ. ಇಲ್ಲಿ ಪೂಜೆಗೂ ಮೊದಲಿನ ನಿರಾಡಂಭರ ಗಣಪತಿ ಮೂರ್ತಿಗಳನ್ನು ನೋಡುವುದೇ ಚೆಂದ.
Mangalore family involved in making Ganesha Idols For the last 94 Years.
26-09-23 08:57 pm
HK News Desk
Bengaluru Bandh, Cauvery water: ಕಾವೇರಿ ಹೋರಾಟ...
26-09-23 05:41 pm
Tumkur Car Accident: ತುಮಕೂರು ; ರಥೋತ್ಸವ ಕಾರ್ಯಕ...
26-09-23 12:37 pm
Hd Kumaraswamy, Bengaluru Bandh Cauvery: ಇದೇನ...
26-09-23 12:28 pm
Bengaluru, City police commissioner, Cauvery...
25-09-23 07:09 pm
26-09-23 07:44 pm
HK News Desk
Goa Deltin Royale Casino GST Notice, 17 thous...
26-09-23 06:32 pm
Kasaragod accident, five dead: ಬದಿಯಡ್ಕ ಬಳಿ ಭೀ...
25-09-23 11:06 pm
Delhi,AIADMK-BJP alliance: ತಮಿಳುನಾಡು ಬಿಜೆಪಿಗೆ...
25-09-23 09:32 pm
Jog falls drowning: ಜೋಗ್ ಫಾಲ್ಸ್ ಸಮೀಪ ದುರಂತ ;...
24-09-23 09:05 pm
26-09-23 02:24 pm
Mangalore Correspondent
Subramanya, illegal cattle Cow trafficking, M...
26-09-23 10:52 am
Mangalore Dinesh Gundu Rao, Janatha Darshana:...
25-09-23 09:38 pm
Mangalore Eid Milad 2023, Banner Fish Bunder:...
25-09-23 06:17 pm
Ullal Suicide, Train Mangalore; ರೈಲಿನಡಿಗೆ ಹಾರ...
25-09-23 05:22 pm
26-09-23 07:20 pm
HK News Desk
Udupi, OTP Fraud, Kapu: ಬ್ಯಾಂಕ್ ಅಧಿಕಾರಿ ಎಂದು...
24-09-23 10:27 pm
Mangalore Rowdy Sheeter Tallat arrested by CC...
20-09-23 11:43 am
ಸುಳ್ಯಕ್ಕೆ ಬಂದಿದ್ದ ಕೊಡಗಿನ ಯುವಕನಿಗೆ ಹಲ್ಲೆಗೈದು ದ...
19-09-23 09:31 pm
Bantwal Robbery: ಬಂಟ್ವಾಳ ; ಹಗಲು ವೇಳೆ ಮನೆಗೆ ನು...
18-09-23 10:59 pm