ಬ್ರೇಕಿಂಗ್ ನ್ಯೂಸ್
21-09-23 11:02 pm Mangalore Correspondent ಕರಾವಳಿ
ಮಂಗಳೂರು, ಸೆ.21: ಕೇಂದ್ರ ಸರಕಾರ ಮತ್ತೆ ಒಂಬತ್ತು ವಂದೇ ಭಾರತ್ ವಿಶೇಷ ರೈಲುಗಳನ್ನು ಪ್ರಕಟಿಸಿದ್ದು, ಸೆ.24ರಂದು ಪ್ರಧಾನಿ ಮೋದಿ ಚಾಲನೆ ನೀಡಲಿದ್ದಾರೆ. ವಿಶೇಷ ಅಂದ್ರೆ, ಕೇರಳದ ಕಾಸರಗೋಡಿನಿಂದ ತಿರುವನಂತಪುರಕ್ಕೆ ಮತ್ತೊಂದು ವಂದೇ ಭಾರತ್ ರೈಲು ನೀಡಿದ್ದರೆ, ಮಂಗಳೂರಿನ ಜನರ ಬೇಡಿಕೆಗೆ ಸ್ಪಂದನೆ ಸಿಕ್ಕಿಲ್ಲ.
ತಮಿಳುನಾಡಿನ ಚೆನ್ನೈಗೆ ಮತ್ತು ಪಶ್ಚಿಮ ಬಂಗಾಳದ ಹೌರಾಗೆ ಎರಡು ರೈಲು, ಕೇರಳ, ಒಡಿಶಾ, ತೆಲಂಗಾಣ, ಗುಜರಾತ್, ರಾಜಸ್ಥಾನಕ್ಕೆ ತಲಾ ಒಂದು ರೈಲು ನೀಡಲಾಗಿದೆ. ಈ ಸೆಮಿ ಹೈಸ್ಪೀಡ್ ರೈಲಿನಲ್ಲಿ ಎಂಟು ಕೋಚ್ ಇರಲಿದೆ. ಹೌರಾದಿಂದ ಪಾಟ್ನಾಗೆ ಮತ್ತು ಜಾರ್ಖಂಡಿನ ರಾಂಚಿಗೆ ಹೊಸತಾಗಿ ವೇಗದ ರೈಲು ಓಡಲಿದೆ. ಇದೇ ವೇಳೆ, ಚೆನ್ನೈ ನಗರದಿಂದ ತಿರುನಲ್ವೇಲಿ ಮತ್ತು ಆಂಧ್ರ ಪ್ರದೇಶದ ವಿಜಯವಾಡಕ್ಕೆ ಏಕಕಾಲದಲ್ಲಿ ಎರಡು ರೈಲು ಓಡಾಟ ನಡೆಸಲಿದೆ. ಒಡಿಶಾದಲ್ಲಿ ರೂರ್ಕೆಲಾ- ಪುರಿ, ರಾಜಸ್ಥಾನದಲ್ಲಿ ಉದಯಪುರ- ಜೈಪುರ, ಕೇರಳದಲ್ಲಿ ಕಾಸರಗೋಡು – ತಿರುವನಂತಪುರ, ಗುಜರಾತಿನ ಜಾಮ್ ನಗರದಿಂದ ಅಹ್ಮದಾಬಾದ್, ತೆಲಂಗಾಣದಲ್ಲಿ ಹೈದರಾಬಾದ್- ಬೆಂಗಳೂರು ವಿಶೇಷ ರೈಲು ಓಡಾಟ ನಡೆಸಲಿದೆ.
ತಮಿಳುನಾಡಿನಲ್ಲಿ ಈಗಾಗಲೇ ಕೊಯಂಬತ್ತೂರು- ಚೆನ್ನೈ ಮತ್ತು ಚೆನ್ನೈ- ಮೈಸೂರು ನಡುವೆ ಎರಡು ವಂದೇ ಭಾರತ್ ರೈಲು ಕಳೆದ ನವೆಂಬರ್ ತಿಂಗಳಿನಿಂದಲೇ ಓಡಾಟ ನಡೆಸುತ್ತಿದೆ. ಇದೀಗ ತಿರುನಲ್ವೇಲಿ ಮತ್ತು ವಿಜಯವಾಡ ನಗರಗಳಿಗೆ ಚೆನ್ನೈನಿಂದ ಮತ್ತೆರಡು ವಂದೇ ಭಾರತ್ ರೈಲು ಜಾರಿಗೊಳಿಸಲಾಗಿದೆ. ಆಮೂಲಕ ತಮಿಳುನಾಡಿನಲ್ಲಿ ಐದು ಕಡೆಗಳಲ್ಲಿ ಎಕ್ಸ್ ಪ್ರೆಸ್ ವಿಶೇಷ ರೈಲು ಓಡುವಂತಾಗಿದೆ. ಎರಡು ನಗರಗಳ ಮಧ್ಯೆ ಅತಿ ವೇಗದಲ್ಲಿ ತಲುಪುವ ಸಲುವಾಗಿ ವಂದೇ ಭಾರತ್ ರೈಲು ಜಾರಿಗೆ ತರಲಾಗಿತ್ತು. ಕೇರಳದಲ್ಲಿ ಕಾಸರಗೋಡಿನಿಂದ ತಿರುವನಂತಪುರಕ್ಕೆ ಈಗಾಗಲೇ ಒಂದು ರೈಲು ಓಡಾಟ ನಡೆಸುತ್ತಿದೆ. ಆದರೆ ಇದೇ ಎರಡು ನಗರಗಳ ಮಧ್ಯೆ ಮತ್ತೊಂದು ವಿಶೇಷ ರೈಲನ್ನು ವ್ಯವಸ್ಥೆ ಮಾಡಲಾಗಿದ್ದು, ಇದರ ಸಾಗುವಿಕೆ ದಾರಿ ಬೇರೆ ಬೇರೆಯಾಗಿದೆ. ಈಮೂಲಕ ಎರಡು ನಗರಗಳ ಮಧ್ಯೆ ಜನರ ಸಂಪರ್ಕಕ್ಕೆ ಮತ್ತೊಂದು ರೀತಿಯ ಸೌಲಭ್ಯ ಸಿಕ್ಕಂತಾಗಿದೆ.
ಮಂಗಳೂರಿಗಿಲ್ಲ ವಂದೇ ಭಾರತ್ ರೈಲು
ಮಂಗಳೂರು ನಗರದಿಂದ ಕೇವಲ 50 ಕಿಮೀ ದೂರದ ಕಾಸರಗೋಡಿನಿಂದ ತಿರುವನಂತಪುರಕ್ಕೆ ವಂದೇ ಭಾರತ್ ರೈಲು ಓಡಾಟ ನಡೆಸುತ್ತಿದ್ದರೆ, ಮಂಗಳೂರಿಗೆ ರೈಲು ಬರದೇ ಇರುವ ಬಗ್ಗೆ ಕರಾವಳಿ ಭಾಗದ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕಾಸರಗೋಡು ರೈಲನ್ನೇ ಮಂಗಳೂರಿಗೆ ವಿಸ್ತರಿಸಲು ಮಂಗಳೂರು ಸಂಸದ ನಳಿನ್ ಕುಮಾರ್ ಇತ್ತೀಚೆಗೆ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಗೆ ಮನವಿಯನ್ನೂ ಒಪ್ಪಿಸಿದ್ದರು. ಆದರೆ, ಮಂಗಳೂರಿನಿಂದ ಹೊಸ ರೈಲನ್ನು ನೀಡುವ ಬದಲು ಮತ್ತೆ ಕೇರಳದ ಕಾಸರಗೋಡಿನಿಂದಲೇ ತಿರುವನಂತಪುರಕ್ಕೆ ಮತ್ತೊಂದು ರೈಲು ನೀಡಿದ್ದು, ಕರ್ನಾಟಕ ಕರಾವಳಿಯ ಸಂಸದರ ಮನವಿಗೆ ಬೆಲೆ ಇಲ್ಲ ಎನ್ನುವುದನ್ನು ತೋರಿಸಿದ್ದಾರೆ.
ಮಂಗಳೂರು- ಬೆಂಗಳೂರು ಮಧ್ಯೆ ವಿದ್ಯುದೀಕರಣ ಆಗಿಲ್ಲ ಎಂಬ ನೆಪ ಹೇಳುತ್ತಿದ್ದರೂ, ಗೋವಾ- ಮಂಗಳೂರು ಅಥವಾ ಮುಂಬೈ – ಮಂಗಳೂರು ಮಧ್ಯೆ ವಂದೇ ಭಾರತ್ ರೈಲು ಓಡಿಸಲು ಸಮಸ್ಯೆ ಇಲ್ಲ. ಈ ಭಾಗದ ಸಂಸದರ ನಿರ್ಲಕ್ಷ್ಯ ಮತ್ತು ಕೇಂದ್ರದಲ್ಲಿ ಚೆನ್ನಾಗಿ ಹಿಡಿತ ಇಲ್ಲದಿರುವ ಅಸಾಮರ್ಥ್ಯವೇ ಕರಾವಳಿ ಭಾಗದ ಜನ ಎಕ್ಸ್ ಪ್ರೆಸ್ ರೈಲಿನ ಸೌಲಭ್ಯದಿಂದ ವಂಚಿತರಾಗಲು ಕಾರಣ ಎನ್ನುವ ಮಾತು ಕೇಳಿಬಂದಿದೆ.
In a first for India, Prime Minister Narendra Modi will flag-off 9 Vande Bharat Express, India's fastest train on September 24, 2023. The semi-high speed train is running on 25 routes currently and with the inauguration, the total routes will reach 34.
22-07-25 11:10 pm
Bangalore Correspondent
GST Notices: ಜಿಎಸ್ಟಿ ತೆರಿಗೆ ನೋಟಿಸ್ ; ವ್ಯಾಪಾರಸ...
22-07-25 10:41 pm
GST Notice, Union Minister Pralhad Joshi: ರಾಜ...
22-07-25 10:30 pm
Mandya Bakery, Cake, Sealed: ಕಲರ್ ಫುಲ್ ಕೇಕ್ ನ...
22-07-25 03:02 pm
Dharmasthala Case, SIT, BJP: ಧರ್ಮಸ್ಥಳ ಪ್ರಕರಣ...
21-07-25 10:38 pm
22-07-25 07:21 pm
HK News Desk
Shashi Tharoor, Thiruvananthapuram: ಶಶಿ ತರೂರ್...
22-07-25 03:04 pm
ಕೇರಳ ನರ್ಸ್ ನಿಮಿಷಾ ಪ್ರಿಯಾ ಗಲ್ಲು ಶಿಕ್ಷೆಗೆ ತಡೆ ;...
22-07-25 12:58 pm
ಕೇರಳ ಮಾಜಿ ಮುಖ್ಯಮಂತ್ರಿ, ಶತಾಯುಷಿ, ಸಿಪಿಎಂ ಸ್ಥಾಪಕ...
21-07-25 11:23 pm
Brijesh Chowta, Mangalore, MP: ಸ್ಟ್ಯಾಂಡ್ ಅಪ್...
21-07-25 11:20 pm
23-07-25 12:00 pm
Mangalore Correspondent
Dharmasthala SIT Latest News; ಧರ್ಮಸ್ಥಳ ಎಸ್ಐಟಿ...
23-07-25 10:19 am
Puttur Bus News; ಮಂಗಳೂರು-ಪುತ್ತೂರು ಬಸ್ ನಲ್ಲಿ ಯ...
22-07-25 11:13 pm
ಧರ್ಮಸ್ಥಳ ಕೇಸ್ ; ಸಹಾಯವಾಣಿ ಆರಂಭಿಸುವಂತೆ ರಾಜ್ಯ ಸರ...
22-07-25 10:57 pm
Mangalore Yathicorp AI: ಯತಿಕಾರ್ಪ್ ಸಂಸ್ಥೆಯಿಂದ...
22-07-25 09:42 pm
23-07-25 11:36 am
Udupi Correspondent
Mangalore CCB Police, Arrest, Crime: ಸಿಸಿಬಿ ಕ...
22-07-25 09:45 pm
Kalaburagi Jewellery Robbery, Arrest: ಕಲಬುರಗಿ...
22-07-25 12:38 pm
BJP MLA Prabhu Chauhan Son, Rape; ಮದುವೆ ಆಗ್ತೀ...
21-07-25 11:01 pm
Roshan Saldanha Fraud, CID Case: ಬಿಹಾರ ಉದ್ಯಮಿ...
21-07-25 10:17 pm