ಬ್ರೇಕಿಂಗ್ ನ್ಯೂಸ್
22-09-23 10:51 pm Mangalore Correspondent ಕರಾವಳಿ
ಮಂಗಳೂರು, ಸೆ.22: ಅಪರಾಧ ಪ್ರಕರಣಗಳನ್ನು ಬೆನ್ನುಬಿದ್ದು ಪತ್ತೆ ಮಾಡುವುದರಲ್ಲಿ ನಿಷ್ಣಾತನಾಗಿದ್ದ, ಮಂಗಳೂರಿನಲ್ಲಿ 14 ವರ್ಷಗಳಿಂದಲೂ ಸ್ಪೆಷಲ್ ಸೀಕ್ರೆಟ್ ಏಜಂಟ್ ಆಗಿಯೇ ಕೆಲಸ ಮಾಡುತ್ತಿದ್ದ ಹೆಡ್ ಕಾನ್ಸ್ ಟೇಬಲ್ ಚಂದ್ರ ಅಡೂರು(49) ಕೆಲಕಾಲದ ಅಸೌಖ್ಯದ ಬಳಿಕ ಕೊನೆಯುಸಿರೆಳೆದಿದ್ದಾರೆ.
ಮಂಗಳೂರು ಸಿಸಿಬಿ, ಸಿಸಿಆರ್ ಬಿ, ಹಿಂದೆ ಡಿಸಿಐಬಿಯಲ್ಲಿ ಕೆಲಸ ಮಾಡಿದ್ದ ಚಂದ್ರ ಅಡೂರು ಮಂಗಳೂರಿನ ಅಪರಾಧ ಲೋಕದ ಬಗ್ಗೆ ಅತಿ ಹೆಚ್ಚು ಮಾಹಿತಿ ಹೊಂದಿದ್ದವರಲ್ಲಿ ಕೆಲವೇ ಮಂದಿಯಲ್ಲಿ ಒಬ್ಬರು. ಸೀಕ್ರೆಟ್ ಆಗಿಯೇ ಕ್ರೈಮ್ ಗುಪ್ತಚರನಾಗಿ ಕೆಲಸ ಮಾಡುತ್ತಿದ್ದ ಚಂದ್ರಣ್ಣ ಕೇರಳದ ಕಾಸರಗೋಡು ಜಿಲ್ಲೆಯ ಅಡೂರಿನವರು. 1996ರಲ್ಲಿ ಕರ್ನಾಟಕ ಪೊಲೀಸ್ ಇಲಾಖೆ ಸೇರಿದ್ದ ಇವರು ಮೊದಲ ಬಾರಿಗೆ ಪಣಂಬೂರು ಠಾಣೆಯಲ್ಲಿ ಕೆಲಸ ಆರಂಭಿಸಿದ್ದರು. ಆನಂತರ, ಉಳ್ಳಾಲ, ಕಂಕನಾಡಿ ಠಾಣೆಗಳಲ್ಲಿ ಕೆಲಸ ಮಾಡಿ, ಜಿಲ್ಲಾ ಅಪರಾಧ ಪತ್ತೆದಳ (ಡಿಸಿಐಬಿ) ಸೇರಿದ್ದರು.
ಇನ್ಸ್ ಪೆಕ್ಟರ್ ಜಯಂತ್ ಶೆಟ್ಟಿ ಜೊತೆಗೆ ಬಲಗೈಯಂತೆ ಕೆಲಸ ಮಾಡಿದ್ದವರಲ್ಲಿ ಚಂದ್ರ ಅಡೂರು ಕೂಡ ಒಬ್ಬರು. 2009ರಲ್ಲಿ ಕಮಿಷನರೇಟ್ ಆದಬಳಿಕ ಚಂದ್ರ ಅವರನ್ನು ಅಪರಾಧ ಪ್ರಕರಣಗಳ ಪತ್ತೆಗಾಗಿಯೇ ಕ್ರೈಮ್ ಗುಪ್ತಚರನಾಗಿ ನೇಮಕ ಮಾಡಲಾಗಿತ್ತು. ಆನಂತರ, ಅವರನ್ನು ಯಾವುದೇ ವಿಭಾಗಕ್ಕೆ ನೇಮಕ ಮಾಡಿದರೂ, ಕಮಿಷನರ್ ಅಡಿಯಲ್ಲಿ ಕೆಲಸ ಮಾಡುವ ಗುಪ್ತಚರನಾಗಿಯೇ ಇದ್ದರು. ಇದೇ ಕಾರಣದಿಂದ ಅವರಿಗೆ ಹಿರಿಯ ಐಪಿಎಸ್ ಅಧಿಕಾರಿಗಳ ಜೊತೆಗೆ ನೇರ ಸಂಪರ್ಕ ಇತ್ತು. ಹೆಡ್ ಕಾನ್ಸ್ ಟೇಬಲ್ ಆಗಿದ್ದರೂ ಬೆಂಗಳೂರಿನಲ್ಲಿ ಐಜಿಪಿ, ಎಡಿಜಿಪಿ ಲೆವೆಲ್ ನಲ್ಲಿ ಒಳ್ಳೆಯ ಸಂಪರ್ಕ ಇಟ್ಟುಕೊಂಡಿದ್ದರು. ತಮ್ಮ ಕರ್ತವ್ಯ ನಿಷ್ಠೆಗಾಗಿ ಚಂದ್ರ ಅಡೂರು ಸಣ್ಣ ವಯಸ್ಸಿನಲ್ಲೇ ಪೊಲೀಸರಿಗೆ ಸಿಗುವ ಅತ್ಯುನ್ನತ ಗೌರವ ರಾಷ್ಟ್ರಪತಿ ಪದಕವನ್ನೂ ಪಡೆದಿದ್ದರು.
ಎರಡು ವರ್ಷಗಳ ಹಿಂದೆ ಸಿಸಿಬಿಯಿಂದ ಅವರನ್ನು ಸಿಸಿಆರ್ ಬಿ ವಿಭಾಗಕ್ಕೆ ವರ್ಗಾವಣೆ ಮಾಡಲಾಗಿತ್ತು. ಅಲ್ಲಿದ್ದಾಗಲೇ ಮೂರು ತಿಂಗಳ ಹಿಂದೆ ಅನಾರೋಗ್ಯ ಉಂಟಾಗಿದ್ದು ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಲಿವರ್, ಕಿಡ್ನಿ ತೊಂದರೆ ಎದುರಿಸುತ್ತಿದ್ದ ಚಂದ್ರಣ್ಣ ಹತ್ತು ದಿನಗಳ ಹಿಂದೆ ಡಿಸ್ಚಾರ್ಜ್ ಆಗಿದ್ದರಂತೆ.
ಕರ್ತವ್ಯಕ್ಕೆ ರಜೆಯಲ್ಲಿದ್ದ ಅವರಿಗೆ ಗುರುವಾರ ಮತ್ತೆ ಜ್ವರ ಕಾಣಿಸಿಕೊಂಡಿದ್ದು, ಇಂದು ಬೆಳಗ್ಗೆ ಅಸ್ವಸ್ಥರಾಗಿದ್ದರು. ಹಾಗಾಗಿ ಅವರನ್ನು ಫಾದರ್ ಮುಲ್ಲರ್ ಆಸ್ಪತ್ರೆಗೆ ತಂದಿದ್ದು ಅಲ್ಲಿ ಐಸಿಯು ಇರಲಿಲ್ಲ. ಆನಂತರ, ಎಜೆ ಆಸ್ಪತ್ರೆಯಲ್ಲಿಯೂ ಐಸಿಯು ಇಲ್ಲದ ಕಾರಣ ದೇರಳಕಟ್ಟೆಯ ಕೆಎಸ್ ಹೆಗ್ಡೆ ಆಸ್ಪತ್ರೆಗೆ ತುರ್ತಾಗಿ ಒಯ್ಯಲಾಗಿತ್ತು. ಅಷ್ಟರಲ್ಲೇ ಅವರು ಸಾವನ್ನಪ್ಪಿದ್ದಾರೆ ಎಂದು ಅವರ ಸಹವರ್ತಿಗಳು ತಿಳಿಸಿದ್ದಾರೆ. ಚಂದ್ರ ಅಡೂರು ಪತ್ನಿ ಮತ್ತು ಇಬ್ಬರು ಪುತ್ರರನ್ನು ಅಗಲಿದ್ದಾರೆ.
Mangalore crime secret agent head constable Chandra adoor passes away at 49 after falling into illness
08-05-25 11:07 pm
Bangalore Correspondent
U T Khader, Dinesh Gundurao, Suhas Shetty Mur...
08-05-25 07:50 pm
Karwar high alert: ಕಾರವಾರದಲ್ಲಿ ಹೈ ಎಲರ್ಟ್ ; ಸಮ...
08-05-25 12:23 pm
Special Poojas, Indian Army, Minister Ramalin...
07-05-25 04:07 pm
ಭಾರತ - ಪಾಕ್ ಮಧ್ಯೆ ಉದ್ವಿಗ್ನ ಸ್ಥಿತಿ ; ಮೇ 7 ರಂದು...
06-05-25 11:23 pm
09-05-25 12:33 pm
HK News Desk
India - Pak War update: ಪಾಕಿಸ್ತಾನದ ಎಫ್ -16, ಎ...
09-05-25 12:00 am
New Pope, Robert Francis Prevost;140 ಕೋಟಿ ಸದಸ...
08-05-25 11:44 pm
Pak drone-missile attack; ಚೈನಾ ಮೇಡ್ ಲಾಹೋರ್ ಏರ...
08-05-25 04:57 pm
ರಾಷ್ಟ್ರಪತಿ ದ್ರೌಪದಿ ಮುರ್ಮು ಮೇ 18ರಂದು ಶಬರಿಮಲೆಗೆ...
08-05-25 12:47 pm
09-05-25 03:24 pm
Mangalore Correspondent
Suhas Shetty Murder Case, Speaker UT Khader,...
09-05-25 01:32 pm
Ullal accident, Mangalore: ರಸ್ತೆ ದಾಟುತ್ತಿದ್ದ...
08-05-25 10:54 pm
Satish Kumapla, Mangalore, U T Khader: ಮೂಡಾ ಅ...
08-05-25 09:06 pm
Mangalore Rohan Corporation, Shah Rukh Khan:...
08-05-25 04:52 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm