ಬ್ರೇಕಿಂಗ್ ನ್ಯೂಸ್
24-09-23 07:19 pm Udupi Correspondent ಕರಾವಳಿ
ಉಡುಪಿ, ಸೆ.24: ಕಾರ್ಕಳದಲ್ಲಿ ಕಳೆದ ಜನವರಿಯಲ್ಲಿ ಉದ್ಘಾಟನೆಗೊಂಡ ಪರಶುರಾಮ ಥೀಮ್ ಪಾರ್ಕ್ ಭಾರೀ ಜನಾಕರ್ಷಣೆಗೆ ಕಾರಣವಾಗಿತ್ತು. ಕಳೆದ ಬೇಸಗೆಯಲ್ಲಿ ಭಾರೀ ಸಂಖ್ಯೆಯಲ್ಲಿ ಪ್ರವಾಸಿಗರು ಥೀಮ್ ಪಾರ್ಕ್ ನೋಡಲು ಮುಗಿಬಿದ್ದಿದ್ದರು. ಆದರೆ, ಜೂನ್ ಕೊನೆಯಲ್ಲಿ ಹಠಾತ್ತಾಗಿ ಥೀಮ್ ಪಾರ್ಕ್ ಪ್ರವೇಶಕ್ಕೆ ಪ್ರವಾಸಿಗರಿಗೆ ನಿಷೇಧ ವಿಧಿಸಲಾಗಿತ್ತು. ಯಾಕಾಗಿ ನಿಷೇಧ ಅನ್ನುವುದಕ್ಕೆ ಸರಿಯಾದ ಮಾಹಿತಿಯನ್ನು ಜಿಲ್ಲಾಡಳಿತ ನೀಡಿರಲಿಲ್ಲ. ಜಿಲ್ಲಾಡಳಿತ ಪ್ರಕಾರ, ಕೆಲವು ಫಿನಿಶಿಂಗ್ ವರ್ಕ್ ಆಗಿಲ್ಲ ಅನ್ನುವ ಕಾರಣಗಳಿದ್ದವು.
ಆದರೆ, ಥೀಮ್ ಪಾರ್ಕ್ ನಲ್ಲಿ ಜನರ ಆಕರ್ಷಣೆಯಾಗಿರುವ ಬೃಹದಾಕಾರದ ಪರಶುರಾಮನ ವಿಗ್ರಹವೇ ನಕಲಿ ಅನ್ನುವ ಆರೋಪ ಈಗ ಕೇಳಿಬರುತ್ತಿದೆ. ಕಾರ್ಕಳ ಶಾಸಕ ಸುನಿಲ್ ಕುಮಾರ್ ಚುನಾವಣೆಗೂ ಮೊದಲೇ ಥೀಮ್ ಪಾರ್ಕ್ ಉದ್ಘಾಟನೆ ಮಾಡಬೇಕೆಂಬ ಗುರಿಯಿಂದಾಗಿ ತರಾತುರಿಯಲ್ಲಿ ವಿಗ್ರಹ ನಿರ್ಮಾಣ ಮಾಡಲಾಗಿತ್ತು. ಪ್ರವಾಸಿ ಕೇಂದ್ರದ ಕಾಮಗಾರಿಯನ್ನೂ ಅರ್ಜೆಂಟ್ ಆಗಿ ಮುಗಿಸಲಾಗಿತ್ತು. ಪೂರ್ತಿ ಕಂಚಿನಿಂದ ಮಾಡಿರುವ ಮೂರ್ತಿ ಅಲ್ಲ ಅನ್ನುವ ಮಾತು ಕೇಳಿಬರುತ್ತಿದೆ. ಚುನಾವಣೆ ಬಳಿಕ ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರಕ್ಕೆ ಬರುತ್ತಿದ್ದಂತೆ ಕಾಂಗ್ರೆಸ್ ನಾಯಕರೇ ಈ ರೀತಿಯ ಆರೋಪ ಮಾಡುತ್ತಿದ್ದಾರೆ. ಇತ್ತೀಚೆಗೆ ಇದೇ ವಿಚಾರದಲ್ಲಿ ಸಮಗ್ರ ತನಿಖೆಯಾಗಬೇಕೆಂದು ಒತ್ತಾಯಿಸಿ ಉಪವಾಸ ಸತ್ಯಾಗ್ರಹವೂ ನಡೆದಿತ್ತು.
ಅರ್ಧ ನಕಲಿಯೆಂದ ಉಸ್ತುವಾರಿ ಸಚಿವೆ
ಹಾಗಿದ್ದರೂ, ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಈ ಕುರಿತು ಚಮಕ್ ಕಿಮಕ್ ಎಂದಿರಲಿಲ್ಲ. ಉಪವಾಸ ಸತ್ಯಾಗ್ರಹ ಮಾಡಿದ್ದರೂ, ಅಲ್ಲಿ ಭೇಟಿ ಕೊಡುವುದಾಗಲೀ, ತನಿಖೆ ಮಾಡಿಸುವ ಭರವಸೆಯನ್ನಾಗಲೀ ನೀಡಿರಲಿಲ್ಲ. ಆರೋಪ- ಪ್ರತ್ಯಾರೋಪ ಎಲ್ಲ ಮುಗಿದ ಬಳಿಕ ಸಚಿವೆ ಹೆಬ್ಬಾಳ್ಕರ್, ಸತ್ಯಶೋಧನೆಗೆ ಬಂದ ರೀತಿ ಸೆ.23ರಂದು ಪರಶುರಾಮ ಥೀಮ್ ಪಾರ್ಕ್ ಗೆ ಭೇಟಿ ನೀಡಿದ್ದಾರೆ. ಅಲ್ಲದೆ, ಆರೋಪದ ಬಗ್ಗೆ ಜಿಲ್ಲಾ ಮಟ್ಟದ ಅಧಿಕಾರಿಗಳಿಂದ ಮಾಹಿತಿ ಕೇಳಿದ್ದಾರೆ. ಪತ್ರಕರ್ತರು ಕೇಳಿದ ಪ್ರಶ್ನೆಗೆ ಅಡ್ಡಗೋಡೆ ಮೇಲೆ ದೀಪವಿಟ್ಟ ರೀತಿ ಉತ್ತರಿಸಿದ್ದಾರೆ. ಪರಶುರಾಮನ ವಿಗ್ರಹ ಅಸಲಿಯೇ ಎಂಬ ಪ್ರಶ್ನೆಗೆ, ಅರ್ಧ ಅಸಲಿ, ಅರ್ಧ ನಕಲಿ ಎಂದಿದ್ದಾರೆ. ಅಧಿಕಾರಿಗಳಿಂದ ಲೋಪ ಆಗಿರುವ ಬಗ್ಗೆ ಮಾಹಿತಿ ಪಡೆದಿದ್ದೇನೆ. ಈ ಬಗ್ಗೆ ತನಿಖೆ ನಡೆಸಿ ಯಾರು ಈ ಲೋಪ ಎಸಗಿದ್ದಾರೋ ಅವರ ಮೇಲೆ ಕ್ರಮ ಜರುಗಿಸುತ್ತೇನೆ ಎಂದಿದ್ದಾರೆ.
ಪ್ರವಾಸೋದ್ಯಮ ಇಲಾಖೆಯ 10 ಕೋಟಿ ಯೋಜನಾ ವೆಚ್ಚದಲ್ಲಿ 2022ರ ಆರಂಭದಲ್ಲಿ ಕಾಮಗಾರಿ ಆರಂಭಿಸಲಾಗಿತ್ತು. ಉಡುಪಿ- ಕಾರ್ಕಳ ಹೆದ್ದಾರಿಯ ಬೈಲೂರು ಗ್ರಾಮದ ಉಮಿಕಲ್ ಬೆಟ್ಟದ 450 ಅಡಿ ಎತ್ತರದಲ್ಲಿ ಹಸಿರ ಸಿರಿಯ ಮಧ್ಯೆ ಅದ್ಭುತ ಪ್ರವಾಸೋದ್ಯಮ ತಾಣ ನಿರ್ಮಾಣದ ಕನಸಿನೊಂದಿಗೆ ಯೋಜನೆ ಕೈಗೆತ್ತಿಕೊಳ್ಳಲಾಗಿತ್ತು. ಕಾಮಗಾರಿಯನ್ನು ಉಡುಪಿ ನಿರ್ಮಿತಿ ಕೇಂದ್ರದ ಉಸ್ತುವಾರಿಗೆ ನೀಡಲಾಗಿತ್ತು. ಆದರೆ ಕೆಲವೇ ತಿಂಗಳಲ್ಲಿ ಕಾಮಗಾರಿ ವೇಗ ಪಡೆದಿಲ್ಲ ಎಂದು ಸುನಿಲ್ ಕುಮಾರ್ ಅಸಮಾಧಾನ ಹೊಂದಿದ್ದರಂತೆ. ಚುನಾವಣೆಗೂ ಮುನ್ನ ಉದ್ಘಾಟನೆ ಆಗಬೇಕೆಂದು ಜಿಲ್ಲಾಡಳಿತಕ್ಕೆ ಗಡುವು ಕೊಟ್ಟು ಕೆಲಸ ಮಾಡಿಸಿದ್ದರಂತೆ. ಅದೇ ಕಾರಣದಿಂದ ಎಡವಟ್ಟು ಆಗಿದೆ ಎನ್ನುವ ಆರೋಪ ಕೇಳಿಬರುತ್ತಿದೆ.
ಫೈಬರ್ ಮಿಶ್ರಿತ ಪರಶುರಾಮ ವಿಗ್ರಹ
ಮಂಗಳೂರಿನ ಖ್ಯಾತ ವಕೀಲ ದಿನೇಶ್ ಹೆಗ್ಡೆ ಉಳೆಪಾಡಿ ಈ ಬಗ್ಗೆ ಮಾಹಿತಿಗಳನ್ನು ಕ್ರೋಡೀಕರಿಸಿ ಫೇಸ್ಬುಕ್ ನಲ್ಲಿ ಬರೆದಿದ್ದಾರೆ. ಆಗಿನ ಡೀಸಿಯವರು ಅಪೂರ್ಣ ಕಾಮಗಾರಿಯನ್ನು ನೇರಾನೇರ ಉದ್ಘಾಟನೆಗೆ ಸಜ್ಜುಗೊಳಿಸಲು ಆಗುವುದಿಲ್ಲ. ಹಾಗೆ ಮಾಡಿದಲ್ಲಿ ಮುಂದೆ ಸಾರ್ವಜನಿಕರ ಜೀವ ಹಾನಿಗೂ ಕಾರಣವಾಗಬಹುದು ಎಂದು ಸಲಹೆ ನೀಡಿದ್ದರಂತೆ. ಆದರೆ ನಿಮ್ಮ ಲೆಕ್ಕಾಚಾರ ಹಾಕಿ ಕುಳಿತುಕೊಳ್ಳಲು ಸಮಯ ಇಲ್ಲ. ಚುನಾವಣೆ ಮೊದಲು ಉದ್ಘಾಟನೆ ಆಗುವಂತಾಗಬೇಕು ಎಂದು ತಾಕೀತು ಮಾಡಿದ್ದರಂತೆ. ಪರಶುರಾಮನ ಮೂರ್ತಿಯಲ್ಲಿ ಕೊಡಲಿ ಬಹುಮುಖ್ಯ ಅಂಗ. ಮೂರ್ತಿಯ ಎತ್ತರಕ್ಕೆ ತಕ್ಕಂತೆ ಕೊಡಲಿ ಮತ್ತು ಅದನ್ನು ಹಿಡಿದುಕೊಂಡ ಕೈ ಒಂದೂವರೆ ಟನ್ ತೂಗಬೇಕು. ಇಷ್ಟು ಭಾರವನ್ನು ತೂಗಲು ಸೂಕ್ತ ಪಿಲ್ಲರ್ ಕೊಡಬೇಕಾಗುತ್ತದೆ. ಸ್ವಲ್ಪ ತಪ್ಪಿದರೂ ಪ್ರವಾಸಿಗರ ಪ್ರಾಣ ಹಾನಿಗೆ ಕಾರಣವಾಗಬಹುದು ಎಂದು ಗುತ್ತಿಗೆದಾರರು ಸಲಹೆ ನೀಡಿದ್ದರಂತೆ.
ಗುತ್ತಿಗೆದಾರರ ಮಾತಿನಿಂದ ಸಿಟ್ಟುಗೊಂಡ ಸುನಿಲ್ ಕುಮಾರ್ ಒಟ್ಟು ಯೋಜನೆಯ ಕಾಮಗಾರಿಯನ್ನು ತನ್ನ ಸುಪರ್ದಿಗೆ ಪಡೆದು ಬೇರೊಬ್ಬ ಆಪ್ತ ಗುತ್ತಿಗೆದಾರರಿಗೆ ನೀಡುತ್ತಾರೆ. ಮೂರ್ತಿಯ ಕೈ ಮತ್ತು ಕೊಡಲಿಯ ಭಾಗವನ್ನು ಫೈಬರ್ ನಿಂದ ನಿರ್ಮಿಸಿದ್ದಾರೆಂದು ವಕೀಲ ದಿನೇಶ್ ಹೆಗ್ಡೆ ಬರೆದುಕೊಂಡಿದ್ದಾರೆ. ಫೈಬರ್ ನಲ್ಲಿ ಮಾಡಲಾದ ಮೂರ್ತಿಯನ್ನು ಕಂಚಿನಿಂದ ಮಾಡಿದ್ದಾಗಿ ತೋರಿಸಿ ಜನರ ಧಾರ್ಮಿಕ ನಂಬಿಕೆಗೆ ಘಾಸಿಗೊಳಿಸಿದ್ದಾರೆ. ಅಲ್ಲದೆ, ಒಟ್ಟು 14 ಕೋಟಿ ವೆಚ್ಚದಲ್ಲಿ ಕಾಮಗಾರಿ ಆಗಿದೆಯೆಂದು ಸಚಿವ ಸುನಿಲ್ ಕುಮಾರ್ ಸುಳ್ಳು ಹೇಳಿದ್ದರು ಎಂದು ತಿಳಿಸಿದ್ದಾರೆ. ಕೆಲವರ ಪ್ರಕಾರ, ಇಡೀ ಮೂರ್ತಿಯಲ್ಲಿ ಸೊಂಟದ ವರೆಗೆ ಮಾತ್ರ ಕಂಚಿನದ್ದಂತೆ. ಮೇಲಿನದ್ದು ನಕಲಿಯಂತೆ.
ಪರಶುರಾಮ ಥೀಮ್ ಪಾರ್ಕನ್ನು 2023ರ ಜನವರಿ 27ರಂದು ಸಿಎಂ ಬಸವರಾಜ ಬೊಮ್ಮಾಯಿ ಉದ್ಘಾಟನೆ ಮಾಡಿದ್ದರು. ಉದ್ಘಾಟನೆ ವೇಳೆ ಪರಶುರಾಮನ ಮೂರ್ತಿ 33 ಅಡಿ ಎತ್ತರ ಮತ್ತು 15 ಟನ್ ಭಾರ ಹೊಂದಿದೆ. ಸಂಪೂರ್ಣ ಕಂಚಿನಿಂದಲೇ ನಿರ್ಮಿಸಲಾಗಿದೆ ಎಂದು ತಿಳಿಸಲಾಗಿತ್ತು. ಆದರೆ ಮಳೆಗಾಲದಲ್ಲಿ ಏನಾದ್ರೂ ಅನಾಹುತ ಆಗಬಹುದು ಅನ್ನುವ ಆತಂಕದಿಂದಲೋ ಏನೋ ಉಡುಪಿ ಜಿಲ್ಲಾಡಳಿತವೇ ಜೂನ್ 26ರಿಂದ ಸೆಪ್ಟಂಬರ್ ಅಂತ್ಯದ ವರೆಗೆ ಪ್ರವಾಸಿಗರ ಭೇಟಿಗೆ ನಿಷೇಧ ವಿಧಿಸಿತ್ತು. ಈಗ ಪರಶುರಾಮನ ವಿಗ್ರಹ ಅರ್ಧ ನಕಲಿ ಎನ್ನುವ ಮಾತು ಅಧಿಕೃತ ವ್ಯಕ್ತಿಗಳ ಬಾಯಿಂದಲೇ ಬಂದಿದ್ದು ಆರೋಪದ ಬೊಟ್ಟು ನೇರವಾಗಿ ಆಗಿನ ಪ್ರಭಾವಿ ಸಚಿವರಾಗಿದ್ದ ಸುನಿಲ್ ಕುಮಾರ್ ಮೇಲೆ ಅಂಟಿಕೊಂಡಿದೆ. ಎಷ್ಟು ಕೋಟಿ ಖರ್ಚಾಗಿದೆ, ಮೂರ್ತಿ ನಕಲಿಯೇ ಎನ್ನುವ ಬಗ್ಗೆ ತನಿಖೆಯಿಂದಷ್ಟೇ ಉತ್ತರ ಸಿಗಬೇಕಾಗಿದೆ.
Karkala Parashurama Theme Park is fake, rumours and talks spread in social media, former minister Sunil Kumar in trouble.
23-05-25 02:35 pm
Bangalore Correspondent
ಹಾಸನ ಜಿಲ್ಲೆಯಲ್ಲಿ ಮತ್ತೊಬ್ಬ ಮಹಿಳೆಯನ್ನು ತುಳಿದು ಸ...
23-05-25 11:54 am
ಕೊಡಗಿನಲ್ಲಿ ಈ ಬಾರಿ ಮಳೆ ಹೆಚ್ಚು ; ಮತ್ತೆ ಪ್ರಕೃತಿ...
22-05-25 11:09 pm
Ramanagara, Bangalore South: ರಾಮನಗರ ಜಿಲ್ಲೆಯನ್...
22-05-25 09:07 pm
Alok Kumar IPS, DGP, Phone Tapping: ರಫ್ ಅಂಡ್...
22-05-25 07:36 pm
23-05-25 08:08 pm
HK News Desk
ಭಾರತೀಯ ಹೈಕಮಷಿನ್ ಅಧಿಕಾರಿಗೆ ಗೇಟ್ ಪಾಸ್, 24 ಗಂಟೆಯ...
22-05-25 05:53 pm
ವಿದೇಶಕ್ಕೆ ಹೊರಟ ಸರ್ವಪಕ್ಷಗಳ ಏಳು ನಿಯೋಗ ; ಭಾರತದ ಸ...
22-05-25 05:43 pm
ಸಿಂಧು ಜಲ ಒಪ್ಪಂದ ಮರು ಪರಿಶೀಲಿಸಲು ಭಾರತ ಉತ್ಸುಕ ;...
21-05-25 12:57 pm
ಅಕ್ರಮ ಬಾಂಗ್ಲಾ ವಲಸಿಗರ ಪತ್ತೆಗೆ ಪ್ರತಿ ಜಿಲ್ಲೆಯಲ್ಲ...
20-05-25 02:36 pm
24-05-25 12:41 pm
Mangalore Correspondent
Mangalore Lokayukta Raid, Pilikula: ಪಿಲಿಕುಳ ನ...
23-05-25 10:46 pm
Bantwal Heart Attack, Mangalore: ಪತ್ನಿಯ ಸೀಮಂತ...
23-05-25 06:04 pm
Mangalore Suhas Shetty, Nandan Mallya, BJP: ಸ...
23-05-25 05:38 pm
VHP, Mangalore, Suhas Shetty Murder: ಸುಹಾಸ್ ಶ...
22-05-25 10:29 pm
23-05-25 11:20 pm
Mangalore Correspondent
ಬಾಬ್ರಿ ಮಸೀದಿಗೆ ಪ್ರತೀಕಾರ, ಭಾರತದ ವಿರುದ್ಧ ದಾಳಿಗ...
23-05-25 01:25 pm
Valachil Murder, Mangalore crime: ಮದುವೆ ಸಂಬಂಧ...
23-05-25 10:02 am
Davangere Doctor, Stock Market Fraud: ಷೇರು ಮಾ...
22-05-25 02:22 pm
Mangalore Fraud, Currency trading scam: ಕರೆನ್...
19-05-25 09:38 pm