ಬ್ರೇಕಿಂಗ್ ನ್ಯೂಸ್
28-09-23 12:58 pm Mangalore Correspondent ಕರಾವಳಿ
ಮಂಗಳೂರು, ಸೆ.28: ಸುಳ್ಯ ಕೆವಿಜಿ ಮೆಡಿಕಲ್ ಕಾಲೇಜಿನ ಆಡಳಿತ ಮತ್ತು ಆಸ್ತಿ ವಿಚಾರದಲ್ಲಿ ಕಲಹ ಏರ್ಪಟ್ಟು ಆಡಳಿತಾಧಿಕಾರಿಯಾಗಿದ್ದ ವ್ಯಕ್ತಿಯನ್ನೇ ಕೊಲೆ ನಡೆಸಿದ್ದ ಪ್ರಕರಣ ಮತ್ತೆ ಸಂಚಲನ ಎಬ್ಬಿಸಿದೆ. ಪುತ್ತೂರಿನ ಸೆಷನ್ಸ್ ಕೋರ್ಟ್ ಆರೋಪಿಗಳನ್ನು ಖುಲಾಸೆಗೊಳಿಸಿ ನೀಡಿದ್ದ ತೀರ್ಪನ್ನು ಹೈಕೋರ್ಟ್ ರದ್ದುಪಡಿಸಿದ್ದು, ರಾಜ್ಯ ಒಕ್ಕಲಿಗ ಸಂಘದ ಪ್ರಭಾವಿ ಮುಖಂಡ ರೇಣುಕಾಪ್ರಸಾದ್ ಸೇರಿದಂತೆ ಆರು ಮಂದಿಯನ್ನು ದೋಷಿಗಳೆಂದು ತೀರ್ಪು ನೀಡಿದೆ.
2011ರ ಎಪ್ರಿಲ್ 28ರಂದು ಕೆವಿಜಿ ಮೆಡಿಕಲ್ ಕಾಲೇಡಿನ ಆಡಳಿತಾಧಿಕಾರಿ ಮತ್ತು ಪ್ರಿನ್ಸಿಪಾಲ್ ಆಗಿದ್ದ ಎ.ಎಸ್. ರಾಮಕೃಷ್ಣ ಭಟ್ ಅವರನ್ನು ಆರೋಪಿಗಳು ಕೊಚ್ಚಿ ಕೊಲೆ ಮಾಡಿದ್ದರು. ಭಾರೀ ಸಂಚಲನ ಮೂಡಿಸಿದ್ದ ಪ್ರಕರಣದ ಬಗ್ಗೆ ವಿಚಾರಣೆ ನಡೆಸಿದ್ದ ಪುತ್ತೂರಿನ 5ನೇ ಹೆಚ್ಚುವರಿ ಸೆಷನ್ಸ್ ಕೋರ್ಟ್ ಏಳು ಮಂದಿ ಆರೋಪಿಗಳನ್ನು ಖುಲಾಸೆಗೊಳಿಸಿ 2016ರಲ್ಲಿ ತೀರ್ಪು ನೀಡಿತ್ತು. ಈ ಬಗ್ಗೆ ರಾಜ್ಯ ಪೊಲೀಸ್ ಇಲಾಖೆ ಹೈಕೋರ್ಟಿಗೆ ಮೇಲ್ಮನವಿ ಸಲ್ಲಿಸಿದ್ದು, ಇದೀಗ ವಿಚಾರಣೆ ಮುಗಿಸಿದ ಡಾ.ಶ್ರೀನಿವಾಸ ಹರೀಶ್ ಕುಮಾರ್ ಅವರಿದ್ದ ವಿಭಾಗೀಯ ಪೀಠವು ಆರು ಮಂದಿ ಆರೋಪಿಗಳನ್ನು ದೋಷಿಗಳೆಂದು ತೀರ್ಪು ನೀಡಿದೆ.
ಆರೋಪಿಗಳೆಂದು ಗುರುತಿಸಲ್ಪಟ್ಟಿದ್ದ ಕೆವಿಜಿ ಶಿಕ್ಷಣ ಸಂಸ್ಥೆಗಳ ನಿರ್ಮಾತೃ ಕುರುಂಜಿ ವೆಂಕಟರಮಣ ಗೌಡರ ಕಿರಿಯ ಪುತ್ರ ಡಾ.ರೇಣುಕಾ ಪ್ರಸಾದ್, ಮನೋಜ್ ರೈ, ಎಚ್.ಆರ್ ನಾಗೇಶ್, ವಾಮನ ಪೂಜಾರಿ, ಶರಣ್ ಪೂಜಾರಿ ಮತ್ತು ಭವಾನಿ ಶಂಕರ್ ದೋಷಿಗಳೆಂದು ಹೈಕೋರ್ಟ್ ತೀರ್ಪು ನೀಡಿದೆ. ಕೊಲೆ ಪ್ರಕರಣದಲ್ಲಿ ಇವರ ಪಾತ್ರ ಸಾಕ್ಷ್ಯಾಧಾರ ಸಹಿತ ದೃಢಪಟ್ಟಿದೆ ಎಂದು ತೀರ್ಪು ನೀಡಿರುವ ಹೈಕೋರ್ಟ್, ಆರು ಮಂದಿಯನ್ನು ಅಪರಾಧ ಕೃತ್ಯದಲ್ಲಿ ದೋಷಿಗಳೆಂದು ತೀರ್ಮಾನಿಸಿದೆ. ಇವರೆಲ್ಲರೂ ಸದ್ಯಕ್ಕೆ ಹೊರಗಿದ್ದು, ಅ.5ರಂದು ಕೋರ್ಟಿಗೆ ಹಾಜರಾಗುವಂತೆ ಆದೇಶ ಮಾಡಿದೆ. ಅಲ್ಲದೆ, ಅಂದೇ ಆರೋಪಿಗಳಿಗೆ ಶಿಕ್ಷೆ ಪ್ರಮಾಣ ಘೋಷಿಸುವ ಸಾಧ್ಯತೆಯಿದೆ. ಏಳನೇ ಆರೋಪಿಯಾಗಿದ್ದ ಎಚ್.ಯು. ನಾಗೇಶ್ ಕುಮಾರ್ ಅವರನ್ನು ಕೋರ್ಟ್ ಖುಲಾಸೆಗೊಳಿಸಿದೆ.
ಕುರುಂಜಿ ವೆಂಕಟರಮಣ ಗೌಡರು ಇದ್ದಾಗಲೇ ತಮ್ಮ ಇಳಿ ವಯಸ್ಸಿನಲ್ಲಿ ಶಿಕ್ಷಣ ಸಂಸ್ಥೆಗಳ ಆಡಳಿತವನ್ನು ತನ್ನ ಇಬ್ಬರು ಮಕ್ಕಳಿಗೆ ಪಾಲು ಮಾಡಿಕೊಟ್ಟಿದ್ದರು. ಶೈಕ್ಷಣಿಕ ಸಂಸ್ಥೆಗಳ ನಿರ್ವಹಣೆಯನ್ನು ಹಿರಿಯ ಪುತ್ರ ಕೆವಿ ಚಿದಾನಂದ ಮತ್ತು ಕಿರಿಯ ಪುತ್ರ ರೇಣುಕಾ ಪ್ರಸಾದ್ ಗೆ ವಿಭಜನೆ ಮಾಡಿ ಕೊಟ್ಟಿದ್ದರು. ಕೆವಿಜಿ ಮೆಡಿಕಲ್ ಕಾಲೇಜಿನ ಎಲ್ಲ ವ್ಯವಹಾರ ನೋಡಿಕೊಂಡಿದ್ದ ಆಡಳಿತಾಧಿಕಾರಿ ಎ.ಎಸ್. ರಾಮಕೃಷ್ಣ ಆಸ್ತಿ ವಿಭಜನೆ ಬಗ್ಗೆ ಕುರುಂಜಿ ವೆಂಕಟರಮಣ ಗೌಡರಿಗೆ ಸಲಹೆ ನೀಡಿದ್ದರು, ಅವರ ಸೂತ್ರದಂತೆ ಆಸ್ತಿ ಪಾಲು ಮಾಡಲಾಗಿದೆ ಎನ್ನುವ ಸಿಟ್ಟು ಕಿರಿಯ ಪುತ್ರ ರೇಣುಕಾಪ್ರಸಾದ್ ಅವರಿಗಿತ್ತು. ಅಲ್ಲದೆ, ಚಿದಾನಂದ ಅವರಿಗೆ ಶಿಕ್ಷಣ ಸಂಸ್ಥೆಗಳಲ್ಲಿ ದೊಡ್ಡ ಪಾಲು ಸಿಗಲು ರಾಮಕೃಷ್ಣ ಅವರೇ ಕಾರಣ ಎಂಬ ಸಿಟ್ಟಿನಲ್ಲಿ ಅವರ ಕೊಲೆಗೆ ರೇಣುಕಾಪ್ರಸಾದ್ ಸಂಚು ರೂಪಿಸಿದ್ದರು.
2011ರ ಎಪ್ರಿಲ್ 28ರಂದು ಬೆಳಗ್ಗೆ 7.45ರ ವೇಳೆಗೆ ರಾಮಕೃಷ್ಣ ಅವರು ತನ್ನ ಮನೆ ಬಳಿಯ ಅಂಬೆತ್ತಡ್ಕ ಶ್ರೀಕೃಷ್ಣ ಆಯುರ್ವೇದಿಕ್ ಕ್ಲಿನಿಕ್ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಆರೋಪಿಗಳು ದಾಳಿ ನಡೆಸಿ ಕೊಲೆಗೈದಿದ್ದರು. ಈ ಸಂಬಂಧ ಸುಳ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ನಡೆಸಿ ಕೊಲೆಗೆ ಸುಪಾರಿ ನೀಡಿದ್ದ ರೇಣುಕಾಪ್ರಸಾದ್ ಸೇರಿದಂತೆ ಏಳು ಮಂದಿ ಆರೋಪಿಗಳೆಂದು ಗುರುತಿಸಿ ಕೋರ್ಟಿಗೆ ಚಾರ್ಜ್ ಶೀಟ್ ಸಲ್ಲಿಸಿದ್ದರು. ಆದರೆ ಪುತ್ತೂರಿನ ನ್ಯಾಯಾಲಯ 2016ರ ಅ.21ರಂದು ತೀರ್ಪು ನೀಡಿ, ಆರೋಪಿಗಳನ್ನು ದೋಷ ಮುಕ್ತಗೊಳಿಸಿತ್ತು. 2017ರಲ್ಲಿ ಪೊಲೀಸರು ರಾಜ್ಯ ಸರಕಾರದ ಪರವಾಗಿ ಹೈಕೋರ್ಟಿಗೆ ಮೇಲ್ಮನವಿ ಸಲ್ಲಿಸಿ, ಸೆಷನ್ಸ್ ಕೋರ್ಟ್ ತೀರ್ಪನ್ನು ಪ್ರಶ್ನೆ ಮಾಡಿದ್ದರು. ಸಾಕ್ಷ್ಯಗಳನ್ನು ಎತ್ತಿ ತೋರಿಸಿದ್ದರಿಂದ ಹೈಕೋರ್ಟ್, ಕೆಳಗಿನ ಕೋರ್ಟಿನ ತೀರ್ಪನ್ನು ರದ್ದುಪಡಿಸಿದ್ದಲ್ಲದೆ, ಖುಲಾಸೆಯಾಗಿದ್ದ ಆರೋಪಿಗಳೇ ದೋಷಿಗಳೆಂದು ತೀರ್ಪು ನೀಡಿದೆ.
ಕೆವಿಜಿ ಅವರ ಪುತ್ರ ರೇಣುಕಾಪ್ರಸಾದ್ ಸುಳ್ಯದಲ್ಲಿ ಪ್ರಭಾವಿಯಾಗಿದ್ದು ಒಕ್ಕಲಿಗ ಗೌಡ ಸಂಘಗಳ ಒಕ್ಕೂಟದ ರಾಜ್ಯ ಉಪಾಧ್ಯಕ್ಷರಾಗಿದ್ದಾರೆ. ರಾಜ್ಯ ಮಟ್ಟದಲ್ಲಿ ಒಕ್ಕಲಿಗ ಸಂಘದಲ್ಲಿ ಪ್ರಭಾವ ಬೆಳೆಸಿಕೊಂಡಿದ್ದಾರೆ. ಹೀಗಾಗಿ ಹೈಕೋರ್ಟ್ ತೀರ್ಪಿನ ಬಗ್ಗೆ ರೇಣುಕಾ ಮತ್ತು ತಂಡ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಹೋಗುವ ಸಾಧ್ಯತೆಯೇ ಹೆಚ್ಚು
Sullia KVG college Murder case, six sentenced to punishment after High court finds them guilty. Ramakrishna., administrative officer of KVG Medical College in Sullia, was hit by some people when he was walking towards his house along with his son Vallesh. The incident occurred near a temple in Ambetadka on April 28, 2011. He died at KVG Hospital the same day.
24-05-25 06:04 pm
HK News Desk
Hassan Marriage, wedding: ತಾಳಿ ಕಟ್ಟುವ ಸಮಯಕ್ಕೆ...
24-05-25 03:19 pm
ನವೆಂಬರ್ ವೇಳೆಗೆ ಜಿಪಂ, ತಾಪಂ ಚುನಾವಣೆ ಸಾಧ್ಯತೆ ; ರ...
23-05-25 02:35 pm
ಹಾಸನ ಜಿಲ್ಲೆಯಲ್ಲಿ ಮತ್ತೊಬ್ಬ ಮಹಿಳೆಯನ್ನು ತುಳಿದು ಸ...
23-05-25 11:54 am
ಕೊಡಗಿನಲ್ಲಿ ಈ ಬಾರಿ ಮಳೆ ಹೆಚ್ಚು ; ಮತ್ತೆ ಪ್ರಕೃತಿ...
22-05-25 11:09 pm
23-05-25 08:08 pm
HK News Desk
ಭಾರತೀಯ ಹೈಕಮಷಿನ್ ಅಧಿಕಾರಿಗೆ ಗೇಟ್ ಪಾಸ್, 24 ಗಂಟೆಯ...
22-05-25 05:53 pm
ವಿದೇಶಕ್ಕೆ ಹೊರಟ ಸರ್ವಪಕ್ಷಗಳ ಏಳು ನಿಯೋಗ ; ಭಾರತದ ಸ...
22-05-25 05:43 pm
ಸಿಂಧು ಜಲ ಒಪ್ಪಂದ ಮರು ಪರಿಶೀಲಿಸಲು ಭಾರತ ಉತ್ಸುಕ ;...
21-05-25 12:57 pm
ಅಕ್ರಮ ಬಾಂಗ್ಲಾ ವಲಸಿಗರ ಪತ್ತೆಗೆ ಪ್ರತಿ ಜಿಲ್ಲೆಯಲ್ಲ...
20-05-25 02:36 pm
24-05-25 04:29 pm
Mangalore Correspondent
Mangalore Accident, Kolya: ಬೈಕ್ ಸ್ಕಿಡ್ ಆಗಿ ಸವ...
24-05-25 12:41 pm
Mangalore Lokayukta Raid, Pilikula: ಪಿಲಿಕುಳ ನ...
23-05-25 10:46 pm
Bantwal Heart Attack, Mangalore: ಪತ್ನಿಯ ಸೀಮಂತ...
23-05-25 06:04 pm
Mangalore Suhas Shetty, Nandan Mallya, BJP: ಸ...
23-05-25 05:38 pm
23-05-25 11:20 pm
Mangalore Correspondent
ಬಾಬ್ರಿ ಮಸೀದಿಗೆ ಪ್ರತೀಕಾರ, ಭಾರತದ ವಿರುದ್ಧ ದಾಳಿಗ...
23-05-25 01:25 pm
Valachil Murder, Mangalore crime: ಮದುವೆ ಸಂಬಂಧ...
23-05-25 10:02 am
Davangere Doctor, Stock Market Fraud: ಷೇರು ಮಾ...
22-05-25 02:22 pm
Mangalore Fraud, Currency trading scam: ಕರೆನ್...
19-05-25 09:38 pm