ಬ್ರೇಕಿಂಗ್ ನ್ಯೂಸ್
29-09-23 10:50 pm Mangalore Correspondent ಕರಾವಳಿ
ಪುತ್ತೂರು, ಸೆ.29: ಪಡುವನ್ನೂರು ಗ್ರಾಮದ ಕುದ್ಕಾಡಿಯಲ್ಲಿ ನಡೆದ ದರೋಡೆ ಪ್ರಕರಣವನ್ನು ಭೇದಿಸಿರುವ ಪುತ್ತೂರು ಪೊಲೀಸರು ಆರು ಮಂದಿಯನ್ನು ಬಂಧಿಸಿದ್ದಾರೆ. ಈ ಪೈಕಿ ಒಬ್ಬಾತ ಜೈಲಿನಲ್ಲಿದ್ದು ಪೆರೋಲ್ ಮೇಲೆ ಹೊರಗೆ ಬಂದಿರುವಾಗಲೇ ಕೃತ್ಯ ನಡೆಸಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ದರೋಡೆ ಕೃತ್ಯದಲ್ಲಿ ಆರು ಮಂದಿಯನ್ನು ಬಂಧಿಸಿರುವ ಬಗ್ಗೆ ಎಸ್ಪಿ ರಿಷ್ಯಂತ್, ಸುದ್ದಿಗೋಷ್ಟಿ ನಡೆಸಿ ವಿವರ ನೀಡಿದ್ದಾರೆ. ಕಾಸರಗೋಡು ಜಿಲ್ಲೆಯ ಕುಖ್ಯಾತ ದರೋಡೆ ಗ್ಯಾಂಗ್ ಕೃತ್ಯದಲ್ಲಿ ಭಾಗಿಯಾಗಿದ್ದನ್ನು ಎಸ್ಪಿ ದೃಢಪಡಿಸಿದ್ದಾರೆ. ಸನಾಲ್, ಕಿರಣ್, ವಸಂತ್, ಫೈಜಲ್, ಸುಧೀರ್, ಅಬ್ದುಲ್ ನಿಸಾರ್ ಬಂಧಿತ ಆರೋಪಿಗಳು. ಇವರ ಪೈಕಿ ಸನಾಲ್ ಕೆವಿ ಕಾಸರಗೋಡು ಜಿಲ್ಲೆಯಲ್ಲಿ ಕುಖ್ಯಾತ ದರೋಡೆಕೋರನಾಗಿದ್ದು, 15ಕ್ಕೂ ಹೆಚ್ಚು ಕೇಸುಗಳನ್ನು ಹೊಂದಿದ್ದಾನೆ. ಹಿಂದೊಮ್ಮೆ ಜೈಲಿನಿಂದ ತಪ್ಪಿಸಿಕೊಂಡು ಹೋಗಿದ್ದ ಪ್ರಕರಣವೂ ಈತನ ಮೇಲಿದೆ. ನಾಲ್ಕು ಪ್ರಕರಣಗಳಲ್ಲಿ ಕೇರಳದ ಜೈಲಿನಲ್ಲಿ 9 ವರ್ಷಗಳ ಶಿಕ್ಷೆ ಅನುಭವಿಸಿದ್ದ.
ಎಲ್ಲರೂ ಕ್ರಿಮಿನಲ್ ಹಿನ್ನೆಲೆಯವರಾಗಿದ್ದು ಕಿರಣ್ ಮತ್ತು ಫೈಜಲ್ ತಲಾ ಮೂರು ಪ್ರಕರಣ ಹೊಂದಿದ್ದಾರೆ. ಸುಧೀರ್ ಮೇಲೆ ವಿಟ್ಲ ಮತ್ತು ಪುತ್ತೂರಿನಲ್ಲಿ ಕೇಸು ಇದೆ. ಕಾಸರಗೋಡು ಗಡಿಭಾಗ ಇಚ್ಲಂಗೋಡು ಗ್ರಾಮದ ಪಜ್ಜಂಬಳ ರವಿ 12 ವರ್ಷಗಳ ಹಿಂದಿನ ಪೆರ್ಲದ ಜಬ್ಬಾರ್ ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿದ್ದ. ಕೇರಳದ ಜೈಲಿನಲ್ಲಿದ್ದ ರವಿ ಇತ್ತೀಚೆಗೆ 15 ದಿನಗಳ ಜಾಮೀನಿನಲ್ಲಿ ಜೈಲಿನಿಂದ ಹೊರಬಂದಿದ್ದ. ಈ ವೇಳೆ, ದರೋಡೆ ತಂಡದ ಜೊತೆ ಸೇರಿ ಕೃತ್ಯಕ್ಕೆ ಕೈಜೋಡಿಸಿದ್ದು, ಆನಂತರ ಮತ್ತೆ ಜೈಲಿಗೆ ಹೋಗಿದ್ದಾನೆ. ಕುದ್ಕಾಡಿಯ ಗುರುಪ್ರಸಾದ್ ಅವರ ಪರಿಚಯ ಹೊಂದಿದ್ದ ವಿಟ್ಲ ಪೆರುವಾಯಿ ನಿವಾಸಿ ಸುಧೀರ್, ದರೋಡೆ ತಂಡಕ್ಕೆ ಮಾಹಿತಿ ನೀಡಿ, ಅಲ್ಲಿ ಸಾಕಷ್ಟು ಬಂಗಾರ, ನಗದು ಇರಬಹುದು ಎಂದು ಹೇಳಿದ್ದ. ಆದರೆ ಮನೆಯಲ್ಲಿ ತಡಕಾಡಿದ್ದ ದರೋಡೆ ತಂಡಕ್ಕೆ ನಿರೀಕ್ಷೆ ಮಾಡಿದಷ್ಟು ಚಿನ್ನಾಭರಣ ಸಿಕ್ಕಿರಲಿಲ್ಲ. ಸುಧೀರ್ ಈ ಹಿಂದೆ ವಿಟ್ಲದಲ್ಲಿ ಕಾಳು ಮೆಣಸು ದರೋಡೆ ಪ್ರಕರಣದಲ್ಲಿ ಆರೋಪಿಯಾಗಿದ್ದು, ಕುದ್ಕಾಡಿ ಗುರುಪ್ರಸಾದ್ ರೈ ಅವರಿಗೆ ಸಂಬಂಧಿಕರ ಮೂಲಕ ಪರಿಚಯ ಆಗಿದ್ದ. ಹೀಗಾಗಿ ಉಂಡ ಮನೆಗೇ ದ್ರೋಹ ಬಗೆದಿರುವುದು ಈಗ ಬಯಲಾಗಿದೆ.
ಪದೇ ಪದೇ ಕೃತ್ಯದಲ್ಲಿ ತೊಡಗುತ್ತಿದ್ದುದರಿಂದ ಇವರಿಗೆ ಸಾಕ್ಷ್ಯ ನಾಶದ ಬಗ್ಗೆ ತಿಳಿದಿತ್ತು. ದರೋಡೆ ಕೃತ್ಯ ನಡೆಸಿದ ವೇಳೆ ಮೊಬೈಲ್ ಬಳಕೆ ಮಾಡಿರಲಿಲ್ಲ. ಅಲ್ಲದೆ, ಮನೆಮಂದಿಯ ಮೊಬೈಲನ್ನೂ ತೆಗೆದು ನೀರಿಗೆ ಹಾಕಿದ್ದರು. ಅಲ್ಲದೆ, ತಾವು ಬಳಸಿದ್ದ ಪರಿಕರಗಳನ್ನು ಯಾವುದನ್ನೂ ಬಿಡದೆ ಒಯ್ದಿದ್ದರು. ಎಲ್ಲರೂ ಮುಸುಕು ಹಾಕಿದ್ದರಿಂದ ಮನೆಯವರಿಗೂ ಗುರುತು ಹಚ್ಚಲು ಆಗಿರಲಿಲ್ಲ. ಹೀಗಾಗಿ ಪ್ರಕರಣ ಭೇದಿಸುವುದು ತುಂಬ ಸವಾಲಾಗಿತ್ತು. ತಾಂತ್ರಿಕ ಸಾಕ್ಷ್ಯಗಳನ್ನು ಆಧರಿಸಿ ಪೊಲೀಸರು ಪ್ರಕರಣ ಪತ್ತೆಹಚ್ಚಿದ್ದು, ಉತ್ತಮ ಕೆಲಸ ಮಾಡಿದ್ದಕ್ಕಾಗಿ ಪೊಲೀಸ್ ತಂಡಕ್ಕೆ ಬಹುಮಾನ ನೀಡುತ್ತೇನೆ ಎಂದು ಎಸ್ಪಿ ರಿಷ್ಯಂತ್ ತಿಳಿಸಿದ್ದಾರೆ.
ಕೃತ್ಯದ ಬಳಿಕ ಗುರುಪ್ರಸಾದ್ ಮತ್ತು ಅವರ ತಾಯಿಯನ್ನು ಹಗ್ಗದಿಂದ ಬಿಡಿಸಿ, ಕುಡಿಯಲು ನೀರು ಕೊಟ್ಟಿದ್ದರು. ವೃದ್ಧ ತಾಯಿಯ ಕಾಲು ಮುಟ್ಟಿ ನಮಸ್ಕರಿಸಿ ತೆರಳಿದ್ದರು. ಇದರಿಂದ ಮನೆಯವರ ಬಗ್ಗೆ ತಿಳಿದವರೇ ಕೃತ್ಯ ಎಸಗಿದ್ದಾರೆಂಬ ಅನುಮಾನ ಪೊಲೀಸರಲ್ಲಿತ್ತು. ಕೂಲಿ ಕೆಲಸಕ್ಕೆ ಬರುತ್ತಿದ್ದವರ ಬಗ್ಗೆಯೂ ಅನುಮಾನಗಳಿದ್ದವು. ಸುಳಿವು ಸಿಗದೇ ಇದ್ದಾಗ ದರೋಡೆ ಕೃತ್ಯದಲ್ಲಿ ನಿರತರಾಗಿರುವ ಕಾಸರಗೋಡಿನ ಕುಖ್ಯಾತ ಕ್ರಿಮಿನಲ್ ಗಳನ್ನು ಗುರಿಯಾಗಿಸಿ ತನಿಖೆ ನಡೆಸಿದಾಗ, ಕೃತ್ಯ ಬೆಳಕಿಗೆ ಬಂದಿತ್ತು. ಸೆ.6ರಂದು ನಸುಕಿನ ವೇಳೆಗೆ ಪಡುವನ್ನೂರು ಗ್ರಾಮದ ಕುದ್ಕಾಡಿಯ ಕಾಂಗ್ರೆಸ್ ಮುಖಂಡ ಗುರುಪ್ರಸಾದ್ ರೈ ಮನೆಯಲ್ಲಿ ದರೋಡೆ ಕೃತ್ಯ ನಡೆದಿತ್ತು.
ಪ್ರಕರಣದ ತನಿಖೆಗಾಗಿ ಸರ್ಕಲ್ ಇನ್ಸ್ ಪೆಕ್ಟರ್ ರವಿ ಬಿಎಸ್ ನೇತೃತ್ವದಲ್ಲಿ ಅಪರಾಧ ಪತ್ತೆಯಲ್ಲಿ ಪಳಗಿದ್ದ ಸಿಬಂದಿಯನ್ನು ಒಳಗೊಂಡ ನಾಲ್ಕು ತಂಡಗಳನ್ನು ರಚಿಸಲಾಗಿತ್ತು. ಕಾರ್ಯಾಚರಣೆ ತಂಡದಲ್ಲಿ ಪುತ್ತೂರು ಸಂಚಾರ ಠಾಣೆಯ ಪಿಎಸ್ಐ ಉದಯರವಿ, ಗ್ರಾಮಾಂತರ ಠಾಣೆ ಎಸ್ಐ ರುಕ್ಮ ನಾಯ್ಕ, ಉಪ್ಪಿನಂಗಡಿ ಠಾಣೆ ಎಚ್.ಸಿ. ಹರಿಶ್ಚಂದ್ರ, ವೇಣೂರು ಠಾಣೆ ಎಚ್.ಸಿ ಪ್ರವೀಣ್ ಮೂರುಗೋಳಿ, ವಿಟ್ಲ ಠಾಣೆ ಎಚ್.ಸಿ ಉದಯ ರೈ, ಪುತ್ತೂರು ಗ್ರಾಮಾಂತರ ಠಾಣೆ ಎಚ್.ಸಿ ಅಬ್ದುಲ್ ಸಲೀಂ, ಪ್ರವೀಣ್ ರೈ, ಜಗದೀಶ್ ಅತ್ತಾಜೆ, ಹರೀಶ್, ಮುರುಗೇಶ್, ಅದ್ರಾಮ್, ಬಾಲಕೃಷ್ಣ, ಪ್ರಶಾಂತ್, ಪ್ರಶಾಂತ ರೈ, ವಿನಾಯಕ ಬಾರ್ಕಿ ಸೇರಿದಂತೆ ಸಿಬಂದಿ ಪಾಲ್ಗೊಂಡಿದ್ದರು.
Puttur, Kudkadi robbery case, SP holds press meet, six arrested. Police arrested six people in connection with robbery of a house at Kudkadi Thotadamoole of Paduvannur village in the night on September 7 in which the house members were tied, cash and golden ornaments were looted.
28-11-24 10:41 pm
Bangalore Correspondent
Karkala Drowning, Udupi News; ಕಾರ್ಕಳದ ದುರ್ಗಾ...
28-11-24 09:41 pm
ಲಾಕಪ್ ಡೆತ್ ; ನಾಲ್ವರು ಪೊಲೀಸರಿಗೆ ಏಳು ವರ್ಷ ಜೈಲು...
28-11-24 05:04 pm
MLA Gaviyappa, DK Shivakumar: ಯಾವುದೇ ಕಾರಣಕ್ಕೂ...
26-11-24 10:46 pm
Shivamogga, Monkey fever, Dinesh Gundu Rao: ಮ...
26-11-24 10:23 pm
27-11-24 02:00 pm
HK News Desk
ರಸ್ತೆ ಬದಿ ಮಲಗಿದ್ದ ಅಲೆಮಾರಿ ಗುಂಪಿನ ಮೇಲಿಂದ ಹರಿದ...
27-11-24 12:36 pm
ಕ್ಯುಆರ್ ಕೋಡ್ ಸಹಿತ ಹೊಸ ನಮೂನೆಯ ಪ್ಯಾನ್ 2.0 ಜಾರಿ...
26-11-24 09:43 pm
BJP Devendra Fadnavis, Eknath Shinde: ಮಹಾರಾಷ್...
26-11-24 07:32 pm
ಪ್ರವಾಸೋದ್ಯಮ ಇಲಾಖೆಗೆ ನಿಗದಿಪಡಿಸಿದ್ದ ದರ್ಶನ ಟಿಕೆಟ...
23-11-24 11:07 pm
28-11-24 09:58 pm
Mangalore Correspondent
Mangalore, DFYI protest, Anupam Agarwal: ಪೊಲೀ...
28-11-24 06:05 pm
VHP, Mangalore, Bangladesh: ಬಾಂಗ್ಲಾದೇಶದಲ್ಲಿ ಹ...
28-11-24 03:24 pm
Belthangady suicide, Crime, Mangalore; ನಂಬಿಸಿ...
28-11-24 02:13 pm
Mangalore, Anupam Agarwal, Ramanatha Rai: ರಸ್...
28-11-24 01:56 pm
27-11-24 03:36 pm
HK News Desk
Mangalore, Robbery, Crime : ಕೊಲ್ಯದ ಜಾಯ್ ಲ್ಯಾಂ...
27-11-24 01:11 pm
Mangalore crime, ACP Dhanya Nayak, Drugs: ಎಸಿ...
26-11-24 03:10 pm
ಹುಬ್ಬಳ್ಳಿ ದರೋಡೆ ಪ್ರಕರಣದಲ್ಲಿ ಮಂಗಳೂರು ನಂಟು ; ಉಳ...
25-11-24 06:17 pm
Honeytrap Bangalore, Crime, Udupi: ಪ್ರೊಫೆಸರ್...
24-11-24 04:33 pm