Mangalore Vinamra Bar Thokottu, Gandhi Jayanti: ಮಹಾತ್ಮನ ಜಯಂತಿಗೂ ತೊಕ್ಕೊಟ್ಟಲ್ಲಿ ಎಗ್ಗಿಲ್ಲದೆ ಮದ್ಯ ಮಾರಾಟ ; ಕ್ವಾಟ್ರಿಗೆ 40 ರೂ.ನಂತೆ ಹೆಚ್ಚುವರಿ ವಸೂಲಿ, ಹಿಡಿಶಾಪ ಹಾಕಿ ಮದ್ಯ ಖರೀದಿಸಿದ ಪಾನಪ್ರಿಯರು 

02-10-23 03:44 pm       Mangalore Correspondent   ಕರಾವಳಿ

ಗಾಂಧಿ ಜಯಂತಿಯಂದು ಮದ್ಯ ಮಾರಾಟ ನಿಷೇಧವಿದ್ದರೂ ತೊಕ್ಕೊಟ್ಟಿನ ವಿನಮ್ರ ಬಾರಲ್ಲಿ ಎಗ್ಗಿಲ್ಲದೆ ಮದ್ಯ ಮಾರಾಟ ನಡೆಸಲಾಗಿದ್ದು ಕ್ವಾಟ್ರಿಗೆ 40 ರೂಪಾಯಿ ಹೆಚ್ಚುವರಿ ವಸೂಲಿ ಮಾಡಿದರೂ ಪಾನಪ್ರಿಯರು ಹಿಡಿ ಶಾಪ ಹಾಕಿ ಮದ್ಯ ಖರೀದಿಸಿದ್ದಾರೆ. 

ಉಳ್ಳಾಲ, ಅ.2: ಗಾಂಧಿ ಜಯಂತಿಯಂದು ಮದ್ಯ ಮಾರಾಟ ನಿಷೇಧವಿದ್ದರೂ ತೊಕ್ಕೊಟ್ಟಿನ ವಿನಮ್ರ ಬಾರಲ್ಲಿ ಎಗ್ಗಿಲ್ಲದೆ ಮದ್ಯ ಮಾರಾಟ ನಡೆಸಲಾಗಿದ್ದು ಕ್ವಾಟ್ರಿಗೆ 40 ರೂಪಾಯಿ ಹೆಚ್ಚುವರಿ ವಸೂಲಿ ಮಾಡಿದರೂ ಪಾನಪ್ರಿಯರು ಹಿಡಿ ಶಾಪ ಹಾಕಿ ಮದ್ಯ ಖರೀದಿಸಿದ್ದಾರೆ. 

ರಾಷ್ಟ್ರಪಿತ ಗಾಂಧಿ ಜಯಂತಿಯಂದು ಮದ್ಯ ಮಾರಾಟ ನಿಷೇಧ ನಡುವೆ ತೊಕ್ಕೊಟ್ಟಿನ ವಿನಮ್ರ ಬಾರಲ್ಲಿ ಎಗ್ಗಿಲ್ಲದೆ ಮದ್ಯ ಮಾರಾಟ ನಡೆಯುತ್ತಿದೆ. ಮದ್ಯ ನಿಷೇಧದ ಲಾಭ ಎತ್ತಿದ ವಿನಮ್ರ ಬಾರ್ ನವರು ಪ್ರತಿ ಮದ್ಯದ ಬ್ರಾಂಡಿಗೂ ಕ್ವಾಟ್ರಿಗೆ ನಲ್ವತ್ತರಂತೆ ಹೆಚ್ಚುವರಿ ಹಣವನ್ನ ಪೀಕಿಸಿ ಮದ್ಯ ಮಾರಾಟ ಮಾಡಿದ್ದಾರೆ. ಹೆಚ್ಚುವರಿ ಹಣ ದೋಚುತ್ತಿರುವುದರ ವಿರುದ್ಧ ಆಕ್ರೋಶಗೊಂಡ ಪಾನ ಪ್ರಿಯರೋರ್ವರು ಅಕ್ರಮವಾಗಿ ಮದ್ಯ ಮಾರಾಟ ಮಾಡುವುದನ್ನ ವೀಡಿಯೋ ಮಾಡಿದ್ದಾರೆ. 

ವಿನಮ್ರ ಬಾರ್ ನಲ್ಲಿ ಬೆಳ್ಳಂಬೆಳಗ್ಗೆಯೇ ಕುಡಿದು ತೂರಾಡುವುದು ಸಾಮಾನ್ಯ ಎನ್ನುವಂಥ ಸ್ಥಿತಿಯಿದೆ. ಬಾರ್ ಬೆಳಗ್ಗೆ 10 ಗಂಟೆ ನಂತರವೇ ತೆರೆಯಬೇಕೆಂದು ಅಬಕಾರಿ ಇಲಾಖೆ ನಿಯಮ ಇದ್ದರೂ ಈ ಬಾರಲ್ಲಿ ಮಾತ್ರ ಬೆಳಗ್ಗೆ 8 ಗಂಟೆಯಿಂದಲೇ ಮದ್ಯ ದೊರೆಯುತ್ತದೆ. ಅದಕ್ಕಾಗಿ ಹಗಲು ಕುಡುಕರಲ್ಲಿ ಬಾರ್ ನಲ್ಲಿ ಹೆಚ್ಚುವರಿ ದರವನ್ನು ಪೀಕಿಸುತ್ತಾರೆಂಬ ಆರೋಪ ಇದೆ. ಇಲ್ಲಿ ಬೆಳಗ್ಗೆಯೇ ಕುಡಿದು ಟೈಟಾಗುವ ಯುವಕರು ಬಾರ್ ಎದುರಲ್ಲೇ ಟೆಂಟ್ ಹಾಕಿ ಲೂಡೊ ಆಡುತ್ತಾರೆ. ನಿತ್ಯವೂ ಬೆಳ್ಳಂಬೆಳಗ್ಗೆ ಎಣ್ಣೆ ಕುಡಿಸುವ ಬಾರ್ ಮಹಾತ್ಮನ ಜನ್ಮ ದಿನಾಚರಣೆಯಂದು ಎಣ್ಣೆ ಪ್ರಿಯರಿಂದಲೇ ಡಬಲ್ ವಸೂಲಿ ಮಾಡಿ ಮದ್ಯ ನಿಷೇಧ ನಿಯಮವನ್ನೇ ಗಾಳಿಗೆ ತೂರಿದ್ದು ವಿಪರ್ಯಾಸ.

Mangalore Vinamra Bar opens at Thokottu amid Gandhi Jayanti lewing 40 Rs. More than the MRP price.