Bro Baptist Rodrigues Mangalore: ‘’ಬ್ಯಾಟ್ಟಿ ಬ್ರದರ್’’ ಎಂದೇ ಹೆಸರಾಗಿದ್ದ ಫಾದರ್ ಬ್ಯಾಪ್ಟಿಸ್ಟ್ ರೋಡ್ರಿಗಸ್ ನಿಧನ

03-10-23 08:44 pm       Mangalore Correspondent   ಕರಾವಳಿ

ಕೆಥೋಲಿಕ್ ಕ್ರಿಸ್ತಿಯನ್ನರ ನಡುವೆ ‘’ಬ್ಯಾಟಿ ಬ್ರದರ್’’ ಎಂದೇ ಹೆಸರಾಗಿದ್ದ ಫಾದರ್ ಬ್ಯಾಪ್ಟಿಸ್ಟ್ ರೋಡ್ರಿಗಸ್(79) ಅವರು ನಗರದ ಕೆಎಂಸಿ ಆಸ್ಪತ್ರೆಯಲ್ಲಿ ಅ.3ರಂದು ನಿಧನರಾಗಿದ್ದಾರೆ.

ಮಂಗಳೂರು, ಅ.3: ಕೆಥೋಲಿಕ್ ಕ್ರಿಸ್ತಿಯನ್ನರ ನಡುವೆ ‘’ಬ್ಯಾಟಿ ಬ್ರದರ್’’ ಎಂದೇ ಹೆಸರಾಗಿದ್ದ ಫಾದರ್ ಬ್ಯಾಪ್ಟಿಸ್ಟ್ ರೋಡ್ರಿಗಸ್(79) ಅವರು ನಗರದ ಕೆಎಂಸಿ ಆಸ್ಪತ್ರೆಯಲ್ಲಿ ಅ.3ರಂದು ನಿಧನರಾಗಿದ್ದಾರೆ.

ಮೂಲತಃ ಮಂಗಳೂರಿನವರೇ ಆಗಿದ್ದ ರೋಡ್ರಿಗಸ್ ಅವರು ಮಂಗಳೂರು ಡಯಾಸಿಸ್ ಒಳಪಟ್ಟ ತಮಿಳುನಾಡಿನ ವೆಲ್ಲೂರಿನ ಸೈಂಟ್ ಮೈಕೆಲ್ ನಲ್ಲಿ ಪಾದ್ರಿಯಾಗಿದ್ದರು. ಜಾನ್ ರೋಡ್ರಿಗಸ್ ಮತ್ತು ಕೋಸೆಸ್ ರೋಡ್ರಿಗಸ್ ದಂಪತಿಯ ಏಳು ಮಕ್ಕಳಲ್ಲಿ ಬ್ಯಾಪ್ಟಿಸ್ಟ್ ಒಬ್ಬರು. ಇವರ ಇಬ್ಬರು ಸೋದರಿಯರು ಕೂಡ ದೇವರ ಕೆಲಸಕ್ಕಾಗಿ ತಮ್ಮ ಜೀವನ ಮುಡಿಪಾಗಿಟ್ಟಿದ್ದರು.

ಬ್ಯಾಪ್ಟಿಸ್ಟ್ ಅವರು ಮೊದಲಿಗೆ 1963ರಲ್ಲಿ ಕೇರಳದ ಆಲುವಾಯಿ ಜಿಲ್ಲೆಯಲ್ಲಿ ಚರ್ಚ್ ಕೆಲಸಕ್ಕೆ ಸೇರ್ಪಡೆಯಾಗಿದ್ದರು. ತಮಿಳುನಾಡಿನ ಪೋಡನ್ನೂರು ಚರ್ಚ್ ನಲ್ಲಿ ಮೊದಲ ಬಾರಿ ಪಾದ್ರಿಯಾಗಿ ಕೆಲಸ ಆರಂಭಿಸಿದ್ದರು. ಸುದೀರ್ಘ ಅವಧಿಯಲ್ಲಿ ಮೈಸೂರು ಪುಷ್ಪಾಶ್ರಮ, ಮಂಗಳೂರಿನ ಸೈಂಟ್ ಜೋಸೆಫ್ ಮಾನಸ್ಟ್ರಿ, ಮಡಂತ್ಯಾರಿನ ಆಶಾ ದೀಪ, ಕೋಟೇಶ್ವರದ ಕ್ಯಾರ್ಮೆಲ್ ಆಶ್ರಮದಲ್ಲಿ ಸೇವೆ ಸಲ್ಲಿಸಿದ್ದಾರೆ. ಬ್ಯಾಪ್ಟಿಸ್ಟ್ ಅವರ ಅಂತ್ಯಕ್ರಿಯೆ ಅ.6ರಂದು ಮಂಗಳೂರಿನ ಕ್ಯಾರ್ಮೆಲ್ ಹಿಲ್ ಇನ್ಫೆಂಟ್ ಜೀಸಸ್ ಚರ್ಚ್ ಆವರಣದಲ್ಲಿ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

Br. Baptist Rodrigues of St. Joseph who, irrespective of age, religion, and gender, was affectionately called ‘Batti Brother'