Mangalore, snake Digestive disorder: ಹೆಬ್ಬಾವಿಗೂ ಮಲಬದ್ದತೆ ಸಮಸ್ಯೆ ; ಹೊಟ್ಟೆ ಉಬ್ಬರಿಸಿ ಅಸ್ವಸ್ಥಗೊಂಡಿದ್ದ ಹೆಬ್ಬಾವಿಗೆ ಆಪರೇಷನ್, ಮೂರು ಗಂಟೆಗಳ ಚಿಕಿತ್ಸೆಯಿಂದ ಹಾವಿಗೆ ಮರುಜನ್ಮ 

04-10-23 10:52 pm       Mangalore Correspondent   ಕರಾವಳಿ

ಹೆಬ್ಬಾವು ಮಲಬದ್ಧತೆ ಸಮಸ್ಯೆಯಿಂದ ಅನಾರೋಗ್ಯಕ್ಕೀಡಾಗಿತ್ತು ಎಂದರೆ ನಂಬುತ್ತೀರಾ.. ಆದರೆ ನಂಬಲೇ ಬೇಕು. ಯಾಕಂದ್ರೆ, ಈ ಸಮಸ್ಯೆಯಿಂದ‌ ಹೊಟ್ಟೆ ಉಬ್ಬರಿಸಿ ಬಿದ್ದುಕೊಂಡಿದ್ದ ಹೆಬ್ಬಾವಿಗೆ ಮಂಗಳೂರಿನ ವೈದ್ಯರ‌ ತಂಡ ಶಸ್ತ್ರಚಿಕಿತ್ಸೆ ನಡೆಸಿ ರಕ್ಷಣೆ ಮಾಡಿದೆ.

ಮಂಗಳೂರು, ಅ.4: ಹೆಬ್ಬಾವು ಮಲಬದ್ಧತೆ ಸಮಸ್ಯೆಯಿಂದ ಅನಾರೋಗ್ಯಕ್ಕೀಡಾಗಿತ್ತು ಎಂದರೆ ನಂಬುತ್ತೀರಾ.. ಆದರೆ ನಂಬಲೇ ಬೇಕು. ಯಾಕಂದ್ರೆ, ಈ ಸಮಸ್ಯೆಯಿಂದ‌ ಹೊಟ್ಟೆ ಉಬ್ಬರಿಸಿ ಬಿದ್ದುಕೊಂಡಿದ್ದ ಹೆಬ್ಬಾವಿಗೆ ಮಂಗಳೂರಿನ ವೈದ್ಯರ‌ ತಂಡ ಶಸ್ತ್ರಚಿಕಿತ್ಸೆ ನಡೆಸಿ ರಕ್ಷಣೆ ಮಾಡಿದೆ.

ನಗರದ ಕದ್ರಿಯಲ್ಲಿ ಹೆಬ್ಬಾವೊಂದು ಅಸ್ವಸ್ಥ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಉರಗ ರಕ್ಷಕ ಧೀರಜ್ ಗಾಣಿಗ ಗಮನಕ್ಕೆ ಬಂದಿತ್ತು.‌ ಏನೋ ಸಮಸ್ಯೆ ಆಗಿರಬೇಕೆಂದು ವೈದ್ಯರಿಗೆ ತಿಳಿಸಿದ್ದರು. ಅದರಂತೆ, ವೈದ್ಯರು ಪರೀಕ್ಷೆ ನಡೆಸಿದಾಗ ಹೊಟ್ಟೆಯಲ್ಲಿ ಪೂರ್ತಿ ಮಲ ತುಂಬಿಕೊಂಡಿರುವುದು ಕಂಡುಬಂದಿತ್ತು. 

ಮಂಗಳೂರಿನ ಪ್ರಾಣಿ ವೈದ್ಯರಾದ ಡಾ.ಮೇಘನಾ ಪೆಮ್ಮಯ್ಯ, ಡಾ. ಯಶಸ್ವಿ ನಾರಾವಿ, ಡಾ. ಕೀರ್ತನಾ ಜೋಷಿ, ನಫೀಸಾ ಕೌಸರ್, ಸಮೀಕ್ಷಾ ರೆಡ್ಡಿ ಅವರ ವೈದ್ಯರ ತಂಡ ಹೆಬ್ಬಾವಿನ ಯಶಸ್ವಿಯಾಗಿ ಶಸ್ತ್ರ ಚಿಕಿತ್ಸೆ ನಡೆಸಿದೆ. 
 
ತಪಾಸಣೆ ವೇಳೆ ಹೆಬ್ಬಾವು ಮಲಬದ್ಧತೆಯಿಂದ ಬಳಲುತ್ತಿರುವುದು ಕಂಡುಬಂತು.  ಗಟ್ಟಿಯಾದ ರೀತಿಯಲ್ಲಿ ಮಲ ಹೊಟ್ಟೆಯಲ್ಲಿ ಕಟ್ಟಿಕೊಂಡಿತ್ತು. ದೇಹದ ಅರ್ಧ ಭಾಗದಷ್ಟು ಮಲವೇ ತುಂಬಿಕೊಂಡಿತ್ತು. 13 ಕೆಜಿ ತೂಕದ ಹೆಬ್ಬಾವಿನಲ್ಲಿ ಬಹುತೇಕ ಮಲ ಇತ್ತು. ಮೊದಲು ಅರಿವಳಿಕೆ ಇಂಜೆಕ್ಷನ್ ಕೊಟ್ಟು ಶಸ್ತ್ರಚಿಕಿತ್ಸೆ ನಡೆಸಲಾಯಿತು.  ಮೂರು ಗಂಟೆಗಳ ಶಸ್ತ್ರ ಚಿಕಿತ್ಸೆಯಲ್ಲಿ ತ್ಯಾಜ್ಯವನ್ನು ಪೂರ್ತಿ ತೆಗೆದುಹಾಕಲಾಗಿದೆ ಎಂದು ಡಾ. ಯಶಸ್ವಿ ನಾರಾವಿ ತಿಳಿಸಿದ್ದಾರೆ. ಹೆಬ್ಬಾವು ಚೇತರಿಸಿಕೊಂಡ ಬಳಿಕ ಅದನ್ನು ರಕ್ಷಿಸಿದ ಸ್ಥಳದಲ್ಲೇ ಬಿಡಲಾಯಿತು.

Digestive disorder in snake cobra, three hours operation gives back like to snake in Mangalore.