ಬ್ರೇಕಿಂಗ್ ನ್ಯೂಸ್
07-10-23 09:12 pm Mangalore Correspondent ಕರಾವಳಿ
ಮಂಗಳೂರು, ಅ.7: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಅ.9ರಿಂದ 24ರ ವರೆಗೆ ದಸರಾ ರಜೆಯನ್ನು ನೀಡಲಾಗಿದೆ. ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯಿಂದಲೇ ಈ ನಿಯಮ ಮಾಡಿದ್ದು, ಹೆಚ್ಚಿನ ಕಡೆ ಇದನ್ನೇ ಅನ್ವಯ ಮಾಡಲಾಗಿದೆ. ಅಲ್ಪಸಂಖ್ಯಾತ ಶಾಲೆಗಳಲ್ಲಿ ಕ್ರಿಸ್ಮಸ್ ಸಂದರ್ಭದಲ್ಲಿ ಹೆಚ್ಚುವರಿ ರಜೆ ನೀಡುವುದರಿಂದ ರಜೆ ನೀಡುವ ವಿಚಾರದಲ್ಲಿ ಸ್ವಂತ ನಿರ್ಧಾರ ತೆಗೆದುಕೊಳ್ಳಲು ಅವಕಾಶ ನೀಡಲಾಗಿದೆ.
ಪಿಯು ಕಾಲೇಜುಗಳಿಗೂ ಅ.14ರಿಂದ 29ರ ವರೆಗೆ ಸಾರ್ವತ್ರಿಕ ದಸರಾ ರಜೆಯನ್ನು ನೀಡಲಾಗಿದೆ. ಬಹುತೇಕ ಪಿಯು ಕಾಲೇಜುಗಳಲ್ಲಿ ಇದೇ ನಿಯಮವನ್ನು ಅಳವಡಿಸಿಕೊಂಡಿದ್ದಾರೆ. ಆದರೆ ಮಂಗಳೂರಿನ ಶಾರದಾ ಪಿಯು ಕಾಲೇಜಿನಲ್ಲಿ ಮಾತ್ರ ಕೊನೆಯ ಒಂದು ವಾರ ಮಾತ್ರ ರಜೆ ನೀಡಲಾಗಿದೆ. ಕಾಲೇಜು ಪ್ರಿನ್ಸಿಪಾಲ್ ವಿದ್ಯಾರ್ಥಿಗಳಿಗೆ ನೀಡಿರುವ ಮಾಹಿತಿ ಪ್ರಕಾರ, ಅ.22ರಿಂದ 29ರ ವರೆಗೆ ಮಾತ್ರ ರಜೆ ಎಂದು ಸೂಚಿಸಿದ್ದಾರೆ. ದಸರಾ ಮುಗಿದ ಬಳಿಕ ರಜೆ ನೀಡುವ ಶಾರದಾ ಕಾಲೇಜು ಆಡಳಿತದ ನಿರ್ಧಾರದ ಬಗ್ಗೆ ಪೋಷಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕೆನರಾ ಪಿಯು ಕಾಲೇಜಿನಲ್ಲಿ ಅ.14ರಿಂದ 29ರ ವರೆಗೆ ರಜೆ ನೀಡಲಾಗಿದೆ. ಹಿಂದುತ್ವ, ಸಂಸ್ಕೃತಿ ಎನ್ನುವ ಶಾರದಾ ಕಾಲೇಜಿನವರು ಹಿಂದುಗಳ ನವರಾತ್ರಿ ಉತ್ಸವಕ್ಕೇ ರಜೆ ನೀಡಿಲ್ಲ. ಮಂಗಳೂರಿನ ಶಾಸಕ ವೇದವ್ಯಾಸ ಕಾಮತ್ ಎಲ್ಲ ಶಾಲೆ, ಕಾಲೇಜುಗಳಿಗೆ ದಸರಾ ರಜೆ ನೀಡುವಂತೆ ಆಗ್ರಹ ಮಾಡಿದ್ದಾರೆ. ಅವರ ಮಾತನ್ನು ನಗರದ ಶಾರದಾ ಕಾಲೇಜಿನವರೇ ಉಲ್ಲಂಘಿಸುತ್ತಾರೆ. ಕಳೆದ ವರ್ಷವೂ ಶಾರದಾ ಕಾಲೇಜಿನವರು ಮಕ್ಕಳಿಗೆ ರಜೆ ನೀಡಿಲ್ಲ. ಕೊನೆಯ ಒಂದು ವಾರದ ರಜೆಯಂದ್ರೆ, ಮೂರು ದಿನ ಹೇಗೂ ಸರಕಾರಿ ರಜೆ ಇದೆ. ಉಳಿದ ಮೂರು ದಿನ ಅದರಲ್ಲೂ ನವರಾತ್ರಿ ಮುಗಿದ ಬಳಿಕ ರಜೆ ನೀಡಿದ್ದಾರೆ ಎಂದು ಆಕ್ಷೇಪ ಸೂಚಿಸಿದ್ದಾರೆ.
ಈ ಬಗ್ಗೆ ಪಿಯು ಶಿಕ್ಷಣ ಮಂಡಳಿಯ ಜಿಲ್ಲಾ ಮಟ್ಟದ ಅಧಿಕಾರಿ ಜಯಣ್ಣ ಅವರಲ್ಲಿ ಕೇಳಿದರೆ, ಇಲಾಖೆಯ ರಜೆ 14ರಿಂದ 29ರ ವರೆಗೆ ಇದೆ. ಶಾರದಾ ಕಾಲೇಜಿನವರು ಯಾಕೆ ರಜೆ ನೀಡುತ್ತಿಲ್ಲ ಎಂದು ತಿಳಿದಿಲ್ಲ. ಈ ಬಗ್ಗೆ ಪೋಷಕರ ಅಸಮಾಧಾನ ಇದ್ದರೆ, ಬಂದು ದೂರು ಕೊಡಲಿ. ಪರಿಶೀಲನೆ ಮಾಡುತ್ತೇನೆ ಎಂದಿದ್ದಾರೆ. ಮಂಗಳೂರಿನ ಅಲೋಶಿಯಸ್, ಆಗ್ನೆಸ್ ಸ್ವಾಯತ್ತ ಶಿಕ್ಷಣ ಸಂಸ್ಥೆಗಳಾಗಿದ್ದರೂ ದಸರಾ ಸಂದರ್ಭದಲ್ಲಿ ಕಾಲೇಜಿಗೆ ಒಂದು ವಾರದ ರಜೆಯನ್ನು ತಪ್ಪಿಸುವುದಿಲ್ಲ. ಶಾರದಾ ಕಾಲೇಜಿನಲ್ಲಿ ಮಾತ್ರ ರಜೆಯನ್ನು ಕಡಿತಗೊಳಿಸಿರುವುದು ಆಕ್ಷೇಪಕ್ಕೆ ಕಾರಣವಾಗಿದೆ.
ಪದವಿ ಕಾಲೇಜುಗಳಿಗೆ ಹಿಂದೆಲ್ಲಾ ದಸರಾ ರಜೆ ನೀಡುವ ನಿಮಯ ಇರಲಿಲ್ಲ. ಕಳೆದ ವರ್ಷ ಮಾತ್ರ ಕರಾವಳಿಯ ಶಾಸಕರ ಪ್ರಯತ್ನದಿಂದಾಗಿ ಹತ್ತು ದಿನಗಳ ಸರಕಾರಿ ರಜೆ ನೀಡಲು ಆದೇಶ ಬಂದಿತ್ತು. ಅದರಂತೆ, ಮಂಗಳೂರು ವಿವಿ ವ್ಯಾಪ್ತಿಯ ಪದವಿ ಕಾಲೇಜುಗಳಲ್ಲಿ ಕಳೆದ ವರ್ಷ ಅ.1ರಿಂದ 9ರ ವರೆಗೆ ದಸರಾ ರಜೆ ನೀಡಲಾಗಿತ್ತು. ಈ ಬಾರಿ ರಜೆ ಇದೆಯೇ ಎಂದು ಕೇಳಿದರೆ, ಯಾರಿಗೂ ಗೊತ್ತಿಲ್ಲ ಅಂತಾರೆ. ಮಂಗಳೂರು ವಿವಿಯ ಕುಲಪತಿ ಜಯರಾಜ್ ಅಮೀನ್ ಅವರು ಕೂಡ ದಸರಾ ರಜೆಯನ್ನು ಹೆಚ್ಚು ದಿನ ಕೊಟ್ಟಲ್ಲಿ ಶೈಕ್ಷಣಿಕ ಕ್ಯಾಲೆಂಡರ್ ಬದಲಾವಣೆ ಮಾಡಬೇಕಾಗುತ್ತದೆ. ಆ.23ರಿಂದಷ್ಟೇ ಪದವಿ ವಿದ್ಯಾರ್ಥಿಗಳ ಶೈಕ್ಷಣಿಕ ವರ್ಷ ಆರಂಭ ಆಗಿದೆ ಎಂದಿದ್ದಾರೆ.
Dasara holidays in Mangalore for schools and colleges, Sharada College grants holiday after holiday October month end sparks anger with parents of students.
24-07-25 10:52 pm
HK News Desk
ಕಾಲ್ತುಳಿತ ಪ್ರಕರಣ ; ಆರ್ ಸಿಬಿ, ಡಿಎನ್ಎ, ಕೆಎಸ್ ಸಿ...
24-07-25 08:01 pm
Lokayukta Raid, IAS Vasanthi: ಐಎಎಸ್ ಅಧಿಕಾರಿ ಮ...
24-07-25 07:29 pm
ಜಿಎಸ್ಟಿ ಬಾಕಿ ಪಾವತಿ ನೋಟಿಸ್ ವಾಪಸ್ ; ಆತಂಕಗೊಂಡಿದ...
24-07-25 05:01 pm
ಕೆಂಪುಕಲ್ಲು ಗಣಿಗಾರಿಕೆಗೆ ಅಧಿಕೃತ ಪರವಾನಿಗೆ ನೀಡಲು...
23-07-25 08:03 pm
24-07-25 09:06 pm
HK News Desk
Supreme Court, Actor Darshan, Murder case: ನಟ...
24-07-25 07:54 pm
3,000 ಕೋಟಿ ಸಾಲ ವಂಚನೆ ಕೇಸ್ ; ಅನಿಲ್ ಅಂಬಾನಿ ಮೇಲ...
24-07-25 03:29 pm
ಕುಡುಬಿ ಸಮುದಾಯ ಎಸ್ಸಿ ಪಟ್ಟಿಗೆ ಸೇರಿಸಲು ರಾಜ್ಯದಿಂದ...
22-07-25 07:21 pm
Shashi Tharoor, Thiruvananthapuram: ಶಶಿ ತರೂರ್...
22-07-25 03:04 pm
24-07-25 10:26 pm
Mangalore Correspondent
Dharmasthala Case, Investigation, Advocate,...
24-07-25 05:27 pm
Mangalore Indiana Hospital: ಮಂಗಳೂರಿನಲ್ಲಿ ಪ್ರಥ...
24-07-25 11:30 am
ಕರಾವಳಿ ಜಿಲ್ಲೆಗಳಿಗೆ ಜುಲೈ 26ರ ವರೆಗೆ ಭಾರೀ ಮಳೆಯ ರ...
23-07-25 10:49 pm
Mangalore Extortion Jail, Sudheer Kumar Reddy...
23-07-25 10:25 pm
24-07-25 10:38 pm
Bangalore Correspondent
ದೇಶದಲ್ಲಿ ಅಲ್ ಖೈದಾ ಉಗ್ರವಾದಿ ಗುಂಪಿಗೆ ಯುವಜನರ ಸೇರ...
24-07-25 12:01 pm
Hyderabad, Udupi, Crime: ಹೈದರಾಬಾದಿನಲ್ಲಿ ರಿಯಲ್...
23-07-25 04:49 pm
ಟೆಲಿಗ್ರಾಮ್ ಆ್ಯಪ್ನಲ್ಲಿ ಹೂಡಿಕೆ ಮೇಲೆ ಕಮಿಷನ್ ; ಆ...
23-07-25 03:25 pm
Udupi Police, Chaddi Gang: ಉಡುಪಿಗೆ ಎಂಟ್ರಿ ಕೊಟ...
23-07-25 11:36 am