Mangalore, Garbage Disposal: ಕಸ ಸಂಗ್ರಹಿಸುವ ಪೌರ ಕಾರ್ಮಿಕನಿಗೆ ಹಲ್ಲೆ ; ಭಾನುವಾರ ಕಸ ವಿಲೇವಾರಿ ಸ್ಥಗಿತಗೊಳಿಸಿ ಪ್ರತಿಭಟನೆಗೆ ನಿರ್ಧಾರ 

07-10-23 09:48 pm       Mangalore Correspondent   ಕರಾವಳಿ

ಮನೆ ಮನೆ ಕಸ ಸಂಗ್ರಹಿಸುವ ಮಹಾನಗರ ಪಾಲಿಕೆಯ ಪೌರ ಕಾರ್ಮಿಕನ ಮೇಲೆ ವ್ಯಕ್ತಿಯೊಬ್ಬರು ಹಲ್ಲೆ ನಡೆಸಿದ ಘಟನೆ ಸುರತ್ಕಲ್ ಬಳಿಯ ಸದಾಶಿವ ನಗರದಲ್ಲಿ ನಡೆದಿದೆ.

ಮಂಗಳೂರು, ಅ.7: ಮನೆ ಮನೆ ಕಸ ಸಂಗ್ರಹಿಸುವ ಮಹಾನಗರ ಪಾಲಿಕೆಯ ಪೌರ ಕಾರ್ಮಿಕನ ಮೇಲೆ ವ್ಯಕ್ತಿಯೊಬ್ಬರು ಹಲ್ಲೆ ನಡೆಸಿದ ಘಟನೆ ಸುರತ್ಕಲ್ ಬಳಿಯ ಸದಾಶಿವ ನಗರದಲ್ಲಿ ನಡೆದಿದೆ.

ಹಲ್ಲೆಗೀಡಾದ ಕಾರ್ಮಿಕ ರಾಜು ಎಂಬಾತನಾಗಿದ್ದು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರ್ಮಿಕನ ಮೇಲಿನ ಹಲ್ಲೆ ಘಟನೆಯನ್ನು ಪೌರ ಕಾರ್ಮಿಕರ ಸಂಘಟನೆ ಖಂಡಿಸಿದ್ದು ಭಾನುವಾರ ಮಂಗಳೂರು ನಗರದಾದ್ಯಂತ ಕಸ ವಿಲೇವಾರಿ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ. ಹಲ್ಲೆ ಬಗ್ಗೆ ಸುರತ್ಕಲ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಹಲ್ಲೆ ಘಟನೆ ಬಗ್ಗೆ ಮಂಗಳೂರು ಸಫಾಯಿ ಕರ್ಮಚಾರಿ ಯೂನಿಯನ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ತಪ್ಪಿತಸ್ಥರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ. ಯೂನಿಯನ್ ಉಪಾಧ್ಯಕ್ಷ ಸುಧೀರ್ ಕುಲಾಲ್ ಹೇಳಿಕೆ ನೀಡಿದ್ದು ಮನೆ ಮನೆ ಕಸ ಸಂಗ್ರಹಿಸುವ ಕಾರ್ಮಿಕರ ಮೇಲೆ ನಿರಂತರ ಹಲ್ಲೆ , ಕಿರುಕುಳಗಳು ನಡೆಯುತ್ತಿದೆ. ಇದನ್ನು ಸಂಘ ಖಂಡಿಸಿ ಭಾನುವಾರ ಮಂಗಳೂರು ನಗರದಾದ್ಯಂತ ಕಸ ಸಂಗ್ರಹ ಸ್ಥಗಿತ ಮಾಡಲು ನಿರ್ಧರಿಸಿದ್ದೇವೆ ಎಂದಿದ್ದಾರೆ.

A civic worker of the Municipal Corporation, who collects garbage door-to-door, was attacked by a man at Sadashivanagar near Surathkal.