ಬ್ರೇಕಿಂಗ್ ನ್ಯೂಸ್
08-10-23 10:49 pm Mangalore Correspondent ಕರಾವಳಿ
ಮಂಗಳೂರು, ಅ.8: ಮಿಲಿಯನೇರ್ ಮುಂಡ್ಕೂರು ರಾಮದಾಸ್ ಕಾಮತ್ ನಿಗೂಢ ಸಾವಿನ ಪ್ರಕರಣಕ್ಕೆ ಸಂಬಂಧಿಸಿ ತನಿಖೆ ನಡೆಸಲು ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಕೊನೆಗೂ ಎಸಿಪಿ ನೇತೃತ್ವದಲ್ಲಿ ತನಿಖಾ ತಂಡ ರಚಿಸಿದ್ದಾರೆ. ಕೇಂದ್ರ ಉಪವಿಭಾಗದ ಎಸಿಪಿ ಮಹೇಶ್ ಕುಮಾರ್ ನೇತೃತ್ವದಲ್ಲಿ ತನಿಖಾ ತಂಡ ರಚಿಸಲಾಗಿದೆ.
ಇಷ್ಟಕ್ಕೂ ಎರಡು ವಾರಗಳ ಹಿಂದೆ ಸಾವಿನ ಘಟನೆ ನಡೆದಿದ್ದರೂ, ಅದು ಸುದ್ದಿಯೇ ಆಗದಂತೆ ನೋಡಿಕೊಂಡಿದ್ದು ಮಂಗಳೂರಿನ ಪೊಲೀಸರು. ಈ ಬಗ್ಗೆ ಎಸಿಪಿ ಮಹೇಶ್ ಕುಮಾರ್ ಅವರಲ್ಲಿ ಕೇಳಿದರೆ, ಅದರಲ್ಲೇನೂ ಇಲ್ಲ ಎಂದೇ ಹೇಳುತ್ತಿದ್ದರು. ಅಷ್ಟು ದೊಡ್ಡ ಉದ್ಯಮಿಯೊಬ್ಬರು ದಿಢೀರ್ ಆಗಿ ಹೇಗೆ ಸತ್ತರು, ಆತ್ಮಹತ್ಯೆ ಹೇಗಾಯ್ತು ಅಂತ ಕೇಳಿದರೆ, ಅದಕ್ಕೂ ಉತ್ತರ ಇರಲಿಲ್ಲ. ನಿಮಗೇನಾದ್ರೂ ಡೌಟ್ ದ್ದರೆ ಮಾಹಿತಿ ಕೊಡಿ ಎನ್ನುತ್ತಿದ್ದರು. ಈಗ ಅದೇ ಅಧಿಕಾರಿ ನೇತೃತ್ವದಲ್ಲಿ ತನಿಖೆಗೆ ಆದೇಶ ಮಾಡಲಾಗಿದೆ.
ಕಮಿಷನರ್ ಅನುಪಮ್ ಅಗರ್ವಾಲ್ ಐಜಿಪಿ ಶ್ರೇಣಿಯ ಹಿರಿಯ ಪೊಲೀಸ್ ಅಧಿಕಾರಿ. ಈ ಹಿಂದೆ ಕಮಿಷನರ್ ಆಗಿದ್ದ ಕುಲದೀಪ್ ಜೈನ್ ಕೇವಲ ಎಸ್ಪಿ ದರ್ಜೆಯ ಕಿರಿಯ ಶ್ರೇಣಿಯ ಅಧಿಕಾರಿಯಾಗಿದ್ದವರು. ಆದರೆ ಪೊಲೀಸಿಂಗ್ ಮತ್ತು ದಕ್ಷತೆ ವಿಚಾರದಲ್ಲಿ ಸಣ್ಣ ವಯಸ್ಸಿನ ಐಪಿಎಸ್ ಅಧಿಕಾರಿ ಕುಲದೀಪ್ ಕುಮಾರ್ ಜೈನ್ ಮಂಗಳೂರಿನ ಜನರ ಗಮನ ಸೆಳೆದಿದ್ದರು. ಡ್ರಗ್ಸ್, ಗಾಂಜಾ ಸೇರಿದಂತೆ ಮಂಗಳೂರಿನಲ್ಲಿ ನಡೆಯುತ್ತಿದ್ದ ದೋ ನಂಬರ್ ದಂಧೆಗಳಿಗೆ ಬಹುತೇಕ ಕಡಿವಾಣ ಹಾಕಿದ್ದು ಕುಲದೀಪ್ ಜೈನ್. ಆದರೆ ಅವರನ್ನು ಕೇವಲ ಆರೇ ತಿಂಗಳಲ್ಲಿ ಇಲ್ಲಿಂದ ಎತ್ತಂಗಡಿ ಮಾಡಿಸಲಾಗಿತ್ತು. ಈಗ ಆಗರ್ಭ ಶ್ರೀಮಂತನೊಬ್ಬ ಸದ್ದೇ ಆಗದಂತೆ ಸಾಯುವ ಸ್ಥಿತಿ ಬಂದಾಗ ಕುಲದೀಪ್ ಜೈನ್ ಅವರೇ ಮಂಗಳೂರಿನ ಪೊಲೀಸ್ ಕಮಿಷನರ್ ಆಗಿರಬೇಕಿತ್ತು ಅನ್ನುವ ಮಾತು ಕೇಳಿಬರುತ್ತಿದೆ. ಯಾಕಂದ್ರೆ, ಮಂಗಳೂರಿನ ಪೊಲೀಸ್ ಅಧಿಕಾರಿಗಳು ರಾಮದಾಸ್ ಕಾಮತ್ ಸಾವಿನ ಸುದ್ದಿಯನ್ನೇ ಎರಡು ವಾರ ಕಾಲ ಮುಚ್ಚಿಟ್ಟಿದ್ದರು. ಸ್ಥಾಪಿತ ಹಿತಾಸಕ್ತಿಗಳ ಕೈಗೊಂಬೆಯಂತೆ ವರ್ತಿಸಿದ್ದರು. ಕುಲದೀಪ್ ಜೈನ್ ಇರುತ್ತಿದ್ದರೆ ಇಂಥ ಸ್ಥಿತಿ ಬರುತ್ತಿರಲಿಲ್ಲ ಅನ್ನೋ ಮಾತನ್ನು ಜನರಾಡುತ್ತಿದ್ದಾರೆ.
ಹೊಟೇಲ್ ಮಾಲಕ ಆವಾಜ್ ಹಾಕಿದ್ನಂತೆ
ರಾಮದಾಸ್ ಕಾಮತ್ ಸಾಯುವುದಕ್ಕೂ ಒಂದು ವಾರದ ಹಿಂದೆ ಮಂಗಳೂರಿನ ಪ್ರತಿಷ್ಠಿತ ಹೊಟೇಲ್ ಮಾಲಕನ ಜೊತೆಗೆ ಜಟಾಪಟಿ ನಡೆಸಿದ್ದರಂತೆ. ಮಂಗಳೂರಿನ ಸಿಎ ಕಚೇರಿಯಲ್ಲೇ ಇಬ್ಬರ ನಡುವೆ ಜಟಾಪಟಿ ನಡೆದಿತ್ತು ಎನ್ನುವ ಮಾತು ಕೇಳಿಬರುತ್ತಿದೆ. ಹೊಟೇಲ್ ಮಾಲಕ ಆವಾಜ್ ಹಾಕಿದ್ದ ಒಂದೇ ವಾರದಲ್ಲಿ 75ರ ಹರೆಯದ ಆಗರ್ಭ ಶ್ರೀಮಂತ, ಜಿಎಸ್ ಬಿ ಸಮಾಜದ ಕೊಡುಗೈ ದಾನಿ ರಾಮದಾಸ ಕಾಮತ್ ನಿಗೂಢ ರೀತಿಯಲ್ಲಿ ಸಾವು ಕಂಡಿದ್ದರೇ ಅನ್ನುವ ಬಗ್ಗೆ ಪೊಲೀಸರು ತನಿಖೆ ನಡೆಸಬೇಕಿದೆ. ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಅನ್ನೋ ವಿಚಾರ ಸತ್ತ ಎರಡು ವಾರಗಳ ಬಳಿಕ ಸುದ್ದಿಯಾಗಿದೆ.
ಆದರೆ ಸಿರಿವಂತ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದೇ ಆಗಿದ್ದರೂ ಅದನ್ನು ಮುಚ್ಚಿಡುವ ಅಗತ್ಯ ಏನಿತ್ತು ಅನ್ನುವ ಪ್ರಶ್ನೆಗೆ ಪೊಲೀಸರೇ ಉತ್ತರ ಕೊಡಬೇಕಿದೆ. ರಾಮದಾಸ್ ಕಾಮತ್ ಜೊತೆಗೆ ದುಬೈನಲ್ಲಿ ಉದ್ಯಮಿಯಾಗಿದ್ದ ಬಿಆರ್ ಶೆಟ್ಟಿ ಸಾವಿನ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದು ಮುಖ್ಯಮಂತ್ರಿಗೆ ಪತ್ರ ಬರೆದಿದ್ದಾರೆ. ವಿಶೇಷ ತನಿಖಾ ತಂಡ ನೇಮಕಕ್ಕೆ ಆಗ್ರಹ ಮಾಡಿದ್ದಾರೆ. ಇದರ ಬೆನ್ನಲ್ಲೇ ನಾಮ್ಕೇವಾಸ್ತೆ ಎನ್ನುವಂತೆ ಪೊಲೀಸ್ ಕಮಿಷನರ್, ತನಿಖಾ ತಂಡ ರಚಿಸಿದ್ದಾರೆ. ಜಿಎಸ್ ಬಿ ಸಮಾಜದ ಒಳಗಡೆ ಸಾವಿನ ಸುದ್ದಿಯ ಬಗ್ಗೆ ಗುಸು ಗುಸು ಆರಂಭಗೊಂಡಿದೆ. ಪೊಲೀಸರು ಮನಸ್ಸು ಮಾಡಿದರೆ, ಸಾವಿನ ಹಿಂದಿನ ಸತ್ಯಗಳನ್ನು ಹೊರಗೆಳೆಯಲು ಹೆಚ್ಚು ದಿನ ಬೇಕಾಗಲ್ಲ.
Mangalore Mundkur Ramdas Kamath suicide, team formed under ACP to probe the case after two weeks of death. Mundkur Kamath who is a Millionaire NRI was found hanging at his residence at car street in Mangalore. Headline Karnataka was the first News Portal to expose the hidden death of Kamath. Former Mangalore Commissioner Kuldeep Jain IPS honest police officer would have solved this case soon after the news of his suicide.
24-05-25 07:45 pm
HK News Desk
Landslide Threat Returns in Shirur, Danger Zo...
24-05-25 06:04 pm
Hassan Marriage, wedding: ತಾಳಿ ಕಟ್ಟುವ ಸಮಯಕ್ಕೆ...
24-05-25 03:19 pm
ನವೆಂಬರ್ ವೇಳೆಗೆ ಜಿಪಂ, ತಾಪಂ ಚುನಾವಣೆ ಸಾಧ್ಯತೆ ; ರ...
23-05-25 02:35 pm
ಹಾಸನ ಜಿಲ್ಲೆಯಲ್ಲಿ ಮತ್ತೊಬ್ಬ ಮಹಿಳೆಯನ್ನು ತುಳಿದು ಸ...
23-05-25 11:54 am
23-05-25 08:08 pm
HK News Desk
ಭಾರತೀಯ ಹೈಕಮಷಿನ್ ಅಧಿಕಾರಿಗೆ ಗೇಟ್ ಪಾಸ್, 24 ಗಂಟೆಯ...
22-05-25 05:53 pm
ವಿದೇಶಕ್ಕೆ ಹೊರಟ ಸರ್ವಪಕ್ಷಗಳ ಏಳು ನಿಯೋಗ ; ಭಾರತದ ಸ...
22-05-25 05:43 pm
ಸಿಂಧು ಜಲ ಒಪ್ಪಂದ ಮರು ಪರಿಶೀಲಿಸಲು ಭಾರತ ಉತ್ಸುಕ ;...
21-05-25 12:57 pm
ಅಕ್ರಮ ಬಾಂಗ್ಲಾ ವಲಸಿಗರ ಪತ್ತೆಗೆ ಪ್ರತಿ ಜಿಲ್ಲೆಯಲ್ಲ...
20-05-25 02:36 pm
24-05-25 04:29 pm
Mangalore Correspondent
Mangalore Accident, Kolya: ಬೈಕ್ ಸ್ಕಿಡ್ ಆಗಿ ಸವ...
24-05-25 12:41 pm
Mangalore Lokayukta Raid, Pilikula: ಪಿಲಿಕುಳ ನ...
23-05-25 10:46 pm
Bantwal Heart Attack, Mangalore: ಪತ್ನಿಯ ಸೀಮಂತ...
23-05-25 06:04 pm
Mangalore Suhas Shetty, Nandan Mallya, BJP: ಸ...
23-05-25 05:38 pm
23-05-25 11:20 pm
Mangalore Correspondent
ಬಾಬ್ರಿ ಮಸೀದಿಗೆ ಪ್ರತೀಕಾರ, ಭಾರತದ ವಿರುದ್ಧ ದಾಳಿಗ...
23-05-25 01:25 pm
Valachil Murder, Mangalore crime: ಮದುವೆ ಸಂಬಂಧ...
23-05-25 10:02 am
Davangere Doctor, Stock Market Fraud: ಷೇರು ಮಾ...
22-05-25 02:22 pm
Mangalore Fraud, Currency trading scam: ಕರೆನ್...
19-05-25 09:38 pm