ಬ್ರೇಕಿಂಗ್ ನ್ಯೂಸ್
09-10-23 04:17 pm Mangalore Correspondent ಕರಾವಳಿ
ಉಳ್ಳಾಲ, ಅ.9: ಖಾಸಗಿ ಮೆಡಿಕಲ್ ಮಾಫಿಯಾಗಳ ಮುಂದೆ ಸರಕಾರಿ ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರಗಳು ದುರ್ಬಲಗೊಳ್ಳುತ್ತಿದ್ದು ಬಡವರು ಪ್ರತಿ ನಿತ್ಯ ತಮಗೆ, ತಮ್ಮವರಿಗೆ ವಕ್ಕರಿಸಿರುವ ಮಾರಕ ರೋಗ ವಾಸಿ ಮಾಡಲು ಜಾಲತಾಣಗಳಲ್ಲಿ ಭಿಕ್ಷೆ ಬೇಡುವ ಪರಿಸ್ಥಿತಿಯನ್ನ ನಾವೆಲ್ಲ ನೋಡುತ್ತಿದ್ದೇವೆ, ಬಡವರ ದೇಹಗಳು ಕೋಟಿ ರೂಪಾಯಿಗಳನ್ನ ವ್ಯಯಿಸಿ ಖಾಸಗಿ ಮೆಡಿಕಲ್ ಕಾಲೇಜು ಕಲಿಯುತ್ತಿರುವ ವಿದ್ಯಾರ್ಥಿಗಳ ಅಧ್ಯಯನದ ಪ್ರಯೋಗದ ವಸ್ತುವಾಗಿದೆ ಎಂದು ಡಿವೈಎಫ್ ಐ ಜಿಲ್ಲಾಧ್ಯಕ್ಷ ಬಿ.ಕೆ ಇಮ್ತಿಯಾಝ್ ಆಕ್ರೋಶ ವ್ಯಕ್ತಪಡಿಸಿದರು.
ಉಳ್ಳಾಲ ಸಮುದಾಯ ಆರೋಗ್ಯ ಕೇಂದ್ರಕ್ಕೆ ನುರಿತ ವೈದ್ಯರು, ಸಿಬ್ಬಂದಿಗಳ ಸಹಿತ ಮೂಲಭೂತ ಸೌಲಭ್ಯ ಒದಗಿಸಲು ಆಗ್ರಹಿಸಿ ಡಿವೈಎಫ್ ಐ ಉಳ್ಳಾಲ ತಾಲೂಕು ಸಮಿತಿ ವತಿಯಿಂದ ಸೋಮವಾರ ಸಮುದಾಯ ಆರೋಗ್ಯ ಕೇಂದ್ರದ ಮುಂಭಾಗದಲ್ಲಿ ನಡೆದ ಪ್ರತಿಭಟನೆಯನ್ನುದ್ದೇಶಿಸಿ ಅವರು ಮಾತನಾಡಿದರು.
ಉಳ್ಳಾಲ ತಾಲೂಕಿನ ಏಕೈಕ ಆರೋಗ್ಯ ಕೇಂದ್ರವನ್ನ ದುಸ್ಥಿತಿಗೆ ತಳ್ಳಲು ಇಲ್ಲಿನ ಮೆಡಿಕಲ್ ಮಾಫಿಯಾವೇ ಕಾರಣ. ಕ್ಷೇತ್ರದ ಶಾಸಕರಾಗಿರುವ ಯು.ಟಿ ಖಾದರ್ ಅವರು ಆರೋಗ್ಯ ಸಚಿವರಾಗಿದ್ದಾಗಲೇ ಇಲ್ಲಿಗೆ ಖಾಯಂ ವೈದ್ಯರು, ಸಿಬ್ಬಂದಿಗಳನ್ನ ನೇಮಿಸಬಹುದಿತ್ತು. ಈಗ ಖಾದರ್ ಅವರು ಮತ್ತೆ ಗೆದ್ದು ವಿಧಾನಸಭೆಯ ಸಭಾದ್ಯಕ್ಷರಾಗಿದ್ದರೂ ತಮ್ಮ ಕ್ಷೇತ್ರದ ಆರೋಗ್ಯ ಕೇಂದ್ರಕ್ಕೆ ಮೂಲಭೂತ ಸೌಕರ್ಯಗಳನ್ನ ಪೂರೈಸಲು ಸಂಪೂರ್ಣ ವಿಫಲರಾಗಿದ್ದಾರೆ. ಇಲ್ಲಿಗೆ ಅಪರೂಪಕ್ಕೆ ಭೇಟಿ ನೀಡುವ ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳಿಂದ ಮಾತ್ರೆಗಳನ್ನ ತಗೊಳ್ಳುವ ದುಸ್ಥಿತಿ ಜನರಿಗೆ ಬಂದಿದೆ. ರೋಗಿಗಳಿಗೆ ಔಷಧಿಯೂ ಸಿಗಲ್ಲ, ರೋಗಿಗಳನ್ನ ಇಲ್ಲಿಂದ ಬೇರೆಡೆಗೆ ಸಾಗಿಸಲು 108 ತುರ್ತು ವಾಹನವೂ ಇಲ್ಲ. ಹೆರಿಗೆಯಾದ ಬಾಣಂತಿಯರಿಗೆ ಬಿಸಿ ನೀರಿನ ವ್ಯವಸ್ಥೆ ಇಲ್ಲ. ಹೆರಿಗೆ ಆದವರಿಗೆ ತಾಯಿ ಕಾರ್ಡ್ ಕೊಡಿಸಲು ವಿಳಂಬ ನೀತಿ ಅನುಸರಿಸುತ್ತಿದ್ದಾರೆ ಎಂದು ಇಮ್ತಿಯಾಝ್ ಆರೋಪಿಸಿದರು.
ಯು.ಟಿ.ಖಾದರ್ ಅವರೇ ತಾವು ಕ್ಷೇತ್ರದ ಜನರ ಮತಗಳಿಂದ ಜಯ ಗಳಿಸಿದ್ದೀರಿ ಹೊರತು ಖಾಸಗಿ ಆಸ್ಪತ್ರೆ ಮಾಲಕರಿಂದಲ್ಲ. ತಮ್ಮ ಕ್ಷೇತ್ರದ ಬಡವರು ಆರೋಗ್ಯ ರಕ್ಷಣೆಗಾಗಿ ಯಾರಲ್ಲೂ ಕೈ ಚಾಚಬಾರದೆಂಬ ದೃಷ್ಟಿಯನ್ನಿಟ್ಟು ಸಮುದಾಯ ಆರೋಗ್ಯ ಕೇಂದ್ರಗಳನ್ನ ಬಲಪಡಿಸಿ. ತಮ್ಮ ಜೀವಿತಾವಧಿಯಲ್ಲಿ ಜಿಲ್ಲೆಗೊಂದು ಸರಕಾರಿ ಮೆಡಿಕಲ್ ಕಾಲೇಜೊಂದನ್ನ ನಿರ್ಮಿಸಿ ಸಾರ್ಥಕತೆ ಪಡೆಯಿರಿ. ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ನಮ್ಮ ಜಿಲ್ಲೆಗೆ ಉಸ್ತುವಾರಿಯಾಗಿದ್ದು ಖಾಸಗಿ ಮೆಡಿಕಲ್ ಕಾಲೇಜುಗಳ ಲಾಬಿಯನ್ನ ಅವರು ಹೇಗೆ ಎದುರಿಸುತ್ತಾರೆ ಎಂದು ನೋಡುತ್ತೇವೆ ಎಂದರು.
ಅಂಬುಲೆನ್ಸ್, ವೈದ್ಯರು ಪ್ರತ್ಯಕ್ಷ
ಇಂದು ಸಮುದಾಯ ಆರೋಗ್ಯ ಕೇಂದ್ರದ ಎದರು ಪ್ರತಿಭಟನೆ ಇರುವುದನ್ನು ತಿಳಿದು ತಾಲೂಕು ಆರೋಗ್ಯಾಧಿಕಾರಿ ಸಹಿತ ವೈದ್ಯರುಗಳು ಬೀಡು ಬಿಟ್ಟಿದ್ದು, ಯಾವತ್ತೂ ಇರದ 108 ತುರ್ತು ಅಂಬುಲೆನ್ಸ್ ವಾಹನವೂ ಆಸ್ಪತ್ರೆ ಮುಂದುಗಡೆ ಠಿಕಾಣಿ ಹೂಡಿದ್ದು ವ್ಯವಸ್ಥೆ ಸರಿಪಡಿಸಲು ಜನಾಕ್ರೋಶವೇ ಮದ್ದು ಎಂದು ತೋರಿಸಿದಂತಿದೆ.
Dyfi district president B K Imtiyaz said that government hospitals and community health centres are weakening in the face of private medical mafias and we are witnessing the poor begging on social media every day to cure the deadly disease that has afflicted themselves and their own.
24-05-25 07:45 pm
HK News Desk
Landslide Threat Returns in Shirur, Danger Zo...
24-05-25 06:04 pm
Hassan Marriage, wedding: ತಾಳಿ ಕಟ್ಟುವ ಸಮಯಕ್ಕೆ...
24-05-25 03:19 pm
ನವೆಂಬರ್ ವೇಳೆಗೆ ಜಿಪಂ, ತಾಪಂ ಚುನಾವಣೆ ಸಾಧ್ಯತೆ ; ರ...
23-05-25 02:35 pm
ಹಾಸನ ಜಿಲ್ಲೆಯಲ್ಲಿ ಮತ್ತೊಬ್ಬ ಮಹಿಳೆಯನ್ನು ತುಳಿದು ಸ...
23-05-25 11:54 am
23-05-25 08:08 pm
HK News Desk
ಭಾರತೀಯ ಹೈಕಮಷಿನ್ ಅಧಿಕಾರಿಗೆ ಗೇಟ್ ಪಾಸ್, 24 ಗಂಟೆಯ...
22-05-25 05:53 pm
ವಿದೇಶಕ್ಕೆ ಹೊರಟ ಸರ್ವಪಕ್ಷಗಳ ಏಳು ನಿಯೋಗ ; ಭಾರತದ ಸ...
22-05-25 05:43 pm
ಸಿಂಧು ಜಲ ಒಪ್ಪಂದ ಮರು ಪರಿಶೀಲಿಸಲು ಭಾರತ ಉತ್ಸುಕ ;...
21-05-25 12:57 pm
ಅಕ್ರಮ ಬಾಂಗ್ಲಾ ವಲಸಿಗರ ಪತ್ತೆಗೆ ಪ್ರತಿ ಜಿಲ್ಲೆಯಲ್ಲ...
20-05-25 02:36 pm
24-05-25 04:29 pm
Mangalore Correspondent
Mangalore Accident, Kolya: ಬೈಕ್ ಸ್ಕಿಡ್ ಆಗಿ ಸವ...
24-05-25 12:41 pm
Mangalore Lokayukta Raid, Pilikula: ಪಿಲಿಕುಳ ನ...
23-05-25 10:46 pm
Bantwal Heart Attack, Mangalore: ಪತ್ನಿಯ ಸೀಮಂತ...
23-05-25 06:04 pm
Mangalore Suhas Shetty, Nandan Mallya, BJP: ಸ...
23-05-25 05:38 pm
23-05-25 11:20 pm
Mangalore Correspondent
ಬಾಬ್ರಿ ಮಸೀದಿಗೆ ಪ್ರತೀಕಾರ, ಭಾರತದ ವಿರುದ್ಧ ದಾಳಿಗ...
23-05-25 01:25 pm
Valachil Murder, Mangalore crime: ಮದುವೆ ಸಂಬಂಧ...
23-05-25 10:02 am
Davangere Doctor, Stock Market Fraud: ಷೇರು ಮಾ...
22-05-25 02:22 pm
Mangalore Fraud, Currency trading scam: ಕರೆನ್...
19-05-25 09:38 pm