ಬ್ರೇಕಿಂಗ್ ನ್ಯೂಸ್
09-10-23 10:29 pm Mangalore Correspondent ಕರಾವಳಿ
ಮಂಗಳೂರು, ಅ.9: ನಾವು ಇಸ್ರೇಲಿ ಮಿಲಿಟರಿ ಮೇಲೆ ಬಲವಾದ ನಂಬಿಕೆ ಹೊಂದಿದ್ದೇವೆ. ಹಾಗಾಗಿ ನಾವೆಲ್ಲ ಸೇಫ್ ಇದ್ದೇವೆ. ಇಸ್ರೇಲ್ ನಲ್ಲಿ ಇಂಥ ಯುದ್ಧ, ಕ್ಷಿಪಣಿ ದಾಳಿಯನ್ನು ಸಾಕಷ್ಟು ಬಾರಿ ನೋಡಿದ್ದೇನೆ ಎಂದು ಇಸ್ರೇಲ್ ರಾಜಧಾನಿ ಟೆಲ್ ಅವೀವ್ ನಲ್ಲಿರುವ ಮಂಗಳೂರಿನ ವಾಮಂಜೂರು ನಿವಾಸಿ ಲೆನಾರ್ಡ್ ಫೆರ್ನಾಂಡಿಸ್ ಹೇಳಿದ್ದಾರೆ.
ಮಾಧ್ಯಮ ಒಂದಕ್ಕೆ ಲೈವ್ ನಲ್ಲಿ ಮಾತನಾಡಿರುವ ಫೆರ್ನಾಂಡಿಸ್ ಅಲ್ಲಿನ ಪರಿಸ್ಥಿತಿಯನ್ನು ವಿವರಿಸಿದ್ದಾರೆ. ನಾನು 14 ವರ್ಷಗಳಿಂದ ಇಸ್ರೇಲ್ ನಲ್ಲಿದ್ದೇನೆ. ಇಲ್ಲಿನ ಏಂಟಿ ಮಿಸೈಲ್, ಡೋರ್ ಡೋಮ್ ತುಂಬ ಬಲವಾಗಿದೆ. ಹಮಾಸ್ ಕಡೆಯಿಂದ ಕ್ಷಿಪಣಿ ದಾಳಿಯಾದರೂ ಅದು ಸ್ಫೋಟಗೊಳ್ಳುವ ಮೊದಲೇ ನಿಷ್ಕ್ರಿಯಗೊಳಿಸುವ ಏಂಟಿ ಮಿಸೈಲ್ ಸಿಸ್ಟಮ್ ಇದೆ. ಮಿಸೈಲ್ ದಾಳಿಯಾದಾಗೆಲ್ಲ ಏಲಾರಂ ಆಗುತ್ತೆ. ಆಗ ನಾವು ಇದ್ದಲ್ಲೇ ಬಂಕರ್ ನೊಳಗೆ ಹೋಗಬೇಕಾಗುತ್ತದೆ. ರಸ್ತೆಯಲ್ಲಿದ್ದರೆ ಅಲ್ಲಿಯೇ ಮಲಗಿಕೊಂಡಿರಲು ಸೂಚನೆ ಇರುತ್ತದೆ. ಅದನ್ನು ಪಾಲಿಸಿದರೆ ಮುಗೀತು.
ಪ್ರತಿ ಅಪಾರ್ಟ್ಮೆಂಟ್, ಇನ್ನಿತರ ಕಟ್ಟಡಗಳ ಅಡಿಭಾಗದಲ್ಲಿ ಬಂಕರ್ ಇರುತ್ತದೆ. ರಸ್ತೆಯ ಆಸುಪಾಸಿನಲ್ಲಿಯೂ ಬಂಕರ್ ಇರುತ್ತದೆ. ಅಲಾರಂ ಆದಕೂಡಲೇ ನಾವು ಅಡಗಿಕೊಳ್ಳಬೇಕು. ಇಲ್ಲಿನ ಜನರಿಗೆ ಇದೆಲ್ಲ ಮಾಮೂಲಿ. ನಾವು ಭಯಪಡಬೇಕಾದ ಅಗತ್ಯ ಇರುವುದಿಲ್ಲ. ಇಸ್ರೇಲ್ ಮಿಲಿಟರಿ ಪಡೆಗಳ ಶಕ್ತಿ ಬಗ್ಗೆ ನಾವು ಭರವಸೆ ಹೊಂದಿದ್ದೇವೆ. ಹತ್ತು ನಿಮಿಷ ಅಷ್ಟೇ. ಹೊರಗೆ ಬರಲು ಮತ್ತೆ ಅಲಾರಂ ಆಗುತ್ತದೆ. ಹತ್ತು ನಿಮಿಷ ಯಾಕಂದ್ರೆ, ಆಕಾಶದಲ್ಲಿ ಕ್ಷಿಪಣಿಗಳನ್ನು ಸ್ಫೋಟಿಸಿದರೆ ಅವುಗಳ ವಸ್ತುಗಳು ತಡವಾಗಿ ಭೂಮಿಗೆ ಬೀಳುತ್ತದೆ. ಅದಕ್ಕಾಗಿ ಕೆಲ ಹೊತ್ತು ಒಳಗಡೆ ಕುಳಿತು ಬರಲು ಸೂಚನೆ ಇರುತ್ತದೆ. ಅಲಾರಂ ಆದ ಕೆಲವೇ ಹೊತ್ತಲ್ಲಿ ಢಾಮ್ ಸದ್ದು ಆಗುತ್ತದೆ.
ಹೊಸತಾಗಿ ಬಂದವರಿಗೆ ಇದನ್ನು ಕೇಳಿದರೆ ಭಯ ಆಗಬಹುದು. ಆದರೆ ಕ್ಷಿಪಣಿ ಬರುವುದು, ಅದನ್ನು ಸ್ಫೋಟಿಸುವುದು ನಮಗೆಲ್ಲ ಮಾಮೂಲಿ. ಕೆಲವೊಬ್ಬರು ಅದನ್ನು ಮೊಬೈಲಿನಲ್ಲಿ ಸೆರೆಹಿಡಿಯುವ ಮೊಂಡು ಧೈರ್ಯ ಮಾಡುತ್ತಾರೆ. ಅದರಿಂದ ಅಪಾಯ ಜಾಸ್ತಿ ಇರುತ್ತದೆ. ಯಾವುದೇ ಕೆಮಿಕಲ್ ವಸ್ತುಗಳು ಮೈಮೇಲೆ ಬೀಳುವ ಸಾಧ್ಯತೆ ಇರುತ್ತದೆ. ನಾವು ಟೆಲ್ ಅವೀವ್ ನಲ್ಲಿದ್ದು ಇಲ್ಲಿ ಬಹಳಷ್ಟು ಮಂದಿ ಕನ್ನಡಿಗರಿದ್ದಾರೆ. ಎಲ್ಲರೂ ಸೇಫ್ ಆಗಿದ್ದಾರೆ. ಗಡಿಭಾಗದಲ್ಲಿ ಒಂದಷ್ಟು ಸಮಸ್ಯೆ ಆಗಿದೆ. ಅಲ್ಲಿ ಹಮಾಸ್ ಉಗ್ರರು ಒಳನುಸುಳಿದ್ದಾರೆ. ಆದರೂ ಇಲ್ಲಿನ ಮಿಲಿಟರಿ ಶಕ್ತಿ ಅವನ್ನೆಲ್ಲ ನಾಶ ಮಾಡುತ್ತದೆ. ಯಾರು ಕೂಡ ಭಯ ಪಡುವ ಅಗತ್ಯ ಇರುವುದಿಲ್ಲ. ಭಾರತೀಯರಿಗೆ ಯಾರಿಗೂ ಸಮಸ್ಯೆ ಆಗಿಲ್ಲ ಎಂದು ಫೆರ್ನಾಂಡಿಸ್ ಹೇಳಿದ್ದಾರೆ.
Israel-Palestine war, all kannadigas are safe says leonard fernandes from Mangalore speaking to a News channel live from Israel. Says we trust the army of Israel. We have no issues as of now. All are safe he added.
10-01-26 10:28 pm
HK News Desk
"ಡ್ಯಾಡಿ ಈಸ್ ಹೋಮ್" ಎಐ ವಿಡಿಯೋ ರಿಲೀಸ್ ; ರಾಜ್ಯ ರಾ...
10-01-26 04:29 pm
ಚಾರ್ಮಾಡಿ ಘಾಟಿಯಲ್ಲಿ ರಸ್ತೆಗೆ ಅಡ್ಡ ನಿಂತ ಒಂಟಿ ಸಲಗ...
10-01-26 03:00 pm
Purushottam Bilimale, Legal Battle Against Ma...
10-01-26 01:17 pm
ಮಲಯಾಳ ಭಾಷಾ ಮಸೂದೆಯಿಂದ ಕಾಸರಗೋಡು ಕನ್ನಡಿಗರಿಗೆ ಧಕ್...
09-01-26 04:42 pm
10-01-26 03:22 pm
HK News Desk
ಶಬರಿಮಲೆ ಚಿನ್ನ ಕಳವು ಪ್ರಕರಣ ; ಪ್ರಧಾನ ತಂತ್ರಿ ಕಂಠ...
09-01-26 11:00 pm
ಟ್ರಂಪ್ ಕೈಗಳು ಸಾವಿರಾರು ಇರಾನಿಗರ ರಕ್ತದಿಂದ ಒದ್ದೆಯ...
09-01-26 08:30 pm
ರಷ್ಯಾ ಹಡಗು ವಶಕ್ಕೆ ಪಡೆದ ಬೆನ್ನಲ್ಲೇ ಅಮೆರಿಕಕ್ಕೆ ತ...
08-01-26 11:21 pm
ರಷ್ಯಾ ತೈಲ ಖರೀದಿ ನಿಲ್ಲಿಸಲು ಅಮೆರಿಕ ಹೊಸ ಮಸೂದೆ ;...
08-01-26 05:11 pm
11-01-26 12:56 pm
Mangaluru Staffer
Cm Siddaramaiah, Mangalore: ಕರಾವಳಿ ಪ್ರವಾಸೋದ್ಯ...
10-01-26 10:45 pm
ಡೀಮ್ಡ್ ಯುನಿವರ್ಸಿಟಿಗಳಲ್ಲಿ ಭಾಷೆಯ ಅವಜ್ಞೆ ; ಸಾಹಿತ...
10-01-26 07:57 pm
Dr Meenakshi Jain at Mangaluru Lit Fest: ಉಪನಿ...
10-01-26 07:21 pm
ಕರಾವಳಿ ಟೂರಿಸಂ ಅಭಿವೃದ್ಧಿಗೆ ಜನಪ್ರನಿಧಿಗಳು, ಉದ್ಯಮ...
10-01-26 06:23 pm
07-01-26 10:45 pm
Bangalore Correspondent
ಸಮಾಧಿಯಲ್ಲಿ ಡ್ರಗ್ಸ್ ಬಚ್ಚಿಟ್ಟು ಮಾರಾಟ ; 3.5 ಕೋಟಿ...
06-01-26 07:04 pm
Kanachur Hospital, POSCO, Doctor: ಚಿಕಿತ್ಸೆಗೆ...
06-01-26 02:24 pm
ಯಲ್ಲಾಪುರ ; ಮದ್ವೆಗೆ ಒಪ್ಪಿಲ್ಲವೆಂದು ನಡುರಸ್ತೆಯಲ್ಲ...
04-01-26 11:02 pm
Ganja from Bihar: ಬಿಹಾರದಿಂದ ರೈಲಿನಲ್ಲಿ ಗಾಂಜಾ ತ...
04-01-26 06:15 pm