ಬ್ರೇಕಿಂಗ್ ನ್ಯೂಸ್
10-10-23 08:22 pm Mangalore Correspondent ಕರಾವಳಿ
ಉಳ್ಳಾಲ, ಅ.10: ಈದ್ ಮಿಲಾದ್ ವಾಹನ ಜಾಥಾ ನೆಪದಲ್ಲಿ ಕರ್ಕಷ ಹಾರ್ನ್, ಸೈಲೆನ್ಸರ್ ಗಳಿಂದ ಅಬ್ಬರಿಸಿ ಸಾರ್ವಜನಿಕರಿಗೆ ಕಿರಿ, ಕಿರಿ ನೀಡಿದ್ದ 15 ಯುವಕರ ವಿರುದ್ಧ ಉಳ್ಳಾಲ ಪೊಲೀಸರು ದಂಡ ಪ್ರಯೋಗಿಸಿದ್ದಲ್ಲದೆ ಪೋಷಕರ ಮುಂದೆಯೇ ಖಡಕ್ ವಾರ್ನಿಂಗ್ ನೀಡಿದ್ದಾರೆ.
ಕಳೆದ ಸೆ.28 ರಂದು ಪ್ರವಾದಿ ಮಹಮ್ಮದರ ಜನ್ಮದಿನದ ಪ್ರಯುಕ್ತ ಇತಿಹಾಸ ಪ್ರಸಿದ್ಧ ಉಳ್ಳಾಲ ದರ್ಗಾದಲ್ಲಿ ನಡೆದಿದ್ದ ಈದ್ ಮಿಲಾದ್ ಹಬ್ಬಕ್ಕೆ ಯುವಕರ ಗುಂಪೊಂದು ಕುತ್ತಾರು, ಮಾಡೂರು ಕಡೆಯಿಂದ ವಾಹನ ಜಾಥಾ ನಡೆಸಿ ಕರ್ಕಷ ಹಾರ್ನ್, ಸೈಲೆನ್ಸರ್ ಗಳಿಂದ ಕಿರಿ,ಕಿರಿ ಉಂಟು ಮಾಡಿದಲ್ಲದೆ ಉಳ್ಳಾಲದ ಅಬ್ಬಕ್ಕ ಸರ್ಕಲ್ ಏರಿ ವಿಕೃತವಾಗಿ ವರ್ತಿಸಿ ಘೋಷಣೆಗಳನ್ನ ಕೂಗಿದ್ದ ವೀಡಿಯೋ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಯುವಕರ ವರ್ತನೆಗೆ ಮುಸ್ಲಿಂ ಧರ್ಮೀಯರೇ ಆಕ್ಷೇಪ ವ್ಯಕ್ತಪಡಿಸಿದ್ದು ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಘಟನೆ ಸಂಬಂಧ ಉಳ್ಳಾಲ ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿದ್ದರು.

ಮಾಡೂರಿನ ಇಬ್ರಾಹಿಂ, ಅಂಬ್ಲಮೊಗರುವಿನ ಮಹಮ್ಮದ್ ಅರ್ಷಾದ್ ಬಶೀರ್, ಪಡು ಮಾರ್ನಾಡುವಿನ ಅಶೀಶ್ ಪಿಂಟೊ, ಮಂಜನಾಡಿ ಗ್ರಾಮದ ಕೆ.ಎ.ಇಕ್ಬಾಲ್ ಅಬ್ದುಲ್ ರಹಿಮಾನ್, ಇಮ್ರಾನ್, ಇಬ್ರಾಹಿಂ ಬಾತಿಷ್ ಇಸ್ಮಾಯಿಲ್, ಉಮರ್ ಫಾರೂಕ್, ಅಬ್ದುಲ್ ಖಾದರ್, ಕೆ.ಎ.ಇಕ್ಬಾಲ್, ಬಜಾಲಿನ ಮಹಮ್ಮದ್ ಹುಸೇನ್, ಕೋಟೆಕಾರಿನ ಶೌಕತ್ ಆಲಿ, ಬೆಳ್ತಂಗಡಿಯ ಮಹಮ್ಮದ್ ನಿಝಾರ್, ಮಾಡೂರಿನ ಶೇಖ್ ಖಲೀಲ್ ಅಹ್ಮದ್, ಪಾವೂರಿನ ಇಬ್ರಾಹಿಂ, ಸಜೀಪ ನಡುವಿನ ಮಹಮ್ಮದ್ ಇರ್ಷಾದ್ ಸೇರಿದಂತೆ ಒಟ್ಟು 15 ಯುವಕರ ವಿರುದ್ಧ ಉಳ್ಳಾಲ ಪೊಲೀಸರು ಸಂಚಾರಿ ನಿಯಮ ಉಲ್ಲಂಘನೆಯಡಿ ದಂಡ ವಸೂಲು ಮಾಡಿದ್ದಾರೆ.
ಪೋಷಕರ ಸಮ್ಮುಖದಲ್ಲೇ ಉಳ್ಳಾಲ ಪೊಲೀಸ್ ಠಾಣಾ ನೂತನ ಪಿಐ ಬಾಲಕೃಷ್ಣ ಅವರು ಯುವಕರಿಗೆ ಖಡಕ್ ವಾರ್ನಿಂಗ್ ನೀಡಿದ್ದಾರೆ. ಶಾರದಾ ಉತ್ಸವಕ್ಕೂ ಡಿ.ಜೆ ಅಳವಡಿಸದಂತೆ ಇಲಾಖೆಯ ಆದೇಶ ಬಂದಿದ್ದು ಉಳ್ಳಾಲಕ್ಕೂ ಇದು ಅನ್ವಯಿಸಲಿದೆ ಎಂದು ಪಿಐ ಬಾಲಕೃಷ್ಣ ತಿಳಿಸಿದ್ದಾರೆ.
Mangalore Ullal eid disturbance by youths on abakka circle, Inapector warns all youths found in video.
02-09-26 05:06 pm
HK News Staffer
ಬಿಗ್ ಬಾಸ್ ಸೀಸನ್ 13 ಆರಂಭಕ್ಕೂ ಮುನ್ನ ಸಂಕಷ್ಟ ; ಪ...
31-08-26 08:29 pm
ಇಸ್ಲಾಂ ಶ್ರೇಷ್ಠ ಧರ್ಮ, ನಾನು ಮಠ ಮಂದಿರ ಹೋಗಲ್ಲ, ಹಜ...
30-08-26 10:09 pm
ADGP Chandrashekhar, Seemanth Kumar Singh: ಅಧ...
30-08-26 07:31 pm
Jnanendra Kumar IAS Arrest: ಪಶುವೈದ್ಯರ ನೇಮಕಾತಿ...
30-08-26 05:13 pm
04-09-26 08:14 pm
HK News Staffer
ಹಾರಾಟದ ವೇಳೆ ಪೈಲೆಟ್ ಅಸ್ವಸ್ಥ ; ದೋಹಾ - ಬೆಂಗಳೂರು...
03-09-26 07:27 pm
ಅಯೋಧ್ಯೆ ರಾಮ ಮಂದಿರಕ್ಕೆ ನೂತನ ಸಿಇಓ ಆಗಿ ನಿವೃತ್ತ ಏ...
02-09-26 08:31 pm
ಸ್ಲೀಪರ್ ಬಸ್ನಲ್ಲಿ ಬಾಲಕಿ ಮೇಲೆ ಅತ್ಯಾಚಾರ ; ಎಚ್ಚೆ...
02-09-26 07:16 pm
ನೇಪಾಳದಲ್ಲಿ ಜಲಪ್ರಳಯಕ್ಕೆ 1,127 ಮಂದಿ ಬಲಿ ; 4,85...
02-09-26 12:28 pm
04-09-26 04:44 pm
HK News Staffer
Blinkit Raid, Mangalore: ಬ್ಲಿಂಕ್ ಇಟ್ ಆನ್ಲೈನ್...
03-09-26 10:19 pm
ಮುಂದಿನ ಬಾರಿ ಅಶೋಕ ರೈ ವಿರುದ್ಧ ತಾನೇ ಸ್ಪರ್ಧಿಸುತ್ತ...
03-09-26 09:10 pm
ಅಳಿವೆ ಬಾಗಿನಲ್ಲಿ ಹೂಳೆತ್ತದ ಕಾರಣ ಭಾರೀ ದುರಂತ ; ಮರ...
03-09-26 03:55 pm
Mangalore, Bajpe Kateel Road Closed: ಬಜ್ಪೆ -...
02-09-26 10:51 pm
04-09-26 08:16 pm
HK News Staffer
ಪಣಂಬೂರಿನಲ್ಲಿ ಚಾಲಕನ ಧಾವಂತಕ್ಕೆ ಬಸ್ ಪಲ್ಟಿ ; ಅಪಾಯ...
04-09-26 10:55 am
NITK, Mangalore, Forgery: ಎನ್ ಸಿಸಿ ಶಿಬಿರಗಳಲ್ಲ...
03-09-26 09:51 pm
ಅನ್ನಭಾಗ್ಯದ ಅಕ್ಕಿ ವಿಚಾರದಲ್ಲಿ ಕೊಲೆ, ಸುಲಿಗೆ ಬೆದರ...
03-09-26 09:36 pm
ಮುಲ್ಕಿ ಕಿಲ್ಪಾಡಿ ಕೊರ್ದಬ್ಬು ದೈವಸ್ಥಾನಕ್ಕೆ ಕನ್ನ ;...
03-09-26 09:15 pm