ಬ್ರೇಕಿಂಗ್ ನ್ಯೂಸ್
10-10-23 10:26 pm Mangalore Correspondent ಕರಾವಳಿ
ಮಂಗಳೂರು, ಅ.10: ಉಚಿತವಾಗಿ ಒಳ್ಳೆ ಚಿಕಿತ್ಸೆ ಸಿಗತ್ತೆ ಎಂದು ವೆನ್ಲಾಕ್ ಆಸ್ಪತ್ರೆಗೆ ಬಂದಿದ್ದ ಹಾಸನದ ಕುಟುಂಬವೊಂದನ್ನು ಅಲ್ಲಿನ ಸಿಬಂದಿ ದಿನವಿಡೀ ಸತಾಯಿಸಿದ ಘಟನೆ ಬೆಳಕಿಗೆ ಬಂದಿದೆ.
ಹಾಸನದಲ್ಲಿ ಎರಡು ತಿಂಗಳ ಹಿಂದೆ ದಾಸೇಗೌಡ (35) ಎಂಬವರು ಬೈಕ್ ಅಪಘಾತದಲ್ಲಿ ಗಾಯಗೊಂಡಿದ್ದರು. ಹಾಸನದ ಮಂಗಳಾ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದು ಎರಡು ತಿಂಗಳಾದರೂ ಗುಣಮುಖವಾಗಿರಲಿಲ್ಲ. ಕೈ ಮತ್ತು ಕಾಲು ಸ್ವಾಧೀನ ಇಲ್ಲದಂತಾಗಿದ್ದು ಮಾತಿನಲ್ಲೂ ತೊದಲುವ ಸ್ಥಿತಿ ಇದೆ. ಹಾಸನದಲ್ಲಿ ಖರ್ಚು ಮಾಡಿ ಸಾಕಾಗಿದ್ದ ಕುಟುಂಬಕ್ಕೆ ಯಾರೋ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಶಿಫಾರಸು ಮಾಡಿದ್ದರಂತೆ.
ಎದ್ದು ನಡೆಯಲಾಗದ ವ್ಯಕ್ತಿಯನ್ನು ವೆನ್ಲಾಕ್ ಆಸ್ಪತ್ರೆಗೆ ಕರೆತಂದಿದ್ದ ಕುಟುಂಬಕ್ಕೆ ಭ್ರಮನಿರಶನವಾಗಿದೆ. ಮಂಗಳವಾರ ಬೆಳಗ್ಗೆ 9 ಗಂಟೆಗೆ ಬಂದು ಎಂಟ್ರಿ ಮಾಡಿಕೊಂಡಿದ್ದ ರೋಗಿ ಮತ್ತು ಕುಟುಂಬವನ್ನು ಸಿಬಂದಿ ದಿನವಿಡೀ ಅಲೆದಾಡುವಂತೆ ಮಾಡಿದ್ದಾರೆ. ಒಮ್ಮೆ ಕೊಠಡಿ ಸಂಖ್ಯೆ 19ಕ್ಕೆ ಹೋಗಿ, ಅಲ್ಲಿ ಹೋದಾಗ 38ಕ್ಕೆ ಹೋಗಿ ಎಂದು ಕಳಿಸಿದ್ದಾರೆ. ಎಲ್ಲಿ ಹೋದರೂ ವೈದ್ಯರು ಇಲ್ಲ ಎಂದಷ್ಟೇ ಉತ್ತರ ಹೇಳಿದ್ದಾರೆ. ವೆನ್ಲಾಕ್ ಆಸ್ಪತ್ರೆಯ ಒಳಗಡೆ ತಾವೇ ವೀಲ್ ಚೇರ್ ನಲ್ಲಿ ಕೂರಿಸಿ ರೋಗಿಯನ್ನು ಮೇಲೆ ಕೆಳಗೆ ಒಯ್ದಿದ್ದಾರೆ. ಅಡ್ಮಿಶನ್ ಮಾಡಿಕೊಳ್ಳಿ ಎಂದರೂ ಸಿಬಂದಿ ಕೇರ್ ಮಾಡಿಲ್ಲ ಎಂದು ರೋಗಿಯ ಸಂಬಂಧಿಕರು ಅಲವತ್ತುಕೊಂಡಿದ್ದಾರೆ.
ರೋಗಿಯ ದುರವಸ್ಥೆ ವಿಚಾರ ತಿಳಿದು ಅಲ್ಲಿ ಸ್ವಯಂಪ್ರೇರಿತ ನೆಲೆಯಲ್ಲಿ ಕೋಆರ್ಡಿನೇಶನ್ ಮಾಡುವ ಕಾರ್ತಿಕ್, ವೆನ್ಲಾಕ್ ಆರ್ ಎಂಓ ಮತ್ತು ಡಿಎಂಓ ಅವರಿಗೆ ಬೆಳಗ್ಗಿನಿಂದ ಸಂಜೆಯ ವರೆಗೂ ಫೋನ್ ಮಾಡಿದ್ದಾರೆ. ಫೋನ್ ಸ್ವೀಕರಿಸದೆ ಉದ್ಧಟತನ ತೋರಿದ್ದಾರೆ. ಕೊನೆಗೆ, ಸಂಜೆಯ ವೇಳೆಗೆ ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಹೋಗಿ ರೋಗಿಯನ್ನು ಅಡ್ಮಿಟ್ ಮಾಡಿದ್ದು ಐಸಿಯುನಲ್ಲಿ ಸೇರಿಸಿಕೊಂಡಿದ್ದಾರೆ. ಸರ್ಕಾರಿ ಆಸ್ಪತ್ರೆಯ ದುರವಸ್ಥೆ ಬಗ್ಗೆ ಹಿಡಿಶಾಪ ಹಾಕಿದ್ದಾರೆ.
ನರದ ಸಮಸ್ಯೆ ಇರುವ ಬಗ್ಗೆ ಹಾಸನದಲ್ಲಿ ವೈದ್ಯರು ಹೇಳಿದ್ದರಂತೆ. ವೆನ್ಲಾಕ್ ನಲ್ಲಿ ಐಸಿಯು, ನರ ರೋಗ ತಜ್ಞರು ಎಲ್ಲ ವ್ಯವಸ್ಥೆಯೂ ಇದೆ. ಇದಲ್ಲದೆ, ವೆನ್ಲಾಕ್ ಆಸ್ಪತ್ರೆಯನ್ನು ನೋಡಿಕೊಳ್ಳಲು ಕೆಎಂಸಿ ಆಸ್ಪತ್ರೆಗೆ ಜಿಲ್ಲಾಡಳಿತದಿಂದ ಗುತ್ತಿಗೆ ನೀಡಲಾಗಿದೆ. ಕೆಎಂಸಿ ವೈದ್ಯರು, ನರ್ಸ್ ಗಳು ಕೂಡ ವೆನ್ಲಾಕ್ ನಲ್ಲಿ ಸೇವೆ ನೀಡುತ್ತಾರೆ. ಇದಕ್ಕಾಗಿ ವರ್ಷಕ್ಕೆ ನೂರು ಕೋಟಿಗೂ ಹೆಚ್ಚು ಮೊತ್ತವನ್ನು ಜಿಲ್ಲಾಡಳಿತದಿಂದ ಕೆಎಂಸಿ ಆಸ್ಪತ್ರೆಗೆ ನೀಡಲಾಗುತ್ತದೆ. ಇಷ್ಟೆಲ್ಲ ಇದ್ದರೂ ವೆನ್ಲಾಕ್ ಆಸ್ಪತ್ರೆಯ ದುರವಸ್ಥೆ ಅದೇ ರಾಗ, ಅದೇ ಹಾಡು ಎನ್ನುವಂತಾಗಿದೆ. ರೋಗಿಯನ್ನು ಕರಕೊಂಡು ಬಂದ ಕುಟುಂಬಗಳನ್ನು ದೈನೇಸಿಯಾಗಿ ನಡೆಸಿಕೊಳ್ಳುತ್ತಾರೆ.
Patient in wheel chair troubled by Wenlock hospital staff over admission in Mangalore.
15-09-25 08:53 pm
Bangalore Correspondent
Actor Upendra, Wife Priyanka, Cyber Fraud, Ha...
15-09-25 04:45 pm
Pratap Simha, Banu Mushtaq: ಬಾನು ಮುಷ್ತಾಕ್ ದಸರ...
15-09-25 03:39 pm
Bommai, SIT, Dharmasthala, Bommai: ನಿರೀಕ್ಷೆಗೆ...
14-09-25 05:18 pm
ವಾಹನ ಸವಾರರಿಗೆ ಶೇ.50 ರಿಯಾಯಿತಿ ಆಫರ್ ಎಫೆಕ್ಟ್ ...
13-09-25 10:38 pm
16-09-25 02:46 pm
HK News Desk
Waqf, Supreme Court; ವಕ್ಫ್ ತಿದ್ದುಪಡಿ ಕಾಯ್ದೆ...
15-09-25 04:57 pm
ನಾನು ಶಿವಭಕ್ತ ; ನಿಂದನೆಯ ವಿಷವನ್ನು ಕುಡಿದು ಜೀರ್ಣಿ...
14-09-25 10:49 pm
ಪ್ರಧಾನಿ ಮೋದಿ ಅಸ್ಸಾಂನಲ್ಲಿ ಇರುವಾಗಲೇ 5.8ರ ತೀವ್ರತ...
14-09-25 07:31 pm
ಮಿಜೋರಾಂ ರಾಜ್ಯದಲ್ಲಿ ಮೊದಲ ರೈಲು ಮಾರ್ಗ ಪ್ರಧಾನಿ ಮೋ...
13-09-25 03:25 pm
15-09-25 08:28 pm
Mangalore Correspondent
Mangalore Accident, Saudi, Ullal: ಸೌದಿ ಅರೇಬಿಯ...
15-09-25 02:08 pm
ಬಂಗ್ಲೆಗುಡ್ಡೆ ಕಾಡಿನಲ್ಲಿ ಸ್ಥಳ ಶೋಧಕ್ಕೆ ಎಸ್ಐಟಿ ಸಿ...
15-09-25 01:58 pm
Mangalore, Ullal News, Boat: ಕೈಕೊಟ್ಟ ಇಂಜಿನ್ ;...
15-09-25 11:27 am
Vittal Gowda, Mangalore, Dharmasthala: ವಿಠಲ ಗ...
14-09-25 10:55 pm
15-09-25 10:47 pm
Bangalore Correspondent
Udupi, Surat Murder, Arrest: ವೃದ್ಧ ದಂಪತಿಯನ್ನು...
14-09-25 06:01 pm
Mangalore Fake Aadhar, RTC Scam, Police: ಆರೋಪ...
13-09-25 11:36 am
ಅಪ್ರಾಪ್ತ ಬಾಲಕಿಯನ್ನು ಅತ್ಯಾಚಾರಗೈದು ಹತ್ಯೆ ; ಬೆಳಗ...
12-09-25 11:07 pm
Ullal Police, Mangalore, Gold Robbery: ತೊಕ್ಕೊ...
12-09-25 10:48 pm