ಬ್ರೇಕಿಂಗ್ ನ್ಯೂಸ್
08-10-24 07:46 pm Udupi Correspondent ಕರಾವಳಿ
ಉಡುಪಿ, ಅ.8: ಉತ್ಕೃಷ್ಟ ಮಾದರಿಯ ಆತಿಥ್ಯಕ್ಕೆ ಹೆಸರಾಗಿರುವ ಓಶಿಯನ್ ಪರ್ಲ್ ಹೊಟೇಲ್ ಸಮೂಹದಿಂದ ಉಡುಪಿ ನಗರದಲ್ಲಿ ಎರಡನೇ ಹೊಟೇಲ್ ಆರಂಭಿಸಲಾಗಿದೆ. ದಿ ಓಷಿಯನ್ ಪರ್ಲ್ ಟೈಮ್ ಸ್ಕ್ವೇರ್ ಹೆಸರಿನ ಹೊಟೇಲ್ ಉಡುಪಿ- ಮಣಿಪಾಲ ರಸ್ತೆಯ ಕಲ್ಸಂಕದಲ್ಲಿ ಅ.9ರಂದು ಉದ್ಘಾಟನೆಗೊಳ್ಳಲಿದೆ ಎಂದು ಸಾಗರರತ್ನ ಮತ್ತು ಓಷಿಯನ್ ಪರ್ಲ್ ಸಮೂಹ ಸಂಸ್ಥೆಗಳ ಚೇರ್ಮನ್ ಜಯರಾಮ ಬನಾನ್ ತಿಳಿಸಿದ್ದಾರೆ.
ಓಷಿಯನ್ ಪರ್ಲ್ ಟೈಮ್ ಸ್ಕ್ವೇರ್ ಹೊಟೇಲಿನಲ್ಲಿ ಲಕ್ಸುರಿ ಆತಿಥ್ಯಕ್ಕೆ ತಕ್ಕಂತೆ, ಬ್ಯಾಂಕ್ವೆಟ್ ಹಾಲ್ ಮತ್ತು ಪೆಸಿಫಿಕ್ ಹಾಲ್ ವ್ಯವಸ್ಥೆ ಮಾಡಲಾಗಿದೆ. ಮದುವೆ, ಇನ್ನಿತರ ಸಮಾರಂಭಕ್ಕೆ ಆಗುವಂತೆ ಏಕಕಾಲದಲ್ಲಿ ಎರಡು ಸಾವಿರ ಜನರಿಗೆ ಆತಿಥ್ಯ ನೀಡಬಲ್ಲ ಹಾಲ್ ಗಳನ್ನು ಮಾಡಲಾಗಿದೆ. 250 ಜನರ ಸಾಮರ್ಥ್ಯದ ಪೆಸಿಫಿಕ್- 2 ಮಾದರಿಯ ಹಾಲ್ ಗಳೂ ಇದ್ದು, ಬಿಸಿನೆಸ್ ಕಾನ್ಫರೆನ್ಸ್ ಏರ್ಪಡಿಸುವುದಕ್ಕೂ ಸೂಕ್ತ ಎನಿಸುವಂತಿದೆ. ಇದಲ್ಲದೆ, 67 ಲಕ್ಸುರಿ ಕೊಠಡಿ ವ್ಯವಸ್ಥೆಗಳಿದ್ದು ಕ್ಲಬ್ ಸೂಟ್ಸ್, ಪ್ರೆಸಿಡೆಂಟಲ್ ಸೂಟ್ಸ್, ಫ್ಯಾಮಿಲಿ ಸೂಟ್ ಗಳಿವೆ. ಜಿಮ್, ಫಿಟ್ನೆಸ್ ಸೆಂಟರ್, ಬಿಸಿನೆಸ್ ಲಾಂಜ್ ಗಳೂ ಇವೆ. ಗ್ರಾಹಕರ ಬೇಡಿಕೆಗೆ ತಕ್ಕಂತೆ ಅಂತಾರಾಷ್ಟ್ರೀಯ ಗುಣಮಟ್ಟದ ಈಜುಕೊಳ ಆತಿಥ್ಯವೂ ಇದೆ.
ದಕ್ಷಿಣ ಮತ್ತು ಉತ್ತರ ಭಾರತ ಶೈಲಿಯ ಖಾದ್ಯಗಳು, ಚೈನೀಸ್ ಖಾದ್ಯಗಳನ್ನು ಒಳಗೊಂಡ ಕೋರಲ್ ರೆಸ್ಟೋರೆಂಟ್, ಜಾಸ್ ಸ್ಪೋರ್ಟ್ಸ್ ಬಾರ್, ಜಾಸ್ ಎಕ್ಸಿಕ್ಯುಟಿವ್ ಲಾಂಜ್, ನಾನಾ ರೀತಿಯ ಪ್ರಾದೇಶಿಕ ಆಹಾರ ಉತ್ಪನ್ನಗಳು ಓಷಿಯನ್ ಪರ್ಲ್ ಹೊಟೇಲ್ ವೈಶಿಷ್ಟ್ಯವಾಗಿದೆ. ವ್ಯಾಪಾರ ಮತ್ತು ಉತ್ತಮ ಮನರಂಜನೆಗಾಗಿ ಟೈಮ್ಸ್ ಸ್ಕ್ವೇರ್ ಮಾಲ್ ಕೂಡ ಇದೇ ಹೊಟೇಲ್ ಪಕ್ಕದಲ್ಲೇ ಇದೆ. ಸಾಗರ್ ರತ್ನ ಮತ್ತು ಓಷಿಯನ್ ಪರ್ಲ್ ಹೊಟೇಲ್ ಸಮೂಹವು ದೇಶಾದ್ಯಂತ 182 ಶಾಖೆಗಳನ್ನು ಹೊಂದಿದ್ದು, 11 ಸಾವಿರ ಸಿಬಂದಿಗಳಿದ್ದಾರೆ. ಕರಾವಳಿಯಲ್ಲಿ ವಿಶೇಷ ಆತಿಥ್ಯಕ್ಕೆ ಹೆಸರಾಗಿದ್ದು, ಕೋಸ್ಟಲ್ ರೆಸಾರ್ಟ್ ನಿರ್ಮಾಣಕ್ಕೆ ಉದ್ದೇಶಿಸಲಾಗಿದೆ. ಈಗಾಗಲೇ ಚಿಕ್ಕಮಗಳೂರಿನಲ್ಲಿ 100 ಎಕರೆಯ ಕಾಫಿ ರೆಸಾರ್ಟ್ ಮಾಡಲಾಗುತ್ತಿದ್ದು, 2025ರಲ್ಲಿ ಕಾರ್ಯಾರಂಭಿಸಲಿದೆ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ರೋಶನ್ ಬನಾನಾ ತಿಳಿಸಿದ್ದಾರೆ.
ಸಾಗರ್ ರತ್ನ, ಶ್ರೀ ರತ್ನ ಹೆಸರಿನ ಹೊಟೇಲ್ ಮಾದರಿಗಳು ಶುದ್ಧ ಸಸ್ಯಹಾರಿ ಖಾದ್ಯಗಳಿಗಾಗಿ ರಾಜಧಾನಿ ದೆಹಲಿ ಸೇರಿದಂತೆ ಉತ್ತರ ಭಾರತ ಮತ್ತು ದಕ್ಷಿಣ ಭಾರತದಲ್ಲಿ ಹೆಸರು ಪಡೆದಿವೆ. ರೆಸ್ಟೋರೆಂಟ್, ಕ್ಯಾಟರಿಂಗ್ ವಹಿವಾಟಿನಲ್ಲೂ ಸಾಗರ್ ರತ್ನ ಹೆಸರಾಗಿವೆ. ಸ್ವಾಗತ್ ಹೆಸರಿನ ಹೊಟೇಲ್ಗಳು ನಾನ್ ವೆಜ್ ಶೈಲಿಯ ಆಹಾರಕ್ಕೆ ಹೆಸರು ಪಡೆದಿದ್ದು, ಇಡೀ ದೇಶಾದ್ಯಂತ ಓಷಿಯನ್ ಪರ್ಲ್ ಹೆಸರಿನ ಹೊಟೇಲ್ ಸಮೂಹವನ್ನು ಬೆಳೆಸುವಲ್ಲಿ ಕಾಣಿಕೆ ನೀಡಿವೆ. ಸುದ್ದಿಗೋಷ್ಟಿಯಲ್ಲಿ ಡಾ.ಜೆರ್ರಿ ವಿನ್ಸೆಂಟ್ ಪಾಯಸ್, ಗ್ಲೆನ್ ಡಯಾಸ್, ಜೇಸನ್ ಡಯಾಸ್, ಓಷಿಯನ್ ಪರ್ಲ್ ಹೊಟೇಲ್ ಸಂಸ್ಥೆಯ ಉಪಾಧ್ಯಕ್ಷ ಗಿರೀಶ್ ಬಿ.ಎನ್, ಶಿವಕುಮಾರ್, ಜಿಎಂ ಪ್ರಸಾದ್ ಆಚಾರ್ಯ ಉಪಸ್ಥಿತರಿದ್ದರು.
Udupi The Ocean Pearl Times Square to be inaugurated on Oct 9, second hotel in temple City. The Ocean Pearl, synonymous with hospitality and comfort, is set to open its second hotel in the temple town of Udupi. The new venture, named 'The Ocean Pearl Times Square', located at Mandavi Times Square Mall, Udupi, is scheduled for a grand opening on October 9.
19-09-25 10:04 pm
Bangalore Correspondent
Caste survey: ಜಾತಿ ಸಮೀಕ್ಷೆಗೆ ಸರ್ಕಾರದ ಸಚಿವರಿಂದ...
19-09-25 02:16 pm
ಮೋಸದಿಂದಲೇ ಕಣ್ರೀ ಬಿಜೆಪಿ ಚುನಾವಣೆ ಗೆದ್ದಿದೆ! ರಾಹು...
19-09-25 09:45 am
ಬೆಂಗಳೂರು ಗಬ್ಬೆದ್ದು ನಾರುತ್ತಿದೆ, ರಾಜಧಾನಿ ಈಗ ಗುಂ...
19-09-25 09:42 am
Traffic Violation, Bangalore: ರಾಜ್ಯದಲ್ಲಿ ಸಂಚಾ...
18-09-25 05:34 pm
19-09-25 05:45 pm
HK News Desk
Yasin Malik: ಲಷ್ಕರ್ ಮುಖ್ಯಸ್ಥ ಹಫೀಜ್ ಸಯೀದ್ ಭೇ...
19-09-25 02:24 pm
ಕೇಂದ್ರೀಕೃತ ಸಾಫ್ಟ್ವೇರ್ ಬಳಸಿ ಬೂತ್ಗಳಿಂದಲೇ ಮತದಾ...
18-09-25 08:14 pm
ಎರಡು ಬಾರಿ ಕಚ್ಚಿದ್ರೆ ಬೀದಿ ನಾಯಿಗೆ ಜೀವಾವಧಿ ಶಿಕ್ಷ...
16-09-25 10:11 pm
Cloudburst, Dehradun: ಡೆಹ್ರಾಡೂನ್ನಲ್ಲಿ ಭಾರೀ ಮ...
16-09-25 02:46 pm
19-09-25 10:46 pm
Mangalore Correspondent
ಕಟೀಲು ದೇಗುಲದಲ್ಲಿ ಸೇವಾ ದರ ಏಕಾಏಕಿ ದುಪ್ಪಟ್ಟು ; ಬ...
19-09-25 10:21 pm
ಧರ್ಮಸ್ಥಳ ಕೇಸ್ ; ಅನೇಕ ಶವಗಳನ್ನು ಹೂತಿದ್ದೆವು ಎಂದಿ...
19-09-25 09:59 pm
Kadri, Mangalore, Smart City: ‘ಸ್ಮಾರ್ಟ್ ಸಿಟಿ’...
19-09-25 07:53 pm
ಇನ್ಸ್ಟಾ ಗ್ರಾಂನಲ್ಲಿ ಪ್ರಚೋದನಕಾರಿ ಪೋಸ್ಟ್ ; ಆರೋಪಿ...
19-09-25 04:58 pm
18-09-25 11:44 am
HK News Desk
Vijayapura Bank Robbery: SBI ಬ್ಯಾಂಕ್ ದರೋಡೆ ;...
17-09-25 09:44 pm
Mangalore Crime, Cattle Theft: ಅಡ್ಯಾರ್ ನಲ್ಲಿ...
17-09-25 06:04 pm
Udupi, Job Fraud, Scam: ವಿದೇಶದಲ್ಲಿ ಕೆಲಸ ಕೊಡಿಸ...
17-09-25 02:46 pm
ಫುಡ್ ಡೆಲಿವರಿ ನೆಪದಲ್ಲಿ ಬಾಗಿಲು ತಟ್ಟಿದ ಕಳ್ಳ ; ವೃ...
17-09-25 12:25 pm