Mangalore Accident, Drink and Drive, Kadri Police: ಕುಡಿದು ಟೈಟ್ ಆಗಿ ಎರ್ರಾಬಿರ್ರಿ ಕಾರು ಚಲಾಯಿಸಿದ ವ್ಯಕ್ತಿ ; ಶಿವಭಾಗ್ ನಲ್ಲಿ ಅಡ್ಡಹಾಕಿದ ಸಾರ್ವಜನಿಕರು, ಭಾರೀ ದಂಡ ಕಕ್ಕಿಸಿದ ಪೊಲೀಸರು

22-01-25 10:48 pm       Mangalore Correspondent   ಕರಾವಳಿ

ಕುಡಿದು ಟೈಟ್ ಆಗಿದ್ದ ಇಬ್ಬರು ವ್ಯಕ್ತಿಗಳು ಕಾರನ್ನು ಅಡ್ಡಾದಿಡ್ಡಿ ಚಲಾಯಿಸಿ ಸಾರ್ವಜನಿಕರಲ್ಲಿ ಭಯ ಹುಟ್ಟಿಸಿದ ಘಟನೆ ನಗರದ  ಶಿವಭಾಗ್ ನಲ್ಲಿ ನಡೆದಿದ್ದು, ಸಾರ್ವಜನಿಕರು ಸೇರಿ ಅಡ್ಡಹಾಕಿ ಇಬ್ಬರನ್ನೂ ಪೊಲೀಸರಿಗೆ ಒಪ್ಪಿಸಿದ್ದಾರೆ.

ಮಂಗಳೂರು, ಜ.22: ಕುಡಿದು ಟೈಟ್ ಆಗಿದ್ದ ಇಬ್ಬರು ವ್ಯಕ್ತಿಗಳು ಕಾರನ್ನು ಅಡ್ಡಾದಿಡ್ಡಿ ಚಲಾಯಿಸಿ ಸಾರ್ವಜನಿಕರಲ್ಲಿ ಭಯ ಹುಟ್ಟಿಸಿದ ಘಟನೆ ನಗರದ  ಶಿವಭಾಗ್ ನಲ್ಲಿ ನಡೆದಿದ್ದು, ಸಾರ್ವಜನಿಕರು ಸೇರಿ ಅಡ್ಡಹಾಕಿ ಇಬ್ಬರನ್ನೂ ಪೊಲೀಸರಿಗೆ ಒಪ್ಪಿಸಿದ್ದಾರೆ.

ಮಂಗಳವಾರ ರಾತ್ರಿ 11.30ರ ಸುಮಾರಿಗೆ ಘಟನೆ ನಡೆದಿದ್ದು, ಬೆಂದೂರುವೆಲ್ ಕಡೆಯಿಂದ ಅತಿ ವೇಗದಲ್ಲಿ ಬ್ರೀಜಾ ಕಾರನ್ನು ಚಲಾಯಿಸುತ್ತ ಶಿವಭಾಗ್ ಕಡೆಗೆ ಬಂದಿದ್ದಾನೆ. ಇದರಿಂದ ರಸ್ತೆಯಲ್ಲಿ ಹೋಗುತ್ತಿದ್ದ ಇತರೇ ವಾಹನಗಳ ಪ್ರಯಾಣಿಕರು ಭಯಕ್ಕೀಡಾಗಿದ್ದು, ಸೈಡ್ ಕೊಟ್ಟಿದ್ದಾರೆ. ಎರ್ರಾಬಿರ್ರಿ ಚಲಾಯಿಸುತ್ತಿದ್ದ ವ್ಯಕ್ತಿಯನ್ನು ಬಳಿಕ ಶಿವಭಾಗ್ ನಲ್ಲಿ ಕೆಲವರು ಸೇರಿ ಅಡ್ಡಹಾಕಿದ್ದಾರೆ.

ಆದರೆ ಬ್ರೀಜಾ ಕಾರಿನಲ್ಲಿದ್ದ ವ್ಯಕ್ತಿ ನನ್ನನ್ನು ಏನೂ ಮಾಡಲು ಆಗಲ್ಲ. ನೀವು ಏನು ಮಾಡುತ್ತೀರಿ ಎಂದು ಆವಾಜ್ ಹಾಕಿದ್ದಾನೆ. ಈ ವೇಳೆ, ಒಬ್ಬರು ಕದ್ರಿ ಪೊಲೀಸರಿಗೆ ಫೋನ್ ಮಾಡಿ ಸ್ಥಳಕ್ಕೆ ಕರೆಸಿದ್ದಾರೆ. ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು ಇಬ್ಬರನ್ನೂ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಬ್ರೀಜಾ ಕಾರನ್ನು ಚಲಾಯಿಸುತ್ತಿದ್ದ ಕುಲಶೇಖರ ನಿವಾಸಿ ಜೈಸನ್ ಲ್ಯಾನ್ಸಿ ರೇಗೊ(45) ಅತಿಯಾಗಿ ಕುಡಿದು ನಿಲ್ಲುವುದಕ್ಕೂ ಆಗದಂತೆ ವರ್ತಿಸುತ್ತಿದ್ದ. ಆತನ ಜೊತೆಗಿದ್ದ ಇನ್ನೊಬ್ಬ ವ್ಯಕ್ತಿಯೂ ಕುಡಿದು ಟೈಟ್ ಆಗಿದ್ದ.

ಕಾರನ್ನು ಬಳಿಕ ಪೊಲೀಸರು ಕದ್ರಿ ಠಾಣೆಗೆ ಚಲಾಯಿಸಿಕೊಂಡು ಹೋಗಿದ್ದಾರೆ. ಆನಂತರ, ಡ್ರಿಂಕ್ಸ್ ತಪಾಸಣೆ ನಡೆಸಿದ್ದು ಇಬ್ಬರಿಗೂ ಪಾಸಿಟಿವ್ ಬಂದಿದೆ. ಪೊಲೀಸರು ಡ್ರಿಂಕ್ ಡ್ರೈವ್ ಮಾಡಿದ್ದಕ್ಕಾಗಿ ಕೇಸು ದಾಖಲಿಸಿ 10 ಸಾವಿರ ರೂಪಾಯಿ ದಂಡ ವಿಧಿಸಿ ಬಿಟ್ಟು ಕಳಿಸಿದ್ದಾರೆ.

Mangalore Drink and drive case, rash driving, public handover man to police at Shivabagh in Mangalore, Kadri police impose fine of 10 thousand. Jaison Lancy Rego from kulshekar was handover over to kadri police after he was found driving car recklessly.