ಬ್ರೇಕಿಂಗ್ ನ್ಯೂಸ್
24-06-25 11:19 am Mangalore Correspondent ಕರಾವಳಿ
ಮಂಗಳೂರು, ಜೂನ್ 24 : ಇರಾನ್ ಸೇನಾ ಪಡೆಗಳು ಕತಾರ್ ನಲ್ಲಿರುವ ಅಮೆರಿಕದ ಸೇನಾ ನೆಲೆಗಳ ಮೇಲೆ ದಾಳಿ ಎಸಗಿರುವ ಬೆನ್ನಲ್ಲೇ ಮಧ್ಯಪ್ರಾಚ್ಯದಲ್ಲಿರುವ ರಾಷ್ಟ್ರಗಳು ತಮ್ಮ ವಾಯು ಮಾರ್ಗವನ್ನು ಮುಚ್ಚಿದ್ದು, ವಿಮಾನ ಸಂಚಾರ ಅಸ್ತವ್ಯಸ್ತವಾಗಿದೆ. ಕತಾರ್, ಬೆಹ್ರೈನ್, ಯುಎಇ, ಇರಾಕ್ ಮತ್ತು ಕುವೈತ್ ದೇಶಗಳು ತಮ್ಮ ವಾಯುಮಾರ್ಗದಲ್ಲಿ ಯಾವುದೇ ರೀತಿಯ ವಿಮಾನ ಸಂಚಾರಕ್ಕೆ ಅವಕಾಶ ನೀಡುವುದಿಲ್ಲ ಎಂದು ಪ್ರಕಟಿಸಿದ್ದು, ಮಂಗಳೂರು, ಮುಂಬೈ, ದೆಹಲಿಯಿಂದ ಗಲ್ಫ್ ರಾಷ್ಟ್ರಗಳಿಗೆ ತೆರಳುವ ವಿಮಾನಗಳ ಸಂಚಾರಕ್ಕೆ ಬ್ರೇಕ್ ಬಿದ್ದಿದೆ.
ಗಲ್ಫ್ ರಾಷ್ಟ್ರಗಳ ಹಲವೆಡೆ ಅಮೆರಿಕದ ಸೇನಾ ನೆಲೆಗಳಿದ್ದು ಇವುಗಳನ್ನು ಇರಾನ್ ಟಾರ್ಗೆಟ್ ಮಾಡಿದೆ. ನಿನ್ನೆ ರಾತ್ರಿ ದಿಢೀರ್ ಆಗಿ ಕತಾರ್ ರಾಜಧಾನಿ ದೋಹಾ ಬಳಿಯಿರುವ ಅಮೆರಿಕ ಸೇನಾ ನೆಲೆಗೆ ಇರಾನ್ ಬಾಂಬ್ ದಾಳಿ ನಡೆಸಿದೆ. ಆದರೆ ಇರಾನ್ ದಾಳಿಗೆ ಕತಾರ್ ಖಂಡನೆ ವ್ಯಕ್ತಪಡಿಸಿದ್ದು, ಈ ರೀತಿಯ ನಡೆ ನಮ್ಮ ಸಾರ್ವಭೌಮತೆಗೆ ಧಕ್ಕೆ ತಂದಿದೆ. ನಮ್ಮ ವಾಯುಮಾರ್ಗ ಪ್ರವೇಶಿಸಿ ದಾಳಿ ನಡೆಸಿರುವುದು ಅಂತಾರಾಷ್ಟ್ರೀಯ ಕಾನೂನಿಗೆ ವಿರುದ್ಧ ಎಂದು ಹೇಳಿದೆ. ಗಲ್ಫ್ ರಾಷ್ಟ್ರಗಳಲ್ಲಿ ಅತ್ಯಂತ ಬಿಝಿ ಏರ್ಪೋರ್ಟ್ ಆಗಿರುವ ದೋಹಾದಲ್ಲಿ ವಿಮಾನ ಸಂಚಾರ ನಿರ್ಬಂಧಿಸಲಾಗಿದ್ದು, ಮುಂಜಾಗ್ರತಾ ಕ್ರಮವಾಗಿ ವಿಮಾನ ನಿಲ್ದಾಣ ಬಂದ್ ಮಾಡಲಾಗಿದೆ. ಇದರ ಬೆನ್ನಲ್ಲೇ ಕುವೈತ್, ಯುಎಇ, ಬೆಹ್ರೈನ್ ಕೂಡ ತಮ್ಮ ವಾಯು ಮಾರ್ಗ ನಿಲ್ಲಿಸಿದ್ದು, ತಮ್ಮಲ್ಲಿಗೆ ಬರುತ್ತಿದ್ದ ವಿಮಾನಗಳನ್ನು ಹಿಂದಕ್ಕೆ ಕಳಿಸಿದೆ.
ಇದೇ ವೇಳೆ ಕತಾರ್ ಮತ್ತು ಅಮೆರಿಕದ ಮಿಲಿಟರಿಗಳು ಇರಾನ್ ದಾಳಿಯಿಂದ ನಮ್ಮ ಸೇನಾ ನೆಲೆಗಳಿಗೆ ಏನೂ ಧಕ್ಕೆಯಾಗಿಲ್ಲ. ಎಲ್ಲವನ್ನು ಹಿಮ್ಮೆಟ್ಟಿಸಲಾಗಿದೆ ಎಂದು ಜಂಟಿ ಹೇಳಿಕೆಯಲ್ಲಿ ತಿಳಿಸಿವೆ. ಅಲ್ಲದೆ, ಕತಾರ್ ನಲ್ಲಿರುವ ಎಲ್ಲ ನಾಗರಿಕರನ್ನು ಕಟ್ಟಡಗಳ ಒಳಗಡೆಯೇ ಇರುವಂತೆ ಸೂಚಿಸಲಾಗಿದ್ದು, ಎಲ್ಲ ಕಾರ್ಯ ಚಟುವಟಿಕೆಗಳನ್ನು ನಿಲ್ಲಿಸಲು ಸೂಚಿಸಲಾಗಿದೆ.
ಮಂಗಳೂರು ವಿಮಾನ ನಿಲ್ದಾಣದಿಂದ ಗಲ್ಫ್ ರಾಷ್ಟ್ರಗಳಿಗೆ ತೆರಳುತ್ತಿದ್ದ ಎಲ್ಲ ವಿಮಾನಗಳ ಸಂಚಾರದಲ್ಲಿ ವ್ಯತ್ಯಯವಾಗಿದ್ದು, ದಮಾಮ್ ಹೊರಟಿದ್ದ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನವನ್ನು ಮಸ್ಕತ್ ಡೈವರ್ಟ್ ಮಾಡಲಾಗಿತ್ತು. ಅಬುಧಾಬಿ ಹೊರಟಿದ್ದ ವಿಮಾನ ಮುಂಬೈನಲ್ಲಿ ಲ್ಯಾಂಡ್ ಆಗಿತ್ತು. ಇವೆರಡೂ ವಿಮಾನಗಳನ್ನು ಮರಳಿ ಮಂಗಳೂರಿಗೆ ಕರೆತರಲಾಗಿದೆ ಎಂದು ಮಂಗಳೂರು ಏರ್ಪೋರ್ಟ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಮುಂಬೈ, ದೆಹಲಿಯಿಂದ ಗಲ್ಫ್ ರಾಷ್ಟ್ರಗಳಿಗೆ ತೆರಳಿದ್ದ ವಿಮಾನಗಳೂ ವಾಪಾಸಾಗಿದ್ದು, ಪ್ರಯಾಣಿಕರ ಸುರಕ್ಷತೆ ಹಿನ್ನೆಲೆಯಲ್ಲಿ ಅವರನ್ನು ಮರಳಿ ಬಿಡಲಾಗಿದೆ. ಯುರೋಪ್, ಅಮೆರಿಕ ತೆರಳುವ ವಿಮಾನಗಳು ಮಧ್ಯ ಪ್ರಾಚ್ಯ ರಾಷ್ಟ್ರಗಳ ಹೊರತಾಗಿ ಸಂಚಾರ ಮಾಡುವಂತಾಗಿವೆ.
Tensions escalated across the Gulf region after Iran launched a surprise missile strike on a US military base near Doha, Qatar, late last night. In response, several Gulf countries—including Qatar, Kuwait, Bahrain, UAE, and Iraq—have closed their airspace to all commercial flights, severely disrupting air travel across the region. Flights departing from Indian cities such as Mangaluru, Mumbai, and Delhi to Gulf destinations were either diverted or returned mid-air
10-07-25 09:53 pm
Bangalore Correspondent
ED Raid Congress MLA Subba Reddy: ಮಲೇಶ್ಯಾ, ಬ್...
10-07-25 12:45 pm
ಹರಿಪ್ರಸಾದ್ ಹೇಳಿಕೆಗೆ ಬಿಜೆಪಿ ಕೆಂಡಾಮಂಡಲ ; ಅರ್ಧ ನ...
09-07-25 10:45 pm
Chamarajanagar Heart Attack, Student; 'ಹೃದಯ"ಕ...
09-07-25 04:12 pm
ಬೆಂಗಳೂರಿನಲ್ಲಿ ಐದು ಕಡೆ ಎನ್ಐಎ ದಾಳಿ ; ಭಯೋತ್ಪಾದಕ...
09-07-25 01:53 pm
11-07-25 12:08 pm
HK News Desk
1500ಕ್ಕೂ ಹೆಚ್ಚು ಹಿಂದು ಮಹಿಳೆಯರನ್ನು ಇಸ್ಲಾಮಿಗೆ ಮ...
10-07-25 11:07 pm
Bangle Seller, Changur Baba Arrest, Uttar Pra...
10-07-25 03:24 pm
Amit Shah; ರಾಜಕೀಯ ನಿವೃತ್ತಿ ಬಳಿಕ ವೇದ, ಉಪನಿಷತ್...
10-07-25 01:00 pm
ಗೋಮಾಂಸ ತಿನ್ನಿಸಿ ಮತಾಂತರಕ್ಕೆ ಯತ್ನ ; ಫೇಸ್ಬುಕ್ಕಲ್...
07-07-25 08:45 pm
10-07-25 07:23 pm
Mangalore Correspondent
Mangalore, Traffic Constable, Lokayukta, Tasl...
10-07-25 04:01 pm
ಮಂಗಳೂರಿನ ಟೈಲರಿಂಗ್ ಶಾಪಲ್ಲೇ ಕುಸಿದು ಬಿದ್ದಿದ್ದ ನವ...
09-07-25 10:25 pm
Mangalore Home Minister Parameshwara, Peace M...
09-07-25 10:17 pm
Peace Meeting, Mangalore, Brijesh Chowta, Ash...
09-07-25 09:01 pm
10-07-25 08:09 pm
HK News Desk
Kerala Couple, Chit Fund Scam; ಚಿಟ್ ಫಂಡ್ ಹೆಸರ...
10-07-25 01:05 pm
Double Murder Hassan, crime: ಆಸ್ತಿ ವಿಚಾರಕ್ಕೆ...
10-07-25 12:04 pm
Drugs News, Mangalore: ಮಂಗಳೂರಿಗೆ ಡ್ರಗ್ಸ್ ಪೂರೈ...
09-07-25 10:56 pm
Kerala Chit Fund, Fraud, Mangalore: 20 ವರ್ಷಗಳ...
08-07-25 10:01 pm