ಬ್ರೇಕಿಂಗ್ ನ್ಯೂಸ್
04-07-25 02:38 pm Mangalore Correspondent ಕರಾವಳಿ
ಉಳ್ಳಾಲ, ಜು.4 : ಬುಧವಾರ ರಾತ್ರಿ ಮನೆಯಿಂದ ನಾಪತ್ತೆಯಾಗಿದ್ದ ಯುವಕನ ಮೃತದೇಹ ಉಚ್ಚಿಲ ಸಂಕೋಳಿಗೆಯ ರೈಲ್ವೇ ಹಳಿಯಲ್ಲಿ ಛಿದ್ರಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಯುವಕ ಆತ್ಮಹತ್ಯೆಗೈದಿರೋದಾಗಿ ಶಂಕಿಸಲಾಗಿದೆ.
ಉಳ್ಳಾಲ ತಾಲೂಕಿನ ಕೋಟೆಕಾರು ಬೀರಿಯ ಪ್ರಾಥಮಿಕ ಆರೋಗ್ಯ ಕೇಂದ್ರದ ಬಳಿಯ ಕೆಂಪು ಮಣ್ಣು ನಿವಾಸಿ ತೇಜಸ್(24) ಮೃತಪಟ್ಟ ಯುವಕ. ಮಂಗಳೂರಿನ ಲೇಡಿಗೋಷನ್ ಆಸ್ಪತ್ರೆ ಉದ್ಯೋಗಿ ಮೋಹನ್ ದಾಸ್ ಎಸ್. ಅಮೀನ್ ಅವರ ಪುತ್ರ ತೇಜಸ್ ಮಣಿಪಾಲದ ವಿದ್ಯಾಸಂಸ್ಥೆಯೊಂದರಲ್ಲಿ ಉನ್ನತ ವ್ಯಾಸಂಗ ನಡೆಸುತ್ತಿದ್ದ. ಬುಧವಾರ ರಾತ್ರಿ ಮನೆಯ ಬೆಡ್ ರೂಮ್ ಸೇರಿದ್ದು, ಗುರುವಾರ ಬೆಳಗ್ಗೆ ಮೊಬೈಲ್ ಮನೆಯಲ್ಲೇ ಬಿಟ್ಟು ನಾಪತ್ತೆಯಾಗಿದ್ದ.
ಎಷ್ಟೇ ಹುಡುಕಿದರೂ ತೇಜಸ್ ಸುಳಿವು ಲಭಿಸದ ಕಾರಣ ತಂದೆ ಮೋಹನ್ ದಾಸ್ ಅವರು ನಿನ್ನೆ ಉಳ್ಳಾಲ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು.
ಉಚ್ಚಿಲ ಸಂಕೋಳಿಗೆಯ ರೈಲ್ವೇ ಹಳಿಯಲ್ಲಿ ನಿನ್ನೆ ಬೆಳಗ್ಗೆಯೇ ಅಪರಿಚಿತ ಯುವಕನೋರ್ವನ ಮೃತದೇಹ ದೊರೆತ್ತಿದ್ದು ರೈಲ್ವೇ ಪೊಲೀಸರು ಪರಿಶೀಲನೆ ನಡೆಸಿ ಮೃತದೇಹವನ್ನ ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದರು. ರೈಲ್ವೇ ಹಳಿಯಲ್ಲಿ ನಿನ್ನೆ ಪತ್ತೆಯಾದ ಮೃತದೇಹವು ತೇಜಸ್ ನದೆಂದು ಪೋಷಕರು ಗುರುತು ಪತ್ತೆ ಹಚ್ಚಿದ್ದಾರೆ.
A 24-year-old youth who went missing from his home on Wednesday night was found dead on the railway tracks near Uchila Sankolige on Thursday morning. Authorities suspect suicide. The deceased has been identified as Tejas (24), a resident of Kempu Mannu near the Beeri Primary Health Centre in Kotekar, Ullal Taluk. He was the son of Mohan Das S. Amin, an employee at Lady Goschen Hospital in Mangaluru. Tejas was pursuing higher education at an institute in Manipal.
01-07-26 09:49 pm
HK News Desk
ದನ ಕೊಂದವರು ಜೈಲಿಗೆ, ಮನುಷ್ಯರನ್ನು ಕೊಂದವರು ಪ್ರಧಾನ...
29-06-26 10:33 pm
ಬಿಜೆಪಿಯಲ್ಲಿ ಆಡಿಯೋ ಬಿರುಗಾಳಿ ; ವಿಜಯೇಂದ್ರರನ್ನು ಈ...
29-06-26 10:22 pm
ಅಮಲು ಪದಾರ್ಥ ಬೆರೆಸಿದರೆ ರಾಜ್ಯದಲ್ಲಿ ಎಲ್ಲಾ ಪಾನ್ ಮ...
28-06-26 06:30 pm
ಕೆಂಪೇಗೌಡ ಜಯಂತಿ ಕಾರ್ಯಕ್ರಮದಲ್ಲಿ ಗಲಾಟೆ ; ಪ್ರದೀಪ್...
27-06-26 08:31 pm
30-06-26 08:06 pm
HK News Staffer
“ಟಿವಿ ನೋಡಬೇಡ, ಓದಬೇಕು!” ಎಂದು ಬೈಯುವ ಪೋಷಕರಿಗೆ ಶಾ...
30-06-26 04:34 pm
“ಟಿವಿ ನೋಡಬೇಡ, ಓದಬೇಕು!” ಎಂದು ಬೈಯುವ ಪೋಷಕರಿಗೆ ಶಾ...
30-06-26 04:34 pm
ಮೊಹರಂ ಮೆರವಣಿಗೆಯಲ್ಲಿ 15,000 ಜನರ ಹತ್ಯೆಗೆ ಸ್ಕೆಚ್...
29-06-26 03:35 pm
3-6 ತಿಂಗಳಲ್ಲಿ ವಿಜಯ್ ಸರ್ಕಾರ ಪತನ ; ಇದು ಅಲುಗಾಡುವ...
29-06-26 12:41 pm
01-07-26 10:37 pm
HK News Desk
ಭಾರಿ ಮಳೆ ; ಜುಲೈ 2 ದಕ್ಷಿಣ ಕನ್ನಡ ಶಾಲೆ - ಕಾಲೇಜಿಗ...
01-07-26 09:58 pm
ನಾಗುರಿ ದುರಂತ ನಮಗೆಲ್ಲ ಎಚ್ಚರಿಕೆ ಕರೆಗಂಟೆ, ವಿಕೋಪಗ...
01-07-26 09:18 pm
Mangalore Garodi Landslide: ನಾಗುರಿ ದುರಂತ ; ಗು...
01-07-26 08:41 pm
ಕಡೆಗೂ ಮಳೆ ಬಿರುಸು ; ತೊಕ್ಕೊಟ್ಟಿನಲ್ಲಿ ಮನೆ ಮೇಲೆರ...
01-07-26 11:46 am
01-07-26 09:34 pm
HK News Desk
ಹೋಂ ಸ್ಟೇನಲ್ಲಿ ಯುವತಿ ನಿಗೂಢ ಸಾವು ; ನನ್ನ ಪ್ರಿಯತಮ...
01-07-26 06:52 pm
ಭಗ್ನ ಪ್ರೇಮಿಯಿಂದ ಕಾರು ಸ್ಫೋಟ ಕೇಸ್ ; ಕಚ್ಚಾ ಬಾಂಬ್...
01-07-26 04:51 pm
ಕಂಕನಾಡಿ ಗರೋಡಿಯಲ್ಲಿ ನಾಲ್ಕು ಬಾಡಿಗೆ ಮನೆಗಳಿದ್ದ ಕಟ...
01-07-26 08:59 am
Panambur Gold Robbery, Update: ಪಣಂಬೂರಿನಲ್ಲಿ ಚ...
30-06-26 11:02 pm