ಚಿನ್ನಯ್ಯ ಮತ್ತೆ ಬೆಳ್ತಂಗಡಿ ಕೋರ್ಟಿಗೆ ಹಾಜರು, ದೂರುದಾರ ಯು ಟರ್ನ್ ಹೊಡೆದ ಶಂಕೆ, ಒಟ್ಟು ಪ್ರಕರಣಕ್ಕೆ ಮತ್ತೆ ಟ್ವಿಸ್ಟ್ ! 

23-09-25 11:01 pm       Mangalore Correspondent   ಕರಾವಳಿ

ಧರ್ಮಸ್ಥಳ ಪ್ರಕರಣದಲ್ಲಿ ಪ್ರಮುಖ ದೂರುದಾರನಾಗಿದ್ದ ಚಿನ್ನಯ್ಯನನ್ನು ಬೆಳ್ತಂಗಡಿ ಕೋರ್ಟಿಗೆ ಹಾಜರುಪಡಿಸಲಾಗಿದ್ದು ಮತ್ತೊಮ್ಮೆ ಕೋರ್ಟಿಗೆ ಹೇಳಿಕೆ ನೀಡಿದ್ದಾನೆ. ತನ್ನ ಹಿಂದಿನ ಹೇಳಿಕೆಯನ್ನು ಅಲ್ಲಗಳೆದು ಯು ಟರ್ನ್ ಹೊಡೆದಿದ್ದಾನೆ ಎಂದು ಹೇಳಲಾಗುತ್ತಿದೆ.

ಮಂಗಳೂರು, ಸೆ.23 :  ಧರ್ಮಸ್ಥಳ ಪ್ರಕರಣದಲ್ಲಿ ಪ್ರಮುಖ ದೂರುದಾರನಾಗಿದ್ದ ಚಿನ್ನಯ್ಯನನ್ನು ಬೆಳ್ತಂಗಡಿ ಕೋರ್ಟಿಗೆ ಹಾಜರುಪಡಿಸಲಾಗಿದ್ದು ಮತ್ತೊಮ್ಮೆ ಕೋರ್ಟಿಗೆ ಹೇಳಿಕೆ ನೀಡಿದ್ದಾನೆ. ತನ್ನ ಹಿಂದಿನ ಹೇಳಿಕೆಯನ್ನು ಅಲ್ಲಗಳೆದು ಯು ಟರ್ನ್ ಹೊಡೆದಿದ್ದಾನೆ ಎಂದು ಹೇಳಲಾಗುತ್ತಿದೆ.

ಶಿವಮೊಗ್ಗ ಜೈಲಿನಲ್ಲಿದ್ದ ಚಿನ್ನಯ್ಯನನ್ನು ಬಿಗಿ ಭದ್ರತೆಯಲ್ಲಿ ಮಂಗಳವಾರ ಸಂಜೆ ಬೆಳ್ತಂಗಡಿ ಕೋರ್ಟಿಗೆ ಕರೆತರಲಾಗಿದ್ದು, ಗಡ್ಡ ಬಿಟ್ಟುಕೊಂಡಿದ್ದ ವ್ಯಕ್ತಿ ನೇರವಾಗಿ ನ್ಯಾಯಾಧೀಶರ ಮುಂದೆ ತೆರಳಿ ಸೆಕ್ಷನ್ 183 ಅಡಿ ಹೇಳಿಕೆ ದಾಖಲಿಸಿದ್ದಾನೆ. ಬುಧವಾರವೂ ಹೇಳಿಕೆ ಮುಂದುವರಿಸುವ ಸಾಧ್ಯತೆಯಿದ್ದು, ಪೊಲೀಸರು ಮತ್ತೆ ಹಾಜರುಪಡಿಸುವ ಸುಳಿವು ನೀಡಿದ್ದಾರೆ.

ಇದೇ ವೇಳೆ, ಪ್ರಮುಖ ಹೋರಾಟಗಾರ ಮಹೇಶ್ ಶೆಟ್ಟಿ ಅವರನ್ನು ದಕ್ಷಿಣ ಕನ್ನಡ ಜಿಲ್ಲೆಯಿಂದ ಗಡೀಪಾರು ಮಾಡಲು ಆದೇಶ ಮಾಡಲಾಗಿದೆ. ಇದಲ್ಲದೆ, ಮಹೇಶ್ ಶೆಟ್ಟಿ ಜೊತೆಗಿದ್ದ 11 ಬೆಂಬಲಿಗರನ್ನು ವಿಚಾರಣೆಗೆ ಕರೆದಿದ್ದು ಪೊಲೀಸರು ನಿರಂತರ ಡ್ರಿಲ್ ಮಾಡಿದ್ದಾರೆ. ಅವರ ಮೊಬೈಲ್ ಪಡೆದು ತನಿಖೆಯನ್ನೂ ನಡೆಸುತ್ತಿದ್ದಾರೆ. ಇಂತಹ ಹೊತ್ತಿನಲ್ಲೇ ದೂರುದಾರ ಚಿನ್ನಯ್ಯ ಬೆಳ್ತಂಗಡಿ ಕೋರ್ಟಿಗೆ ಹಾಜರಾಗಿದ್ದು, ಉಲ್ಟಾ ಹೊಡೆದಿದ್ದಾನೆ ಎನ್ನಲಾಗುತ್ತಿದೆ.

ಆದರೆ ಈ ಹೇಳಿಕೆಯನ್ನು ಕೇವಲ ನ್ಯಾಯಾಧೀಶರ ಮುಂದೆ ಮಾತ್ರ ನೀಡಿರುವುದರಿಂದ ಆತ ಏನೆಂದು ಹೇಳಿಕೆ ನೀಡಿದ್ದಾನೆಂದು ಪೊಲೀಸರಿಗೂ ತಿಳಿದಿಲ್ಲ. ಧರ್ಮಸ್ಥಳ ಠಾಣೆಗೆ ಜುಲೈ 3ರಂದು ನೀಡಿದ ಪೊಲೀಸ್ ದೂರಿನ ಬೆನ್ನಲ್ಲೇ ಬೆಳ್ತಂಗಡಿ ಕೋರ್ಟಿಗೆ ಹಾಜರಾಗಿ 164 ಅಡಿ ಹೇಳಿಕೆಯನ್ನೂ ನೀಡಿದ್ದ. ಇದೀಗ ತನ್ನ ಹಳೆ ಹೇಳಿಕೆ ಬದಿಗೆ ಸರಿಸಿ ಹೊಸ ಹೇಳಿಕೆ ನೀಡಿರುವ ಸಾಧ್ಯತೆಯಿದೆ.

In a fresh development in the Dharmasthala case, key complainant Chinnayya was produced before the Beltangady Court under tight security on Tuesday evening. Reports suggest that he may have taken a U-turn from his earlier statement.