ಬ್ರೇಕಿಂಗ್ ನ್ಯೂಸ್
16-12-25 08:53 pm Mangalore Correspondent ಕರಾವಳಿ
ಮಂಗಳೂರು, ಡಿ.16 : ನನಗೊಬ್ಬನ ಜೊತೆಗೆ ಲವ್ ಇದೆ, ಅವನನ್ನೇ ಮದುವೆ ಆಗುತ್ತೇನೆ, ಬೇರೆ ಮದುವೆ ಬೇಡ ಎಂದು ತನ್ನ ಹೆತ್ತವರು ಮತ್ತು ಹುಡುಗನಿಗೆ ಹೇಳಿದರೂ ಮುಸ್ಲಿಂ ಸಂಪ್ರದಾಯದಂತೆ ನಿಖಾ ನಡೆಸಿದ್ದು ಒಂದೇ ದಿನದಲ್ಲಿ ವಧು ಎಸ್ಕೇಪ್ ಆಗಿದ್ದು, ರಿಸೆಪ್ಷನ್ಗೆ ಬಂದವರು ಊಟ ಮಾಡಿ ಹೋದ ಪ್ರಕರಣ ನಡೆದಿದೆ. ಈ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಿ.ಸಿ.ರೋಡು ಬಳಿಯ ಪಲ್ಲಮಜಲು ಗ್ರಾಮದ 21 ವರ್ಷದ ಯುವತಿ ಮದುವೆ ರಿಸೆಪ್ಷನ್ ದಿನವೇ ಎಸ್ಕೇಪ್ ಆಗಿದ್ದಾಳೆ. ಈಕೆಗೆ ಬಂಟ್ವಾಳದ ನಿವಾಸಿ, ಪ್ರಸ್ತುತ ಮಂಗಳೂರಿನಲ್ಲಿ ವಾಸವಿರುವ ಯುವಕನ ಜೊತೆ ಮದುವೆ ನಿಶ್ಚಯವಾಗಿದ್ದು, ಡಿ.12ರ ಶುಕ್ರವಾರ ನಿಖಾ ನಡೆದಿತ್ತು. ಡಿಸೆಂಬರ್ 14ರಂದು ಕಲ್ಲಾಪುವಿನ ಯುನಿಟಿ ಸಭಾಂಗಣದಲ್ಲಿ ರಿಸೆಪ್ಷನ್ ಹಮ್ಮಿಕೊಳ್ಳಲಾಗಿತ್ತು. ಎಲ್ಲಾ ಸಿದ್ಧತೆ ಮುಗಿದಿದ್ದರಿಂದ ಎರಡೂ ಕಡೆಯ ಸಂಬಂಧಿಕರು ಹಾಲ್ ನಲ್ಲಿ ಸೇರಿದ್ದರು. ವರ ಮತ್ತು ಆತನ ಮನೆಯವರು ಬಂದರೂ ವಧುವಿನ ಕಡೆಯವರ ಪತ್ತೆಯಿರಲಿಲ್ಲ. ಈ ಬಗ್ಗೆ ವಿಚಾರಿಸಿದಾಗ ಯುವತಿ ಅದೇ ದಿನ ಬೆಳಗ್ಗೆ ಮನೆಯಿಂದ ಎಸ್ಕೇಪ್ ಆಗಿರುವ ಬಗ್ಗೆ ಮಾಹಿತಿ ಲಭಿಸಿದೆ.

ಡಿ.14ರಂದು ನಸುಕಿನಲ್ಲಿ ಸುಮಾರು 3.30ರ ತನಕ ತನ್ನ ಮನೆಯಲ್ಲಿ ಮಲಗಿದ್ದ ಯುವತಿ, 4.30ರ ವೇಳೆಗೆ ನಾಪತ್ತೆಯಾಗಿದ್ದಳು. ಇದನ್ನು ಗಮನಿಸಿದ ತಂಗಿ ಮನೆಯವರಿಗೆ ವಿಷಯ ತಿಳಿಸಿದ್ದು ಎಲ್ಲೆಡೆ ಹುಡುಕಾಡಿದರೂ ಸಿಗದೇ ಇದ್ದುದರಿದ ದೂರು ನೀಡಲಾಗಿದೆ.
ಜಾಲತಾಣದಲ್ಲಿ ಯುವಕ- ಯುವತಿ ಫೋಟೊ ವೈರಲ್
ವಧು ಎಸ್ಕೇಪ್ ಆದ ಸುದ್ದಿ ಕ್ಷಣ ಮಾತ್ರದಲ್ಲಿ ಜಾಲತಾಣದ ಮೂಲಕ ಹಬ್ಬಿದೆ. ಜೊತೆಗೆ ಆಕೆ ಮತ್ತು ಪ್ರಿಯಕರನ ಫೋಟೊವನ್ನೂ ವೈರಲ್ ಮಾಡಲಾಗಿದೆ. ವರ ಹಾಕಿದ್ದ ಎರಡು ಲಕ್ಷದ ಬೆಲೆಯ ಐಫೋನ್, ವಧು ದಕ್ಷಿಣೆಯಾಗಿ ನೀಡಿದ್ದ ಹತ್ತು ಪವನ್ ಚಿನ್ನ ಹಾಗೂ ಮದುವೆಗೆ ಮಾಡಿದ್ದ ಮನೆಯವರು ಮಾಡಿಸಿದ್ದ ಏಳು ಪವನ್ ಚಿನ್ನಾಭರಣ, ಐಶಾರಾಮಿ ಉಡುಗೊರೆಗಳ ಜೊತೆ ಪರಾರಿಯಾಗಿದ್ದಾಳೆಂದು ಸುದ್ದಿ ಹಬ್ಬಿಸಲಾಗಿತ್ತು.
ನಾನೇ ಲವರ್ ಜೊತೆ ಹೋಗಿದ್ದೇನೆ, ಚಿನ್ನ ತಗೊಂಡಿಲ್ಲ!
ಇದರ ಬೆನ್ನಲ್ಲೇ ಪರಾರಿಯಾದ ಯುವತಿ ತನ್ನ ಲವರ್ ಜೊತೆಗೆ ವಿಡಿಯೋ ಮಾಡಿದ್ದು, ನಾನು ಸ್ವಇಚ್ಛೆಯಿಂದ ಹೋಗಿದ್ದೇನೆಯೇ ಹೊರತು, ನನ್ನನ್ನು ಲವರ್ ಅಪಹರಿಸಿಲ್ಲ. ನನಗೆ ಲವ್ ಇರುವ ಬಗ್ಗೆ ಮನೆಯವರಿಗೆ ಗೊತ್ತಿದ್ದರೂ ಹೊಡೆದು ಮದುವೆ ಮಾಡಿಸಿದ್ದರು. ವರನಿಗೂ ನನ್ನ ಲವ್ ಬಗ್ಗೆ ಮಾಹಿತಿ ಹೋಗಿತ್ತು. ಈ ಮದುವೆ ಇಷ್ಟ ಇಲ್ಲದ ಕಾರಣ ನಾನು ಎಸ್ಕೇಪ್ ಆಗಿದ್ದೇನೆ. ನನಗೆ ಹಾಕಿದ ಯಾವುದೇ ಚಿನ್ನವನ್ನು ನಾನು ತೆಗೆದುಕೊಂಡು ಹೋಗಿಲ್ಲ ಎಂದು ತಿಳಿಸಿದ್ದಾಳೆ. ಪ್ರಿಯಕರ ಯುವಕ ವಿದೇಶದಲ್ಲಿ ಕೆಲಸದಲ್ಲಿದ್ದು ಶುಕ್ರವಾರ ನಿಖಾ ನಡೆದಿದ್ದರೆ ಮರುದಿನವೇ ಆತ ಊರಿಗೆ ಮರಳಿದ್ದ. ಅಂದು ಹುಡುಗಿಯನ್ನು ತಾಯಿ ಮನೆಯಲ್ಲಿ ಹೊರಗೆ ಹೋಗದಂತೆ ಜಾಗ್ರತೆ ಮಾಡಿದ್ದರು. ಆದರೆ ಭಾನುವಾರ ನಸುಕಿನಲ್ಲಿ ಮಲಗಿದ್ದಲ್ಲಿಂದಲೇ ಸದ್ದಿಲ್ಲದೆ ಎಸ್ಕೇಪ್ ಆಗಿದ್ದಳು. ಆಕೆಯ ಮನೆಯವರು ಬಂಟ್ವಾಳ ನಗರ ಠಾಣೆಯಲ್ಲಿ ನಾಪತ್ತೆ ದೂರು ನೀಡಿದ್ದಾರೆ. ಇತ್ತ ಮದುವೆ ತಪ್ಪಿದ ಯುವಕನಿಗೆ ತುರ್ತಾಗಿ ಬೇರೆ ಹುಡುಗಿ ನೋಡಿ ಮದುವೆ ಮಾಡಲಾಗಿದ್ಯಂತೆ.
In a dramatic turn of events in Bantwal near Mangaluru, a 21-year-old bride fled on the very day of her wedding reception, days after her nikah was conducted against her wishes. Despite repeatedly telling her family and the groom that she was in love with another man and did not want the marriage, the nikah was solemnised as per Muslim customs on December 12.
16-12-25 03:08 pm
Bangalore Correspondent
ಮಂಗಳೂರು ಬೆನ್ನಲ್ಲೇ ತುಮಕೂರು ಜಿಲ್ಲಾಧಿಕಾರಿ ಕಚೇರಿಗ...
16-12-25 12:57 pm
ದೆಹಲಿಯಲ್ಲು ಹೈಕಮಾಂಡ್ ಡಿನ್ನರ್ ಮೀಟಿಂಗ್ ; ಡಿಸಿಎಂ...
15-12-25 02:23 pm
ಹೊಟೇಲಿನಲ್ಲಿ ಡ್ರಿಂಕ್ಸ್ ಪಾರ್ಟಿ ಮಾಡುತ್ತಿದ್ದಾಗ ಪೊ...
15-12-25 02:20 pm
MLA Shamanur Shivashankarappa Death: ದೇಶದ ಅತಿ...
14-12-25 11:37 pm
16-12-25 06:33 pm
HK News Desk
ಭಟ್ಕಳ ತಹಸೀಲ್ದಾರ್ ಕಚೇರಿಗೂ ಸ್ಫೋಟದ ಬೆದರಿಕೆ ; ತಮಿ...
16-12-25 01:56 pm
ಪಾಕಿಸ್ತಾನದ ಎರಡು ವಿವಿಗಳಲ್ಲಿ ಸಂಸ್ಕೃತ ಕಲಿಯಲು ಕೋರ...
15-12-25 08:12 pm
ಪ್ರೇಕ್ಷಕ ಯುವಕನ ತಲೆಗೆ ಮರದ ಗುರಾಣಿಯಿಂದ ಹೊಡೆದ ತೈಯ...
15-12-25 08:09 pm
ಸಿಡ್ನಿಯ ಕಡಲತೀರದಲ್ಲಿ ರಕ್ತದೋಕುಳಿ ; ಸಾಮೂಹಿಕ ಗುಂಡ...
14-12-25 07:20 pm
16-12-25 10:25 pm
Mangalore Correspondent
Bride Missing, Mangalore: ಬೇರೆ ಲವ್ ಇದೆಯೆಂದರೂ...
16-12-25 08:53 pm
ಕೇರಳಕ್ಕೆ ನಾಲ್ಕು ಲಕ್ಷ ಮೌಲ್ಯದ ಎಂಡಿಎಂ ಡ್ರಗ್ಸ್ ಸಾ...
16-12-25 05:24 pm
ಕೊರಗ ಸಮುದಾಯದಲ್ಲಿ ಮೊಟ್ಟಮೊದಲ ವೈದ್ಯಕೀಯ ಪದವಿ ಪಡೆದ...
16-12-25 04:26 pm
ಆವರಣ ಗೋಡೆ ಕಾಮಗಾರಿ ವೇಳೆ ಗುಡ್ಡ ಕುಸಿತ ; ಮಣ್ಣಿನಡಿ...
16-12-25 01:23 pm
16-12-25 10:35 pm
Mangalore Correspondent
Mangalore Crime, Robbery, Mukka: 'ಬಂಗಾರ್ ಒಲ್ಪ...
15-12-25 10:26 pm
Udupi Murder, Brahmavar, Update: ಕುಡಿದ ಮತ್ತಿನ...
15-12-25 05:37 pm
Brahmavar Murder, Udupi Crime: ಎಣ್ಣೆ ಪಾರ್ಟಿಯಲ...
15-12-25 12:19 pm
Bangalore crime, Fake Police: ಪೊಲೀಸ್ ಸಮವಸ್ತ್ರ...
15-12-25 11:42 am