ಬ್ರೇಕಿಂಗ್ ನ್ಯೂಸ್
03-01-26 11:04 pm Mangalore Correspondent ಕರಾವಳಿ
ಮಂಗಳೂರು, ಜ.3 : ಕಳೆದ ವಾರ ಮಂಗಳೂರು ಕಂಬಳದಲ್ಲಿ ಹಿರಿಯ ತೀರ್ಪುಗಾರ, ಕಂಬಳ ಕ್ಷೇತ್ರದ ಸಾಧಕ ಗುಣಪಾಲ ಕಡಂಬರಿಗೆ ಅವಮಾನಿಸಿದ ಘಟನೆಯಾದ ಬಗ್ಗೆ ಕಾರ್ಕಳದ ಮಿಯ್ಯಾರು ಕಂಬಳದಲ್ಲಿ ಜಿಲ್ಲಾ ಕಂಬಳ ಸಮಿತಿಯ ಅಧ್ಯಕ್ಷ ಬೆಳಪು ದೇವಿಪ್ರಸಾದ್ ಶೆಟ್ಟಿ ಮತ್ತು ಅವಮಾನ ಮಾಡಿದ್ದಾರೆ ಎನ್ನಲಾದ ಮುಚ್ಚೂರು ಕಲ್ಕುಡೆ ಲೋಕೇಶ್ ಶೆಟ್ಟಿ ಬಹಿರಂಗ ವೇದಿಕೆಯಲ್ಲಿ ಕ್ಷಮೆ ಯಾಚನೆ ಮಾಡಿದ್ದಾರೆ.
ಮಂಗಳೂರು ಕಂಬಳದಲ್ಲಿ ಗುಣಪಾಲ ಕಡಂಬರಿಗೆ ಅವಮಾನಿಸಿದ ವಿಚಾರಕ್ಕೆ ಸಂಬಂಧಿಸಿ ಜಾಲತಾಣದಲ್ಲಿ ಭಾರೀ ವಿರೋಧ ಕೇಳಿಬಂದಿತ್ತು. ಗುಣಪಾಲ ಕಡಂಬರ ಅಭಿಮಾನಿಗಳು ಎಂಬ ಹೆಸರಲ್ಲಿ ಪ್ರತ್ಯೇಕ ಗ್ರೂಪ್ ರಚಿಸಿಕೊಂಡು ಅವಮಾನಿಸಿದ ಮುಚ್ಚೂರು ಲೋಕೇಶ್ ಶೆಟ್ಟಿ ಮತ್ತು ಅರುಣ್ ಶೆಟ್ಟಿ ಬಹಿರಂಗ ಕ್ಷಮೆ ಯಾಚಿಸಬೇಕೆಂದು ಆಗ್ರಹಿಸಲಾಗಿತ್ತು. ಈ ನಡುವೆ, ಗುಣಪಾಲ ಕಡಂಬರು ಕಂಬಳದ ಕಾಮೆಂಟರಿ ಮಾಡುತ್ತಿದ್ದಾಗಲೇ ಅರುಣ್ ಶೆಟ್ಟಿ ಎಂಬವರು ಎದುರು ಮಾತನಾಡಿದ್ದರ ಆಡಿಯೋ ಕೂಡ ವೈರಲ್ ಆಗಿತ್ತು. ಕಂಬಳ ಸಮಿತಿಯ ಕೋಶಾಧಿಕಾರಿ ಮುಚ್ಚೂರು ಲೋಕೇಶ್ ಶೆಟ್ಟಿ, ಗುಣಪಾಲ ಕಡಂಬರನ್ನು ಏಕವಚನದಲ್ಲಿ ನಿಂದಿಸಿದ್ದಾರೆಂದು ಹೇಳಲಾಗಿತ್ತು. ಹೀಗಾಗಿ ಈ ವಿಚಾರ ಬಂಟ- ಜೈನರ ತಿಕ್ಕಾಟ ಎಂಬಷ್ಟರ ಮಟ್ಟಿಗೆ ಭಾರೀ ಸುದ್ದಿಯೂ ಆಗಿತ್ತು.


ಇದರ ಬೆನ್ನಲ್ಲೇ ಜಿಲ್ಲಾ ಕಂಬಳ ಸಮಿತಿಯ ಮೌನದ ಬಗ್ಗೆಯೂ ಪ್ರಶ್ನೆ ಕೇಳಿಬಂದಿತ್ತು. ಮಂಗಳೂರು ಕಂಬಳ ಸಮಿತಿಯವರು ಯಾಕೆ ಗುಣಪಾಲ ಕಡಂಬರ ಪರವಾಗಿ ನಿಲ್ಲಲಿಲ್ಲ ಎಂಬ ಮಾತೂ ಕೇಳಿಬಂದಿತ್ತು. ಇದೀಗ ಮಂಗಳೂರು ಕಂಬಳ ಸಮಿತಿಯ ಅಧ್ಯಕ್ಷರೂ, ದಕ್ಷಿಣ ಕನ್ನಡ ಸಂಸದರೂ ಆಗಿರುವ ಕ್ಯಾ. ಬ್ರಿಜೇಶ್ ಚೌಟ ಮತ್ತು ಜಿಲ್ಲಾ ಕಂಬಳ ಸಮಿತಿಯ ಅಧ್ಯಕ್ಷ ಬೆಳಪು ದೇವಿಪ್ರಸಾದ್ ಶೆಟ್ಟಿಯವರು ಎರಡೂ ಕಡೆಯವರನ್ನು ಗುಣಪಾಲ ಕಡಂಬರ ಬಳಿಗೆ ಕರೆದೊಯ್ದು ಮಾತುಕತೆ ನಡೆಸಿದ್ದಾರೆ. ಅಲ್ಲದೆ, ವಿವಾದ ಮುಂದುವರಿಸದೆ ಇಲ್ಲಿಗೆ ಮುಗಿಸುವಂತೆ ಕೇಳಿಕೊಂಡಿದ್ದಾರೆ. ಮೂಡುಬಿದ್ರೆಯಲ್ಲಿ ಮಾತುಕತೆ ನಡೆದ ಬೆನ್ನಲ್ಲೇ ಕಾರ್ಕಳದ ಮಿಯ್ಯಾರಿನಲ್ಲಿ ನಡೆಯುತ್ತಿದ್ದ ಕಂಬಳದ ವೇದಿಕೆಯಲ್ಲೇ ಬೆಳಪು ದೇವಿಪ್ರಸಾದ್ ಶೆಟ್ಟಿ ಮತ್ತು ಲೋಕೇಶ್ ಶೆಟ್ಟಿ ಮುಚ್ಚೂರು ಬಹಿರಂಗ ಕ್ಷಮೆ ಯಾಚಿಸಿದ್ದಾರೆ.
ಗುಣಪಾಲ ಕಡಂಬರು ನಮಗೆಲ್ಲ ಗುರು ಸಮಾನರು. ನಾವೆಲ್ಲರೂ ಅವರ ಅಭಿಮಾನಿಗಳೇ. ಮಂಗಳೂರು ಕಂಬಳದಲ್ಲಿ ಆಗಿರುವ ಪ್ರಮಾದಕ್ಕೆ ಎಲ್ಲ ಕಂಬಳ ಕೋಣಗಳ ಮಾಲೀಕರು ಮತ್ತು ಕಂಬಳ ಸಮಿತಿಯ ಪರವಾಗಿ ಕ್ಷಮೆ ಕೇಳುತ್ತೇನೆ. ಮುಂದೆ ಯಾವತ್ತೂ ಕಂಬಳದ ತೀರ್ಪುಗಾರರಿಗಾಗಲೀ, ಕಂಬಳದಲ್ಲಿ ಕೆಲಸ ಮಾಡುವವರಿಗಾಗಲೀ ಯಾವುದೇ ರೀತಿಯ ಚ್ಯುತಿ ಬರಬಾರದು. ಅವಮಾನಿಸುವ ಘಟನೆ ಆಗಬಾರದು. ಈ ವಿವಾದ ಇಲ್ಲಿಗೇ ಮುಕ್ತಾಯ ಆಗಬೇಕು ಎಂದು ಬೆಳಪು ದೇವಿಪ್ರಸಾದ್ ಶೆಟ್ಟಿ ಕೇಳಿಕೊಂಡರು.
ಆಬಳಿಕ ಮಾತನಾಡಿದ ಮುಚ್ಚೂರು ಲೋಕೇಶ್ ಶೆಟ್ಟಿ, ಕಳೆದ ಬಾರಿಯ ಕಂಬಳದಲ್ಲಿ ಏನೋ ಅಚಾತುರ್ಯದಿಂದ ಪ್ರಮಾದ ಆಗಿದೆ, ಗುಣಪಾಲ ಕಡಂಬರು ಹಿಂದೆಯೂ ನಮಗೆ ಗುರುಗಳಾಗಿದ್ದವರು. ಮುಂದೆಯೂ ಅವರ ಆಶೀರ್ವಾದ ಬೇಕು. ಅವರಿಗೆ ಮನಸ್ಸಿಗೆ ನೋವಾಗಿದ್ದರೆ ವಿಷಾದಿಸುತ್ತೇನೆ ಎಂದು ಹೇಳಿದ್ದಾರೆ. ಇದಕ್ಕು ಮೊದಲು ಸಂಸದ ಬ್ರಿಜೇಶ್ ಚೌಟರ ನೇತೃತ್ವದಲ್ಲಿ ನಡೆದ ಮಾತುಕತೆಯಲ್ಲಿ ಕೊಳಚ್ಚೂರು ಸುಕುಮಾರ ಶೆಟ್ಟಿ ಸೇರಿದಂತೆ ಹಲವ ಕಂಬಳ ಕೋಣಗಳ ಮಾಲೀಕರು, ಕಂಬಳ ಸಮಿತಿಯ ಪ್ರಮುಖರು ಸೇರಿದ್ದರು.
The controversy that erupted last week over the alleged insult to senior Kambala judge and veteran of the Kambala field, Gunapala Kadamba, has finally come to an end. At the Miyyaru Kambala in Karkala, District Kambala Committee President Belapu Deviprasad Shetty and Mucchooru Lokesh Shetty, who was accused of insulting Kadamba, offered a public apology on stage.
13-05-26 10:18 pm
HK News Desk
3 ಸಾವಿರ ರೂ. ಬಿಲ್ ಬಾಕಿ; 8 ತಿಂಗಳಿಂದ ಕತ್ತಲಲ್ಲಿ...
12-05-26 02:26 pm
ಶೃಂಗೇರಿ ಕ್ಷೇತ್ರದ ಅಂಚೆ ಮತ ಗೊಂದಲ; ಕಾಂಗ್ರೆಸಿನ ರಾ...
11-05-26 09:36 pm
D Sudhakar Death: ಚಿತ್ರದುರ್ಗದ ಜನಾನುರಾಗಿ ಶಾಸಕ,...
10-05-26 01:04 pm
25ನೇ ವಿವಾಹ ವಾರ್ಷಿಕೋತ್ಸವದ ದಿನವೇ ಭೀಕರ ಅಪಘಾತ ;...
09-05-26 10:41 pm
13-05-26 06:42 pm
HK News Staffer
ಅಗ್ನಿ ಪರೀಕ್ಷೆಯಲ್ಲಿ ಗೆದ್ದ ವಿಜಯ್; ನಿರೀಕ್ಷೆಗೂ ಮ...
13-05-26 02:26 pm
ಎಐಎಡಿಎಂಕೆ ಪಕ್ಷವೇ ಇಬ್ಭಾಗ ; 30 ಶಾಸಕರ ಬಣ ವಿಜಯ್ ಸ...
12-05-26 08:15 pm
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ; ಮೇ 3ರಂದು ನಡೆದಿದ...
12-05-26 08:01 pm
ವಿಜಯ್ ಗೆಲುವು ಭವಿಷ್ಯ ನುಡಿದಿದ್ದ ಜ್ಯೋತಿಷಿಗೆ ಸಿಎಂ...
12-05-26 05:15 pm
13-05-26 11:02 pm
HK News Desk
Gruha Lakshmi Mangalore: ಸತ್ತವರ ಖಾತೆಗೂ ಗೃಹಲಕ್...
13-05-26 04:04 pm
NEET ಪರೀಕ್ಷೆ ರದ್ದು ; 22.5 ಲಕ್ಷ ವಿದ್ಯಾರ್ಥಿಗಳ ಭ...
12-05-26 06:26 pm
ಇಸ್ರೇಲ್ಗೆ ತೆರಳಲು ಸಿದ್ಧತೆಯಲ್ಲಿದ್ದ ಉಳ್ಳಾಲದ ವ್ಯ...
12-05-26 12:05 am
ಕುತ್ತಾರಿನಲ್ಲಿ ಕೊರಗಜ್ಜ ಸರ್ಕಲ್ ನಿರ್ಮಾಣ ; ಯಾರೋ ಹ...
09-05-26 11:51 pm
13-05-26 09:25 pm
HK News Desk
ಹಾಸನದಲ್ಲಿ ಜಿಮ್ ಕಿರಿಕ್; ವರ್ಕೌಟ್ ವೇಳೆ ಭುಜ ಟಚ್ ಆ...
13-05-26 06:36 pm
ಚಾರ್ಜ್ಗೆ ಹಾಕಿದ್ದ ಎಲೆಕ್ಟ್ರಿಕಲ್ ಬೈಕ್ ಸ್ಫೋಟ; ಮ...
13-05-26 03:39 pm
ಕುತ್ತಾರು ಜಂಕ್ಷನ್ನಲ್ಲಿ ಕೊರಗಜ್ಜನ ವೃತ್ತ ನಿರ್ಮಾಣಕ...
13-05-26 12:39 pm
ಚಂದನವನಕ್ಕೆ ಆಘಾತ; ಮಿಲನ, ಹಿಟ್ಲರ್ ಕಲ್ಯಾಣ ಖ್ಯಾತಿಯ...
13-05-26 11:44 am