ಬ್ರೇಕಿಂಗ್ ನ್ಯೂಸ್
23-01-26 06:57 pm HK News Desk ಕರಾವಳಿ
ಮಂಗಳೂರು, ಜ.23: ಯಕ್ಷಗಾನದ ಹಿರಿಯ ಕಲಾವಿದ ಡಾ.ಎಂ.ಪ್ರಭಾಕರ ಜೋಷಿ ಬಗ್ಗೆ ಹಾಸ್ಯಲೇಪಿತ ಧಾಟಿಯಲ್ಲಿ ಟೀಕೆ ಮಾಡಿದ್ದು ವಿಶ್ವವಾಣಿ ಸಂಪಾದಕ ವಿಶ್ವೇಶ್ವರ ಭಟ್ಟರನ್ನು ಈಗ ಕಟಕಟೆಯಲ್ಲಿ ನಿಲ್ಲುವಂತೆ ಮಾಡಿದೆ. ಇದಕ್ಕೆ ಕಾರಣವಾಗಿದ್ದು ಯಕ್ಷಗಾನ ಕಲಾವಿದರು ಮತ್ತು ವಿಶ್ವವಾಣಿ ಪತ್ರಿಕೆಯವರು ಈ ವಿಚಾರವನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದು.
ವಿಶ್ವೇಶ್ವರ ಭಟ್ಟರು ಓದುಗರು ಕೇಳುವ ಕುಹಕದ ಪ್ರಶ್ನೆಗಳಿಗೆ, ವಿಡಂಬನೆಯ ಉತ್ತರವನ್ನು ಕೊಡುವ ‘ಭಟ್ಟರ ಸ್ಕಾಚ್’ ಎನ್ನುವ ಕಾಲಂ ವಿಶ್ವವಾಣಿ ಪತ್ರಿಕೆಯಲ್ಲಿದೆ. ಅದರಲ್ಲಿ ಇತ್ತೀಚೆಗೆ ಓದುಗರೊಬ್ಬರು ಕೇಳಿದ ಪ್ರಶ್ನೆಗೆ, ವಿದ್ಯೆಯಿದ್ದೂ ಭೂಷಣವಿಲ್ಲದಂತೆ ವರ್ತಿಸುವುದಕ್ಕೆ ಪ್ರಭಾಕರ ಜೋಷಿ ಅಂತಾರೆ ಎಂದು ಹೇಳುವ ಮೂಲಕ ಭಟ್ಟರು ಕಿಚಾಯಿಸಿದ್ದರು. ಆದರೆ, ಇದೇ ವಿಚಾರವನ್ನು ಮುಂದಿಟ್ಟು ಯಕ್ಷಗಾನದ ಪಂಡಿತರು ಲೇಖನ ಬರೆದು ವಿಶ್ವೇಶ್ವರ ಭಟ್ಟರ ಹಾಸ್ಯವನ್ನು ಖಂಡಿಸಿದ್ದರು.


ಇಷ್ಟಕ್ಕೇ ಮುಗಿಯಲಿಲ್ಲ ಎಂದುಕೊಂಡ ವಿಶ್ವೇಶ್ವರ ಭಟ್ಟರು, ಅದಕ್ಕುತ್ತರವಾಗಿ ತನ್ನ ಪತ್ರಿಕೆಯಲ್ಲಿ ಉದ್ದ ಲೇಖನವನ್ನು ಬರೆದು ತಾಳಮದ್ದಳೆ ಅರ್ಥಧಾರಿಗಳನ್ನು ಟೀಕಿಸಿದ್ದರು. ಇದಕ್ಕೆ ಉಡುಪಿಯ ಯಕ್ಷರಂಗ ಕಲಾವಿದರು ಎನ್ನುವ ಕೂಟದವರು ಪತ್ರಿಕಾಗೋಷ್ಟಿ ಕರೆದು ಖಂಡನೆ ವ್ಯಕ್ತಪಡಿಸಿದ್ದಲ್ಲದೆ, ಪ್ರಭಾಕರ ಜೋಷಿಯನ್ನು ಹಾಸ್ಯ ಮಾಡಿದ್ದಕ್ಕೆ ಕೋರ್ಟಿಗೆಳೆಯುವ ಮಾತುಗಳನ್ನಾಡಿದ್ದರು. ಬಹಿರಂಗ ಕ್ಷಮೆ ಯಾಚಿಸುವಂತೆಯೂ ಭಟ್ಟರನ್ನು ಆಗ್ರಹಿಸಿದ್ದರು. ಈ ಬಗ್ಗೆ ಕಳೆದೊಂದು ತಿಂಗಳಲ್ಲಿ ಫೇಸ್ಬುಕ್ ತಾಣದಲ್ಲಿ ನಾನಾ ರೀತಿಯ ಟೀಕೆ, ಟಿಪ್ಪಣಿಗಳ ಚರ್ಚೆಯೂ ನಡೆದುಬಂದಿದೆ.
ಆದರೆ ಒಂದು ಹೆಜ್ಜೆ ಮುಂದೆ ಹೋಗಿರುವ ವಿಶ್ವೇಶ್ವರ ಭಟ್ಟರು, ನಾನು ಬಹಿರಂಗ ಕ್ಷಮೆ ಯಾಚಿಸುವ ಪ್ರಶ್ನೆಯೇ ಇಲ್ಲ, ಕೋರ್ಟಿಗೆ ಹೋದರೆ ಅಲ್ಲಿಯೇ ಉತ್ತರ ಕೊಡುತ್ತೇನೆ. ಅದಕ್ಕೂ ಮುನ್ನ ಪತ್ರಿಕಾಗೋಷ್ಟಿ ನಡೆಸಿದ 14 ಮಂದಿ ಬಹಿರಂಗ ಚರ್ಚೆಗೆ ಬರುವುದಿದ್ದರೆ ಬರಲಿ ಎಂದು ಸವಾಲು ಹಾಕಿ ಜಾಲತಾಣದಲ್ಲಿ ಪೋಸ್ಟರ್ ಪ್ರಕಟಿಸಿದ್ದರು. ಸವಾಲನ್ನು ಸ್ವೀಕರಿಸಿದ ಯಕ್ಷರಂಗ ಕಲಾವಿದರು, ವಿಶ್ವೇಶ್ವರ ಭಟ್ಟರನ್ನು ಚರ್ಚೆಗೆ ಕರೆದಿದ್ದಾರೆ. ಇದೇ ಜನವರಿ 26ರಿಂದ 30ರ ನಡುವೆ ವಿಶ್ವೇಶ್ವರ ಭಟ್ಟರು ಒಪ್ಪಿದ ಯಾವುದೇ ದಿನಗಳಲ್ಲಿ ನಮ್ಮ ಸಂಸ್ಥೆಯಲ್ಲೇ ಸಂವಾದಕ್ಕೆ ಅವಕಾಶ ಕಲ್ಪಿಸುತ್ತೇವೆ ಎಂದು ಹೇಳಿ ಚರ್ಚೆಗೆ ಕರೆದಿದ್ದಾರೆ. ಇದರ ಕಾರ್ಯದರ್ಶಿ ಮುರಳಿ ಕಡೆಕಾರ್ ತಮ್ಮ ನಂಬರನ್ನು ಹಾಕಿದ ಪೋಸ್ಟರ್ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು ಯಾವಾಗ ಬಹಿರಂಗ ಚರ್ಚೆ ಎನ್ನುವ ಕುತೂಹಲದಲ್ಲಿ ಯಕ್ಷಗಾನದ ಅಭಿಮಾನಿಗಳಿದ್ದಾರೆ.
ಈ ಬಗ್ಗೆ ಮುರಳಿ ಕಡೆಕಾರ್ ಅವರಲ್ಲಿ ಕೇಳಿದಾಗ, ವಿಶ್ವೇಶ್ವರ ಭಟ್ಟರು ನಾವು ನೀಡಿದ ದಿನಾಂಕದಲ್ಲಿ ವಿದೇಶ ಪ್ರವಾಸದಲ್ಲಿದ್ದಾರಂತೆ. ಹಾಗಾಗಿ, ಅವರಿಗೆ ತಕ್ಕುದಾದ ಮುಂದಿನ ದಿನಾಂಕವನ್ನು ನೀಡುವಂತೆ ಮೈಲ್ ಮಾಡಿದ್ದೇವೆ. ಅದಕ್ಕೆ ಮುಂದೆ ದಿನಾಂಕ ತಿಳಿಸುವುದಾಗಿ ಹೇಳಿದ್ದಾರೆ. ಪತ್ರಿಕೋದ್ಯಮವನ್ನು ಕುಲಗೆಡಿಸಿದ ಕೀರ್ತಿ ವಿ. ಭಟ್ಟರಿಗೆ ಸಲ್ಲುತ್ತದೆ ಎನ್ನುವ ಉತ್ತರವನ್ನು ಪ್ರಭಾಕರ ಜೋಷಿ ಎಲ್ಲಿಯೋ ಕಾರ್ಯಕ್ರಮದಲ್ಲಿ ನೀಡಿದ್ದಾರೆಂಬ ವಿಚಾರದಲ್ಲಿ ಈ ರೀತಿಯ ಜುಗಲ್ಬಂದಿ ಶುರುವಾಗಿದೆ ಎನ್ನುವ ಮಾಹಿತಿ ಇದೆ. ಸದ್ಯಕ್ಕೆ ಪತ್ರಿಕೆ ಮತ್ತು ಯಕ್ಷಗಾನ ಕಲಾವಿದರ ಜಟಾಪಟಿ ಜಾಲತಾಣದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದ್ದು, ಇವರದ್ದು ಬಹಿರಂಗ ಚರ್ಚೆಯಾಗುತ್ತಾ, ಕೈಕೊಟ್ಟು ಓಡುತ್ತಾರೆಯೇ ಎನ್ನುವ ಪ್ರಶ್ನೆಗಳನ್ನು ಹಾಕುತ್ತಿದ್ದಾರೆ.
A satirical remark by Vishwavani editor Vishweshwar Bhat about Yakshagana scholar Dr. M. Prabhakara Joshi has triggered a sharp backlash from Yakshagana artists, leading to a heated online debate. With demands for an apology, threats of legal action, and a viral challenge for an open public discussion, social media is abuzz over whether the two sides will face off—or back out.
23-01-26 03:21 pm
Bangalore Correspondent
ವಿಧಾನಸಭೆ ಅಧಿವೇಶನ ; ಭಾಷಣ ಅರ್ಧಕ್ಕೆ ಬಿಟ್ಟು ತೆರಳಿ...
22-01-26 10:27 pm
ಕುಕ್ಕೆ ಸುಬ್ರಹ್ಮಣ್ಯ ; 2 ತಿಂಗಳಲ್ಲಿ 14 ಕೋಟಿಗೂ ಹೆ...
22-01-26 05:20 pm
ಚಾಮರಾಜನಗರದಲ್ಲಿ ಚಿರತೆ ದಾಳಿ ; ಪಾದಯಾತ್ರೆಗೆ ಹೊರಟ್...
21-01-26 01:31 pm
ರಾಯಚೂರಿನಲ್ಲಿ ಭೀಕರ ಅಪಘಾತ ; ಬೊಲೆರೋ - ಪಿಕ್ಅ...
21-01-26 12:30 pm
23-01-26 06:44 pm
HK News Desk
ಗಾಜಾದಲ್ಲಿ ಶಾಂತಿ ಸ್ಥಾಪನೆಗೆ 35 ದೇಶಗಳ ಮಂಡಳಿ ರಚನೆ...
22-01-26 10:16 pm
ರೈಲಿನ ಶೌಚಾಲಯದಲ್ಲಿ ಎರಡು ಗಂಟೆ ಲಾಕ್ ಮಾಡಿಕೊಂಡ ಯುವ...
22-01-26 01:52 pm
ಗ್ರೀನ್ ಲ್ಯಾಂಡ್ ; ಯುರೋಪ್ ರಾಷ್ಟ್ರಗಳ ಮೇಲೆ ಸುಂಕ ಹ...
22-01-26 01:16 pm
ಆಂಧ್ರದಲ್ಲಿ ಮತ್ತೆ ಬಸ್ ಬೆಂಕಿ ; ಟೈರ್ ಸ್ಫೋಟಗೊಂಡು...
22-01-26 11:26 am
23-01-26 08:22 pm
Mangalore Correspondent
Prabhakara Joshi, Vishweshwar Bhat: ಜಾಲತಾಣದಲ್...
23-01-26 06:57 pm
Karkala Accident, Three Killed: ಕಾರ್ಕಳ ಕಂಬಳಕ್...
23-01-26 05:12 pm
Mangalore Asha Pandit Death, Instagram: ಮಂಗಳೂ...
23-01-26 11:44 am
ಗಂಡ - ಹೆಂಡತಿ ಜಗಳ ; ಪುತ್ತೂರು ಕೋರ್ಟಿನಲ್ಲಿ ಜಡ್ಜ್...
22-01-26 02:55 pm
23-01-26 03:34 pm
Mangalore Correspondent
29 ವರ್ಷಗಳ ಹಿಂದೆ ತಾಯಿ, ಮಗನನ್ನು ಕೊಲೆಗೈದು ಚಿನ್ನಾ...
22-01-26 10:12 pm
ಸ್ವಾಮೀಜಿಗೆ ಬ್ಲ್ಯಾಕ್ಮೇಲ್ ; ಒಂದು ಕೋಟಿಗೆ ಡಿಮ್ಯಾಂ...
22-01-26 02:40 pm
ಜೂಜಾಡಿ ಸಾಲ ; ಹಣದಾಸೆಗೆ ಇಂಜೆಕ್ಷನ್ ನೀಡಿ ಸ್ವಂತ...
21-01-26 09:35 pm
Actor Kicha Sudeep, Fraud: ನಟ ಕಿಚ್ಚ ಸುದೀಪ್, ಮ...
20-01-26 07:51 pm