ಯೆನಪೋಯ ವಿವಿಯಲ್ಲಿ ಮಾನಸಿಕ ಆರೋಗ್ಯ ನರ್ಸಿಂಗ್ ವಿಭಾಗದಿಂದ ರಾಷ್ಟ್ರೀಯ ಸಮ್ಮೇಳನ ; ವಿವಿಧ ರಾಜ್ಯಗಳ 184 ಪ್ರತಿನಿಧಿಗಳು ಭಾಗಿ 

23-01-26 09:21 pm       Mangaluru Staffer   ಕರಾವಳಿ

ಯೆನಪೋಯ ನರ್ಸಿಂಗ್ ಕಾಲೇಜಿನ ಮಾನಸಿಕ ಆರೋಗ್ಯ ನರ್ಸಿಂಗ್ ವಿಭಾಗದ ವತಿಯಿಂದ ವೈದ್ಯಕೀಯ–ಶಸ್ತ್ರಚಿಕಿತ್ಸಾ ನರ್ಸಿಂಗ್ ವಿಭಾಗದ ಸಹಯೋಗದಲ್ಲಿ “ಬದಲಾಗುತ್ತಿರುವ ಜಗತ್ತಿಗೆ ನವೀನತೆ, ಏಕೀಕರಣ ಮತ್ತು ಸಮಗ್ರ ದೃಷ್ಟಿಕೋನಗಳೊಂದಿಗೆ ನರ-ಮನೋವೈದ್ಯಕೀಯದ ಪುನರ್‌ವ್ಯಾಖ್ಯಾನ” ಎಂಬ ವಿಷಯದ ಮೇಲೆ...

ಮಂಗಳೂರು, ಜ.23: ಯೆನಪೋಯ ನರ್ಸಿಂಗ್ ಕಾಲೇಜಿನ ಮಾನಸಿಕ ಆರೋಗ್ಯ ನರ್ಸಿಂಗ್ ವಿಭಾಗದ ವತಿಯಿಂದ ವೈದ್ಯಕೀಯ–ಶಸ್ತ್ರಚಿಕಿತ್ಸಾ ನರ್ಸಿಂಗ್ ವಿಭಾಗದ ಸಹಯೋಗದಲ್ಲಿ “ಬದಲಾಗುತ್ತಿರುವ ಜಗತ್ತಿಗೆ ನವೀನತೆ, ಏಕೀಕರಣ ಮತ್ತು ಸಮಗ್ರ ದೃಷ್ಟಿಕೋನಗಳೊಂದಿಗೆ ನರ-ಮನೋವೈದ್ಯಕೀಯದ ಪುನರ್‌ವ್ಯಾಖ್ಯಾನ” ಎಂಬ ವಿಷಯದ ಮೇಲೆ ರಾಷ್ಟ್ರೀಯ ಸಮ್ಮೇಳನವನ್ನು ಜ.23ರಂದು ಯೆನಪೋಯ (ಡೀಮ್ಡ್ ಟು ಬಿ) ವಿಶ್ವವಿದ್ಯಾಲಯದ EMD ಸಭಾಂಗಣದಲ್ಲಿ ನಡೆಯಿತು.

ಮುಖ್ಯ ಅತಿಥಿಗಳಾಗಿ ಯೆನೆಪೋಯ (ಡೀಮ್ಡ್ ಟು ಬಿ) ವಿಶ್ವವಿದ್ಯಾಲಯ ಕುಲಪತಿ ಡಾ.ಗಂಗಾಧರ ಸೋಮಯಾಜಿ ಕೆ.ಎಸ್. ಮತ್ತು ನಿಟ್ಟೆ ಉಷಾ ನರ್ಸಿಂಗ್ ವಿಜ್ಞಾನ ಸಂಸ್ಥೆಯ ಪ್ರಾಂಶುಪಾಲರಾದ ಡಾ.ಫಾತಿಮಾ ಡಿಸಿಲ್ವ ಅವರು ನರ ಮನೋ ವೈದ್ಯಕೀಯದ ವೈಶಿಷ್ಟ್ಯವನ್ನು ಒತ್ತಿ ಹೇಳಿ, ಮಾನಸಿಕ ಆರೋಗ್ಯ ಮತ್ತು ನರ ವಿಜ್ಞಾನ ಕ್ಷೇತ್ರದಲ್ಲಿನ ಇತ್ತೀಚಿನ ತಂತ್ರಜ್ಞಾನಗಳು ಬೀರುತ್ತಿರುವ ಪ್ರಭಾವವನ್ನು ವಿವರಿಸಿದರು.

ಅಧ್ಯಕ್ಷತೆ ವಹಿಸಿದ್ದ ಯೆನಪೋಯ ನರ್ಸಿಂಗ್ ಕಾಲೇಜಿನ ಡೀನ್ ಡಾ. ಲೀನಾ ಕೆ.ಸಿ., ನರ ಮನೋ ವೈದ್ಯಕೀಯದಲ್ಲಿ ಆಧುನಿಕ ತಂತ್ರಜ್ಞಾನದ ಬಳಸಿಕೊಳ್ಳುವಿಕೆ ಮತ್ತು ಕೃತಕ ಬುದ್ಧಿಮತ್ತೆಯ ಉಪಯುಕ್ತತೆ ಬಗ್ಗೆ ವಿವರಿಸಿದರು. ಅತಿಥಿಗಳಾಗಿ ಪ್ರೊ. ವೈಸ್ ಚಾನ್ಸಲರ್ ಡಾ.ಬಿ.ಹೆಚ್. ಶ್ರೀಪತಿ ರಾವ್ ಹಾಗೂ ಯೆನಪೋಯ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಡಾ.ಬಿ.ಟಿ. ನಂದೀಶ್ ಉಪಸ್ಥಿತರಿದ್ದರು.

ಕಾರ್ಯಕ್ರಮದ ಆಯೋಜನಾ ಪ್ರಮುಖರೂ ಆದ ಮಾನಸಿಕ ಆರೋಗ್ಯ ನರ್ಸಿಂಗ್ ವಿಭಾಗದ ಹೆಡ್ ಡಾ.ಬಿನಿಶಾ ಪಪ್ಪಚ್ಚನ್ ಸ್ವಾಗತಿಸಿದರು. ವೈದ್ಯಕೀಯ ಶಸ್ತ್ರಚಿಕಿತ್ಸಾ ನರ್ಸಿಂಗ್ ವಿಭಾಗದ ಹೆಡ್ ಪ್ರೊ. ಶಶಿಕುಮಾರ್ ಜವಡಗಿ ವಂದಿಸಿದರು. ಭಾರತದ ವಿವಿಧ ರಾಜ್ಯಗಳಿಂದ ಒಟ್ಟು 184 ಪ್ರತಿನಿಧಿಗಳು ಈ ರಾಷ್ಟ್ರೀಯ ಸಮ್ಮೇಳನದಲ್ಲಿ ಭಾಗವಹಿಸಿದ್ದರು.

ಈ ಕಾರ್ಯಕ್ರಮವನ್ನು ಯೆನೆಪೊಯಾ ನರ್ಸಿಂಗ್ ಕಾಲೇಜಿನ ಮೆಡಿಕಲ್ ಸರ್ಜಿಕಲ್ ನರ್ಸಿಂಗ್ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಮಿಸ್ ಡೈಸಿ ಡಿಸೋಜ ಅವರು ನಿರೂಪಿಸಿದರು.

Yenepoya Nursing College, through its Department of Mental Health Nursing in collaboration with the Department of Medical Surgical Nursing, successfully organized a National Conference titled “Redefining Neuropsychiatry: Innovation, Integration & Holistic Approaches for a Changing World” on January 23, 2026, at the EMD Hall, Yenepoya (Deemed to be) University.