ಬ್ರೇಕಿಂಗ್ ನ್ಯೂಸ್
05-02-26 11:03 pm Mangalore Correspondent ಕರಾವಳಿ
ಮಂಗಳೂರು, ಫೆ.5 : ಮಂಗಳೂರು ನಗರವನ್ನು ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿಗೆ ಕೆಪಿಟಿ, ನಂತೂರು ಸೇರಿದಂತೆ ಕೊಟ್ಟಾರದ ವರೆಗೂ ಫ್ಲೈ ಓವರ್ ನಿರ್ಮಿಸುವ ಪ್ರಸ್ತಾಪ ಹೆದ್ದಾರಿ ಪ್ರಾಧಿಕಾರದ ಮುಂದಿದೆ. ಇದಲ್ಲದೆ, ಪಣಂಬೂರಿನಿಂದ ಬೈಕಂಪಾಡಿ ನಡುವೆಯೂ ಮೇಲ್ಸೇತುವೆ ನಿರ್ಮಾಣ ಮಾಡುವ ಪ್ರಸ್ತಾಪ ಇದೆ. ಆದರೆ ಇದನ್ನು ಯಾವ ರೀತಿ ಮಾಡಬೇಕೆಂಬ ಬಗ್ಗೆ ಇನ್ನೂ ಫೈನಲ್ ಆಗಿಲ್ಲ. ಇದರ ಬಗ್ಗೆ ಡಿಪಿಆರ್ ರಚನೆ ಪ್ರಕ್ರಿಯೆ ಆಗುತ್ತಿದ್ದು, ಇನ್ನೊಂದು ತಿಂಗಳಲ್ಲಿ ಅಂತಿಮ ಪ್ರೆಸೆಂಟೇಶನ್ ವರದಿಯನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಲು ಸೂಚಿಸಿದ್ದೇನೆ ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಎಚ್.ವಿ ದರ್ಶನ್ ಹೇಳಿದ್ದಾರೆ.
ಸುದ್ದಿಗೋಷ್ಟಿ ಸಂದರ್ಭದಲ್ಲಿ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಂತೂರು, ಕೆಪಿಟಿಯಲ್ಲಿ ಫ್ಲೈಓವರ್ ಆಗಬೇಕೆಂಬ ಪ್ರಸ್ತಾಪ ಇದೆ. ಆದರೆ ಇದನ್ನು ಯಾವ ರೀತಿ ಮಾಡಬೇಕೆಂದು ಅಂತಿಮ ವರದಿ ಆಗಿಲ್ಲ. ನಂತೂರಿನಿಂದ ನೇರವಾಗಿ ಬೈಕಂಪಾಡಿ ವರೆಗೂ ಫ್ಲೈ ಓವರ್ ನಿರ್ಮಾಣ ಮಾಡಬೇಕೆಂಬ ಬಗ್ಗೆಯೂ ಪ್ರಸ್ತಾಪ ಇದೆ. ಇದೇ ವೇಳೆ, ಪರ್ಯಾಯವಾಗಿ ಮಂಗಳೂರು ನಗರವನ್ನು ಹೊರತಾಗಿ ಹೆದ್ದಾರಿ ಮಾಡಬೇಕೆಂಬ ಪ್ರಸ್ತಾಪವೂ ಇದೆ. ಇದಕ್ಕೆ ಹೆಚ್ಚುವರಿ ಜಾಗ ಬೇಕಾಗುವುದರಿಂದ ಇಲ್ಲಿಯೇ ಫ್ಲೈಓವರ್ ಮಾಡಿದರೆ ಉತ್ತಮ ಎನ್ನುವ ಅಭಿಪ್ರಾಯವೂ ಇದೆ.
ಹೆದ್ದಾರಿ ಯಾವ ರೀತಿ ಆಗಬೇಕೆಂಬುದು ಮತ್ತು ಖರ್ಚಿನ ಬಗ್ಗೆ ಅಂತಿಮ ಪ್ರೆಸೆಂಟೇಶನ್ ವರದಿಯನ್ನು ನೀಡಲು ಹೇಳಿದ್ದೇನೆ. ಹೆದ್ದಾರಿ ಪ್ರಾಧಿಕಾರದ ಜೊತೆಗೆ ಸಭೆ ನಡೆಸಿದ್ದು ಮಾರ್ಚ್ ವೇಳೆಗೆ ವರದಿ ನೀಡುವುದಾಗಿ ಒಪ್ಪಿದ್ದಾರೆ. ಸದ್ಯಕ್ಕೆ ಕೆಪಿಟಿ ಮತ್ತು ನಂತೂರಿನಲ್ಲಿ ಸರ್ವಿಸ್ ರಸ್ತೆ ಮಾಡಲಾಗುತ್ತಿದೆ ಎಂದು ಹೇಳಿದರು.
ಬ್ಲಂಡರ್ ಫ್ಲೈಓವರ್ ಗೆ ಹೊಣೆ ಯಾರು?
ಸುರತ್ಕಲ್, ಕುಳೂರು, ಕೊಟ್ಟಾರದಲ್ಲಿ ಏಕಮುಖದ ಫ್ಲೈಓವರ್ ನಿಂದಾಗಿ ಬ್ಲಂಡರ್ ಆಗಿದೆ, ಅದಕ್ಕೆ ಯಾರನ್ನು ಹೊಣೆಗಾರ ಮಾಡುತ್ತೀರಿ ಎಂದು ಕೇಳಿದ ಪ್ರಶ್ನೆಗೆ, ಅಂದಿನ ಸಂದರ್ಭದಲ್ಲಿ ಆ ರೀತಿ ಮಾಡಿದ್ದಾರೆ, ಆಗಿನವರಲ್ಲೇ ಕೇಳಬೇಕಷ್ಟೆ. ಜಾಗದ ಕೊರತೆ ಆಗಿರಬಹುದು ಎಂದು ಹೇಳಿದರು. ಅದೇ ಜಾಗದಲ್ಲಿ ಟು ವೇ ಫ್ಲೈಓವರ್ ಮಾಡಬಹುದಿತ್ತು, ಯಾಕೆ ಆ ರೀತಿ ಮಾಡಿ ಜನರಿಗೆ ಕಷ್ಟ ಕೊಟ್ಟಿದ್ದೀರಿ, ಅದಕ್ಕೆ ಅಂದಿನ ಅಧಿಕಾರಿಗಳನ್ನೇ ಹೊಣೆ ಮಾಡಲಾಗಲ್ಲವೇ ಎಂದು ಕೇಳಿದ್ದಕ್ಕೆ ಜಿಲ್ಲಾಧಿಕಾರಿ ನಿರುತ್ತರರಾದರು.
ಪಿಲಿಕುಳ ಮೃಗಾಲಯದ ಬಗ್ಗೆ ಹೈಕೋರ್ಟ್ ಗರಂ ಆಗಿರುವ ಕುರಿತ ಪ್ರಶ್ನೆಗೆ, ಹೈಕೋರ್ಟ್ ನಿರ್ದೇಶನ ನಮಗೇನೂ ಲಭಿಸಿಲ್ಲ. ಅಲ್ಲಿನ ಮೃಗಾಲಯದ ಸ್ಥಿತಿಗತಿ ಉತ್ತಮವಾಗಿಯೇ ಇದೆ. ಎಲ್ಲ ಪ್ರಾಣಿಗಳನ್ನು ಖಾಸಗಿಯವರು ದತ್ತು ಪಡೆದಿದ್ದು, ಅದನ್ನು ಉತ್ತಮ ರೀತಿಯಲ್ಲೇ ಸಾಕಲಾಗುತ್ತಿದೆ. ಪ್ರಾಣಿಗಳನ್ನು ಚೆನ್ನಾಗಿ ನೋಡಿಕೊಳ್ಳುತ್ತಿಲ್ಲ ಎಂಬುದು ತಪ್ಪು ಅಭಿಪ್ರಾಯ ಎಂದು ಜಿಲ್ಲಾಧಿಕಾರಿ ಹೇಳಿದರು.
A proposal to construct a major flyover corridor connecting Nantoor to Baikampady, along with elevated stretches covering KPT and up to Kottara, is currently under consideration by the National Highways Authority.
17-08-26 02:26 pm
HK News Staffer
ಜಮೀರ್ ಹಲ್ಲು ಕಿತ್ತ ಹಾವು, ನೆಪಕ್ಕಷ್ಟೇ ಸಚಿವ ಸ್ಥಾನ...
14-08-26 08:42 pm
ಗುಟ್ಕಾ-ಪಾನ್ ಮಸಾಲಾ ನಿಷೇಧಕ್ಕೆ 48 ಗಂಟೆಯಲ್ಲೇ ಯು-...
14-08-26 05:32 pm
ಅನುಭವ ಇಲ್ಲದ ಮಂಗ ಯತೀಂದ್ರಗೆ ಮೈಸೂರು ಜಿಲ್ಲಾ ಉಸ್ತು...
13-08-26 10:19 pm
ಆದಿವಾಸಿ ಮತ್ತು ಅಲೆಮಾರಿ ಸಮುದಾಯಗಳ ಅಭಿವೃದ್ಧಿಗೆ ವಿ...
13-08-26 08:09 pm
17-08-26 09:45 pm
HK News Staffer
ಪ್ರಧಾನಿ ‘ದಿಮಾಗಿ ನಕ್ಸಲರು’ ಹೇಳಿಕೆಗೆ ರಿಜಿಜು ಅರ್ಥ...
17-08-26 05:38 pm
ನೀಟ್ ಪರೀಕ್ಷೆ ರದ್ದುಗೊಳಿಸಲು ತಮಿಳುನಾಡು ವಿಧಾನಸಭೆಯ...
11-08-26 10:25 pm
ಇಬ್ಬರು ಸಹೋದರಿಯರ ಇಸ್ಲಾಂ ಮತಾಂತರ ಎತ್ತಿಹಿಡಿದ ಅಲಹಾ...
11-08-26 04:49 pm
ಕಾಶ್ಮೀರಿ ಪಂಡಿತರನ್ನು ಗುರಿಯಾಗಿಸಿ ಉಗ್ರರ ಬೆದರಿಕೆ...
11-08-26 04:32 pm
17-08-26 05:07 pm
HK News Staffer
ನಾಗರಪಂಚಮಿ ; ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಸ...
16-08-26 09:33 pm
After Rotten Chicken Scare at KFC, McDonald’s...
16-08-26 08:29 pm
McDonald's City Centre Raid, Mangalore: ಕೆಎಫ್...
16-08-26 08:20 pm
ಫೈವ್ ಸ್ಟಾರ್ ಹೊಟೇಲ್ ರೈಡ್ ಆದ್ರೂ ಕೊಳೆತ ಮಾಂಸ ಇಟ್ಕ...
16-08-26 04:14 pm
17-08-26 10:04 pm
HK News Staffer
ದಾಂಡೇಲಿ ವೈಲ್ಡರ್ ನೆಸ್ಟ್ ರೆಸಾರ್ಟ್ಗೆ ನುಗ್ಗಿದ ಬ್...
17-08-26 10:02 pm
ಮೊಮ್ಮಗನಿಂದಲೇ ಮುಖಕ್ಕೆ ಬಟ್ಟೆ ಸುತ್ತಿಕೊಂಡು ಬಂದು ಅ...
17-08-26 09:39 pm
ಚಾಮರಾಜನಗರ ಶೂಟೌಟ್ ಪ್ರಕರಣ ; ರಾಜ್ಯದಲ್ಲಿ 13 ಲಕ್ಷ...
17-08-26 05:02 pm
ಬಂಟ್ವಾಳ ಪೊಲೀಸರ ಭರ್ಜರಿ ಬೇಟೆ; ಬೆಂಗಳೂರಿನಿಂದ ಕಾರಿ...
17-08-26 10:54 am