ಬ್ರೇಕಿಂಗ್ ನ್ಯೂಸ್
06-02-26 01:55 pm Mangalore Correspondent ಕರಾವಳಿ
ಮಂಗಳೂರು, ಫೆ.6 : ನಿರ್ಲಕ್ಷ್ಯದಿಂದಲೇ ರಸ್ತೆ ಅಪಘಾತಗಳಾಗೋದು ಅನ್ನುವುದು ಮತ್ತೆ ಮತ್ತೆ ಸಾಬೀತಾಗುತ್ತಿದೆ. ಹೆಲ್ಮೆಟ್ ಹಾಕದೇ ತ್ರಿಬಲ್ ರೈಡ್ ನಲ್ಲಿದ್ದ ಮೂವರು ಯುವಕರು ಬೈಕ್ ನಲ್ಲಿ ಏಕಾಏಕಿ ರಾಷ್ಟ್ರೀಯ ಹೆದ್ದಾರಿಗೆ ನುಗ್ಗಿದ್ದು ಈ ವೇಳೆ ಕಾರು ಡಿಕ್ಕಿಯಾಗಿ ಕೂದಲೆಳೆಯಲ್ಲಿ ಅಪಾಯದಿಂದ ಪಾರಾದ ಘಟನೆ ಸುರತ್ಕಲ್ ಬಳಿ ನಡೆದಿದೆ.
ಮಂಗಳೂರು ಹೊರವಲಯದ ಸುರತ್ಕಲ್ ಬಳಿಯ ಸೂರಜ್ ಹೊಟೇಲ್ ಬಳಿ ಘಟನೆಯಾಗಿದ್ದು ಇದರ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಹೆದ್ದಾರಿಯಲ್ಲಿ ವಾಹನಗಳು ವೇಗವಾಗಿ ಸಾಗುತ್ತಿದ್ದಾಗಲೇ ಬೈಕ್ ನಲ್ಲಿ ನೇರವಾಗಿ ರಸ್ತೆ ಡಿವೈಡರ್ ದಾಟುವ ಪ್ರಯತ್ನದಲ್ಲಿ ಅಪಘಾತವಾಗಿದೆ. ಮಂಗಳೂರಿನಲ್ಲಿ ಕೂಲಿ ಕೆಲಸ ಮಾಡುತ್ತಿದ್ದ ಕೊಪ್ಪಳ ಮೂಲದ ಮೂವರು ಯುವಕರು ಹೆಲ್ಮೆಟ್ ಕೂಡ ಧರಿಸದೇ ನಿರ್ಲಕ್ಷ್ಯದಿಂದ ಹೆದ್ದಾರಿಗೆ ಬೈಕ್ ನುಗ್ಗಿಸಿದ್ದಾರೆ.



ಪ್ರವೀಣ್ ಎಂಬಾತ ಬೈಕ್ ಸವಾರನಾಗಿದ್ದು ಹಿಂಬದಿಯಲ್ಲಿ ಇಬ್ಬರನ್ನು ಕೂರಿಸಿಕೊಂಡು ರಾಂಗ್ ಸೈಡ್ ನಲ್ಲಿ ಹೆದ್ದಾರಿಗೆ ಏಕಾಏಕಿ ಬೈಕ್ ನುಗ್ಗಿಸಿದ್ದಾನೆ. ಈ ವೇಳೆ, ವೇಗವಾಗಿ ಕಾರು ಬಂದು ಬೈಕಿಗೆ ಡಿಕ್ಕಿ ಹೊಡೆದ ರಭಸಕ್ಕೆ ಸವಾರರು ಫುಟ್ಬಾಲ್ ನಂತೆ ಹಾರಿ ಬಿದ್ದಿದ್ದಾರೆ. ಸಿಸಿ ಟಿವಿಯಲ್ಲಿ ಭೀಕರ ಅಪಘಾತದ ದೃಶ್ಯ ಸೆರೆಯಾಗಿದೆ.
ಕಾರು ಡಿಕ್ಕಿಯಾದ ರಭಸಕ್ಕೆ ಹಿಂದೆ ಕುಳಿತಿದ್ದ ಯುವಕ ಪಾರಾಗಿದ್ದು ಮುಂದಿದ್ದ ಇಬ್ಬರಿಗೂ ಪೆಟ್ಟು ಬಿದ್ದಿದೆ. ಬೈಕ್ ಚಾಲನೆ ಮಾಡುತ್ತಿದ್ದ ಪ್ರವೀಣ್ ಕೈಗೆ ಪೆಟ್ಟಾಗಿದ್ದು ಆಸ್ಪತ್ರೆಗೆ ದಾಖಲಾಗಿದ್ದಾನೆ. ಇನ್ನೊಬ್ಬನಿಗೂ ಕೈಗೆ, ತಲೆಗೆ ಪೆಟ್ಟು ಬಿದ್ದಿದೆ. ಅಪಘಾತಕ್ಕೆ ಬೈಕ್ ಸವಾರರ ನಿರ್ಲಕ್ಷ್ಯವೇ ಕಾರಣವಾಗಿದ್ದು ಸುರತ್ಕಲ್ ಸಂಚಾರಿ ಠಾಣೆ ಪೊಲೀಸರು ಕಾರು ಚಾಲಕನಿಂದ ದೂರು ಪಡೆದು ಬೈಕ್ ಸವಾರನ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಈ ಘಟನೆ ಫೆ.5ರಂದು ಬೆಳಗ್ಗೆ 10.30ರ ಸುಮಾರಿಗೆ ನಡೆದಿದೆ.
Triple riding, no helmets, and a reckless highway entry led to a shocking crash near #Surathkal, #Mangaluru. A speeding car rammed into the bike, throwing the riders into the air, the entire incident was caught on CCTV. #accident #mangalorenews pic.twitter.com/tdvVXh5rPK
— Headline Karnataka (@hknewsonline) February 6, 2026
In a shocking incident near Surathkal on February 5 around 10:30 am, three youths riding triple without helmets were injured after suddenly entering the national highway and being hit by a speeding car. The entire incident was captured on CCTV.
29-03-26 10:19 am
HK News Staffer
RCB ಗೆಲುವಿಗೆ ರಕ್ತದಾನ ಅಭಿಯಾನ ; ಚಿನ್ನಸ್ವಾಮಿ ಉದ್...
28-03-26 08:39 pm
ಆಸ್ತಿ ಕಲಹ ; ಮೂವರು ಪುಟ್ಟ ಮಕ್ಕಳೊಂದಿಗೆ ಬಾವಿಗೆ ಹಾ...
28-03-26 02:54 pm
ಭಾರತದಲ್ಲಿ ಮತ್ತೆ ಲಾಕ್ಡೌನ್ ; ಜಾಲತಾಣದಲ್ಲಿ ಟ್ರೆಂ...
27-03-26 04:49 pm
ಶಾರ್ಟ್ ಕಟ್ ದಾರಿಯೆಂದು ತುಂಗಭದ್ರಾ ನದಿಗೆ ನುಗ್ಗಿಸಿ...
27-03-26 04:04 pm
30-03-26 10:31 pm
HK News Desk
ಹರ್ಮುಜ್ ಜಲಸಂಧಿಯಲ್ಲಿ ಇರಾನ್ ಟೋಲ್ ಬೂತ್ ; ಶುಲ್ಕ ಕ...
28-03-26 04:06 pm
ನೇಪಾಳದಲ್ಲಿ ಝೆನ್ ಝೀ ಕ್ರಾಂತಿ ನಿಗ್ರಹಿಸಲು ಮುಂದಾಗಿ...
28-03-26 02:58 pm
ಟ್ರಂಪ್ ದಿಢೀರ್ ರಾಜಕೀಯ ಹೆಜ್ಜೆ ; ಯುದ್ಧ ಗಡುವು ಹತ್...
27-03-26 04:07 pm
ಗಲ್ಫ್ ಯುದ್ಧದ ಪರಿಣಾಮ ಊಹಿಸುವುದು ಕಷ್ಟ, ಕೋವಿಡ್ನಂ...
27-03-26 12:11 pm
30-03-26 11:13 pm
Mangalore Correspondent
Mangalore Attavar Suicide: ಅತ್ತಾವರದ ಅಪಾರ್ಟ್ಮೆ...
30-03-26 06:09 pm
ಮಂಗಳೂರಿನಲ್ಲಿ ಆಟೋ ಎಲ್ಪಿಜಿ ಗ್ಯಾಸ್ ಅಭಾವ ; ಸ್ಟೇಶನ...
30-03-26 02:06 pm
ಕುಕ್ಕರ್ನಲ್ಲಿ ಐಇಡಿ ಇಟ್ಟು ಸ್ಫೋಟಿಸಿದ್ದೇನೆ, ನಾನು...
29-03-26 11:11 am
ಬೇಸಗೆ ಬಿರು ಬಿಸಿಲ ನಡುವೆ ಕರಾವಳಿಯಲ್ಲಿ ಹಲವೆಡೆ ಮಳೆ...
28-03-26 09:08 pm
30-03-26 07:35 pm
HK News Desk
ತಿಂಗಳ ಹಿಂದಷ್ಟೇ ರಿಜಿಸ್ಟರ್ ಮದುವೆಯಾಗಿದ್ದ ಬೆಳ್ತಂಗ...
29-03-26 10:36 pm
ಟ್ಯಾಬ್ಲೆಟ್ ಆರಿಫ್ ಹತ್ಯೆ ; ಟೋಪಿ ನೌಫಾಲ್ ಸಾವನ್ನ ಸ...
29-03-26 10:22 pm
ಅರ್ಕುಳ ಬಳಿ ಹೆದ್ದಾರಿಯಲ್ಲಿ ಹಾಲಿನ ಟ್ಯಾಂಕರ್ ಗೆ ಹಿ...
29-03-26 07:49 pm
ಕಾರ್ಕಳದಲ್ಲಿ ಪೊಲೀಸರ ಮೇಲೆ ಕಾರು ಹರಿಸಲು ಯತ್ನ ; ಆರ...
29-03-26 06:03 pm