ಬ್ರೇಕಿಂಗ್ ನ್ಯೂಸ್
21-02-26 09:30 pm Mangalore Correspondent ಕರಾವಳಿ
ಉಳ್ಳಾಲ, ಫೆ.21: ಕಳೆದ ಒಂದೂವರೆ ವರುಷದಿಂದ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿಸಿದ್ದಲ್ಲದೆ, ಪಂಚಾಯತ್ ಸಾಮಾನ್ಯ ಸಭೆಯಲ್ಲಿ ವಿಪಕ್ಷ ಎಸ್ಡಿಪಿಐ ಸದಸ್ಯೆಯ ಜೊತೆ ಕೈಜೋಡಿಸಿ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದ್ದಕ್ಕಾಗಿ ಕೋಟೆಕಾರು ಪಟ್ಟಣ ಪಂಚಾಯತ್ ಸದಸ್ಯರಾದ ಸುಜಿತ್ ಮಾಡೂ ಅವರನ್ನು ಬಿಜೆಪಿ ಪಕ್ಷದಿಂದ ಉಚ್ಚಾಟಿಸಲಾಗಿದೆ. ಸಾಮಾನ್ಯ ಸಭೆಯ ವಿಚಾರವು ಉಚ್ಚಾಟನೆಗೆ ನೇರ ಕಾರಣವಾದರೆ, ಪಕ್ಷದೊಳಗಿನ ಆಂತರಿಕ ವಿಚಾರ ಬೇರೆಯೇ ಇದ್ದು, ಅದನ್ನ ಬಹಿರಂಗವಾಗಿ ಹೇಳಲು ಸಾಧ್ಯವಿಲ್ಲವೆಂದು ಬಿಜೆಪಿ ಮಂಗಳೂರು ಮಂಡಲದ ಪ್ರಧಾನ ಕಾರ್ಯದರ್ಶಿ ಮೋಹನ್ ರಾಜ್.ಕೆ.ಆರ್ ಅವರು ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದ್ದಾರೆ.
ತೊಕ್ಕೊಟ್ಟಿನ ಉಳ್ಳಾಲ ಪ್ರೆಸ್ ಕ್ಲಬ್ಬಿನಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಟಿಯನ್ನುದ್ಧೇಶಿಸಿ ಅವರು ಮಾತನಾಡಿದರು. ಕಳೆದ ಜನವರಿ 29ರಂದು ನಡೆದಿದ್ದ ಸಾಮಾನ್ಯ ಸಭೆಯಲ್ಲಿ ಸುಜಿತ್ ಅವರು ಎಸ್ಡಿಪಿಐನ ಕೌನ್ಸಿಲರ್ ಜೊತೆ ಸೇರಿ ಆಡಳಿತ ಪಕ್ಷದ ವಿರುದ್ಧವೇ ಪ್ರತಿಭಟಿಸಿದ್ದರು. ಈ ದೃಶ್ಯಗಳು ಮಾಧ್ಯಮಗಳಲ್ಲಿ ಪ್ರಸಾರಗೊಂಡಿದ್ದು ಎಸ್ಡಿಪಿಐ-ಬಿಜೆಪಿ ನಡುವಿನ ಹೊಂದಾಣಿಕೆಯ ಬಗ್ಗೆ ಜನರು ಪ್ರಶ್ನಿಸುವಂತಾಗಿದ್ದು, ಇದರಿಂದ ಪಕ್ಷಕ್ಕೆ ಮುಜುಗರದ ಸ್ಥಿತಿ ಎದುರಾಗಿತ್ತು. ಅಧಿಕಾರಿಗಳು ಕೂಡ ಪಂಚಾಯತ್ ಆಡಳಿತದ ಭಾಗವಾಗಿದ್ದಾರೆನ್ನುವುದನ್ನ ಸುಜಿತ್ ಅವರು ಮನಗಾಣಬೇಕಿತ್ತು. ಸಾಮಾನ್ಯ ಸಭೆಯ ಪೂರ್ವಭಾವಿಯಾಗಿ ಬಿಜೆಪಿ ಪಕ್ಷದ ಕೌನ್ಸಿಲರ್ಗಳ ಆಂತರಿಕ ಸಮಾಲೋಚನಾ ಸಭೆ ಇರುತ್ತದೆ. ಅಲ್ಲಿ ತಮ್ಮ ವಾರ್ಡ್ ಗಳ ಸಮಸ್ಯೆ ಬಗೆಹರಿಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗುತ್ತದೆ. ಆ ತೀರ್ಮಾನಗಳನ್ನ ಬಿಟ್ಟು ಬೇರೆಯೇ ವಿಚಾರಗಳನ್ನು ಮುಂದಿಟ್ಟು ಪಂಚಾಯತ್ ಆಡಳಿತಕ್ಕೆ ಮುಜುಗರ ತರುವ ರೀತಿಯಲ್ಲಿ ಚರ್ಚಿಸುವುದನ್ನು ಪದೇ ಪದೇ ಸಹಿಸಲು ಸಾಧ್ಯವಿಲ್ಲವೆಂದರು
.
ಪಂಚಾಯತ್ ಆಡಳಿತದ ವಿರುದ್ಧ ಭೂಮಾಫಿಯಾ ಆರೋಪದ ಬಗ್ಗೆ ಮಾತನಾಡಿದ ಅವರು ನಡುಕುಮೇರಿನ ಸರಕಾರಿ ಭೂಮಿಯನ್ನ ಅತಿಕ್ರಮಿಸಿ ಮನೆಗಳನ್ನ ಕಟ್ಟಿದವರ ವಿರುದ್ಧ ಪಂಚಾಯತ್ ಅಧ್ಯಕ್ಷರು ಎಲ್ಲಾ ಕಾನೂನು ಕ್ರಮಗಳನ್ನ ಕೈಗೊಂಡಿದ್ದಾರೆ. ಅತಿಕ್ರಮಣಕಾರರು ಕುಮ್ಕಿ ಹಕ್ಕಿನಡಿ ಹೈಕೋರ್ಟಲ್ಲಿ ರಿಟ್ ಪಿಟೀಷನ್ ಹಾಕಿ ತಡೆ ತಂದಿರುವುದರಿಂದ ಕೆಲವೊಂದು ಅಡಚಣೆಯಾಗಿತ್ತು. ಈಗಲೂ ಜಿಲ್ಲಾಧಿಕಾರಿಗೆ ಅರ್ಜಿ ಕೊಟ್ಟು ಅಕ್ರಮ ಕಟ್ಟಡಗಳನ್ನು ತೆರವುಗೊಳಿಸುವ ಪ್ರಕ್ರಿಯೆಯನ್ನು ಅಧ್ಯಕ್ಷರು ಮುಂದುವರೆಸಿದ್ದಾರೆ. ಪಂಚಾಯತ್ ಅಧಿಕಾರಿಗಳ ಸಮರ್ಪಕ ಸಹಕಾರ ಲಭಿಸದೆ ಅಕ್ರಮ ಕಟ್ಟಡ ತೆರವು ಕಾರ್ಯ ವಿಳಂಬವಾಗಿದೆಯೆಂದರು.
ಅಕ್ರಮ ಕಟ್ಟಡ ತೆರವುಗೊಳಿಸಲು ನಮ್ಮಲ್ಲಿ ಅಧಿಕಾರಿಗಳು, ಪೊಲೀಸರು ಲಭ್ಯವಿಲ್ಲವೆಂದು ಸಾಮಾನ್ಯ ಸಭೆಯಲ್ಲಿ ಅಸಹಾಯಕತೆ ವ್ಯಕ್ತಪಡಿಸಿದ್ದ ಮುಖ್ಯಾಧಿಕಾರಿಯ ನಡೆಯು ಪಂಚಾಯತ್ ಆಡಳಿತದ ವೈಫಲ್ಯವಲ್ಲವೇ ಎಂದು ಪತ್ರಕರ್ತರು ಪ್ರಶ್ನಿಸಿದಕ್ಕೆ ಉತ್ತರಿಸಿದ ಮೋಹನ್ ರಾಜ್, ಅಧಿಕಾರಿಗಳು ಅಸಹಾಯಕತೆ ತೋರ್ಪಡಿಸಿದ್ದು ರಾಜ್ಯ ಸರಕಾರದ ವೈಫಲ್ಯವಾಗಿದೆ. ಸಮರ್ಪಕವಾಗಿ ಕಾರ್ಯ ನಿರ್ವಹಿಸದ ಅಧಿಕಾರಿಗಳನ್ನ ಬದಲಾಯಿಸುವುದು ರಾಜ್ಯ ಸರಕಾರದ ಜವಾಬ್ದಾರಿ ಎಂದರು. ಕೆಲಸ ಮಾಡದ ಅಧಿಕಾರಿಗಳನ್ನ ವರ್ಗಾಯಿಸಿ ಒಳ್ಳೆಯ ಅಧಿಕಾರಿಗಳನ್ನ ನಿಯೋಜಿಸುವಂತೆ ಅವರು ಶಾಸಕ ಖಾದರ್ ಅವರನ್ನು ಆಗ್ರಹಿಸಿದರು.
ಕೋಟೆಕಾರು ಪ.ಪಂ ಅಧ್ಯಕ್ಷರಾದ ದಿವ್ಯಾ ಶೆಟ್ಟಿ ಮಾತನಾಡಿ ನಮ್ಮ ಆಡಳಿತವು ವಸತಿ ರಹಿತರಿಗೆ ನಿವೇಶನ ನೀಡಲು ಸತತ ಪ್ರಯತ್ನ ನಡೆಸುತ್ತಿದೆಯಾದರೂ ವಿನಾಕಾರಣ ಸುಳ್ಳು ಆರೋಪಗಳನ್ನ ಹೊರಿಸಲಾಗುತ್ತಿದೆ. ಕಳೆದ ಬಾರಿಯ ಆಡಳಿತಾವಧಿಯಲ್ಲಿ ಪಟ್ಟಣ ವ್ಯಾಪ್ತಿಯ ಬಗಂಬಿಲದ ಎರಡು ಎಕರೆ ಸರಕಾರಿ ಜಾಗವನ್ನು ನಮ್ಮ ಆಡಳಿತದ ಗಮನಕ್ಕೆ ಬಾರದಂತೆ ಉಳ್ಳಾಲದ ಕಡಲ್ಕೊರೆತ ಸಂತ್ರಸ್ತರ ನಿವೇಶನಕ್ಕಾಗಿ ಅಧಿಕಾರಿಗಳು ಮೀಸಲಿಟ್ಟಿದ್ದಾರೆ. ನಿವೇಶನ ರಹಿತರಿಗೆ ಹಂಚುವ ನಿಟ್ಟಿನಲ್ಲಿ ಆ ಜಾಗವನ್ನು ಪಟ್ಟಣ ಪಂಚಾಯತ್ ಸುಪರ್ದಿಗೆ ತರಬೇಕೆಂದು ಜಿಲ್ಲಾಧಿಕಾರಿಗೆ ಮನವಿ ನೀಡಿದ್ದೇವೆ. ಕಾಯರ್ ಮಜಲ್ ಎಂಬಲ್ಲಿನ ಹತ್ತು ಎಕರೆಯಷ್ಟು ಜಾಗವನ್ನ ನಿವೇಶನ ರಹಿತರು ಮತ್ತು ತ್ಯಾಜ್ಯ ಘಟಕ ನಿರ್ಮಾಣಕ್ಕೆ ಕಾಯ್ದಿರಿಸಲಾಗಿತ್ತು. ಮನೆ ನಿವೇಶನ ಮತ್ತು ತ್ಯಾಜ್ಯ ವಿಲೇವಾರಿ ಘಟಕವನ್ನು ಒಂದೇ ಸರ್ವೇ ಸಂಖ್ಯೆಯಡಿ ಕಾಯ್ದಿರಿಸಿದ ಕಾರಣ ಸ್ಥಳೀಯರು ತ್ಯಾಜ್ಯ ಘಟಕ ನಿರ್ಮಾಣ ವಿರುದ್ಧ ಹೈಕೋರ್ಟ್ ನಲ್ಲಿ ಆಕ್ಷೇಪಣೆ ಸಲ್ಲಿಸಿ ತಡೆಯಾಜ್ಞೆ ತಂದಿದ್ದರು. ಹೈಕೋರ್ಟ್ ತಡೆಯಾಜ್ಞೆ ತೆರವುಗೊಳಿಸಲು ನಾವು ತ್ಯಾಜ್ಯ ವಿಲೇವಾರಿ ಘಟಕ ನಿರ್ಮಾಣಕ್ಕೆ ಬದಲಿ ಜಾಗ ನೀಡಬೇಕಿದೆ. ಪಟ್ಟಣವು ಜನನಿಬಿಡ ಪ್ರದೇಶವಾದುದರಿಂದ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಜಾಗ ನೀಡಲು ನಮಗೆ ಅಸಾಧ್ಯವಾಗಿದ್ದು, ಹಾಗಾಗಿ ಕಾಯರ್ ಮಜಲು ಪ್ರದೇಶದಲ್ಲೂ ಅರ್ಜಿದಾರರಿಗೆ ನಿವೇಶನ ನೀಡಲು ಅಡಚಣೆಯಾಗಿದೆಯೆಂದರು.
ಬಿಜೆಪಿ ಮಂಗಳೂರು ಮಂಡಲದ ಅಧ್ಯಕ್ಷರಾದ ಜಗದೀಶ್ ಆಳ್ವ ಕುವೆತ್ತಬೈಲು, ಪ್ರ. ಕಾರ್ಯದರ್ಶಿ ದಯಾನಂದ ತೊಕ್ಕೊಟ್ಟು, ಕೋಟೆಕಾರು ಪ.ಪಂ ಉಪಾಧ್ಯಕ್ಷರಾದ ಪ್ರವೀಣ್ ಐ.ಬಗಂಬಿಲ, ಬಿಜೆಪಿ ಪ್ರಮುಖರಾದ ಅತುಲ್ ಬಗಂಬಿಲ ಪತ್ರಿಕಾಗೋಷ್ಟಿಯಲ್ಲಿ ಉಪಸ್ಥಿತರಿದ್ದರು.
13-05-26 10:18 pm
HK News Desk
3 ಸಾವಿರ ರೂ. ಬಿಲ್ ಬಾಕಿ; 8 ತಿಂಗಳಿಂದ ಕತ್ತಲಲ್ಲಿ...
12-05-26 02:26 pm
ಶೃಂಗೇರಿ ಕ್ಷೇತ್ರದ ಅಂಚೆ ಮತ ಗೊಂದಲ; ಕಾಂಗ್ರೆಸಿನ ರಾ...
11-05-26 09:36 pm
D Sudhakar Death: ಚಿತ್ರದುರ್ಗದ ಜನಾನುರಾಗಿ ಶಾಸಕ,...
10-05-26 01:04 pm
25ನೇ ವಿವಾಹ ವಾರ್ಷಿಕೋತ್ಸವದ ದಿನವೇ ಭೀಕರ ಅಪಘಾತ ;...
09-05-26 10:41 pm
13-05-26 06:42 pm
HK News Staffer
ಅಗ್ನಿ ಪರೀಕ್ಷೆಯಲ್ಲಿ ಗೆದ್ದ ವಿಜಯ್; ನಿರೀಕ್ಷೆಗೂ ಮ...
13-05-26 02:26 pm
ಎಐಎಡಿಎಂಕೆ ಪಕ್ಷವೇ ಇಬ್ಭಾಗ ; 30 ಶಾಸಕರ ಬಣ ವಿಜಯ್ ಸ...
12-05-26 08:15 pm
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ; ಮೇ 3ರಂದು ನಡೆದಿದ...
12-05-26 08:01 pm
ವಿಜಯ್ ಗೆಲುವು ಭವಿಷ್ಯ ನುಡಿದಿದ್ದ ಜ್ಯೋತಿಷಿಗೆ ಸಿಎಂ...
12-05-26 05:15 pm
13-05-26 11:02 pm
HK News Desk
Gruha Lakshmi Mangalore: ಸತ್ತವರ ಖಾತೆಗೂ ಗೃಹಲಕ್...
13-05-26 04:04 pm
NEET ಪರೀಕ್ಷೆ ರದ್ದು ; 22.5 ಲಕ್ಷ ವಿದ್ಯಾರ್ಥಿಗಳ ಭ...
12-05-26 06:26 pm
ಇಸ್ರೇಲ್ಗೆ ತೆರಳಲು ಸಿದ್ಧತೆಯಲ್ಲಿದ್ದ ಉಳ್ಳಾಲದ ವ್ಯ...
12-05-26 12:05 am
ಕುತ್ತಾರಿನಲ್ಲಿ ಕೊರಗಜ್ಜ ಸರ್ಕಲ್ ನಿರ್ಮಾಣ ; ಯಾರೋ ಹ...
09-05-26 11:51 pm
13-05-26 09:25 pm
HK News Desk
ಹಾಸನದಲ್ಲಿ ಜಿಮ್ ಕಿರಿಕ್; ವರ್ಕೌಟ್ ವೇಳೆ ಭುಜ ಟಚ್ ಆ...
13-05-26 06:36 pm
ಚಾರ್ಜ್ಗೆ ಹಾಕಿದ್ದ ಎಲೆಕ್ಟ್ರಿಕಲ್ ಬೈಕ್ ಸ್ಫೋಟ; ಮ...
13-05-26 03:39 pm
ಕುತ್ತಾರು ಜಂಕ್ಷನ್ನಲ್ಲಿ ಕೊರಗಜ್ಜನ ವೃತ್ತ ನಿರ್ಮಾಣಕ...
13-05-26 12:39 pm
ಚಂದನವನಕ್ಕೆ ಆಘಾತ; ಮಿಲನ, ಹಿಟ್ಲರ್ ಕಲ್ಯಾಣ ಖ್ಯಾತಿಯ...
13-05-26 11:44 am