ಬ್ರೇಕಿಂಗ್ ನ್ಯೂಸ್
03-09-26 03:55 pm HK News Staffer ಕರಾವಳಿ
ಮಂಗಳೂರು , ಸೆ.3: ನಗರದ ಅಳಿವೆ ಬಾಗಿಲಿನಲ್ಲಿ ಮರಳಿನ ದಿಬ್ಬಕ್ಕೆ ಬಡಿದು ಎರಡು ಮೀನುಗಾರಿಕಾ ಟ್ರಾಲ್ ಬೋಟ್‌ಗಳು ಮುಳುಗಡೆಯಾಗಿ, ಅವುಗಳಲ್ಲಿದ್ದ 12 ಮಂದಿ ಮೀನುಗಾರರು ಅಪಾಯಕ್ಕೆ ಸಿಲುಕಿದ ಘಟನೆ ನಡೆದಿದೆ.
ಮರ್ಮೆಡ್ ಹಾಗೂ ಅನೀದ್ ಹೆಸರಿನ ಎರಡು ಟ್ರಾಲ್ ಬೋಟ್‌ಗಳು ಆಳ ಸಮುದ್ರದಲ್ಲಿ ಮೀನುಗಾರಿಕೆ ನಡೆಸಿ ಮಂಗಳೂರಿನತ್ತ ವಾಪಸ್ ಬರುತ್ತಿದ್ದ ವೇಳೆ ಅಳಿವೆ ಬಾಗಿಲಿನಲ್ಲಿ ಮರಳಿನ ದಿಬ್ಬಕ್ಕೆ ಬಡಿದಿವೆ. ಮರಳಿನ ದಿಬ್ಬಕ್ಕೆ ಬಡಿದ ಪರಿಣಾಮ ಬೋಟ್‌ಗಳ ತಳಭಾಗ ಜಖಂಗೊಂಡಿದ್ದು, ಅದರ ಮೂಲಕ ನೀರು ಒಳನುಗ್ಗಿದೆ. ಕೆಲವೇ ಹೊತ್ತಿನಲ್ಲಿ ಬೋಟ್‌ಗಳಲ್ಲಿ ನೀರು ತುಂಬಿ ಮುಳುಗಡೆಯಾಗಿವೆ.
ಇತರ ಮೀನುಗಾರರಿಂದ 12 ಮಂದಿ ರಕ್ಷಣೆ ;
ಎರಡು ಬೋಟ್‌ಗಳಲ್ಲಿ ಒಟ್ಟು 12 ಮಂದಿ ಮೀನುಗಾರರು ಇದ್ದು, ಬೋಟ್‌ಗಳು ಮುಳುಗುತ್ತಿದ್ದಂತೆ ಅವರು ಅಪಾಯಕ್ಕೆ ಸಿಲುಕಿದ್ದರು. ಇದೇ ವೇಳೆ ಮೀನುಗಾರಿಕೆಯಿಂದ ವಾಪಸ್ ಬರುತ್ತಿದ್ದ ಇತರ ಬೋಟ್‌ಗಳಲ್ಲಿದ್ದ ಮೀನುಗಾರರು ತಕ್ಷಣ ನೆರವಿಗೆ ಧಾವಿಸಿ ಎಲ್ಲ 12 ಮಂದಿಯನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿಯಾಗಿಲ್ಲ. ಆದರೆ ಎರಡು ಟ್ರಾಲ್ ಬೋಟ್‌ಗಳು ಮುಳುಗಡೆಯಾಗಿರುವುದರಿಂದ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ ಎಂದು ತಿಳಿದುಬಂದಿದೆ.

ಅಳಿವೆ ಬಾಗಿಲಿನಲ್ಲಿ ಹೂಳೆತ್ತುವ ಕಾರ್ಯ ಸಮರ್ಪಕವಾಗಿ ನಡೆಯದಿರುವುದೇ ಇಂತಹ ಘಟನೆಗಳಿಗೆ ಪ್ರಮುಖ ಕಾರಣವಾಗುತ್ತಿದೆ ಎಂಬ ಆತಂಕ ಮೀನುಗಾರರಲ್ಲಿ ವ್ಯಕ್ತವಾಗಿದೆ. ಕಳೆದ ಸುಮಾರು 30 ವರ್ಷಗಳಿಂದ ಅಳಿವೆ ಬಾಗಿಲಿನಲ್ಲಿ ಹೂಳೆತ್ತುವ ಕಾರ್ಯ ನಡೆದಿಲ್ಲ ಎನ್ನಲಾಗಿದ್ದು, ಪರಿಣಾಮವಾಗಿ ಇಲ್ಲಿ ಬೃಹತ್ ಪ್ರಮಾಣದ ಮರಳಿನ ದಿಬ್ಬಗಳು ನಿರ್ಮಾಣಗೊಂಡಿವೆ.
ಮೀನುಗಾರಿಕಾ ಬೋಟ್‌ಗಳು ಸಮುದ್ರಕ್ಕೆ ತೆರಳಲು ಹಾಗೂ ವಾಪಸ್ ಬರಲು ಬಳಸುವ ಪ್ರಮುಖ ಮಾರ್ಗದಲ್ಲೇ ಮರಳಿನ ದಿಬ್ಬಗಳು ನಿರ್ಮಾಣವಾಗಿರುವುದರಿಂದ ಅಳಿವೆ ಬಾಗಿಲು ಅಪಾಯಕಾರಿ ಮಾರ್ಗವಾಗಿ ಪರಿಣಮಿಸಿದೆ. ಪ್ರತಿ ಬಾರಿ ಮೀನುಗಾರಿಕೆ ಮುಗಿಸಿ ವಾಪಸ್ ಬರುವಾಗ ಬೋಟ್‌ಗಳು ಈ ಅಪಾಯಕಾರಿ ಮಾರ್ಗವನ್ನು ದಾಟಬೇಕಾಗಿದ್ದು, ಮರಳಿನ ದಿಬ್ಬಗಳಿಗೆ ಬಡಿದು ಬೋಟ್‌ಗಳು ಜಖಂಗೊಳ್ಳುವ ಘಟನೆಗಳು ನಡೆಯುತ್ತಿವೆ. ಹೀಗಾಗಿ ಅಳಿವೆ ಬಾಗಿಲಿನಲ್ಲಿ ಶಾಶ್ವತ ಪರಿಹಾರಕ್ಕಾಗಿ ತಕ್ಷಣ ಹೂಳೆತ್ತುವ ಕಾಮಗಾರಿ ಕೈಗೊಳ್ಳಬೇಕು ಎಂಬುದು ಮಂಗಳೂರಿನ ಮೀನುಗಾರರ ಆಗ್ರಹವಾಗಿದೆ.
23-09-26 11:02 pm
HK News Desk
ಬರ ಪಟ್ಟಿಯಿಂದ ಇಂಡಿ, ಚಡಚಣ ಕೈಬಿಟ್ಟಿದ್ದಕ್ಕೆ ಅಸಮಾಧ...
23-09-26 05:14 pm
ಕೆಪಿಎಸ್ಸಿಯಲ್ಲಿ ಹಗರಣ ತನಿಖೆಗೆ ಎಸ್ಐಟಿ ; ಕಾನೂನು...
23-09-26 11:05 am
ಸೆ.26ರಿಂದ ಸತತ 5 ದಿನ ಬ್ಯಾಂಕ್ಗಳು ಬಂದ್ ; ATM, U...
23-09-26 09:28 am
ತೀವ್ರ ಆರ್ಥಿಕ ಮುಗ್ಗಟ್ಟಿನಲ್ಲಿ ಡಿಕೆಶಿ ಸರ್ಕಾರ ! ಹ...
22-09-26 08:58 pm
23-09-26 04:21 pm
HK News Staffer
ಪಶುವೈದ್ಯರ ಹುದ್ದೆಗೆ ₹80 ಲಕ್ಷದ ಡೀಲ್ ಆರೋಪ: ಪ್ರಶ್...
22-09-26 09:42 am
ಡಿಸೆಂಬರ್ ಒಳಗೆ ಸ್ಥಳೀಯ ಸಂಸ್ಥೆಗಳ ಚುನಾವಣೆ ; ಇವಿಎಂ...
19-09-26 05:40 pm
Mamata Banerjee, Sanchita Pradhan, Rejinagar:...
19-09-26 03:37 pm
ಮುಂಬೈನಲ್ಲಿ ಕುಡಿಯುವ ನೀರಿಗೆ ತೀವ್ರ ಬರ ; ಸಮುದ್ರದ...
13-09-26 09:00 pm
24-09-26 06:26 pm
HK News Staffer
ಬಂಗಾಳ ವಾಯುಭಾರ ಕುಸಿತ ; ಕರಾವಳಿ, ಮಲೆನಾಡು, ದಕ್ಷಿಣ...
24-09-26 05:55 pm
ಕುಕ್ಕೆ ಸುಬ್ರಹ್ಮಣ್ಯಕ್ಕೆ ಮಾಜಿ ಕ್ರಿಕೆಟಿಗ ರವಿ ಶಾಸ...
23-09-26 10:47 pm
ಉತ್ತರಾಖಂಡದ ಯಮುನೋತ್ರಿಯಲ್ಲಿ ಕುಂಪಲದ ವ್ಯಕ್ತಿ ಹೃದಯ...
23-09-26 09:55 am
ಚಾರ್ಮಾಡಿ ಘಾಟ್ಗೆ ಅಭಿವೃದ್ಧಿಯ ಹೆಸರಿನಲ್ಲಿ ಕುತ್ತು...
23-09-26 09:30 am
24-09-26 05:10 pm
HK News Staffer
ಸೈಬರ್ ಖದೀಮರ ಹೊಸ ಹೊಸ ತಂತ್ರ: ಒಂದೇ ದಿನ ಮಂಗಳೂರಿನಲ...
24-09-26 11:10 am
bus fire, Greater Noida: ಚಲಿಸುತ್ತಿದ್ದ ಸ್ಲೀಪರ್...
24-09-26 10:09 am
ಶಿರ್ವದಲ್ಲಿ ಭಾರೀ ಪ್ರಮಾಣದ ಗಾಂಜಾ, ಡ್ರಗ್ಸ್ ವಶಕ್ಕೆ...
23-09-26 09:28 pm
ಕರ್ತವ್ಯ ಲೋಪ, ಲಂಚಬಾಕತನ, ಅನುಚಿತ ವರ್ತನೆ ಬಗ್ಗೆ ದೂ...
23-09-26 09:24 pm