ಬಿಜೆಪಿಯವರೇ ಭ್ರಷ್ಟಾಚಾರದಲ್ಲಿ ಕಂಠಪೂರ್ತಿ ಮುಳುಗಿದ್ದಾರೆ, ಇವರೇನು ಸತ್ಯ ಹರಿಶ್ಚಂದ್ರನ ಮೊಮ್ಮಕ್ಕಳಾ..? ಇವರದ್ದು ಪೇಯ್ಡ್ ಪಾದಯಾತ್ರೆ ; ಬಿಕೆ ಹರಿಪ್ರಸಾದ್ ಟೀಕೆ

07-09-26 01:22 pm       HK News Staffer   ಕರಾವಳಿ

ಬಿಜೆಪಿಯವರು ಭ್ರಷ್ಟಾಚಾರದಲ್ಲಿ ಕಂಠಪೂರ್ತಿ ಮುಳುಗಿದ್ದಾರೆ, ಇವರೇನು ಸತ್ಯ ಹರಿಶ್ಚಂದ್ರನ ಮೊಮ್ಮಕ್ಕಳಾ.. ಇವರದ್ದು ಪೇಯ್ಡ್ ಪಾದಯಾತ್ರೆ ಎಂದು ಕೆಪಿಸಿಸಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಟೀಕಿಸಿದ್ದಾರೆ. ‌

ಮಂಗಳೂರು, ಸೆ.7: ಬಿಜೆಪಿಯವರು ಭ್ರಷ್ಟಾಚಾರದಲ್ಲಿ ಕಂಠಪೂರ್ತಿ ಮುಳುಗಿದ್ದಾರೆ, ಇವರೇನು ಸತ್ಯ ಹರಿಶ್ಚಂದ್ರನ ಮೊಮ್ಮಕ್ಕಳಾ.. ಇವರದ್ದು ಪೇಯ್ಡ್ ಪಾದಯಾತ್ರೆ ಎಂದು ಕೆಪಿಸಿಸಿ ಅಧ್ಯಕ್ಷ ಬಿಕೆ ಹರಿಪ್ರಸಾದ್ ಟೀಕಿಸಿದ್ದಾರೆ. ‌

ಬಳ್ಳಾರಿಗೆ ಬಿಜೆಪಿ ಪಾದಯಾತ್ರೆ ಕೈಗೊಂಡಿರುವ ವಿಚಾರದಲ್ಲಿ ಪ್ರತಿಕ್ರಿಯಿಸಿದ ಅವರು, ಬಿಜೆಪಿಯವರ ಆರೋಗ್ಯ ಕೆಟ್ಟಿತ್ತು. ಅವರಲ್ಲಿನ ನಾಯಕತ್ವ ಗೊಂದಲದಿಂದ ಬಹಳಷ್ಟು ಜನ ಪಾದಯಾತ್ರೆಗೆ ಬಂದಿಲ್ಲ‌. ನಾಯಕತ್ವ ಪ್ರತಿಪಾದನೆಗಾಗಿ ಈಗ ಪಾದಯಾತ್ರೆ ಮಾಡುತ್ತಿದ್ದಾರೆ. 

ಇವರಿಗೆ ವಿಧಾನಪರಿಷತ್, ವಿಧಾನಸಭೆಯಲ್ಲಿ ಚರ್ಚೆ ಮಾಡೋಕೆ ಏನಾಗಿತ್ತು.‌ ಭ್ರಷ್ಟಾಚಾರದ ಬಗ್ಗೆ ಮಾತಾಡೋಕೆ ಇವರ ಮನೆ ಪಕ್ಕದಲ್ಲಿ ಸತ್ಯಹರಿಶ್ಚಂದ್ರ ಇರೋದಾ? ಇವರು ಭ್ರಷ್ಟಾಚಾರದಲ್ಲಿ ಕಂಠಪೂರ್ತಿ ಮುಳುಗಿದ್ದಾರೆ. ಇವರು ಸತ್ಯ ಹರಿಶ್ಚಂದ್ರರ ಮೊಮ್ಮಕ್ಕಳಾದ್ರೆ ಭ್ರಷ್ಟಾಚಾರದ ಬಗ್ಗೆ ಮಾತನಾಡಬಹುದು. ಇವರೇ ಕಂಠಪೂರ್ತಿ ಭ್ರಷ್ಟಾಚಾರದಲ್ಲಿ ಮುಳುಗಿರೋರು. 

ಚೆಕ್ ನಲ್ಲಿ ಲಂಚ ಪಡೆದ ವಿಶ್ವದಲ್ಲೇ ಪ್ರಥಮರು. ಬಿಜೆಪಿಯವರಿಗೆ ಸಂಪೂರ್ಣ ನಿರುದ್ಯೋಗ ಇದೆ. ನಾಯಕತ್ವ ಪುನಃಸ್ಥಾಪನೆಗೆ ಮರಿ ಯಡಿಯೂರಪ್ಪರಿಂದ ಪಾದಯಾತ್ರೆ ಮಾಡುತ್ತಿದ್ದಾರೆ. ಬಿಜೆಪಿಯವರದ್ದು ಪೇಯ್ಡ್ ಪಾದಯಾತ್ರೆ. ಜನರ ಮನ್ನಣೆ ಪಡೆದ ಪಾದಯಾತ್ರೆ ಅಲ್ಲ ಎಂದು ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಿ.ಕೆ ಹರಿಪ್ರಸಾದ್ ಟೀಕಿಸಿದ್ದಾರೆ. ‌