ಬ್ರೇಕಿಂಗ್ ನ್ಯೂಸ್
15-09-26 05:29 pm HK News Staffer ಕರಾವಳಿ
ಮಂಗಳೂರು, ಸೆ.15: ತುಳು ರಂಗಭೂಮಿ ಹಾಗೂ ಚಿತ್ರರಂಗದ ಜನಪ್ರಿಯ ಹಾಸ್ಯ ಕಲಾವಿದ ಅರವಿಂದ್ ಬೋಳಾರ್ ಅವರು ಖಾಸಗಿ ಕಾರ್ಯಕ್ರಮವೊಂದರಲ್ಲಿ ನೀಡಿರುವ ಹೇಳಿಕೆಯ ವೀಡಿಯೋ ತುಣುಕೊಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿದ್ದು, ಮುಸ್ಲಿಮರೇ ತನಗೆ ಫಸ್ಟ್ ಎಂದು ಹೇಳಿರುವುದಕ್ಕೆ ಕರಾವಳಿ ಭಾಗದಲ್ಲಿ ಪರ-ವಿರೋಧಕ್ಕೆ ಕಾರಣವಾಗಿದೆ. ಬೋಳಾರ್ ಹೇಳಿಕೆಗೆ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದರೆ, ಮತ್ತೊಂದೆಡೆ ಅವರ ಹೇಳಿಕೆಯನ್ನು ಅಭಿಮಾನಿಗಳು ಸಮರ್ಥಿಸಿಕೊಂಡಿದ್ದಾರೆ.
“ಎಂಕ್ ಮುಸ್ಲಿಮ್ ಫಸ್ಟ್ ” ಎಂದ ಬೋಳಾರ್ !
ಖಾಸಗಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿರುವ ಅರವಿಂದ್ ಬೋಳಾರ್, “ನನ್ನ ಸಿನಿಮಾಗಳಲ್ಲಿ ಹಲವು ಬಾರಿ ಮುಸ್ಲಿಮರ ಪಾತ್ರಗಳನ್ನು ಮಾಡಿಸಿದ್ದಾರೆ. ಅದಕ್ಕಾಗಿ ಒಳ್ಳೆಯ ಮೆಚ್ಚುಗೆಯೂ ಸಿಕ್ಕಿದೆ. ನನಗೆ ಮುಸ್ಲಿಮರೇ ಮೊದಲು. ನನ್ನನ್ನು ಹೆಚ್ಚು ಇಷ್ಟಪಟ್ಟಿದ್ದೇ ಮುಸ್ಲಿಮರು. ನಾನು ಯಾವುದೇ ವೇದಿಕೆಯಲ್ಲಿ ಕೇಳಿದರೂ ಅದನ್ನೇ ಹೇಳುತ್ತೇನೆ” ಎಂದು ಹೇಳಿರುವುದು ವೈರಲ್ ಆಗಿರುವ 30 ಸೆಕಂಡ್ ವೀಡಿಯೋದಲ್ಲಿ ದಾಖಲಾಗಿದೆ. ಬೋಳಾರ್ ಅವರ ಈ ಹೇಳಿಕೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹಂಚಿಕೆಯಾಗುತ್ತಿದ್ದು, ಹೇಳಿಕೆಯ ಅರ್ಥ ಮತ್ತು ಸಂದರ್ಭದ ಕುರಿತು ಚರ್ಚೆಗಳು ನಡೆಯುತ್ತಿವೆ.
ಹೇಳಿಕೆಗೆ ಹಲವರಿಂದ ಆಕ್ಷೇಪ
ಬೋಳಾರ್ ಅವರ ಹೇಳಿಕೆಗೆ ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. “ಒಬ್ಬ ಕಲಾವಿದ ಬೆಳೆಯಲು ಹಾಗೂ ಈ ಮಟ್ಟಕ್ಕೆ ತಲುಪಲು ಸರ್ವ ಧರ್ಮಗಳ ಅಭಿಮಾನಿಗಳ ಕೊಡುಗೆ ಮತ್ತು ಪ್ರೀತಿ ಕಾರಣವಾಗಿರುತ್ತದೆ. ಹೀಗಿರುವಾಗ ನಿರ್ದಿಷ್ಟ ಒಂದು ಸಮುದಾಯವನ್ನು ಮಾತ್ರ ಉಲ್ಲೇಖಿಸಿ ‘ಅವರೇ ಮೊದಲು’ ಎಂದು ಹೇಳುವುದು ಸರಿಯಲ್ಲ” ಎಂದು ಕೆಲವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು ಅರವಿಂದ್ ಬೋಳಾರ್ ಅವರಿಗೆ ನೇರವಾಗಿ ಕರೆ ಮಾಡಿ ಹೇಳಿಕೆ ಕುರಿತು ತರಾಟೆಗೆ ತೆಗೆದುಕೊಂಡಿದ್ದಾರೆ. ನೀವು ಬಹಿರಂಗ ಕ್ಷಮೆ ಯಾಚಿಸಬೇಕೆಂದು ಕುಂಬಳೆಯಿಂದ ಫೋನ್ ಮಾಡಿದ್ದೆಂದು ಹೇಳಿರುವ ವ್ಯಕ್ತಿಯ ಆಡಿಯೋ ವೈರಲ್ ಆಗಿದೆ.
ಇನ್ನೊಂದೆಡೆ, ಬೋಳಾರ್ ಅವರ ಹೇಳಿಕೆಯನ್ನು ಸಮರ್ಥಿಸಿಕೊಂಡು ಅನೇಕ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯಿಸಿದ್ದಾರೆ. “ಇದು ಸೌಹಾರ್ದ ಉದ್ದೇಶದಿಂದ ಆಡಿದ ಮಾತು. ತಮ್ಮ ಮೇಲೆ ಪ್ರೀತಿ ತೋರಿಸಿದ ಅಭಿಮಾನಿಗಳನ್ನು ಸ್ಮರಿಸುವ ನಿಟ್ಟಿನಲ್ಲಿ ಅವರು ಮಾತನಾಡಿದ್ದಾರೆಯೇ ಹೊರತು, ಯಾವುದೇ ಧರ್ಮವನ್ನು ಕೀಳಾಗಿ ಕಾಣುವ ಉದ್ದೇಶ ಅವರಿಗಿಲ್ಲ” ಎಂದು ಅವರ ಪರವಾಗಿ ಅಭಿಮಾನಿಗಳು ವಾದಿಸಿದ್ದಾರೆ.
ಅರವಿಂದ ಬೋಳಾರ್ ಸಾಂದರ್ಭಿಕವಾಗಿ ಈ ಮಾತು ಆಡಿದ್ದರೂ ಅದನ್ನು ಕಟ್ ಮಾಡಿ ಜಾಲತಾಣದಲ್ಲಿ ವೈರಲ್ ಮಾಡಲಾಗಿದೆ. ಮುಸ್ಲಿಮರು ಫಸ್ಟ್ ಅಂತಾದರೆ ಹಿಂದುಗಳು ನೆಸ್ಟ್ ಅಂತಲಾ ಎಂದು ಕೆಲವರು ಫೋನ್ ಮಾಡಿದವರು ಪ್ರಶ್ನೆ ಮಾಡಿದ್ದಾರೆ. ಬೋಳಾರ್ ಅವರು ಅನೇಕ ಮುಸ್ಲಿಂ ಪಾತ್ರಗಳನ್ನು ಮಾಡಿದ್ದು ಅದಕ್ಕೆ ಮುಸ್ಲಿಮರಿಂದಲೂ ಮೆಚ್ಚುಗೆ ಪಾತ್ರವಾಗಿದೆ. ಕರಾವಳಿಯ ಮುಸ್ಲಿಮರು ಅವರನ್ನು ದುಬೈ, ಸೌದಿಗೆ ಕರೆಸಿ ಪ್ರದರ್ಶನ ಮಾಡಿಸಿದ್ದಾರೆ. ಸನ್ಮಾನ, ಗೌರವವನ್ನೂ ತೋರಿಸಿದ್ದಾರೆ. ಆದರೆ ಹಿಂದು - ಮುಸ್ಲಿಮರ ಆದರದ ಬಗ್ಗೆ ಇವರೇ ಫಸ್ಟ್ ಎಂದಿದ್ದು ಕೆಲವರ ಸಿಟ್ಟಿಗೆ ಗುರಿಯಾಗಿದೆ.
A video clip of popular Tulu theatre and film comedian Aravind Bolar making a remark about Muslims during a private event has gone viral on social media, triggering mixed reactions across the coastal region. While some have objected to his statement, others have come out in support of the actor.
15-09-26 04:46 pm
HK News Staffer
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
ಬಿಜೆಪಿ ಅಧಿಕಾರಕ್ಕೆ ಬರಲು ನನ್ನ ಸ್ಥಾನ ಬಿಟ್ಟುಕೊಟ್ಟ...
12-09-26 05:56 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
15-09-26 05:29 pm
HK News Staffer
U T Khader, KDP Meeting, Sudheer Reddy Ips: :...
15-09-26 05:27 pm
ಮಂಗಳೂರು ವಿಮಾನ ನಿಲ್ದಾಣಕ್ಕೆ ‘ಕೋಟಿ-ಚೆನ್ನಯ’ ಹೆಸರು...
15-09-26 12:50 pm
ಕರಾವಳಿ ಅಭಿವೃದ್ಧಿಗೆ ಡಿಕೆಶಿ ಸರ್ಕಾರದ ಮಹತ್ವದ ಹೆಜ್...
15-09-26 09:46 am
ತುಳುನಾಡಿನಲ್ಲಿ ವಿಭಿನ್ನ ಗಣೇಶ ಚತುರ್ಥಿ ; ಮಣ್ಣಿನ ಮ...
14-09-26 10:01 pm
15-09-26 12:55 pm
HK News Staffer
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm
ಗಣೇಶ ಹಬ್ಬದ ಬೆನ್ನಲ್ಲೇ ಕರ್ನಾಟಕದಲ್ಲಿ ಸರಣಿ ದುರಂತ:...
15-09-26 12:41 pm
ಗಣೇಶೋತ್ಸವದ ಸಂಭ್ರಮದ ನಡುವೆ ಭೀಕರ ದುರಂತ: ಅಗ್ನಿ ಅವ...
15-09-26 10:31 am
ಜೈಲಿನಲ್ಲಿದ್ದರೂ ಹಳೆ ಚಾಳಿ ಬಿಡದ ಪ್ರಜ್ವಲ್ ರೇವಣ್ಣ...
12-09-26 07:41 pm