ಬ್ರೇಕಿಂಗ್ ನ್ಯೂಸ್
28-09-26 02:10 pm HK News Staffer ಕರಾವಳಿ
ಮಂಗಳೂರು, ಸೆ.28: ಧರ್ಮಸ್ಥಳ ಸೌಜನ್ಯಾ ಕೊಲೆ ಪ್ರಕರಣದ ಮರುತನಿಖೆಗೆ ರಾಜ್ಯ ಸರ್ಕಾರ ರಚಿಸಿರುವ ಎಸ್ಐಟಿ ಬಗ್ಗೆ ಆರ್ ಎಸ್ ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಮಗೆ ಎಸ್ಐಟಿ ಬಗ್ಗೆ ಸಣ್ಣ ಸಂಶಯ ಇದೆ. ಎಸ್ ಐ ಟಿ ರಚನೆಯಾಗಿರೋದು ಒಳ್ಳೇದು. ಅದರಲ್ಲಿರುವ ಎಲ್ಲಾ ಅಧಿಕಾರಿಗಳು ಪರಿಪೂರ್ಣ ಇಲ್ಲ ಅನ್ನೋ ಸಂಶಯ ಬಂದಿದೆ ಎಂದು ಹೇಳಿದ್ದಾರೆ.
ಮಂಗಳೂರು ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಒಳ್ಳೆಯವರು. ಅವರು ಆ ಕಡೆ ಈ ಕಡೆ ಹೋಗ್ಲಿಕ್ಕಿಲ್ಲ. ಆದರೆ ಉಳಿದವರ ಬಗ್ಗೆ ನಮಗೆ ಸಂಶಯ ಇದೆ. ಅಧಿಕಾರಿಗಳು ಪ್ರಾಮಾಣಿಕವಾಗಿ ತನಿಖೆ ಮಾಡಲಿ. 14 ವರ್ಷಗಳಿಂದ ಸೌಜನ್ಯಳ ಆತ್ಮ ಓಡಾಡುತ್ತಿದೆ. ಬೇರೆ ಯಾವ ಪ್ರಕರಣವೂ ಈ ರೀತಿಯಾಗಿಲ್ಲ. ಅಧಿಕಾರಿಗಳು ನ್ಯಾಯ ಕೊಡುವ ಕೆಲಸ ಮಾಡಲಿ. ಎಸ್ಐಟಿಯವರ ಬಳಿ ನನ್ನ ವಿನಂತಿ ಇಷ್ಟೇ. ಅಧಿಕಾರಿಗಳು ಆ ಕಡೆ, ಈ ಕಡೆ ನೋಡದೆ ಸತ್ಯ ಏನೆಂದು ಹುಡುಕಲಿ. ನೂರಕ್ಕೆ ನೂರು ಸತ್ಯ ಸಿಗುತ್ತದೆ ಎಂದು ಪ್ರಭಾಕರ ಭಟ್ ಹೇಳಿದ್ದಾರೆ.
ಕೋರ್ಟ್ ಈ ಬಾರಿ ಸ್ಪಷ್ಟವಾಗಿಯೇ ಹೇಳಿದೆ. ತನಿಖೆಯಲ್ಲಿ ಸಂತೋಷ್ ರಾವ್ ನನ್ನ ಸೇರಿಸಬೇಡಿ, ಈ ಹಿಂದೆ ತನಿಖೆ ಮಾಡಿದ ಅಧಿಕಾರಿಗಳನ್ನ ಸೇರಿಸಬೇಡಿ ಎಂದು ಹೇಳಿದೆ. ಅಪರಾಧಿಗಳನ್ನ ಹುಡುಕುವ ತಾಕತ್ತು ಪೊಲೀಸರಿಗೆ ಇದೆ. ಮಂಗಳೂರು ಕಮಿಷನರ್ ರೀತಿಯ ಬಲವಾದ ಇನ್ನೊಂದಷ್ಟು ಅಧಿಕಾರಿಗಳನ್ನ ಇಟ್ಟುಕೊಳ್ಳಬೇಕಿತ್ತು. ಆಗ ಎಸ್ಐಟಿ ತಂಡದ ಬಗ್ಗೆ ಜನರಿಗೆ ವಿಶ್ವಾಸ ಬರ್ತಾ ಇತ್ತು. ತಂಡದಲ್ಲಿ ಇರುವ ಉಳಿದವರು ಏನು ಅಂತಾ ಜನರಿಗೂ ಗೊತ್ತು, ನಿಮಗೂ ಗೊತ್ತಿದೆ. ಆ ರೀತಿಯ ಸಣ್ಣ ಒಂದು ಗೊಂದಲ ಇದೆ ಎಂದು ಎಸ್ಐಟಿ ತಂಡದ ಬಗ್ಗೆ ಕಲ್ಲಡ್ಕ ಪ್ರಭಾಕರ ಭಟ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
RSS leader Kalladka Prabhakar Bhat has expressed reservations about the Special Investigation Team (SIT) constituted by the Karnataka government to conduct a fresh investigation into the 2012 Sowjanya rape and murder case in Dharmasthala.
27-09-26 03:21 pm
HK News Desk
ಬೆಂಗಳೂರಿಗೆ ಬಂದ ಶಾಸಕರೆಲ್ಲ ಎರಡೆರಡು ಮದುವೆಯಾಗಿದ್ದ...
25-09-26 04:49 pm
ರಾಜ್ಯ ಸರ್ಕಾರಕ್ಕೆ ಆರ್ಥಿಕ ಸಂಕಷ್ಟ ; ಬೆಳಗಾವಿ ವಿಟಿ...
25-09-26 03:11 pm
ಕರಾವಳಿಯಲ್ಲಿ ನೀರು ಸಂರಕ್ಷಣೆಗೆ ವೈಜ್ಞಾನಿಕ ಮಾಸ್ಟರ್...
23-09-26 11:02 pm
ಬರ ಪಟ್ಟಿಯಿಂದ ಇಂಡಿ, ಚಡಚಣ ಕೈಬಿಟ್ಟಿದ್ದಕ್ಕೆ ಅಸಮಾಧ...
23-09-26 05:14 pm
26-09-26 07:01 pm
HK News Staffer
ವೃದ್ಧಾಶ್ರಮ ಸೇರಿದ ವಿನೋದ್ ಕಾಂಬ್ಳಿ: ವಿಡಿಯೋ ವೈರಲ್...
26-09-26 11:51 am
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಂದ್ರ ಕುಮಾರ್ ದೇಶದ್ರ...
24-09-26 09:42 pm
"ನಾವು ಚುನಾವಣೆ ಗೆದ್ದರೆ, ಟೆಕ್ಸಾಸ್ ಹನುಮಾನ್ ವಿಗ್...
23-09-26 04:21 pm
ಪಶುವೈದ್ಯರ ಹುದ್ದೆಗೆ ₹80 ಲಕ್ಷದ ಡೀಲ್ ಆರೋಪ: ಪ್ರಶ್...
22-09-26 09:42 am
28-09-26 02:13 pm
HK News Staffer
ಸೌಜನ್ಯಾ ಪ್ರಕರಣದ ಎಸ್ಐಟಿ ಬಗ್ಗೆ ಆರೆಸ್ಸೆಸ್ ಮುಖಂಡ...
28-09-26 02:10 pm
15 ದಿನಗಳಲ್ಲಿ 51 ಶಾಲೆಗಳಿಗೆ ಭೇಟಿ ; 4,500ಕ್ಕೂ ಹೆ...
28-09-26 10:53 am
ಅಪರಾಧಗಳ ಖಂಡನೆಗೆ ಧರ್ಮ ಅಡ್ಡಿಯಾಗಬಾರದು ! ಪೊಲೀಸ್ ಕ...
27-09-26 11:31 pm
ವಿದ್ಯಾರ್ಥಿ ಸಂಘದ ಪದಗ್ರಹಣ ; ಮೊದಲ ಮಹಡಿಯ ಕಾಂಕ್ರೀಟ...
27-09-26 10:59 am
28-09-26 03:08 pm
HK News Staffer
ಹೆಲ್ಮೆಟ್ ರಹಿತ ಚಾಲನೆಯಿಂದ ಹೆಚ್ಚುತ್ತಿರುವ ಸಾವು- ನ...
27-09-26 08:06 pm
Suhas Shetty: ಸುಹಾಸ್ ಶೆಟ್ಟಿ ಹತ್ಯೆಗೆ ಪ್ರತೀಕಾರಕ...
27-09-26 06:10 pm
ಶಾರ್ಜಾದಲ್ಲಿ ಹತ್ಯೆಯಾದ ಕುಂದಾಪುರದ ವ್ಯಕ್ತಿಯ ಶವ ಹು...
25-09-26 04:53 pm
ಕೋಟೇಶ್ವರ ಜೋಗಿ ವಿವಿಧೋದ್ದೇಶ ಸಹಕಾರಿ ಸಂಘದ ಸಿಇಓ ನೇ...
25-09-26 11:17 am