ಬಿಜೆಪಿಯವರು ಅಧಿಕಾರದಲ್ಲಿದ್ದಾಗ ಕರಾವಳಿಗೇನು ಕೊಟ್ಟಿದ್ದಾರೆ? ತುಳುವಿನವರೇ ಮಂತ್ರಿಯಾಗಿದ್ದರೂ, ತುಳು ಭಾಷೆ ಬಗ್ಗೆ ನಿರ್ಣಯಿಸಲು ಪೆನ್ನು ಪೇಪರ್ ಇರಲಿಲ್ಲವೇ? ಸಚಿವ ಖಾದರ್ ವ್ಯಂಗ್ಯ

28-09-26 09:33 pm       HK News Staffer   ಕರಾವಳಿ

ಬಿಜೆಪಿಯವರು ಅಧಿಕಾರದಲ್ಲಿದ್ದಾಗ ಕರಾವಳಿ ಜಿಲ್ಲೆಗೆ ಏನಾದರೂ ಕೊಡುಗೆ ನೀಡಿದ್ದಾರೆಯೇ..? ಜಿಲ್ಲೆಗೆ ಸಂಬಂಧಿಸಿ ಏನಾದರೂ ಪಾಲಿಸಿ ಮಾಡಿದ್ದಾರಾ? ತುಳುವಿನವರೇ ಮಂತ್ರಿಯಾಗಿದ್ದರೂ, ಸುನಿಲ್ ಜಿಲ್ಲಾ ಉಸ್ತುವಾರಿ ಇದ್ದರಲ್ವಾ.. ಯಾಕೆ ತುಳು ಭಾಷೆಯನ್ನು ಅಧಿಕೃತ ಎಂದು ಮಾಡಕ್ಕಾಗಿಲ್ಲ. ಅವರಿಗೆ ಪೆನ್ನು ಪೇಪರ್ ಇರಲಿಲ್ಲವೇ..? ಅದಕ್ಕೆ ಧೈರ್ಯ, ಇಚ್ಚಾಶಕ್ತಿ ಬೇಕು. ಅದನ್ನು ಕಾಂಗ್ರೆಸ್ ಸರ್ಕಾರ ಮಂಗಳೂರಿನಲ್ಲಿಯೇ ಕ್ಯಾಬಿನೆಟ್ ಮಾಡಿ ತೋರಿಸಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ ಖಾದರ್ ಹೇಳಿದ್ದಾರೆ.

ಮಂಗಳೂರು, ಸೆ.28: ಬಿಜೆಪಿಯವರು ಅಧಿಕಾರದಲ್ಲಿದ್ದಾಗ ಕರಾವಳಿ ಜಿಲ್ಲೆಗೆ ಏನಾದರೂ ಕೊಡುಗೆ ನೀಡಿದ್ದಾರೆಯೇ..?  ಜಿಲ್ಲೆಗೆ ಸಂಬಂಧಿಸಿ ಏನಾದರೂ ಪಾಲಿಸಿ ಮಾಡಿದ್ದಾರಾ? ತುಳುವಿನವರೇ ಮಂತ್ರಿಯಾಗಿದ್ದರೂ, ಸುನಿಲ್ ಜಿಲ್ಲಾ ಉಸ್ತುವಾರಿ ಇದ್ದರಲ್ವಾ.. ಯಾಕೆ ತುಳು ಭಾಷೆಯನ್ನು ಅಧಿಕೃತ ಎಂದು ಮಾಡಕ್ಕಾಗಿಲ್ಲ. ಅವರಿಗೆ ಪೆನ್ನು ಪೇಪರ್ ಇರಲಿಲ್ಲವೇ..? ಅದಕ್ಕೆ ಧೈರ್ಯ, ಇಚ್ಚಾಶಕ್ತಿ ಬೇಕು. ಅದನ್ನು ಕಾಂಗ್ರೆಸ್ ಸರ್ಕಾರ ಮಂಗಳೂರಿನಲ್ಲಿಯೇ ಕ್ಯಾಬಿನೆಟ್ ಮಾಡಿ ತೋರಿಸಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ ಖಾದರ್ ಹೇಳಿದ್ದಾರೆ. 

ತುಳುವರ ಇಷ್ಟು ವರ್ಷದ ಬೇಡಿಕೆಯನ್ನು ಕಾಂಗ್ರೆಸ್ ಸರ್ಕಾರ ಪೂರೈಸಿದೆ. ಇದನ್ನೆಲ್ಲ ಜನರು ನೋಡುತ್ತಾರೆ. ಸಂಪುಟ ಸಭೆ ಆಗುವ ಮೊದಲೇ ವೇದವ್ಯಾಸ ಕಾಮತ್ ಮನೆಯಲ್ಲಿ ಚೊಂಬು ಇಟ್ಕೊಂಡಿದ್ದರಲ್ವಾ. ಈಗ ಹೇಳಲಿ, ಅವರಿಗೆ ಇಲ್ಲಿ ಅಭಿವೃದ್ಧಿ ಕಾರ್ಯ ಆಗಬಾರದು, ಅದಕ್ಕಾಗಿ ಟೀಕೆ ಮಾಡುತ್ತಿದ್ದಾರೆ ಎಂದು ಖಾದರ್ ಹೇಳಿದರು. 

'ಮಂಗಳೂರು ಐ' ಪ್ರಾಜೆಕ್ಟ್ ಪಿಪಿಪಿ ಮಾಡೆಲ್ ಮಾಡುತ್ತಿದ್ದೇವೆ. ಖಾಸಗಿಯವರಿಗೆ ಕೊಡದೆ ಸರ್ಕಾರವೇ ಅಭಿವೃದ್ಧಿ ಮಾಡಕ್ಕಾಗುತ್ತಾ.. ಅದರಲ್ಲಿ ರೆವಿನ್ಯೂ ಪಾಲು ಇದೆ ಎಂದು ಸರ್ಕಾರಿ ಜಾಗದಲ್ಲಿ ಪ್ರಾಜೆಕ್ಟ್ ಮಾಡುವುದನ್ನು ಸಮರ್ಥಿಸಿಕೊಂಡರು. ತುಳು ಭಾಷೆಯನ್ನು ಯಾವ ರೀತಿ ಆಡಳಿತ ಭಾಷೆಯಾಗಿಸಬೇಕು ಎಂಬ ಬಗ್ಗೆ ಗೈಡ್ ಲೈನ್ಸ್ ಬರುತ್ತದೆ. ಅದರ ಪ್ರಕಾರ ನಡೆದುಕೊಳ್ಳಬೇಕು. ಜಿಲ್ಲಾ ಕೇಂದ್ರಗಳಲ್ಲಿ ಅನುವಾದಕರನ್ನು ಇಟ್ಟುಕೊಳ್ಳಲಿದ್ದಾರೆ. ಬಹುವರ್ಷದ ಬೇಡಿಕೆಯನ್ನು ಈಡೇರಿಸಿದ್ದಕ್ಕಾಗಿ ಜಿಲ್ಲೆಯ ಜನರ ಪರವಾಗಿ ಅಭಿನಂದಿಸುತ್ತೇನೆ ಎಂದು ಖಾದರ್ ಹೇಳಿದರು. 

ಕರಾವಳಿಯಲ್ಲಿ ಡಿಸಿ ಲ್ಯಾಂಡ್ ಭೂಮಿ ದಲಿತರಿಗೆ ನೀಡಬೇಕೆಂಬ ಬಗ್ಗೆ ಸಂಪುಟ ಸಭೆಯಲ್ಲಿ ನಿರ್ಧಾರಕ್ಕೆ ಬರದೇ ಇರುವುದನ್ನು ದಲಿತ ಸಂಘಟನೆಗಳು ವಿರೋಧಿಸಿರುವುದಕ್ಕೆ, ಅದರ ಬಗ್ಗೆ ಇನ್ನೂ ಚರ್ಚೆಯಾಗಬೇಕು. ಕೆಲವರು ಅದನ್ನು ಡಿಪ್ರೆಸ್ಡ್ ಕ್ಲಾಸ್ ಅಂತ ಹೇಳಿ ಎಲ್ಲ ಸಮುದಾಯದ ತಳಮಟ್ಟದ ಜನರಿಗೆ ಕೊಡಬೇಕೆಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹಾಗಾಗಿ ಅದರ ಬಗ್ಗೆ ನಿರ್ಧಾರ ಆಗಿಲ್ಲ ಎಂದರು. 

ಕ್ಯಾಬಿನೆಟ್ ಸಭೆಯಲ್ಲಿ 10 ಕೋಟಿಗಿಂತ ಕಡಿಮೆ ಬಜೆಟ್ಟಿನ ವಿಚಾರ ಚರ್ಚೆಗೆ ಬರುವುದಿಲ್ಲ. ಆದರೆ ಅಂತಹ ವಿಚಾರಕ್ಕೆ ಸಭೆ ಅನುಮತಿ ನೀಡಿದೆ. ಪುತ್ತೂರು ಮಹಾಲಿಂಗೇಶ್ವರ ದೇಗುಲಕ್ಕೆ ಐದು ಕೋಟಿ, ಉಳ್ಳಾಲ ದರ್ಗಾಕ್ಕೆ ಐದು ಕೋಟಿ, ಚರ್ಚ್ ಗಳಿಗೆ ಅನುದಾನ ನೀಡುವುದಕ್ಕೆ ಸಂಪುಟ ಅನುಮತಿ ನೀಡಿದೆ ಎಂದು ಹೇಳಿದರು. ಹೊಸ ಯೋಜನೆಗಳಿಗೆ ಆರ್ಥಿಕ ಇಲಾಖೆ ಅನುಮತಿ ಇಲ್ಲವೆಂಬ ಪತ್ರದ ಬಗ್ಗೆ ಕೇಳಿದ ಪ್ರಶ್ನೆಗೆ, ರಾಜ್ಯದ ಆರ್ಥಿಕ ಇಲಾಖೆ ಮೂರು ತಿಂಗಳಿಗೊಮ್ಮೆ ಸರ್ಕಾರಕ್ಕೆ ಎಚ್ಚರಿಕೆ ಕೊಡುವುದು ಸಾಮಾನ್ಯ. ಅದರ ಕೆಲಸ ಮಾಡಿದೆ. ಹಣಕಾಸು ಹೇಗೆ ಕ್ರೋಡೀಕರಣ ಮಾಡಬೇಕು, ಎಲ್ಲಿ ನಷ್ಟ ಆಗುತ್ತಿದೆ ಎಂದು ನೋಡಿಕೊಂಡು ಮುಖ್ಯಮಂತ್ರಿ ಅದನ್ನು ಹಣ ಹೊಂದಿಕೆ ಮಾಡುತ್ತಾರೆ, ಸಂಪುಟದಲ್ಲಿ ನಿರ್ಣಯ ಆಗಿದ್ದಕ್ಕೆ ಅನುದಾನ ಕ್ರೋಡೀಕರಿಸುವುದು ಜವಾಬ್ದಾರಿ. ಹಾಗಾಗಿ ಅನುದಾನ ವಿಚಾರದಲ್ಲಿ ಸಂಶಯ ಪಡಬೇಕಿಲ್ಲ ಎಂದು ಹೇಳಿದರು. 

ಉಪ್ಪು ಕಡಿಮೆ ಮಾಡಬೇಕೆಂಬ ಸಲಹೆಯ ಬಗ್ಗೆ ಕೇಳಿದ ಪ್ರಶ್ನೆಗೆ, ಇಂದು ಬಹುತೇಕ ರೋಗ ಉಪ್ಪು ಮತ್ತು ಸಕ್ಕರೆಯಿಂದಾಗಿ ಬರ್ತಿದೆ. ಹಿಂದೆ ಸಬ್ಸಿಡಿಯಲ್ಲಿ ಉಪ್ಪು ಕೊಡುತ್ತಿದ್ದರು. ಉಪ್ಪು ತಿನ್ನುವುದು ಕಡಿಮೆ ಮಾಡಬೇಕೆಂದು ಸಬ್ಸಿಡಿ ಕಡಿತ ಮಾಡಿ, ಅಲ್ಲಿ ಬೇಳೆ ಕೊಡಲು ಆರಂಭಿಸಿದ್ದೆವು. ಈಗಲೂ ಉಪ್ಪು, ಸಕ್ಕರೆ ಕಡಿಮೆ ಮಾಡಿ ಎಂದು ಜನರಿಗೆ ಸಲಹೆ ಮಾಡುತ್ತೇವೆ, ನಿಮ್ಮ ಖುಷಿಯಾದರೆ ಆಸ್ಪತ್ರೆ ಇದೆ ಎಂದು ಕಟಕಿಯಾಡಿದರು.

Karnataka Health and Family Welfare Minister and Dakshina Kannada district in-charge minister U.T. Khader has questioned the BJP’s record on development and policy initiatives concerning the coastal region, while highlighting the Congress government’s recent decision to grant Tulu additional official language status in Dakshina Kannada and Udupi.