ಬ್ರೇಕಿಂಗ್ ನ್ಯೂಸ್
28-09-26 11:08 pm Mangaluru Staffer ಕರಾವಳಿ
ಮಂಗಳೂರು, ಸೆ.28: ಎಸ್ಐಆರ್ ನಂತರ ದೇಶದಲ್ಲಿ 13 ಕೋಟಿ ಮತದಾರರ ಹೆಸರನ್ನು ಮತಪಟ್ಟಿಯಿಂದ ಡಿಲೀಟ್ ಮಾಡಲಾಗಿದೆ. ಅಷ್ಟೂ ಬಾಂಗ್ಲಾದೇಶದವರಾ ಎಂಬ ಪ್ರಶ್ನೆಗೆ ಚುನಾವಣಾ ಆಯೋಗ ಉತ್ತರ ಕೊಡುತ್ತಿಲ್ಲ. ಪಶ್ಚಿಮ ಬಂಗಾಳದಲ್ಲಿ 38 ಲಕ್ಷ ಜನರ ಹೆಸರು ಡಿಲೀಟ್ ಮಾಡಲಾಗಿದೆ. ಕರ್ನಾಟಕದಲ್ಲಿ 1.8 ಕೋಟಿ ಮತದಾರರ ಹೆಸರುಗಳಿಗೆ ಬೇರೆ ಬೇರೆ ಕಾರಣಕ್ಕೆ ಕತ್ತರಿ ಹಾಕಲು ಪ್ರಯತ್ನ ನಡೆದಿದೆ. ಆದರೆ ಕರ್ನಾಟಕವನ್ನು ಪಶ್ಚಿಮ ಬಂಗಾಳ ಮಾಡಲು ಬಿಡಲ್ಲ ಎಂದು ಸಾಮಾಜಿಕ ಕಾರ್ಯಕರ್ತ, ಬಹುಭಾಷಾ ನಟ ಪ್ರಕಾಶ್ ರಾಜ್ ಹೇಳಿದ್ದಾರೆ.
ಎಸ್ಐಆರ್ ವಿಚಾರದಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು, 1951ರಿಂದ ಇಲ್ಲಿಯ ವರೆಗೆ ಚುನಾವಣಾ ಆಯೋಗ ಸ್ವಾಯತ್ತ ಸಂಸ್ಥೆಯಾಗಿತ್ತು. ಅಮೆರಿಕದಲ್ಲಿ ಎಲ್ಲ ಪ್ರಜೆಗಳಿಗೂ ಮತದ ಹಕ್ಕು ಕೊಡಲು 200 ವರ್ಷ ಬೇಕಾಯಿತು. ಆದರೆ ಭಾರತದಲ್ಲಿ ಅನಕ್ಷರಸ್ಥ ಸೇರಿ ಎಲ್ಲ ಜನರಿಗೂ ಮತದ ಹಕ್ಕು ನೀಡಬೇಕೆಂದು ನಿರ್ಧಾರಕ್ಕೆ ಬರಲಾಯಿತು. ಆದರೆ 75 ವರ್ಷಗಳಲ್ಲಿ ಎಸ್ಐಆರ್ ನೆಪದಲ್ಲಿ ಎನ್ಯುಮರೇಶನ್ ಫಾರ್ಮ್ ಕೊಟ್ಟು ಮತದಾರರಿಗೆ ಎಕ್ಸಾಂ ಕೊಟ್ಟಿದ್ದು ಮೊದಲ ಬಾರಿ. ಪಶ್ಚಿಮ ಬಂಗಾಳದಲ್ಲಿ ಬಿಹಾರದಲ್ಲಿ ಇಲ್ಲದ ನೀತಿಗಳನ್ನು ತಂದರು, 26 ಲಕ್ಷ ಮತ ಡಿಲೀಟ್ ಮಾಡಲಾಗಿತ್ತು. ಅದರ ಬೆನ್ನಲ್ಲೇ ಚುನಾವಣೆಯಾಗಿ ಸರ್ಕಾರ ಬದಲಾಯಿತು. ಸುಪ್ರೀಂ ಕೋರ್ಟ್ ನಲ್ಲಿ ಪಿಐಆಲ್ ಸಲ್ಲಿಕೆಯಾದಾಗ ಪರಿಶೀಲನೆಗೆ ಟ್ರಿಬ್ಯುನಲ್ ಮಾಡಿತ್ತು. ಆದರೆ ಅಲ್ಲಿ ದೂರು ಇತ್ಯರ್ಥ ಆಗಲು 12-15 ವರ್ಷ ಬೇಕಾಗಬಹುದು. ಅಷ್ಟೊಂದು ಮತಗಳ ಡಿಲೀಟ್ ಪ್ರಕರಣ ಇತ್ಯರ್ಥಕ್ಕೆ ಬಾಕಿಯಿದೆ.
ಕಳ್ಳ ಮತದಾರರ ಕ್ಲೀನಿಂಗ್ ಆಗಬೇಕೆಂದು ಎಸ್ಐಆರ್ ಮಾಡುವುದಕ್ಕೆ ನಮ್ಮ ವಿರೋಧ ಇಲ್ಲ. ಆದರೆ ಇಡೀ ದೇಶದಲ್ಲಿ ಇದನ್ನು ಜಾರಿಗೆ ತರುತ್ತಿರುವ ರೀತಿಯನ್ನು ವಿರೋಧಿಸುತ್ತೇವೆ. ದೇಶದಲ್ಲಿ ಆರು ರಾಜ್ಯಗಳಲ್ಲಿ ಎಸ್ಐಆರ್ ಆದಾಗಲೇ 13 ಕೋಟಿ ಮತದಾರರನ್ನು ತೆಗೆದು ಹಾಕಿದ್ರು, ಇದರಲ್ಲಿ ಬಾಂಗ್ಲಾ ನುಸುಳುಕೋರರ ಲಿಸ್ಟ್ ಕೊಡಬೇಕೆಂದು ಸುಪ್ರೀಂ ಕೋರ್ಟಿ ಕೇಳಿದ್ರೂ ಆಯೋಗ ಕೊಡಲಿಲ್ಲ. ರಾಜ್ಯದಲ್ಲಿ ಒಂದೇ ತಿಂಗಳಲ್ಲಿ ಎಸ್ಐಆರ್ ಮಾಡ್ತೀವಿ ಅಂತ ಹೇಳಿ ಭಾನಗಡಿ ಮಾಡಿಟ್ಟಿದ್ದಾರೆ. ಬಿಎಲ್ಓಗಳಿಗೆ ಮನೆ ಮನೆಗೆ ಭೇಟಿ ಕೊಡುವುದಕ್ಕೇ ಆಗಿಲ್ಲ. ಕರಾವಳಿಯ ಮತಗಳನ್ನು ಡಿಲೀಟ್ ಮಾಡಲು ಕೇಂದ್ರದಲ್ಲಿ ಕುಳಿತಿರುವ ಅಧಿಕಾರಿಗಳು ಏಪ್ ಬಳಸುತ್ತಿದ್ದಾರೆ ಎನ್ನುವುದೇ ಕುಚೋದ್ಯ.
ರಾಜ್ಯದಲ್ಲಿ ಎಸ್ಐಆರ್ ಮಾಡೋ ಮೊದಲು ಚೆನ್ನಾಗಿ ಪಬ್ಲಿಸಿಟಿ ಮಾಡಿ, ಒಂದು ವರ್ಷ ತಗೊಳ್ಳಿ ಅಂದರೂ ಕೇಳಲಿಲ್ಲ. ಈಗ ರಾಜ್ಯದ 5.5 ಕೋಟಿ ಮತಗಳಲ್ಲಿ 1.8 ಕೋಟಿ ಮತಗಳನ್ನು ಬೇರೆ ಬೇರೆ ಕಾರಣಕ್ಕೆ ಡಿಲೀಟ್ ಮಾಡುವುದಕ್ಕೆ ಮುಂದಾಗಿದ್ದಾರೆ. ಮತ್ತು 43 ಲಕ್ಷ ಮತಗಳನ್ನು ಮತಪಟ್ಟಿಯಿಂದ ಹೊರಗಿಟ್ಡಿದ್ದಾರೆ. ಈಗ ಡೆಡ್ ಲೈನ್ ಕೊಟ್ಟು ಜನರನ್ನು ಯಾಮಾರಿಸುತ್ತಿದ್ದಾರೆ. ಇಲ್ಲದಿದ್ದರೆ ಡಿಲೀಟ್ ಮಾಡ್ತೀವಿ ಅಂತ ಹೇಳ್ತಿದಾರೆ.
ನಾಡಿದ್ದು ಸೆ.30ರಂದು ರಾಜ್ಯದಲ್ಲಿ ಸಂಪುಟ ಸಭೆ ಕರೆದು ಪ್ರೆಸ್ ಮಾಡ್ತೀವಿ. ಎಸ್ಐಆರ್ ಬಗ್ಗೆ ನಿರ್ಧಾರ ಹೇಳಲಿದ್ದೇವೆ. ಅದಕ್ಕು ಮುನ್ನ ಎಲ್ಲ ಜಿಲ್ಲೆಗಳಿಗೆ ಭೇಟಿ ಕೊಟ್ಟು ಜನಜಾಗೃತಿ ಮೂಡಿಸುತ್ತಿದ್ದೇವೆ. ರಾಜ್ಯದಲ್ಲಿ ನಾಲ್ಕು ಲಕ್ಷ ಬಾಂಗ್ಲಾದವರಿದ್ದಾರೆ ಅಂತ ಬಿಜೆಪಿ ಮಂದಿ ಹೇಳಿದ್ರು, ಆದರೆ ಈಗ ಅವರ ಲೆಕ್ಕ ಕೇಳಿದರೆ ಇವರಲ್ಲಿ ಇಲ್ಲ.
ಚುನಾವಣೆ ಆಯೋಗದಲ್ಲಿ ಮೂವರು ಕೂಡ ಸಮಾನರು. ಜ್ಞಾನೇಶ್ ಕುಮಾರ್ ಆಯ್ಕೆ ವಿಚಾರದಲ್ಲಿಯೇ ನಿಯಮ ಬದಲಾವಣೆ ಮಾಡಿದ್ದಾರೆ. 2024 ರಲ್ಲಿ ಪ್ರಧಾನ ಮಂತ್ರಿ, ವಿರೋಧ ಪಕ್ಷದ ನಾಯಕ, ಒಬ್ಬರು ಕೇಂದ್ರ ಮಂತ್ರಿಯನ್ನು ಆಯ್ಕೆ ಸಮಿತಿಗೆ ಮಾಡಿದ್ದರು. ಆಯ್ಕೆ ಸಮಿತಿಯಿಂದ ಸುಪ್ರೀಂ ಕೋರ್ಟ್ ಜಡ್ಜನ್ನು ಹೊರಗಿಡಲಾಗಿತ್ತು. ಹಾಗಾಗಿ ಇಲ್ಲಿ ಜ್ಞಾನೇಶ್ ಆಯ್ಕೆ ಮಾಡಿದ್ದು ಆಳುವ ಪಕ್ಷವೇ ಆಗಿದೆ. ಹಾಗಾದರೆ, ಎಸ್ಐಆರ್ ಮಾಡಬೇಕೆಂದು ನಿರ್ಧಾರ ಮಾಡಿದವರು ಯಾರು ಎಂಬ ಪ್ರಶ್ನೆಯೂ ಬರುತ್ತದೆ. ದೇಶದಲ್ಲಿ ಇಷ್ಟೆಲ್ಲಾ ಅವಾಂತರ ಆಗೋದಕ್ಕೆ ಕಾರಣ ಯಾರು ಅಂತಲೂ ತಿಳಿಯುತ್ತದೆ.
ಯಾವುದೇ ವ್ಯಕ್ತಿ ಪ್ರೌಢನಾದ ಕೂಡಲೇ ಮತದ ಹಕ್ಕು ಸಿಗುತ್ತದೆ, ಆದರೆ ಎಸ್ಐಆರ್ ಪ್ರಕ್ರಿಯೆಗೆ 2002ರಲ್ಲಿ ಹೆತ್ತವರು ಮತ ಹಾಕಿರಬೇಕೆಂದು ಲೋಕಸಭೆಯಲ್ಲಿ ಅನುಮತಿ ಪಡೆಯದೆ ಕಡ್ಡಾಯ ಮಾಡಲಾಗಿತ್ತು. ಇದನ್ನು ಲೋಕಸಭೆಯಲ್ಲಿಯೇ ಪ್ರಶ್ನೆ ಮಾಡಿ ಚುನಾವಣಾ ಆಯೋಗದ ಮುಖ್ಯಸ್ಥರ ಬದಲಾವಣೆ ಮಾಡಬೇಕು. ಅದಕ್ಕಾಗಿ ನವೆಂಬರ್ ನಲ್ಲಿ ನಡೆಯುವ ಅಧಿವೇಶನದಲ್ಲಿ ನೂರಕ್ಕಿಂತ ಹೆಚ್ಚು ಸಂಸದರು ಮಹಾಭಿಯೋಗ ಮಂಡನೆ ಮಾಡಬೇಕು. ಆಮೂಲಕ ಜ್ಞಾನೇಶ್ ಕುಮಾರ್ ಅವರನ್ನು ಕಿತ್ತು ಹಾಕಬೇಕು ಎಂದು ಪ್ರಕಾಶ್ ರಾಜ್ ಹೇಳಿದರು.
ಬೆಳಗಾಂನಲ್ಲಿ ಬೂತ್ ನಂಬರ್ 143 ನಲ್ಲಿ 200 ಫಾರ್ಮ್ ನಂಬರ್ 7 ಕೊಟ್ಟು 200 ಓಟ್ ಡಿಲೀಟ್ ಮಾಡಲು ಯತ್ನಿಸಿದರು. ಯಾರ್ಯಾರ ಓಟ್ ತೆಗೆಯಬೇಕೆಂದು ಮೊದಲೇ ಪ್ರಿಂಟ್ ಮಾಡಿದ್ದ ಫಾರ್ಮ್ ಗಳನ್ನು ತರಲಾಗಿತ್ತು. ಬಿಎಲ್ಓ ಆಗಿದ್ದ ಟೀಚರಿಗೆ ಅಲ್ಲಿನ ಬಿಜೆಪಿಯವರು ಮತ ಡಿಲೀಟ್ ಮಾಡಲು ಒತ್ತಡ ಹೇರಿದರು. ಆದರೆ ನಮ್ಮವರು ವಿಷಯ ತಿಳಿದು ವಿರೋಧ ಮಾಡಿದ್ರು. ಹಾಗಾದರೆ ಅಲ್ಲಿ ಏನಾಗಿತ್ತು ಎನ್ನೋದಕ್ಕೆ ರಾಜ್ಯದ ಚುನಾವಣಾ ಆಯುಕ್ತರು ಉತ್ತರ ನೀಡಬೇಕು.
ಯಾರದೇ ವ್ಯಕ್ತಿಯ ಮತ ತೆಗೆದು ಹಾಕಬೇಕಿದ್ದರೆ ಆತನಿಗೆ ಕಾನೂನು ರೀತ್ಯ ನೋಟಿಸ್ ಕೊಡಬೇಕು, ಜ್ಞಾನೇಶ್ ಕುಮಾರ್ ದೇಶದಲ್ಲಿ 13 ಕೋಟಿ ಮತ ಡಿಲೀಟ್ ಮಾಡಿದಾಗ ಯಾರಿಗಾದರೂ ನೋಟಿಸ್ ಕೊಟ್ಟಿದ್ದಾರೆಯೇ..? ಈಗ ಮೂವರು ಆಯೋಗದ ಸದಸ್ಯರಲ್ಲಿ ಇಬ್ಬರು ಜ್ಞಾನೇಶ್ ಕುಮಾರ್ ವಿರುದ್ಧ ಪತ್ರ ಬರೆದಿದ್ದಾರೆ. ಹೀಗಾಗಿ ಕೂಡಲೇ ಎಸ್ಐಆರ್ ಪ್ರಕ್ರಿಯೆ ಡಿಲೀಟ್ ಮಾಡಬೇಕು. ದೇಶದಲ್ಲಿ ಯಾವಾಗ ಇಲೆಕ್ಷನ್ ಕಮಿಷನ್ ಕಚೇರಿಗೆ ಬೆಂಕಿ ಬೀಳುತ್ತೆ ಅಂತ ಗೊತ್ತಿಲ್ಲ. ಕೊಲೆಗಾರ ಕೊಲೆ ಮಾಡುವಾಗ ಸಿಕ್ಕಿಹಾಕಿಕೊಳ್ಳಲ್ಲ. ಸಾಕ್ಷ್ಯ ಅಳಿಸುವಾಗ ಸಿಕ್ಕಿಬೀಳ್ತಾನೆ, ನೀವು ಈಗ ಅಳಿಸುವ ಪ್ರಕ್ರಿಯೆ ಮಾಡ್ತಿದೀರಿ, ಮತದಾರ ನಿಮ್ಮ ಗುಲಾಮ ಅಲ್ಲ, ತನ್ನ ಓಟ್ ಕೇಳುವ ಸ್ಥಿತಿಯನ್ನು ಈ ದೇಶದಲ್ಲಿ ತರಬೇಡಿ. ಬಂಗಾಳ ರೀತಿ ಕರ್ನಾಟಕದಲ್ಲಿ ಮಾಡಲು ಬಿಡಲ್ಲ. ಜೆನ್ ಜೀ ಅಲ್ಲ, ಅದಕ್ಕಿಂತ ದೊಡ್ಡ ಹೋರಾಟ ದೇಶದಲ್ಲಿ ನಡೆಯಲಿದೆ ಎಂದರು ಪ್ರಕಾಶ್.
27-09-26 03:21 pm
HK News Desk
ಬೆಂಗಳೂರಿಗೆ ಬಂದ ಶಾಸಕರೆಲ್ಲ ಎರಡೆರಡು ಮದುವೆಯಾಗಿದ್ದ...
25-09-26 04:49 pm
ರಾಜ್ಯ ಸರ್ಕಾರಕ್ಕೆ ಆರ್ಥಿಕ ಸಂಕಷ್ಟ ; ಬೆಳಗಾವಿ ವಿಟಿ...
25-09-26 03:11 pm
ಕರಾವಳಿಯಲ್ಲಿ ನೀರು ಸಂರಕ್ಷಣೆಗೆ ವೈಜ್ಞಾನಿಕ ಮಾಸ್ಟರ್...
23-09-26 11:02 pm
ಬರ ಪಟ್ಟಿಯಿಂದ ಇಂಡಿ, ಚಡಚಣ ಕೈಬಿಟ್ಟಿದ್ದಕ್ಕೆ ಅಸಮಾಧ...
23-09-26 05:14 pm
26-09-26 07:01 pm
HK News Staffer
ವೃದ್ಧಾಶ್ರಮ ಸೇರಿದ ವಿನೋದ್ ಕಾಂಬ್ಳಿ: ವಿಡಿಯೋ ವೈರಲ್...
26-09-26 11:51 am
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಂದ್ರ ಕುಮಾರ್ ದೇಶದ್ರ...
24-09-26 09:42 pm
"ನಾವು ಚುನಾವಣೆ ಗೆದ್ದರೆ, ಟೆಕ್ಸಾಸ್ ಹನುಮಾನ್ ವಿಗ್...
23-09-26 04:21 pm
ಪಶುವೈದ್ಯರ ಹುದ್ದೆಗೆ ₹80 ಲಕ್ಷದ ಡೀಲ್ ಆರೋಪ: ಪ್ರಶ್...
22-09-26 09:42 am
28-09-26 11:08 pm
Mangaluru Staffer
ಬಿಜೆಪಿಯವರು ಅಧಿಕಾರದಲ್ಲಿದ್ದಾಗ ಕರಾವಳಿಗೇನು ಕೊಟ್ಟಿ...
28-09-26 09:33 pm
30 ನಿಮಿಷದಲ್ಲಿ 3 ಸಾವಿರಕ್ಕೂ ಹೆಚ್ಚು ಬಾರಿ ಮುಂಗೈ ಸ...
28-09-26 08:33 pm
ದಸರಾಗೆ ಕಾನ್ವೆಂಟ್ ಸ್ಕೂಲ್ ಗಳಲ್ಲಿ ರಜೆ ಯಾಕಿಲ್ಲ, ರ...
28-09-26 08:29 pm
ಅಬ್ದುಲ್ ರೆಹಮಾನ್ ಕೊಲೆಯಾಗಿದ್ದು ವೈಯುಕ್ತಿಕ ಕಾರಣಗಳ...
28-09-26 02:13 pm
28-09-26 11:03 pm
Mangaluru Staffer
ಮಂಗಳೂರಲ್ಲಿ ಡ್ರಗ್ಸ್ ಜಾಲಕ್ಕೆ ಸಿಸಿಬಿ ಶಾಕ್ : ₹ 24...
28-09-26 03:08 pm
ಹೆಲ್ಮೆಟ್ ರಹಿತ ಚಾಲನೆಯಿಂದ ಹೆಚ್ಚುತ್ತಿರುವ ಸಾವು- ನ...
27-09-26 08:06 pm
Suhas Shetty: ಸುಹಾಸ್ ಶೆಟ್ಟಿ ಹತ್ಯೆಗೆ ಪ್ರತೀಕಾರಕ...
27-09-26 06:10 pm
ಶಾರ್ಜಾದಲ್ಲಿ ಹತ್ಯೆಯಾದ ಕುಂದಾಪುರದ ವ್ಯಕ್ತಿಯ ಶವ ಹು...
25-09-26 04:53 pm