ಬ್ರೇಕಿಂಗ್ ನ್ಯೂಸ್
30-09-26 03:37 pm Mangaluru Staffer ಕರಾವಳಿ
ಉಳ್ಳಾಲ, ಸೆ.30: ಮಸೀದಿಗೆ ತೆರಳಲೆಂದು ಹೆದ್ದಾರಿ ದಾಟುತ್ತಿದ್ದ ವ್ಯಕ್ತಿಗೆ ಎರಡು ಕಾರುಗಳು ಢಿಕ್ಕಿ ಹೊಡೆದ ಪರಿಣಾಮ ಗಂಭೀರ ಗಾಯಗೊಂಡಿದ್ದ ಪಾದಚಾರಿ ಮೃತಪಟ್ಟ ಘಟನೆ ರಾ.ಹೆ 66ರ ಕುಂಪಲ ಬೈಪಾಸ್ ಎಂಬಲ್ಲಿ ನಿನ್ನೆ ರಾತ್ರಿ ನಡೆದಿದೆ.
ಅತ್ತಾವರ ಕಾಪ್ರಿಗುಡ್ಡೆ ನಿವಾಸಿ ಹನೀಫ್ ವಲಿ ಮಹಮ್ಮದ್(68) ಅಪಘಾತದಲ್ಲಿ ಮೃತಪಟ್ಟ ದುರ್ದೈವಿ. ಹನೀಫ್ ಅವರು ನಿನ್ನೆ(ಮಂಗಳವಾರ) ಸಂಜೆ 7 ಗಂಟೆ ಸುಮಾರಿಗೆ ಕುಂಪಲ ಬೈಪಾಸಿನ ಡಿ ಮಾರ್ಟ್ ಮಳಿಗೆಗೆ ಭೇಟಿ ನೀಡಿದ ಬಳಿಕ ಹೆದ್ದಾರಿ ಬದಿಯ ಮಸೀದಿಗೆ ತೆರಳಲೆಂದು ರಸ್ತೆ ದಾಟುತ್ತಿದ್ದ ವೇಳೆ ತಲಪಾಡಿಯಿಂದ ಮಂಗಳೂರಿಗೆ ಧಾವಿಸುತ್ತಿದ್ದ ಬಿಎಮ್ ಡಬ್ಲ್ಯು ಕಾರೊಂದು ಬಲವಾಗಿ ಢಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ರಸ್ತೆಗೆಸೆಯಲ್ಪಟ್ಟ ಹನೀಫ್ ಅವರಿಗೆ ಮಂಗಳೂರಿಗೆ ಧಾವಿಸುತ್ತಿದ್ದ ಮತ್ತೊಂದು ಕಾರು ಢಿಕ್ಕಿ ಹೊಡೆದಿದೆ.
ರಕ್ತದ ಮಡುವಿನಲ್ಲಿ ಚಿಂತಾಜನಕ ಸ್ಥಿತಿಯಲ್ಲಿ ಬಿದ್ದಿದ್ದ ಹನೀಫ್ ಅವರನ್ನ ಸ್ಥಳೀಯರು ಅಪಘಾತ ನಡೆಸಿದ್ದ ಕಾರಿನಲ್ಲೇ ಹಾಕಿ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ಕರೆದೊಯ್ದರೂ ಅವರು ದಾರಿ ಮಧ್ಯದಲ್ಲೇ ಮೃತಪಟ್ಟಿದ್ದಾರೆ. ಹನೀಫ್ ಅವರಿಗೆ ಢಿಕ್ಕಿ ಹೊಡೆದ ಎರಡೂ ಕಾರುಗಳ ಚಾಲಕರು ವೈದ್ಯರೆಂದು ತಿಳಿದು ಬಂದಿದೆ. ಮೃತರು ಪತ್ನಿ, ಓರ್ವ ಹೆಣ್ಣು, ಇಬ್ಬರು ಗಂಡು ಮಕ್ಕಳನ್ನ ಅಗಲಿದ್ದಾರೆ. ಮಂಗಳೂರು ದಕ್ಷಿಣ ಸಂಚಾರಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಹೆದ್ದಾರಿ ದುರವಸ್ಥೆಗೆ ಇನ್ನೆಷ್ಟು ಬಲಿ..?
ಕಳೆದ ಜುಲೈ 28 ರ ರಾತ್ರಿ ಕುಂಪಲ ಬೈಪಾಸ್ ಸಮೀಪದ ಅಂಬಿಕಾರೋಡ್ ಎಂಬಲ್ಲಿ ಹೆದ್ದಾರಿ ಬದಿಯ ಕೊರಗಜ್ಜನ ಕಟ್ಟೆಗೆ ದೀಪ ಬೆಳಗಿಸಿ ಮನೆಗೆ ಹಿಂತಿರುಗಲೆಂದು ಹೆದ್ದಾರಿ ದಾಟುತ್ತಿದ್ದ 72ರ ವೃದ್ಧ ದಾಮೋದರ ಪೂಜಾರಿ ಎಂಬವರಿಗೆ ಅಪರಿಚಿತ ಕಾರು ಢಿಕ್ಕಿ ಹೊಡೆದು ಪರಾರಿಯಾದ ಪರಿಣಾಮ ಎರಡೂ ಕಾಲುಗಳನ್ನ ಮುರಿದುಕೊಂಡಿದ್ದ ದಾಮೋದರ್ ಅವರು ಸಾವನ್ನಪ್ಪಿದ್ದರು. ಅವೈಜ್ಞಾನಿಕ ಹೆದ್ದಾರಿಯ ವಿಭಜಕದಲ್ಲಿ ದಾರಿ ದೀಪಗಳಿಲ್ಲದೆ ವಾಹನ ಸವಾರರಿಗೆ ರಾತ್ರಿ ವೇಳೆ ಹೆದ್ದಾರಿ ರಸ್ತೆ ದಾಟುವ ಪಾದಚಾರಿಗಳು ಗೋಚರಿಸದೆ ನಿರಂತರ ಅಪಘಾತಗಳು ನಡೆಯುತ್ತಲೇ ಇರುತ್ತವೆ. ವಿಭಜಕಗಳಿಗೆ ತಡೆಬೇಲಿ ಅಳವಡಿಸದಿರುವುದು, ಹೆದ್ದಾರಿ ಬದಿಗಳಲ್ಲಿ ಸರ್ವಿಸ್ ರಸ್ತೆಗಳ ನಿರ್ಮಾಣವಾಗದ ಪರಿಣಾಮ ಎಲ್ಲೆಂದರಲ್ಲಿ ಪಾದಚಾರಿಗಳು ರಸ್ತೆ ದಾಟುತ್ತಿದ್ದು ಅಪಘಾತಗಳು ಜಾಸ್ತಿಯಾಗುತ್ತಲೇ ಇವೆ.
A 68-year-old pedestrian died after being hit by two cars while crossing National Highway 66 near Kumpala Bypass on Tuesday night. The accident occurred when the man was reportedly crossing the highway to reach a mosque.
27-09-26 03:21 pm
HK News Desk
ಬೆಂಗಳೂರಿಗೆ ಬಂದ ಶಾಸಕರೆಲ್ಲ ಎರಡೆರಡು ಮದುವೆಯಾಗಿದ್ದ...
25-09-26 04:49 pm
ರಾಜ್ಯ ಸರ್ಕಾರಕ್ಕೆ ಆರ್ಥಿಕ ಸಂಕಷ್ಟ ; ಬೆಳಗಾವಿ ವಿಟಿ...
25-09-26 03:11 pm
ಕರಾವಳಿಯಲ್ಲಿ ನೀರು ಸಂರಕ್ಷಣೆಗೆ ವೈಜ್ಞಾನಿಕ ಮಾಸ್ಟರ್...
23-09-26 11:02 pm
ಬರ ಪಟ್ಟಿಯಿಂದ ಇಂಡಿ, ಚಡಚಣ ಕೈಬಿಟ್ಟಿದ್ದಕ್ಕೆ ಅಸಮಾಧ...
23-09-26 05:14 pm
30-09-26 10:49 am
HK News Staffer
ಡ್ರಗ್ಸ್ ಕಳ್ಳಸಾಗಣೆ ಆರೋಪ, ಸೌದಿಯಲ್ಲಿ ಕೇರಳದ ಯುವಕನ...
29-09-26 08:11 pm
ಸೌಜನ್ಯಾ ಮರು ತನಿಖೆಯೂ, ತಮಿಳುನಾಡಿನಲ್ಲಿ ಗ್ರಾನೈಟ್...
26-09-26 07:01 pm
ವೃದ್ಧಾಶ್ರಮ ಸೇರಿದ ವಿನೋದ್ ಕಾಂಬ್ಳಿ: ವಿಡಿಯೋ ವೈರಲ್...
26-09-26 11:51 am
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಂದ್ರ ಕುಮಾರ್ ದೇಶದ್ರ...
24-09-26 09:42 pm
30-09-26 05:33 pm
Mangaluru Staffer
Mangalore Kumpala Accident: ಕುಂಪಲ ; ರಸ್ತೆ ದಾಟ...
30-09-26 03:37 pm
Mrpl Fire, Mangalore: ಎಂಆರ್ ಪಿಎಲ್ ಘಟಕದಲ್ಲಿ ಭೀ...
30-09-26 02:20 pm
Mrpl Fire, Mangalore: ಎಂಆರ್ ಪಿಎಲ್ ತೈಲ ಸ್ಥಾವರದ...
30-09-26 12:59 pm
ಮಂಗಳೂರಿನಲ್ಲಿ ಒಳಚರಂಡಿ ಕಾಮಗಾರಿ ; 20 ವರ್ಷಗಳ ಹಿಂದ...
29-09-26 01:25 pm
30-09-26 10:33 am
HK News Staffer
Udupi Body found, Accused: ಕೊಲೆ ಯತ್ನ ಪ್ರಕರಣದ...
30-09-26 10:04 am
ಮಾಂಸದ ಅಂಗಡಿಯಲ್ಲೇ ಡ್ರಗ್ಸ್ ದಂಧೆ ; ಇಬ್ಬರು ಯುವಕರು...
30-09-26 10:03 am
ಸ್ವರ್ಣಾ ನದಿಯಲ್ಲಿ ದುರಂತ ; ಹಿರ್ಗಾನ ಬಳಿ ಈಜಲು ತೆರ...
29-09-26 09:26 pm
Mangalore Accident: ನ್ಯಾಯಾಧೀಶರ ಕಾರಿಗೆ ಗೂಡ್ಸ್...
29-09-26 08:14 pm