ಬ್ರೇಕಿಂಗ್ ನ್ಯೂಸ್
11-01-21 03:58 pm Mangalore Correspondent ಕರಾವಳಿ
Photo credits : Representative Image
ಮಂಗಳೂರು, ಜ.11: ರಾಜ್ಯಗಳ ನಡುವೆ ಗಡಿವಿವಾದ ಕಾಣಿಸಿಕೊಳ್ಳುವುದು ಸಾಮಾನ್ಯ. ಆದರೆ, ಸಮುದ್ರದಲ್ಲಿ ಜಲಗಡಿ ರೇಖೆಯ ವಿಚಾರದಲ್ಲಿ ತಕರಾರು ಏರ್ಪಡುವುದು ಭಾರೀ ಕಡಿಮೆ. ಯಾಕಂದ್ರೆ, ಸಮುದ್ರದಲ್ಲಿ ಸಂಚಾರದ ವ್ಯಾಪ್ತಿ ದೇಶ ವ್ಯಾಪಿ ಇರುತ್ತದೆ. ಆದರೆ, ಕರ್ನಾಟಕ- ಕೇರಳ ಮಧ್ಯೆ ಜಲಗಡಿಯ ಸಮಸ್ಯೆ ಮಾತ್ರ ಭಾರತ- ಪಾಕಿಸ್ತಾನದ ಗಡಿ ಬಿಕ್ಕಟ್ಟಿನಂತಾಗಿದೆ.
ಮಂಗಳೂರಿನ ಮೀನುಗಾರಿಕಾ ಬಂದರು ಕೇರಳ ಗಡಿಭಾಗದಿಂದ ಕೇವಲ ಹತ್ತು ಕಿಮೀ ಅಂತರದಲ್ಲಿದೆ. ಹೀಗಾಗಿ ಮಂಗಳೂರಿಗೆ ಬರುವ ಅಥವಾ ಇಲ್ಲಿಂದ ಆಳಸಮುದ್ರಕ್ಕೆ ತೆರಳುವ ಮೀನುಗಾರಿಕಾ ಬೋಟ್ ಗಳು ಕೇರಳ ಭಾಗದಿಂದ ತೆರಳುವುದು ಸಾಮಾನ್ಯ. ಆದರೆ, ಇದೇ ಕಾರಣಕ್ಕೆ ತಮ್ಮ ಹತ್ತು ನಾಟಿಕಲ್ ಮೈಲ್ಸ್ ವ್ಯಾಪ್ತಿಯ ನೆಪ ಮುಂದಿಟ್ಟುಕೊಂಡು ಕೇರಳದ ಕರಾವಳಿ ಕಾವಲು ಪಡೆಯವರು ತಕರಾರು ತೆಗೆಯುತ್ತಾರೆ. ತಮ್ಮ ವ್ಯಾಪ್ತಿಯ ಜಲರೇಖೆಯೆಂದು ಹಕ್ಕು ಚಲಾಯಿಸಿ ಮಂಗಳೂರಿನ ಮೀನುಗಾರಿಕಾ ಬೋಟ್ ಗಳ ವಿರುದ್ಧ ಕ್ರಮ ಜರುಗಿಸುತ್ತಾರೆ. ವಿದೇಶಗಳಿಂದ ಬಂದಿರುವ ಬೋಟ್ ಗಳ ರೀತಿ ಟ್ರೀಟ್ ಮಾಡುತ್ತಾರೆ. ಹೀಗಾಗಿ ಮಂಗಳೂರಿನ ಮೀನುಗಾರರು ಕೇರಳದ ಭಾಗಕ್ಕೆ ತೆರಳುವುದಕ್ಕೇ ಭಯ ಪಡುವಂತಾಗಿದೆ. ಈ ಬಾರಿಯ ಮೀನುಗಾರಿಕೆ ಅವಧಿಯಲ್ಲಿ ಐದಾರು ಬೋಟ್ ಗಳಿಗೆ ನಾಲ್ಕರಿಂದ ಐದು ಲಕ್ಷ ರೂಪಾಯಿ ದಂಡ ವಿಧಿಸಿದ್ದಾಗಿ ಮೀನುಗಾರರು ಅಲವತ್ತುಕೊಂಡಿದ್ದಾರೆ.
ಇತ್ತೀಚೆಗೆ ಇಂಥಹದ್ದೇ ಒಂದು ಪ್ರಕರಣ ನಡೆದಿತ್ತು. ಆಳಸಮುದ್ರಕ್ಕೆ ತೆರಳಿದ್ದ ಬೋಟ್ ಕೇರಳ ಭಾಗದಿಂದ ಮಂಗಳೂರು ಕಡೆಗೆ ಬರುತ್ತಿದ್ದ ವೇಳೆ, ಅಡ್ಡಹಾಕಿದ ಕಾಸರಗೋಡಿನ ಮಂಜೇಶ್ವರದ ಕರಾವಳಿ ಕಾವಲು ಪಡೆ ಪೊಲೀಸರು ಬೋಟ್ ಅನ್ನು ವಶಕ್ಕೆ ಪಡೆಯಲು ಮುಂದಾಗಿದ್ದರು. ಬೋಟ್ ಅನ್ನು ಮಂಜೇಶ್ವರ ಬಂದರಿಗೆ ಕರೆದೊಯ್ಯುವಂತೆ ಹೇಳಿ ಇಬ್ಬರು ಪೊಲೀಸರನ್ನು ಕೂರಿಸಿ, ತೆರಳಲು ಸೂಚನೆ ನೀಡಿದರು. ಆದರೆ, ಫೈಬರ್ ಬೋಟ್ ಆಗಿದ್ದ ಕಾರಣ ಮಂಜೇಶ್ವರ ಬಂದರಿಗೆ ಹೋದರೆ ಅಡಿಭಾಗಕ್ಕೆ ಏಟು ಬೀಳುವುದೆಂದು ಮೀನುಗಾರರು ಬೋಟನ್ನು ನೇರವಾಗಿ ಮಂಗಳೂರಿನ ಕಡೆಗೆ ಚಲಾಯಿಸಿದ್ದರು. ಪೊಲೀಸರ ಜೊತೆಗೇ ಮಂಗಳೂರಿನ ಮೀನುಗಾರಿಕಾ ಬಂದರಿಗೆ ತಂದಿದ್ದು ಹೈಜಾಕ್ ಅನ್ನುವ ರೀತಿ ಸುದ್ದಿಯಾಗಿತ್ತು.
ಪೊಲೀಸರನ್ನು ಬಳಿಕ ಮೀನುಗಾರಿಕಾ ಫೆಡರೇಶನ್ ಕಚೇರಿಗೆ ಕರೆದೊಯ್ದು ಊಟದ ವ್ಯವಸ್ಥೆ ಮಾಡಿ, ರಸ್ತೆ ಮಾರ್ಗದ ಮೂಲಕ ಮಂಜೇಶ್ವರಕ್ಕೆ ಕಳಿಸಿಕೊಡಲಾಗಿತ್ತು. ಆದರೆ, ಮಂಜೇಶ್ವರ ಪೊಲೀಸರು ಮಾತ್ರ ಮೀನುಗಾರರ ವಿರುದ್ಧ ಅಪಹರಣದ ಕೇಸು ದಾಖಲಿಸಿದ್ದರು. ಈ ವಿಚಾರ ಬಳಿಕ ಡಿಜಿಪಿ ಮಟ್ಟಕ್ಕೆ ಹೋಗಿದ್ದಲ್ಲದೆ, ಮೀನುಗಾರರ ವಿರುದ್ಧ ತೀವ್ರ ಒತ್ತಡ ಬಿದ್ದಿತ್ತು. ಬಳಿಕ ಬೋಟನ್ನು ಮತ್ತೆ ಮಂಜೇಶ್ವರ ಪೊಲೀಸರ ವಶಕ್ಕೆ ಬಿಟ್ಟುಕೊಟ್ಟಿದ್ದಲ್ಲದೆ, ನಾಲ್ವರು ಮೀನುಗಾರರನ್ನು ಪೊಲೀಸರಿಗೆ ಸರೆಂಡರ್ ಮಾಡಿಸಲಾಗಿತ್ತು. ಇದಾಗಿ 15 ದಿನಗಳಾದರೂ, ಮೀನುಗಾರರನ್ನು ಬಿಟ್ಟು ಕೊಡದೆ ಸತಾಯಿಸುತ್ತಿದ್ದಾರೆಂದು ಮೀನುಗಾರ ಮುಖಂಡ ನವೀನ್ ಬಂಗೇರ ಹೇಳುತ್ತಾರೆ.
ಆಳಸಮುದ್ರಕ್ಕೆ ಮೀನುಗಾರಿಕೆ ತೆರಳುವಾಗ ಕೇರಳ ಭಾಗದಿಂದ ಹೋಗುವುದು ಸಾಮಾನ್ಯ. ಹಾಗೆ ನೋಡಿದರೆ, ಕೇರಳ, ತಮಿಳ್ನಾಡಿನ ಅದೆಷ್ಟೋ ಬೋಟ್ ಗಳು ಕರ್ನಾಟಕಕ್ಕೆ ಬರುತ್ತವೆ. ಮಂಗಳೂರು, ಮಲ್ಪೆ ಬಂದರಿಗೇ ಬಂದು ಮೀನು ಇಳಿಸಿ ಹೋಗುತ್ತವೆ. ಹಾಗೆಂದು ಅವುಗಳ ವಿರುದ್ಧ ಯಾವುದೇ ಕೇಸು ಜಡಿಯುವುದು ಇಲ್ಲ. ಕಳೆದ ಒಂದು ವರ್ಷದಿಂದ ಕೇರಳದ ಕರಾವಳಿ ಕಾವಲು ಪಡೆ ಪೊಲೀಸರು ಕಿರುಕುಳ ನೀಡುತ್ತಿದ್ದಾರೆ. ಕಾನೂನು ಪ್ರಕಾರ, ಅವರಿಗೆ ಬೋಟನ್ನು ಪರಿಶೀಲಿಸುವ ಅಧಿಕಾರ ಮಾತ್ರ ಇದೆ. ವಶಪಡಿಸುವ ಅಥವಾ ದಂಡ ವಿಧಿಸುವ ಅಧಿಕಾರ ಇಲ್ಲ. ಪೊಲೀಸರು ಅದಕ್ಕಾಗಿಯೇ ಕರ್ನಾಟಕದ ಮೀನುಗಾರಿಕಾ ಬೋಟ್ಗಳನ್ನು ವಶಕ್ಕೆ ಪಡೆದು ಒಯ್ಯುವುದಲ್ಲದೆ, ಕೇರಳದ ಮೀನುಗಾರಿಕಾ ಇಲಾಖೆಗೆ ಒಪ್ಪಿಸುತ್ತಾರೆ. ಅಲ್ಲಿಂದ ಲಕ್ಷಾಂತರ ರೂಪಾಯಿ ದಂಡ ಹಾಕಿಸುತ್ತಿದ್ದಾರೆ. ಇದು ಯಾವ ನ್ಯಾಯ ಎಂದು ನವೀನ್ ಬಂಗೇರ ಪ್ರಶ್ನೆ ಮಾಡುತ್ತಾರೆ.
ಈ ಬಗ್ಗೆ ಮೀನುಗಾರಿಕಾ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರ ಗಮನಕ್ಕೆ ತರಲು ಪ್ರಯತ್ನಿಸುತ್ತಿದ್ದೇವೆ. ಆದರೆ, ಇತ್ತೀಚೆಗೆ ಬೋಟ್ ಹೈಜಾಕ್ ಪ್ರಕರಣದಲ್ಲಿ ಯಾವುದೇ ಲಾಭ ಆಗಿಲ್ಲ. ಪಾಕಿಸ್ತಾನದವರ ರೀತಿ ಮೀನುಗಾರರನ್ನು ವಶಕ್ಕೆ ಪಡೆದು ಚಿತ್ರಹಿಂಸೆ ಕೊಡುತ್ತಿರುವುದರ ಬಗ್ಗೆ ಕೋರ್ಟ್ ಕಟ್ಟೆ ಏರುವ ಚಿಂತನೆ ಇದೆ ಎಂದು ಹೇಳಿದ್ದಾರೆ. ಎರಡು ರಾಜ್ಯಗಳ ಆಡಳಿತಾತ್ಮಕ ವಿಷಯ ಆಗಿರುವುದರಿಂದ ಮೀನುಗಾರರ ಸಮಸ್ಯೆಗೆ ಜಿಲ್ಲಾಡಳಿತ ಕಿವಿಯಾಗಬೇಕಿದೆ.
After road disputes with Kerala Mangalore Border now Kerala has started issues with fishing on sea with Mangalore fishermens.
15-02-25 01:18 pm
Bangalore Correspondent
COVID 19 scam, CBI: ಬಿಜೆಪಿ ಸರ್ಕಾರದ ಕೋವಿಡ್ ಅಕ್...
15-02-25 12:52 pm
Bangalore ACP Govardhan Gopal, Love story: ಎಸ...
15-02-25 12:26 pm
Solider assisted, Athani, Belagavi: ಅಥಣಿ ಪಟ್ಟ...
14-02-25 10:48 pm
Home Minister Parameshwara, Udayagiri, Mysur...
14-02-25 08:44 pm
15-02-25 12:32 pm
HK News Desk
ಉಚಿತ ಯೋಜನೆಗಳ ಕಾರಣದಿಂದಾಗಿ ಕಾರ್ಮಿಕರು ಕೆಲಸಕ್ಕೆ ಹ...
13-02-25 02:45 pm
Maha Kumbh, Jabalpur Accident: ಪ್ರಯಾಗ್ರಾಜ್ನ...
11-02-25 04:19 pm
Wedding, Cibil Score: ಸಿಬಿಲ್ ಸ್ಕೋರ್ ಚೆನ್ನಾಗಿಲ...
10-02-25 05:48 pm
CBI arrest, Tirupati laddu: ತಿರುಪತಿ ಲಡ್ಡಿನಲ್ಲ...
10-02-25 02:13 pm
15-02-25 04:59 pm
Mangalore Correspondent
Mangalore Urban health centre, Mangalore ; ಬ...
14-02-25 10:22 pm
Accident Mangalore, Roshan Moras; ಬೋಳಿಯಾರಿನಲ್...
13-02-25 09:40 pm
Mangalore Ullal Police, Inspector Balakrishna...
13-02-25 09:17 pm
Income tax Raid, Swastik Trading company, Man...
13-02-25 10:08 am
15-02-25 05:08 pm
HK News Desk
Bhagappa Harijan Murder, Four Arrested, Vijay...
14-02-25 05:19 pm
Ragging Horror At Kerala: ಬೆತ್ತಲೆ ನಿಲ್ಲಿಸಿ ಮರ...
13-02-25 10:20 pm
Mangalore Robbery, Kolya: ನೋಡ ನೋಡುತ್ತಲೇ ಅಂಚೆ...
13-02-25 10:14 pm
Fake HPCL oil racket, Belagavi, Vijayapura: ಎ...
13-02-25 05:54 pm