ದೇರಳಕಟ್ಟೆ ; ಆರನೇ ಮಹಡಿಯಿಂದ ಬಿದ್ದು ಸೆಕ್ಯುರಿಟಿ ಗಾರ್ಡ್  ಸಾವು 

26-01-21 10:12 am       Mangaluru Correspondent   ಕರಾವಳಿ

ದೇರಳಕಟ್ಟೆಯ ಯೆನಪೋಯ ಆಸ್ಪತ್ರೆ ಬಳಿಯ ಕಟ್ಟಡವೊಂದರಿಂದ ಆಯತಪ್ಪಿ ಬಿದ್ದು ಸೆಕ್ಯುರಿಟಿ ಗಾರ್ಡ್ ಸಾವನ್ನಪ್ಪಿದ ಘಟನೆ ಸೋಮವಾರ ತಡರಾತ್ರಿ ಸಂಭವಿಸಿದೆ. 

ಉಳ್ಳಾಲ, ಜ.26: ದೇರಳಕಟ್ಟೆಯ ಯೆನಪೋಯ ಆಸ್ಪತ್ರೆ ಬಳಿಯ ಕಟ್ಟಡವೊಂದರಿಂದ ಆಯತಪ್ಪಿ ಬಿದ್ದು ಸೆಕ್ಯುರಿಟಿ ಗಾರ್ಡ್ ಸಾವನ್ನಪ್ಪಿದ ಘಟನೆ ಸೋಮವಾರ ತಡರಾತ್ರಿ ಸಂಭವಿಸಿದೆ. 

ಮೃತರನ್ನು ಹರೇಕಳ ದೆಬ್ಬೇಲಿ ನಿವಾಸಿ ಸತೀಶ್(38) ಎಂದು ಗುರುತಿಸಲಾಗಿದೆ. ಆಸ್ಪತ್ರೆ ಬಳಿಯ ಹಸನ್ ಚೇಂಬರ್ಸ್ ಕಟ್ಟಡದ ಆರನೇ ಮಹಡಿಗೆ ಲಿಫ್ಟ್ ಚೆಕ್ ಮಾಡಲು ಸತೀಶ್ ತೆರಳಿದ್ದು ಅಲ್ಲಿಂದ ಆಯತಪ್ಪಿ ಕೆಳಗೆ ಬಿದ್ದು ತಲೆಗೆ ಗಂಭೀರ ಗಾಯಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಕೊಣಾಜೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

38-year-old man falls to death from the sixth floor in Derlakatte in Mangalore after he slipped while he was repairing the lift.