ವೇಣೂರು ; ನದಿಗೆ ಸ್ನಾನಕ್ಕೆ ಹೋದ ಯುವಕ ನೀರುಪಾಲು

01-02-21 06:24 pm       Mangalore Correspondent   ಕರಾವಳಿ

ಮಾಲಾಡಿ ಬಳಿಯ ಕುಕ್ಕೇಡಿ ಎಂಬಲ್ಲಿ ನದಿಯಲ್ಲಿ ಮುಳುಗಿ ಯುವಕ ಮೃತಪಟ್ಟ ಘಟನೆ ನಡೆದಿದೆ. 

ಬೆಳ್ತಂಗಡಿ, ಫೆ.1: ಇಲ್ಲಿನ ಮಾಲಾಡಿ ಬಳಿಯ ಕುಕ್ಕೇಡಿ ಎಂಬಲ್ಲಿ ನದಿಯಲ್ಲಿ ಮುಳುಗಿ ಯುವಕ ಮೃತಪಟ್ಟ ಘಟನೆ ನಡೆದಿದೆ. 

ಮಾಲಾಡಿ ಗ್ರಾಮದ ನಿವಾಸಿ ರವೀಂದ್ರ (26) ಮೃತ ಯುವಕ. ಕುಕ್ಕೇಡಿಯ ಉಮಿಲಾಯಿ ಡ್ಯಾಮ್ ಬಳಿ ನದಿ ನೀರಿನಲ್ಲಿ ಸ್ನಾನ ಮಾಡುತ್ತಿದ್ದಾಗ ಆಕಸ್ಮಿಕವಾಗಿ ಮುಳುಗಿ ಮೃತಪಟ್ಟಿದ್ದಾನೆ ಎನ್ನಲಾಗಿದೆ. ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

In a tragic incident a 26-year-old Man died after drowning in the river at Belthanagady.