ಬ್ರೇಕಿಂಗ್ ನ್ಯೂಸ್
24-03-21 04:49 pm Mangalore Correspondent ಕರಾವಳಿ
ಮಂಗಳೂರು, ಮಾ.24 : ಕೃಷಿ ಕಾಯ್ದೆ ವಿರುದ್ಧ ದೆಹಲಿಯಲ್ಲಿ ನಡೆಯುತ್ತಿರುವ ರೈತ ಚಳವಳಿಗೆ ಪೂರಕವಾಗಿ ಕೃಷಿ ಕಾಯ್ದೆ ವಿರುದ್ಧ ಜಾಗೃತಿ ಮೂಡಿಸುವ ದೃಷ್ಟಿಯಿಂದ ಇಬ್ಬರು ಪಂಜಾಬಿ ರೈತರು ದೇಶ ಸಂಚಾರಕ್ಕೆ ತೊಡಗಿದ್ದಾರೆ. 14 ಸಾವಿರ ಕಿಲೋಮೀಟರ್ ದೇಶಯಾತ್ರೆಯಲ್ಲಿ ತೊಡಗಿಸಿಕೊಂಡ ಇಬ್ಬರು ಪಂಜಾಬಿ ರೈತರು ಈಗ ಮಂಗಳೂರಿಗೆ ಆಗಮಿಸಿದ್ದಾರೆ.
ಪಂಜಾಬಿನಿಂದ ಜ.5 ರಂದು ಹೊರಟ ಇವರು ಹರಿಯಾಣ, ದೆಹಲಿ, ಉತ್ತರಪ್ರದೇಶ, ಬಿಹಾರ, ಅಸ್ಸಾಂ, ನಾಗಲ್ಯಾಂಡ್, ಮಣಿಪುರ, ಮಿಜೋರಾಂ, ಮೇಘಾಲಯ, ಸಿಕ್ಕಿಂ, ಜಾರ್ಖಂಡ್, ಪಶ್ಚಿಮ ಬಂಗಾಲ, ಒಡಿಶಾ, ಛತ್ತೀಸ್ಗಢ, ಮಹಾರಾಷ್ಟ್ರ, ತೆಲಂಗಾಣ, ಆಂಧ್ರ ಪ್ರದೇಶ, ತಮಿಳುನಾಡು, ಕೇರಳಕ್ಕೆ ಪ್ರಯಾಣಿಸಿದ್ದು ಮಂಗಳವಾರ ರಾತ್ರಿ ಮಂಗಳೂರಿಗೆ ತಲುಪಿದ್ದಾರೆ. ಇಂದು ಉಡುಪಿ ಕಡೆ ಪ್ರಯಾಣ ಬೆಳೆಸಿದ್ದು ಕೃಷಿ ಪ್ರದೇಶಗಳಲ್ಲಿ ರೈತರಿಗೆ ಕೃಷಿ ಕಾಯ್ದೆ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ.
ಇದರ ಜೊತೆಗೆ ಯಾತ್ರೆಗೆ ಬಳಸುತ್ತಿರುವ ಸ್ಕಾರ್ಪಿಯೋ ವಾಹನದಲ್ಲಿ ಮಲಗುವ, ಅಡುಗೆ ಮಾಡುವ ವ್ಯವಸ್ಥೆಯನ್ನೂ ಮಾಡಿಕೊಂಡಿದ್ದಾರೆ. ಹಿಂಬದಿಯ ಎರಡು ಸೀಟುಗಳನ್ನು ತೆಗೆದು ಇಬ್ಬರು ಹಾಸಿಗೆ ಹರಡಿ ಮಲಗುವಂತೆ ವಾಹನವನ್ನು ವಿನ್ಯಾಸ ಮಾಡಲಾಗಿದ್ದು, ಅದರಲ್ಲಿ ಗ್ಯಾಸ್ ಸ್ಟೌ, ಆಹಾರ ವಸ್ತು, ರಾತ್ರಿ ಹೊರಗೆ ಮಲಗಲು ಟೆಂಟ್ ವ್ಯವಸ್ಥೆ ಇದೆ. ವಾಹನದಲ್ಲಿ ಕೃಷಿ ಕಾಯ್ದೆ ವಿರೋಧಿ ಬರಹಗಳನ್ನು ಬರೆಯಲಾಗಿದೆ.
Two Punjabi farmers arrive in Mangalore travelling parts of India by their car in support of Protest of farmers in India.
21-11-25 10:19 am
Bangalore Correspondent
CM. Siddaramaiah, CM SEAT: ಯಾವ ಕ್ರಾಂತಿಯೂ ಇಲ್ಲ...
20-11-25 03:30 pm
DK Suresh, CM Siddaramaiah : ಸಿಎಂ ಕುರ್ಚಿ ಕ್ಲೈ...
20-11-25 03:01 pm
ಆನೇಕಲ್ ನಲ್ಲಿ ಕಚಡಾ ಡಾಕ್ಟರ್ ; ಇನ್ಪೆಕ್ಟರ್ ಅಮಾನತಿ...
19-11-25 02:16 pm
ಸ್ತ್ರೀ ವೇಷಧಾರಿಗಳು ಸಹಕರಿಸದಿದ್ದರೆ ಮರುದಿನ ಮೇಳದಿಂ...
19-11-25 12:20 pm
21-11-25 02:26 pm
HK News Desk
ಶ್ರೀಲಂಕಾದಲ್ಲಿ ನ್ಯೂಜಿಲೆಂಡ್ ಮಹಿಳೆಯ ಜೊತೆ ಯುವಕನ ಅ...
19-11-25 06:47 pm
ಕೆಂಪು ಕೋಟೆ ಬ್ಲಾಸ್ಟ್ ಕೇಸ್ ; ಅಲ್ ಫಲಾಹ್ ವಿವಿಗೆ ಸ...
19-11-25 11:10 am
ಬಾಂಗ್ಲಾದಲ್ಲಿ ವಿದ್ಯಾರ್ಥಿಗಳ ಮಾರಣ ಹೋಮಕ್ಕೆ ಅವರೇ ಕ...
17-11-25 10:58 pm
Delhi Blast Probe Widens: ದೆಹಲಿ ಸ್ಫೋಟ ; ಹರ್ಯಾ...
17-11-25 07:33 pm
20-11-25 10:48 pm
Mangalore Correspondent
Mangalore, Dharmasthala Case: ಧರ್ಮಸ್ಥಳ ಪ್ರಕರಣ...
20-11-25 10:08 pm
'ಮಹಿಷಾಸುರ'ನ ವೇಷ ಕಳಚುತ್ತಿದ್ದಂತೆ ಯಕ್ಷಗಾನ ಕಲಾವಿದ...
20-11-25 01:42 pm
ಡಿ.3ರಂದು ಕೊಣಾಜೆಯಲ್ಲಿ ನಾರಾಯಣ ಗುರು-ಗಾಂಧೀಜಿ 'ಸಂವ...
19-11-25 10:46 pm
ಯಕ್ಷಗಾನದ ಬಗ್ಗೆ ಅವಹೇಳನ ; ಬಿಳಿಮಲೆ ಅವರನ್ನು ಅಧ್ಯಕ...
19-11-25 07:28 pm
20-11-25 10:53 pm
Bangalore Correspondent
BMR Group Fraud, Money, Mangalore, Surathkal:...
20-11-25 06:01 pm
Bangalore ATM Van Robbery, Update: ಬೆಂಗಳೂರಿನ...
20-11-25 11:51 am
B C Road, Crime, Mangalore: ಗ್ರಾಹಕಿ ಸೋಗಿನಲ್ಲಿ...
19-11-25 11:17 pm
Shri Tatvamasi Charitable Trust, Fraud: ಸುಳ್ಯ...
19-11-25 09:26 pm