ಬ್ರೇಕಿಂಗ್ ನ್ಯೂಸ್
30-03-21 11:02 pm Mangaluru correspondent ಕರಾವಳಿ
ಮಂಗಳೂರು, ಮಾ.30: ಮಂಗಳೂರು ಮೂಲದ ದಂಪತಿಯನ್ನು ಅವರ ಮಗನೇ ಚೂರಿಯಿಂದ ಇರಿದು ಭೀಕರವಾಗಿ ಕೊಲೆಗೈದ ಘಟನೆ ನ್ಯೂಜಿಲಂಡ್ ದೇಶದ ಆಕ್ಲೆಂಡ್ ನಗರದಲ್ಲಿ ನಡೆದಿದೆ.
ಮೂಲತಃ ಮಂಗಳೂರಿನ ಬಲ್ಮಠ ನಿವಾಸಿಗಳಾಗಿದ್ದ ಕ್ರಿಸ್ತಿಯನ್ ದಂಪತಿ ಎಲ್ಸಿ ಬಂಗೇರ ಮತ್ತು ಆಕೆಯ ಪತಿ ಹರ್ಮನ್ ಬಂಗೇರ ಕೊಲೆಯಾದವರು. 23 ವರ್ಷದ ಇಂಜಿನಿಯರಿಂಗ್ ಓದುತ್ತಿದ್ದ ಪುತ್ರ ಶೀಲ್ ಎಂಬಾತ ತನ್ನ ಮನೆಯಲ್ಲೇ ಕೊಲೆ ಮಾಡಿದ್ದಾನೆ. ಐದು ದಿನಗಳ ಹಿಂದೆ ಘಟನೆ ನಡೆದಿದ್ದು ಹೆತ್ತವರಿಗೆ ಚೂರಿಯಿಂದ ಇರಿದ ಬಳಿಕ ತಾನು ಕೂಡ ಆತ್ಮಹತ್ಯೆಗೆ ಯತ್ನಿಸಿದ್ದ. ಬಳಿಕ ಸ್ಥಳೀಯರು ಗಮನಿಸಿ, ಆತನನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.
ಎಲ್ಸಿ ಮತ್ತು ಹರ್ಮನ್ ಮಂಗಳೂರಿನವರು. ಎಲ್ಸಿಯ ತಂದೆ ಎಡ್ವರ್ಡ್ ಅಮ್ಮನ್ನ ಬಲ್ಮಠದ ಶಾಂತಿ ಕೆಥಡ್ರಲ್ ನಲ್ಲಿ ಸಂಡೇ ಸ್ಕೂಲ್ ನಲ್ಲಿ ಶಿಕ್ಷಕರಾಗಿದ್ದರು. ಮರ್ಕೆರಾ ಹಿಲ್ ಚರ್ಚ್ ನಲ್ಲಿ ಹಿರಿಯರಾಗಿ ಗೌರವ ಹೊಂದಿದ್ದರು.

ಹರ್ಮನ್ ಮುಂಬೈನಲ್ಲಿ ಶಾಲೆ ಒಂದರಲ್ಲಿ ಆಡಳಿತಾಧಿಕಾರಿ ಆಗಿದ್ದರು. ಮುಂಬೈನಲ್ಲಿ ಗೋದ್ರೆಜ್ ಕಂಪನಿಯಲ್ಲಿ ಉದ್ಯೋಗ ಹೊದಿದ್ದ ಎಲ್ಸೀ ಬಳಿಕ ಮದುವೆಯಾಗಿದ್ದರು. ಆನಂತರ ದಂಪತಿ ಗೋವಾದಲ್ಲಿ ನೆಲೆಸಿದ್ದರು. ಮಗನ ಉನ್ನತ ಮತ್ತು ಉತ್ತಮ ವಿದ್ಯಾಭ್ಯಾಸಕ್ಕಾಗಿ ದಂಪತಿ 2007ರಲ್ಲಿ ನ್ಯೂಜಿಲ್ಯಾಂಡ್ ತೆರಳಿದ್ದರು. 2014ರಲ್ಲಿ ಮಗ ಪದವಿ ಪಡೆದಾಗ ತೆಗೆಸ್ಕೊಂಡಿದ್ದ ಚಿತ್ರವನ್ನು ತಂದೆ ಹರ್ಮನ್ ಇತ್ತೀಚೆಗಷ್ಟೇ ತಮ್ಮ ಫೇಸ್ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದರು.
ಆದರೆ, ಮಗ ಇತ್ತೀಚಿನ ದಿನಗಳಲ್ಲಿ ಹೆತ್ತವರಿಂದ ದೂರವಿರಲು ಬಯಸಿದ್ದ. ಜೊತೆಗೆ ತನ್ನಿಚ್ಚೆಗೆ ಸರಿಕಂಡಂತೆ ವರ್ತಿಸುತ್ತಿದ್ದ. ಇದೇ ಕಾರಣಕ್ಕೆ ಹೆತ್ತವರ ಜೊತೆ ಜಗಳ ಆಗ್ತಿತ್ತು ಎನ್ನಲಾಗಿದೆ. ಇದೇ ವಿಚಾರದಲ್ಲಿ ಕಳೆದ ಶುಕ್ರವಾರ ಜಗಳ ನಡೆದಿದ್ದು ಕ್ರುದ್ಧಗೊಂಡ ಶೀಲ್ ಹೆತ್ತವರ ಮೇಲೆ ಚೂರಿಯಿಂದ ಇರಿದಿದ್ದ. ಹೆತ್ತವರು ಸತ್ತರೆಂದು ಗೊತ್ತಾಗಿ ಬಳಿಕ ತಾನೂ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಈಗ ಆಕ್ಲೆಂಡ್ ಆಸ್ಪತ್ರೆಯಲ್ಲಿ ಜೀವನ್ಮರಣ ಸ್ಥಿತಿಯಲ್ಲಿದ್ದು ಪೊಲೀಸರು ವಶಕ್ಕೆ ಪಡೆದಿದ್ದಾರೆ.
In a shocking incident Mangalorean Couple has been Murdered by their own son in Auckland, New Zealand. The deceased have been identified as Elisabeth Bangera and Herman Bangera who were residing in Balmatta, Mangalore
18-12-25 11:05 pm
HK News Desk
Byrathi Suresh, Mangalore, Karavali: 'ಕರಾವಳಿಗ...
18-12-25 08:40 pm
ಪರಮೇಶ್ವರ್ ಸಿಎಂ ಆಗಲೆಂದು ಒಕ್ಕಲಿಗ, ಲಿಂಗಾಯತ, ದಲಿತ...
18-12-25 04:31 pm
Shivamogga, Gold Chain Robbery, Police: ಕಾಂಗ್...
18-12-25 02:26 pm
ಹೃದಯಾಘಾತ ; ರಸ್ತೆ ಮೇಲೆ ಬಿದ್ದುಕೊಂಡ ಪತಿಯನ್ನು ರಕ್...
18-12-25 02:09 pm
18-12-25 04:34 pm
HK News Desk
ಸಮವಸ್ತ್ರ ಕಳಪೆಯೆಂದು ಸಹಪಾಠಿಗಳ ಅಣಕ ; ನೊಂದ ನಾಲ್ಕನ...
17-12-25 10:27 pm
ಆಸ್ಟ್ರೇಲಿಯಾ ಬೋಂಡಿ ಬೀಚ್ ದಾಳಿ ; ಹೈದ್ರಾಬಾದ್ ಮೂಲದ...
17-12-25 01:38 pm
ಯುಕೆಯ ಮಿಡ್ಲಾಂಡ್ಸ್ ನಲ್ಲಿ ಕನ್ನಡ ರಾಜ್ಯೋತ್ಸವ ; ಬರ...
16-12-25 06:33 pm
ಭಟ್ಕಳ ತಹಸೀಲ್ದಾರ್ ಕಚೇರಿಗೂ ಸ್ಫೋಟದ ಬೆದರಿಕೆ ; ತಮಿ...
16-12-25 01:56 pm
18-12-25 10:51 pm
Udupi Correspondent
ಬಜ್ಪೆ ಪೊಲೀಸರ ಬಗ್ಗೆ ಅವಹೇಳನ, ಆರೋಪಿಗಳಿಗೆ ರಾಜಾತಿಥ...
18-12-25 10:24 pm
ಮಹೇಶ್ ಶೆಟ್ಟಿ ತಿಮರೋಡಿ ಮತ್ತೆ ರಾಯಚೂರಿಗೆ ಗಡೀಪಾರು...
18-12-25 10:52 am
Dharmasthala case, Chinnayya: ಜಾಮೀನು ಸಿಕ್ಕರೂ...
17-12-25 08:54 pm
New year 2026, Mangalore Rules: ಹೊಸ ವರ್ಷಾಚರಣೆ...
17-12-25 08:19 pm
18-12-25 04:53 pm
Mangaluru Correspondent
ಫ್ಲಾಟ್, ಜಾಗವನ್ನು ಮಾರಾಟ ಮಾಡಿ ಸೈಬರ್ ವಂಚಕರಿಗೆ 2...
17-12-25 11:14 am
ಕದ್ರಿಯಲ್ಲಿ ಬೈಕ್ ಕದ್ದು ಭಟ್ಕಳದಲ್ಲಿ ಮಹಿಳೆಯ ಸರ ಕಸ...
16-12-25 10:35 pm
Mangalore Crime, Robbery, Mukka: 'ಬಂಗಾರ್ ಒಲ್ಪ...
15-12-25 10:26 pm
Udupi Murder, Brahmavar, Update: ಕುಡಿದ ಮತ್ತಿನ...
15-12-25 05:37 pm