ಕೌಟುಂಬಿಕ ಕಲಹ ; ಮನೆಯಲ್ಲೇ ಗೃಹಿಣಿ ಸಾವಿಗೆ ಶರಣು

08-05-21 11:26 am       Mangalore Correspondent   ಕರಾವಳಿ

ಕೌಟುಂಬಿಕ ಕಲಹದಲ್ಲಿ ಗೃಹಿಣಿಯೊಬ್ಬರು ಮನೆಯಲ್ಲೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಲ್ಲೇರಿ ಎಂಬಲ್ಲಿ ನಡೆದಿದೆ. 

ಉಪ್ಪಿನಂಗಡಿ, ಮೇ 8 : ಕೌಟುಂಬಿಕ ಕಲಹದಲ್ಲಿ ಗೃಹಿಣಿಯೊಬ್ಬರು ಮನೆಯಲ್ಲೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಲ್ಲಿನ ಕರಾಯ ಗ್ರಾಮದ ಕಲ್ಲೇರಿ ಎಂಬಲ್ಲಿ ನಡೆದಿದೆ. 

ಮಂಗಳೂರಿನ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗದಲ್ಲಿದ್ದ ಸತೀಶ್ ನಾಯಕ್ ಎಂಬವರ ಪತ್ನಿ ಮೈಥಿಲಿ (27) ಆತ್ಮಹತ್ಯೆ ಮಾಡಿಕೊಂಡ ಮಹಿಳೆ ಎಂದು ತಿಳಿದುಬಂದಿದೆ. ಕೃತ್ಯ ನಡೆದ ವೇಳೆ ಮನೆಯಲ್ಲಿಯೇ ಇದ್ದ ಪತಿ ಬಾಗಿಲು ಮುರಿದು ಆಕೆಯನ್ನು ರಕ್ಷಿಸಲು ಮುಂದಾಗಿದ್ದಾರೆ. ಆದರೆ ಆಸ್ಪತ್ರೆಗೆ ಕರೆತರುವ ವೇಳೆ ಆಕೆ ಸಾವನ್ನಪ್ಪಿದ್ದಾಳೆ. 

ಉಪ್ಪಿನಂಗಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

27-year-old women committed suicide due to family disputes in Belthangady. The deceased has been identified as Mitili.