ಬ್ರೇಕಿಂಗ್ ನ್ಯೂಸ್
29-07-21 07:46 pm Mangaluru Correspondent ಕರಾವಳಿ
ಉಳ್ಳಾಲ, ಜು.29: ತಲಪಾಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನವು ಆರು ವರ್ಷಗಳ ಹಿಂದೆ ಸುಮಾರು 5 ಕೋಟಿ ರೂ. ವೆಚ್ಚದಲ್ಲಿ ಜೀರ್ಣೋದ್ಧಾರಗೊಂಡಿತ್ತು. ಆದರೆ, ದೇವಸ್ಥಾನ ಜೀರ್ಣೋದ್ದಾರ ಸಮಿತಿಯ ಕಾರ್ಯದರ್ಶಿಯೇ 3 ಲಕ್ಷ ರೂಪಾಯಿ ಸ್ವಾಹ ಮಾಡಿದ್ದಾರೆಂದು ಆರೋಪಿಸಿ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ.
ತಲಪಾಡಿಯ ಗ್ರಾಮದೇವತೆ ಇತಿಹಾಸ ಪ್ರಸಿದ್ಧ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನವು ಭಕ್ತಾದಿಗಳ ದೇಣಿಗೆಯಿಂದ 6 ವರ್ಷಗಳ ಹಿಂದೆ ಸುಮಾರು ಐದು ಕೋಟಿ ರೂಪಾಯಿ ವೆಚ್ಚದಲ್ಲಿ ಜೀರ್ಣೋದ್ಧಾರ ಕಂಡಿತ್ತು.
ಕೆ.ಸಿ. ಆಳ್ವ ಅವರು ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರಾಗಿದ್ದರು.
ಇದೀಗ ಜೀರ್ಣೋದ್ಧಾರ ಸಮಿತಿ ಕಾರ್ಯಾಧ್ಯಕ್ಷರಾಗಿದ್ದ ಕೆ.ಪಿ ಸುರೇಶ್ ಮಾಡೂರು ಅವರು ಜೀರ್ಣೋದ್ದಾರ ಕಾರ್ಯದಲ್ಲಿ 3 ಲಕ್ಷ ರೂಪಾಯಿ ಅವ್ಯವಹಾರ ನಡೆಸಿರುವುದರ ಬಗ್ಗೆ ಸಮಿತಿಯ ಕಾರ್ಯದರ್ಶಿ ಆಗಿದ್ದ ಬಿಜೆಪಿ ಮುಖಂಡ ಮೋಹನದಾಸ್ ಶೆಟ್ಟಿ ಕಿನ್ಯ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಸ್ಥಳೀಯ ಬಿಜೆಪಿ ಮಂಡಲದ ಮುಖಂಡರಾಗಿರುವ ಮೋಹನದಾಸ್ ಶೆಟ್ಟಿ ಕಿನ್ಯ ಅವರು ದೇವಸ್ಥಾನದ ಬ್ರಹ್ಮ ರಥ ನಿರ್ಮಾಣಕ್ಕೆ ಮುಂಗಡ ಹಣ ಕೊಡಲಿಕ್ಕೆ ಇದೆಯೆಂದು ಹೇಳಿ ಜೀರ್ಣೋದ್ಧಾರ ಸಮಿತಿಯ ಬ್ಯಾಂಕ್ ಖಾತೆಯ ಖಾಲಿ ಚೆಕ್ ಗೆ ಸಹಿ ಹಾಕಿಸಲು ಬಂದಿದ್ದರು. ಆದರೆ, ಮೊದಲಿಗೆ ತಾನು ಅವರ ವಹಿವಾಟು ಸರಿ ಇಲ್ಲವೆಂದು ಸಹಿ ಹಾಕಲು ಒಪ್ಪಿರಲಿಲ್ಲ. ನಂತರ ಜೀರ್ಣೋದ್ಧಾರ ಸಮಿತಿಯ ಇತರ ಸದಸ್ಯರಲ್ಲಿ ವಿಚಾರಿಸಿದಾಗ ದೇವಸ್ಥಾನದ ರಥಕ್ಕಾಗಿ ಆ ಹಣ ಎಂದು ಅವರು ಹೇಳಿದ್ದಕ್ಕೆ ತಾನು ಚೆಕ್ಕಿಗೆ ಸಹಿ ಹಾಕಿರುತ್ತೇನೆ ಎಂದು ಕಾರ್ಯಾಧ್ಯಕ್ಷರಾದ ಸುರೇಶ್ ಅವರು ಸ್ಪಷ್ಟನೆ ನೀಡಿದ್ದಾರೆ.
ಆದರೆ ತಲಪಾಡಿಯವರೇ ಆದ ಸಮಿತಿಯ ಕಾರ್ಯದರ್ಶಿ ಮೋಹನದಾಸ್ ಶೆಟ್ಟಿ ಚೆಕ್ ಮುಖಾಂತರ 3 ಲಕ್ಷ ರೂಪಾಯಿಗಳನ್ನು ನುಂಗಿ ನೀರು ಕುಡಿದು ಮೋಸ ಮಾಡಿದ್ದು, ಈ ಹಣದ ವಿಚಾರದಲ್ಲಿ ನನಗೆ ಯಾವುದೇ ಸಂಬಂಧ ಇಲ್ಲ ಎಂದು ಕೆ.ಪಿ ಸುರೇಶ್ ಸ್ಪಷ್ಟೀಕರಣ ನೀಡಿದ್ದು ಈ ವಿಚಾರವನ್ನ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು ವೈರಲ್ ಆಗಿದೆ. ಅಲ್ಲದೆ ಹತ್ತು ಜನರ ದೇಣಿಗೆಯ ಮೂರು ಲಕ್ಷ ರೂಪಾಯಿಗಳನ್ನು ಮೋಹನದಾಸ ಶೆಟ್ಟಿ ಅವರು ಹಿಂದಿರುಗಿಸಬೇಕೆಂದು ಕೆ.ಪಿ ಸುರೇಶ್ ಅವರು ಒತ್ತಾಯಿಸಿದ್ದಾರೆ.
ಜೀರ್ಣೋದ್ಧಾರ ಕಾರ್ಯದ ಖರ್ಚು, ವೆಚ್ಚಗಳ ಲೆಕ್ಕಪತ್ರ ಇನ್ನೂ ಮಂಡನೆಯಾಗಿಲ್ಲವೆಂದು ಸ್ಥಳೀಯರು ಹೇಳಿದ್ದಾರೆ. ದೇವಸ್ಥಾನದಲ್ಲಿದ್ದ ಈ ಹಿಂದಿನ ವ್ಯವಸ್ಥಾಪನಾ ಸಮಿತಿ ಬರ್ಖಾಸ್ತುಗೊಂಡಿದ್ದು ಮತ್ತೆ ಸಮಿತಿ ರಚಿಸಲು ನುಂಗುಬಾಕ ಕಳಂಕಿತ ವ್ಯಕ್ತಿಗಳೇ ತೆರೆಮರೆಯಲ್ಲಿ ಕಸರತ್ತು ನಡೆಸುತ್ತಿದ್ದಾರೆಂದು ಸ್ಥಳೀಯರು ಆರೋಪಿಸಿದ್ದಾರೆ. ಕಾರಣಿಕ ಮತ್ತು ಇತಿಹಾಸ ಪ್ರಸಿದ್ಧ ದುರ್ಗೆಯ ದೇವಸ್ಥಾನದ ಜೀರ್ಣೋದ್ದಾರದ ಹಣದಲ್ಲೇ ಅವ್ಯವಹಾರ ನಡೆದದ್ದು ಮಾತ್ರ ದೇವಸ್ಥಾನದ ಭಕ್ತಾದಿಗಳ ಆಕ್ರೋಶಕ್ಕೆ ಕಾರಣವಾಗಿದೆ.
Talapady Durgaparameshwari Temple secretary alleged misuse of funds. It is said that Secretary Mohan Das has misused funds of Rs 3 lakhs which is said to be missing says temple administrative member, K P Suresh.
25-11-24 05:51 pm
Bangalore Correspondent
ಮನೆಯೊಂದು ಮೂರು ಬಾಗಿಲು, ಗೆಲುವು ಕಸಿದ ಬಿಜೆಪಿ ಒಳಜಗ...
25-11-24 03:28 pm
Bjp, D K Shivakumar : ಚನ್ನಪಟ್ಟಣ ಗೆಲ್ಲಲು ಬಿಜೆಪ...
24-11-24 08:39 pm
CM Siddaramaiah, BJP, Congress ಆರ್. ಅಶೋಕ್ ಕಾ...
23-11-24 07:43 pm
B Y Vijayendra, DK Shivkumar: ವಿಜಯೇಂದ್ರಗೆ ತೀವ...
23-11-24 02:15 pm
23-11-24 11:07 pm
HK News Desk
ಬಿಜೆಪಿ ‘ಗ್ಯಾರಂಟಿ’ಗೆ ಕೈಹಿಡಿಯದ ಜಾರ್ಖಂಡ್ ಮತದಾರ,...
23-11-24 05:34 pm
ಮಹಾರಾಷ್ಟ್ರದಲ್ಲಿ ಕೇಸರಿ ಕಮಾಲ್ ; ನಿರೀಕ್ಷೆಗೂ ಮೀರಿ...
23-11-24 04:33 pm
ಭಾರೀ ವಿವಾದ ಸೃಷ್ಟಿಸಿದ್ದ 'ಎಮರ್ಜೆನ್ಸಿ' ಚಿತ್ರ ಬಿಡ...
18-11-24 03:54 pm
ಶ್ರದ್ಧಾ ವಾಳ್ಕರ್ ಹತ್ಯೆಗೆ ಸೇಡು ತೀರಿಸಲು ಬಿಷ್ಣೋಯಿ...
18-11-24 01:09 pm
25-11-24 11:14 pm
Mangalore Correspondent
Vithoba Rukumai temple case, Mangalore: ವಿಠೋಬ...
25-11-24 10:39 pm
Ullal Dargah, Mangalore: ಎಪ್ರಿಲ್ 24 ರಿಂದ ಮೇ...
25-11-24 02:44 pm
Kukke Subrahmanya Temple, Mangalore: ನ.27ರಿಂದ...
24-11-24 09:13 pm
Hariprasad, Mangalore, Congress: ಮಹಾರಾಷ್ಟ್ರದಲ...
24-11-24 05:16 pm
25-11-24 06:17 pm
HK News Desk
Honeytrap Bangalore, Crime, Udupi: ಪ್ರೊಫೆಸರ್...
24-11-24 04:33 pm
Rowdy sheeter Dawood, Mangalore Crime, Police...
23-11-24 10:49 am
ಟ್ರಾಯ್ ಕಂಪನಿ ಸೋಗಿನಲ್ಲಿ ಕರೆ ; ಅಮೆರಿಕಾದ ಸಾಫ್ಟ್...
22-11-24 10:47 pm
Mangalore crime, Sexual Harrasment, Police: ಮ...
22-11-24 09:37 pm