ಬ್ರೇಕಿಂಗ್ ನ್ಯೂಸ್
06-01-22 02:23 pm Mangalore Correspondent ಕರಾವಳಿ
ಮಂಗಳೂರು, ಜ.6 : ಪಾಂಡೇಶ್ವರ ಮಹಿಳಾ ಠಾಣೆಯಲ್ಲಿ ಇಬ್ಬರು ಮಹಿಳಾ ಅಧಿಕಾರಿಗಳ ನಡುವಿನ ಜಡೆ ಜಗಳ, ಅದರಿಂದ ಹುಟ್ಟಿಕೊಂಡಿದ್ದ ಗುಂಪುಗಾರಿಕೆ, ಸಿಬಂದಿಯ ಅಶಿಸ್ತಿನ ಕಾರಣಕ್ಕೆ ಠಾಣೆಯ ಎಲ್ಲರಿಗೂ ಎತ್ತಂಗಡಿ ಶಿಕ್ಷೆ ವಿಧಿಸಲಾಗಿದೆ. ಠಾಣೆಯ ಇನ್ ಸ್ಪೆಕ್ಟರ್ ರೇವತಿ ಸೇರಿದಂತೆ ಎಲ್ಲ 32 ಸಿಬಂದಿಯನ್ನು ಬೇರೆ ಬೇರೆ ಠಾಣೆಗಳಿಗೆ ವರ್ಗಾಯಿಸಿ ಪೊಲೀಸ್ ಕಮಿಷನರ್ ಆದೇಶ ಹೊರಡಿಸಿದ್ದು, ಮಹಿಳಾ ಠಾಣೆಗೆ ಮೇಜರ್ ಸರ್ಜರಿ ಮಾಡಿ ಪೂರ್ತಿ ಹೊಸ ಸಿಬಂದಿಯನ್ನು ನಿಯೋಜನೆ ಮಾಡಿದ್ದಾರೆ.
ಮಂಗಳೂರಿನ ಮಹಿಳಾ ಠಾಣೆಯಲ್ಲಿ ಇನ್ ಸ್ಪೆಕ್ಟರ್ ರೇವತಿ ಮತ್ತು ಎಸ್ಐ ರೋಸಮ್ಮ ನಡುವೆ ಸರಿ ಹೋಗುತ್ತಿರಲಿಲ್ಲ. ಇದರಿಂದಾಗಿ ಠಾಣೆಯ ಸಿಬಂದಿ ನಡುವೆ ಗುಂಪುಗಾರಿಕೆ ನಡೆದು ಕರ್ತವ್ಯದಲ್ಲಿ ಲೋಪ ಆಗಿತ್ತು. ಇದರ ಪರಿಣಾಮ ಅಪರಾಧ ಪ್ರಕರಣಗಳಲ್ಲಿ ತನಿಖೆ ವಿಳಂಬವಾಗಿತ್ತು. ಕಳೆದ ಜುಲೈನಲ್ಲಿ ದಾಖಲಾಗಿದ್ದ ಕಂಕನಾಡಿ ನಗರ ಠಾಣೆಯ ಪೊಲೀಸ್ ಪೇದೆಯೊಬ್ಬ ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣವೂ ಮಹಿಳಾ ಠಾಣೆಯಲ್ಲಿ ದಾಖಲಾಗಿತ್ತು. ಸದ್ರಿ ಪ್ರಕರಣದ ತನಿಖೆಯನ್ನು ಪಿಎಸ್ಐ ರೋಸಮ್ಮ ಅವರಿಗೆ ವಹಿಸಲಾಗಿತ್ತು. ಆದರೆ, ರೋಸಮ್ಮ ಪ್ರಕರಣದಲ್ಲಿ ತನಿಖೆಯನ್ನು ವಿಳಂಬಿಸಿದ್ದಲ್ಲದೆ, ತಾಂತ್ರಿಕ ಸಾಕ್ಷ್ಯಗಳನ್ನು ಕಲೆಹಾಕಿರಲಿಲ್ಲ. ಆರೋಪಿ ಪೊಲೀಸ್ ಪೇದೆಯ ಪರವಾಗಿ ವರ್ತಿಸಿದ್ದಾರೆಂಬ ಆರೋಪವೂ ಇತ್ತು. ಠಾಣೆಯ ಇನ್ ಸ್ಪೆಕ್ಟರ್ ರೇವತಿ ಇದೇ ಪ್ರಕರಣವನ್ನು ರೋಸಮ್ಮ ವಿರುದ್ಧ ದಾಳವಾಗಿಸಿ, ಮೇಲಧಿಕಾರಿಗಳಿಗೆ ಕ್ರಮಕ್ಕೆ ಬರೆದಿದ್ದರು. ಸದ್ರಿ ಪ್ರಕರಣದಲ್ಲಿ ಕರ್ತವ್ಯ ಲೋಪ ಎಸಗಿದ ರೋಸಮ್ಮ ಅವರನ್ನು ಅಮಾನತು ಮಾಡಲಾಗಿದೆ.
ಇದೇ ವೇಳೆ, ಕಳೆದ ಆಗಸ್ಟ್ 26ರಂದು ಮಹಿಳಾ ಠಾಣೆಯಲ್ಲಿ ಊಟದ ಜೊತೆಗೆ ಸಿಬಂದಿ ಮದ್ಯಪಾನ ಮಾಡಿದ್ದಾರೆಂಬ ಆರೋಪದ ಬಗ್ಗೆ ಇನ್ ಸ್ಪೆಕ್ಟರ್ ರೇವತಿ, ಪೊಲೀಸ್ ಕಮಿಷನರ್ ಸಾಹೇಬ್ರಿಗೆ ವರದಿ ನೀಡಿದ್ದರು. ಈ ಬಗ್ಗೆ ಎಸಿಪಿ ಪರಮೇಶ್ವರ ಹೆಗಡೆ ತನಿಖೆ ನಡೆಸಿದ್ದು, ಅವರ ವರದಿ ಆಧರಿಸಿ ಐವರು ಸಿಬಂದಿಯನ್ನು ಪೊಲೀಸ್ ಕಮಿಷನರ್ ಕರ್ತವ್ಯದಿಂದ ಅಮಾನತು ಮಾಡಿದ್ದಾರೆ. ಎಎಸ್ಐ ಆಗಿರುವ ಬಾಬು ನಾಯ್ಕ, ದಯಾನಂದ, ಹೆಡ್ ಕಾನ್ಸ್ ಟೇಬಲ್ ರವಿಚಂದ್ರ ಹಾಗೂ ಇಬ್ಬರು ಮಹಿಳಾ ಹೆಡ್ ಕಾನ್ಸ್ ಟೇಬಲ್ ಗಳನ್ನು ಅಮಾನತು ಮಾಡಲಾಗಿದೆ.
ಇವೆರಡೂ ಪ್ರತ್ಯೇಕ ಘಟನೆಗಳಾಗಿದ್ದು, ಪ್ರತ್ಯೇಕವಾಗಿ ಇಲಾಖಾ ತನಿಖೆ ನಡೆಸಿ ಅಮಾನತು ಶಿಕ್ಷೆಯನ್ನು ನೀಡಲಾಗಿರುತ್ತದೆ ಎಂದು ಪೊಲೀಸ್ ಕಮಿಷನರ್ ಶಶಿಕುಮಾರ್ ತಿಳಿಸಿದ್ದಾರೆ. ಇದರ ಬೆನ್ನಲ್ಲೇ ಮಹಿಳಾ ಠಾಣೆಯಲ್ಲಿ ಅಕ್ಟೋಬರ್ 15ರಂದು ಮಹಿಳಾ ಸಿಬಂದಿ ದಸರಾ ಹೆಸರಲ್ಲಿ ಕುಣಿದು ಕುಪ್ಪಳಿಸಿದ್ದ ವಿಡಿಯೋ ಲೀಕ್ ಆಗಿತ್ತು. ಕರ್ತವ್ಯದ ಅವಧಿಯಲ್ಲೇ ಇನ್ ಸ್ಪೆಕ್ಟರ್ ರೇವತಿ ಸೇರಿದಂತೆ ಮಹಿಳಾ ಸಿಬಂದಿ ಬ್ರೇಕ್ ಡ್ಯಾನ್ಸ್ ಮಾಡಿದ್ದು, ಇದರಿಂದ ಕರ್ತವ್ಯ ಲೋಪ ಆಗಿಲ್ಲವೇ ಎಂಬ ಆಕ್ಷೇಪದ ಮಾತು ಕೇಳಿಬಂದಿತ್ತು. ಹೆಡ್ ಲೈನ್ ಕರ್ನಾಟಕ ಈ ಬಗ್ಗೆ ಎಕ್ಸ್ ಕ್ಲೂಸಿವ್ ರಿಪೋರ್ಟ್ ಮಾಡಿದ್ದು, ಪೊಲೀಸ್ ಇಲಾಖೆಯಲ್ಲಿ ಸಂಚಲನ ಮೂಡಿಸಿತ್ತು.
ದಸರಾ ಸಂಭ್ರಮ ಸಮರ್ಥಿಸಿದ್ದ ಕಮಿಷನರ್
ಆದರೆ ದಸರಾ ನೆಪದಲ್ಲಿ ಮಹಿಳಾ ಸಿಬಂದಿ ಸಂಭ್ರಮಾಚರಣೆ ಮಾಡಿದ್ದನ್ನು ಪೊಲೀಸ್ ಕಮಿಷನರ್ ಸಮರ್ಥಿಸಿದ್ದರು. ಹುಲಿ ವೇಷಗಳ ಜೊತೆಗೆ ಠಾಣೆಯಲ್ಲಿ ಕುಣಿದಿದ್ದಾರೆ ಅಷ್ಟೇ ಎಂದು ಸಮಜಾಯಿಷಿ ನೀಡಿದ್ದರು. ಆದರೆ, ಈ ಸುದ್ದಿ ಹೆಚ್ಚಿನ ಮಾಧ್ಯಮಗಳಲ್ಲಿ ಬರುತ್ತಿದ್ದಂತೆ ಪೊಲೀಸ್ ಕಮಿಷನರ್ ಸಾಹೇಬ್ರಿಗೆ ಬಿಸಿ ಮುಟ್ಟಿದ್ದು, ಇಂದು ಮಹಿಳಾ ಠಾಣೆಯ ಎಲ್ಲ 32 ಸಿಬಂದಿಯನ್ನೂ ಬೇರೆ ಬೇರೆ ಠಾಣೆಗಳಿಗೆ ವರ್ಗಾಯಿಸಿ ಚಾಟಿ ಬೀಸಿದ್ದಾರೆ. ಠಾಣೆಯ ಒಳಗಿನ ಗುಂಪುಗಾರಿಕೆ, ಅಧಿಕಾರಿಗಳ ನಡುವಿನ ಜಡೆ ಜಗಳದ ಬಗ್ಗೆ ಮಾಹಿತಿ ಪಡೆದಿದ್ದ ಕಮಿಷನರ್ ಅಮಾನತುಗೊಂಡ ಐವರು ಸೇರಿದಂತೆ 32 ಸಿಬಂದಿಯನ್ನೂ ಎತ್ತಂಗಡಿ ಮಾಡಿದ್ದಾರೆ.
32 ಸಿಬಂದಿಯ ಬದಲು ಮಹಿಳಾ ಠಾಣೆಗೆ ಹೊಸತಾಗಿ ಎರಡು ಪಿಎಸ್ಐ, ಒಬ್ಬರು ಹೆಡ್ ಕಾನ್ಸ್ ಟೇಬಲ್ ಮತ್ತು 16 ಮಂದಿ ಪೊಲೀಸ್ ಕಾನ್ಸ್ ಟೇಬಲ್ ಗಳನ್ನು ನಿಯೋಜನೆ ಮಾಡಲಾಗಿದೆ. ಮಹಿಳಾ ಠಾಣೆಯ ಇನ್ ಸ್ಪೆಕ್ಟರ್ ರೇವತಿ ಈಗಾಗಲೇ ಅಪಘಾತ ಒಂದರಲ್ಲಿ ವಿಶ್ರಾಂತಿಯಲ್ಲಿದ್ದಾರೆ. ಅವರಿಗೆ ಎರಡು ತಿಂಗಳ ವಿಶ್ರಾಂತಿ ಬೇಕಾಗಿರುವುದರಿಂದ ರೇವತಿಗೆ ಸದ್ಯಕ್ಕೆ ಹೊಸ ಪೋಸ್ಟ್ ತೋರಿಸಲಾಗಿಲ್ಲ.
ಮಹಿಳಾ ಠಾಣೆಯ ಜವಾಬ್ದಾರಿಯನ್ನು ಪ್ರಭಾರ ನೆಲೆಯಲ್ಲಿ ಸಿಸಿಆರ್ ಬಿ ವಿಭಾಗದ ಪೊಲೀಸ್ ನಿರೀಕ್ಷಕರಿಗೆ ವಹಿಸಲಾಗಿದೆ. ಮಹಿಳೆಯರು ಮತ್ತು ಮಕ್ಕಳ ದೌರ್ಜನ್ಯ ಪ್ರಕರಣಗಳಲ್ಲಿ ಮಹಿಳಾ ಠಾಣೆಯು ಅತಿ ಸೂಕ್ಷ್ಮವಾಗಿದ್ದು, ಅಧಿಕಾರಿಗಳ ತನಿಖಾ ಲೋಪ, ಅಶಿಸ್ತು, ಗುಂಪುಗಾರಿಕೆ ಮತ್ತು ಆಂತರಿಕ ಭಿನ್ನಾಭಿಪ್ರಾಯಗಳ ಹಿನ್ನೆಲೆಯಲ್ಲಿ ಎಲ್ಲ 32 ಸಿಬಂದಿಯನ್ನೂ ಎತ್ತಂಗಡಿ ಮಾಡಿಸಿ, ಸರ್ಜರಿ ಮಾಡಲಾಗಿದೆ ಎಂದು ಪೊಲೀಸ್ ಕಮಿಷನರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Mangalore Six police staffs of women police station including woman PSI suspended for consuming alcohol. Police inspector Revathi and Rosamma also have been transferred after their video of dancing inside the station went viral on social media. City police commissioner N Shashi Kumar said that six police officers of the city, including a woman police sub inspector (PSI), are suspended for dereliction of duty in two separate cases. The scribes questioned the city police commissioner in the wake of a video going viral on social media. Shashi Kumar gave details in response to their query and said that they are already kept under suspension.
28-11-24 10:41 pm
Bangalore Correspondent
Karkala Drowning, Udupi News; ಕಾರ್ಕಳದ ದುರ್ಗಾ...
28-11-24 09:41 pm
ಲಾಕಪ್ ಡೆತ್ ; ನಾಲ್ವರು ಪೊಲೀಸರಿಗೆ ಏಳು ವರ್ಷ ಜೈಲು...
28-11-24 05:04 pm
MLA Gaviyappa, DK Shivakumar: ಯಾವುದೇ ಕಾರಣಕ್ಕೂ...
26-11-24 10:46 pm
Shivamogga, Monkey fever, Dinesh Gundu Rao: ಮ...
26-11-24 10:23 pm
27-11-24 02:00 pm
HK News Desk
ರಸ್ತೆ ಬದಿ ಮಲಗಿದ್ದ ಅಲೆಮಾರಿ ಗುಂಪಿನ ಮೇಲಿಂದ ಹರಿದ...
27-11-24 12:36 pm
ಕ್ಯುಆರ್ ಕೋಡ್ ಸಹಿತ ಹೊಸ ನಮೂನೆಯ ಪ್ಯಾನ್ 2.0 ಜಾರಿ...
26-11-24 09:43 pm
BJP Devendra Fadnavis, Eknath Shinde: ಮಹಾರಾಷ್...
26-11-24 07:32 pm
ಪ್ರವಾಸೋದ್ಯಮ ಇಲಾಖೆಗೆ ನಿಗದಿಪಡಿಸಿದ್ದ ದರ್ಶನ ಟಿಕೆಟ...
23-11-24 11:07 pm
28-11-24 09:58 pm
Mangalore Correspondent
Mangalore, DFYI protest, Anupam Agarwal: ಪೊಲೀ...
28-11-24 06:05 pm
VHP, Mangalore, Bangladesh: ಬಾಂಗ್ಲಾದೇಶದಲ್ಲಿ ಹ...
28-11-24 03:24 pm
Belthangady suicide, Crime, Mangalore; ನಂಬಿಸಿ...
28-11-24 02:13 pm
Mangalore, Anupam Agarwal, Ramanatha Rai: ರಸ್...
28-11-24 01:56 pm
27-11-24 03:36 pm
HK News Desk
Mangalore, Robbery, Crime : ಕೊಲ್ಯದ ಜಾಯ್ ಲ್ಯಾಂ...
27-11-24 01:11 pm
Mangalore crime, ACP Dhanya Nayak, Drugs: ಎಸಿ...
26-11-24 03:10 pm
ಹುಬ್ಬಳ್ಳಿ ದರೋಡೆ ಪ್ರಕರಣದಲ್ಲಿ ಮಂಗಳೂರು ನಂಟು ; ಉಳ...
25-11-24 06:17 pm
Honeytrap Bangalore, Crime, Udupi: ಪ್ರೊಫೆಸರ್...
24-11-24 04:33 pm