ಬ್ರೇಕಿಂಗ್ ನ್ಯೂಸ್
25-01-22 11:15 pm Mangalore Correspondent ಕರಾವಳಿ
ಮಂಗಳೂರು, ಜ.25 : ನೀರಿಲ್ಲದ ಭೂಮಿಯಲ್ಲಿ ಗುಡ್ಡಕ್ಕೆ ಸುರಂಗ ಕೊರೆದು ಕೃಷಿ ಭೂಮಿಯನ್ನು ಹಸನಾಗಿಸಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕೇಪು ಗ್ರಾಮದ ಅಮೈ ನಿವಾಸಿ, ಪ್ರಗತಿಪರ ಕೃಷಿಕ ಮಹಾಲಿಂಗ ನಾಯ್ಕ್ ಗೆ ದೇಶದ ಅತ್ಯುನ್ನತ ನಾಗರಿಕ ಗೌರವ ಪದ್ಮಶ್ರೀ ಪ್ರಶಸ್ತಿ ಘೋಷಣೆಯಾಗಿದೆ.
ತಮ್ಮ ಕೃಷಿ ಜಮೀನಿಗೆ ನೀರಿಲ್ಲದ ಸಂದರ್ಭದಲ್ಲಿ ಏಕಾಂಗಿಯಾಗಿ ಸುರಂಗ ಕೊರೆದು ಹಲವು ವರ್ಷಗಳ ಶ್ರಮದ ಬಳಿಕ ಅಂತಿಮವಾಗಿ ನೀರ ಝರಿಯನ್ನು ಹರಿಸಿದ್ದ ಮಹಾಲಿಂಗ ನಾಯ್ಕ್ ಸಾಧನೆ ಈಗ ರಾಷ್ಟ್ರದ ಗಮನ ಸೆಳೆದಿದೆ. ಕರಾವಳಿ ಜಿಲ್ಲೆಗಳಲ್ಲಿ ಕೃಷಿ ನಿಧಾನವಾಗಿ ಹಿನ್ನೆಲೆಗೆ ಸರಿಯುತ್ತಿರುವ ಈ ಸಂದರ್ಭದಲ್ಲಿ ಕೃಷಿಯೇ ಬದುಕಿಗೆ ಮೂಲಾಧಾರವೆಂಬ ಕಲ್ಪನೆಯನ್ನು ಬಿತ್ತುತ್ತಾ ನಿರಂತರ ಸಾಧನೆ ಮೆರೆಯುತ್ತಾ ಗಮನ ಸೆಳೆದ ಅಮೈ ಮಾಹಾಲಿಂಗ ನಾಯ್ಕರಿಗೆ ಪದ್ಮಶ್ರೀ ಪ್ರಶಸ್ತಿ ಒಲಿದು ಬಂದಿದೆ.
ಏಕಾಂಗಿಯಾಗಿ ಅಪಾಯಕಾರಿ ಗುಡ್ಡವನ್ನು ಅಗೆದು ಜೀವಜಲವನ್ನು ತರಿಸಿ ಬೋಳು ಗುಡ್ಡವನ್ನು ನಂದನವನ ಮಾಡಿದ ಪ್ರಗತಿಪರ ಕೃಷಿಕ ಅಮೈ ಮಹಾಲಿಂಗ ನಾಯ್ಕ ಅವರನ್ನು ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಬಂಟ್ವಾಳ ತಾಲೂಕಿನ ವಿಟ್ಲದ ಅಡ್ಯನಡ್ಕ ಸಮೀಪದ ಅಮೈ ನಿವಾಸಿ, ಸಾಮಾನ್ಯ ಕೃಷಿಕ 73ರ ಹರೆಯದ ಮಹಾಲಿಂಗ ನಾಯ್ಕರನ್ನು ಅತ್ಯುನ್ನತ ಪ್ರಶಸ್ತಿಗೆ ಗೌರವಿಸಿದ್ದು ಎಲ್ಲರ ಗಮನ ಸೆಳೆಯುವಂತಾಗಿದೆ.
ಅಡಕೆ, ತೆಂಗಿನ ಮರ ಏರುತ್ತ ಕೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದ ಮಹಾಲಿಂಗ ನಾಯ್ಕ, 40 ವರ್ಷಗಳ ಹಿಂದೆ ಸ್ವಂತ ಕೃಷಿಯ ಕನಸು ಕಂಡಿದ್ದರು. ಆದರೆ ಅವರಲ್ಲಿ ಭೂಮಿ ಇರಲಿಲ್ಲ. ಅವರು ಕೂಲಿಗೆ ಹೋಗುತ್ತಿದ್ದ ಅಮೈ ಮಹಾಬಲ ಭಟ್ಟರೇ ಎರಡು ಎಕರೆ ಭೂಮಿಯನ್ನು ನಾಯ್ಕರಿಗೆ ನೀಡಿದ್ದರು. 1978ರಲ್ಲಿ ಅವರಿಗೆ ಭೂಮಿ ಸಿಕ್ಕಿತ್ತು. ಆದರೆ ಬೋಳುಗುಡ್ಡ ಜಾಗವಾಗಿದ್ದರಿಂದ ಅಲ್ಲಿ ನೀರಿನ ಒರತೆಯೇ ಇರಲಿಲ್ಲ. ಮೊದಲಿಗೆ, ಸಣ್ಣ ಗುಡಿಸಲು ಕಟ್ಟಿದರು. ಕುಡಿಯುವ ನೀರಿಗಾಗಿ ಪಕ್ಕದ ಮನೆಯನ್ನು ಅವಲಂಬಿಸಿದ್ದರು. ತನ್ನ ಎತ್ತರದ ಭೂಮಿಯಲ್ಲಿ ಬಾವಿ ತೋಡುವುದೂ ಅಸಾಧ್ಯ ಎನ್ನುವುದನ್ನರಿತ ನಾಯ್ಕರು, ಸುರಂಗ ಕೊರೆಯುವ ಉಪಾಯ ಹೂಡಿದ್ದರು. ದಿನವೂ ಅರ್ಧ ದಿನ ಕೂಲಿ ಕೆಲಸ, ಉಳಿದ ಹೊತ್ತು ರಾತ್ರಿಯೂ ಸೇರಿ ಸುರಂಗ ಕೊರೆಯಲು ಆರಂಭಿಸಿದ್ದರು. ರಾತ್ರಿ ಸೀಮೆ ಎಣ್ಣೆ, ತೆಂಗಿನೆಣ್ಣೆ ದೀಪದ ಬೆಳಕಲ್ಲೇ ಏಕಾಂಗಿಯಾಗಿ ಸುರಂಗ ಕೊರೆಯ ತೊಡಗಿದ್ದರು.
ಆದರೆ ಮೊದಲ ಸುರಂಗದಲ್ಲಿ ನೀರು ಸಿಕ್ಕಿರಲಿಲ್ಲ. ಆಬಳಿಕ ಸತತ 25 ಮೀಟರ್ ಉದ್ದದ ಐದು ಸುರಂಗಗಳನ್ನು ಕೊರೆದರೂ ನೀರು ಸಿಗದೆ ಜನರಿಂದ ಗೇಲಿಗೊಳಗಾಗುವ ಸ್ಥಿತಿ ಎದುರಾಗಿತ್ತು. ಇದರಿಂದ ನಿರಾಶರಾಗದ ಮಹಾಲಿಂಗ ನಾಯ್ಕ ಭಗೀರಥ ಪ್ರಯತ್ನ ಎಂಬಂತೆ 6ನೇ ಸುರಂಗದ ಕೆಲಸಕ್ಕೆ ಹೊರಟಿದ್ದರು. ಅದರಲ್ಲಿ ಮೊದಲ ಬಾರಿಗೆ ಜೀವಜಲ ಸಿಕ್ಕಿತ್ತು. ಆದರೆ ಕೃಷಿಗೆ ಸಾಕಾಗುವಷ್ಟಿರಲಿಲ್ಲ. ಅದರ ಪಕ್ಕದಲ್ಲೇ 7ನೇ ಸುರಂಗ ಕೊರೆದ ಮಹಾಲಿಂಗ ನಾಯ್ಕರಿಗೆ ನೀರಿನ ಸೆಲೆಯೇ ಸಿಕ್ಕಿತ್ತು. ಅದರಿಂದ ನೀರು ಸಂಗ್ರಹಿಸಲು ಕೃತಕ ಮಣ್ಣಿನ ಕೆರೆ ನಿರ್ಮಿಸಿದರು. ಬಳಿಕ ತನ್ನ ಭೂಮಿಯಲ್ಲಿ ಯಾರೂ ಊಹಿಸದ ರೀತಿ ಭತ್ತ, ಅಡಕೆ, ತೆಂಗು, ಬಾಳೆ ಗಿಡವನ್ನು ನೆಟ್ಟು ಬೆಳೆಸಿದರು. ಆಮೂಲಕ ಯಶಸ್ವೀ ಜಲಸಾಧಕ, ಕೃಷಿಕರೆನಿಸಿಕೊಂಡ ಮಹಾಲಿಂಗ ನಾಯ್ಕರು ಅಪರೂಪದ ಸಾಧಕ ಎನ್ನುವ ಹಿರಿಮೆಗೆ ಪಾತ್ರರಾಗಿದ್ದರು. 2018ರಲ್ಲಿ ಅವರಿಗೆ ಮಂಗಳೂರು ಪ್ರೆಸ್ ಕ್ಲಬ್ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು.
On the eve of the Republic Day, the Centre on Tuesday January 25 announced the list of recipients of the Padma awards. ‘Tunnel Man’ Amai Mahalinga Naik, who single-handedly worked to irrigate his two-acre land and succeeded in raising a small plantation has been chosen for the Padma Shri Award in the ‘Others – Agriculture’ category.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
11-05-25 11:02 pm
HK News Desk
ಭಾರತದ ಮೇಲೆ ದಾಳಿಗೆ ಟರ್ಕಿ ಡ್ರೋಣ್ ಬಳಕೆ ; ಒಂದೇ ರಾ...
11-05-25 06:25 pm
ಆಪರೇಷನ್ ಸಿಂಧೂರ ಇನ್ನೂ ಮುಗಿದಿಲ್ಲ.. ಕದನ ವಿರಾಮ ಘೋ...
11-05-25 06:12 pm
ಜಮ್ಮು ಗಡಿಯಲ್ಲಿ ಪಾಕ್ ಶೆಲ್ ದಾಳಿ ; ಬಿಎಸ್ಎಫ್ ಯೋಧ,...
11-05-25 01:43 pm
India Pak War: ಪೆಟ್ಟು ತಿಂದರೂ ಬಿಡದ ಪಾಕ್ ನರಿಬುದ...
10-05-25 11:05 pm
11-05-25 05:01 pm
Mangalore Correspondent
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm