ಬ್ರೇಕಿಂಗ್ ನ್ಯೂಸ್
30-07-20 07:09 pm Sports Correspondent ಕ್ರೀಡೆ
ಬೆಂಗಳೂರು: ಎಡಗೈ ಬ್ಯಾಟ್ಸ್ಮನ್ ಸುರೇಶ್ ರೈನಾ ಭಾರತ ತಂಡದ ಪರ ಆಡಿ ಗುರುವಾರಕ್ಕೆ 15 ವರ್ಷ ಪೂರೈಸಿದೆ. 2005ರ ಜುಲೈ 30ರಂದು ಡಂಬುಲದಲ್ಲಿ ನಡೆದ ಶ್ರೀಲಂಕಾ ವಿರುದ್ಧದ ಏಕದಿನ ಪಂದ್ಯದಲ್ಲಿ ಅವರು ಮೊದಲ ಬಾರಿಗೆ ಭಾರತ ತಂಡದ ಪರ ಆಡಿದ್ದರು. 15 ಇಯರ್ಸ್ ಆಫ್ ರೈನಾ ಎಂಬ ಹ್ಯಾಷ್ಟ್ಯಾಗ್ ಗುರುವಾರ ಟ್ವಿಟರ್ನಲ್ಲಿ ಭರ್ಜರಿ ಟ್ರೆಂಡಿಂಗ್ನಲ್ಲಿತ್ತು. ಇದೇ ವೇಳೆ ರೈನಾರ ಅಭಿಮಾನಿಗಳು ಅಭಿನಂದನೆ ಸಲ್ಲಿಸಿದ್ದರೆ, ಅವರ ಪತ್ನಿ ಪ್ರಿಯಾಂಕಾ ಚೌಧರಿ ರೈನಾ ಕೂಡ ವಿಶೇಷ ಸಂದೇಶವೊಂದರ ಮೂಲಕ ಪತಿಗೆ ಅಭಿನಂದನೆ ತಿಳಿಸಿದ್ದಾರೆ.
‘ನೀವು ಮೊದಲ ಏಕದಿನ ಅಂತಾರಾಷ್ಟ್ರೀಯ ಪಂದ್ಯವನ್ನು ಆಡಿ 15 ವರ್ಷಗಳು ಕಳೆದಿವೆ. 15 ವರ್ಷಗಳ ಯಶಸ್ಸು, ಏಳು-ಬೀಳುಗಳು, ಕಠಿಣ ಪರಿಶ್ರಮ ಮತ್ತು ಇನ್ನೂ ಹಲವಾರು. ಜಗತ್ತು ನಿಮ್ಮ ಪ್ಯಾಷನ್, ಬದ್ಧತೆ ಮತ್ತು ಅದಕ್ಕೆ ನೀವು ಪ್ರತಿಫಲವಾಗಿ ಪಡೆದ ಬಹುಮಾನವನ್ನು ನೋಡಿದೆ. ನಾನೂ ನಿಮ್ಮ ಕಠಿಣ ಪರಿಶ್ರಮ, ಕೋಪ, ನಿದ್ರೆ ಇಲ್ಲದ ರಾತ್ರಿಗಳು ಮತ್ತು ಯಾವುದೇ ಅಸಂಬದ್ಧವಾದವುಗಳನ್ನು ನಿಮ್ಮತ್ತ ಎಸೆಯುವುದಕ್ಕೆ ಪ್ರತಿರೋಧ ತೋರುವುದನ್ನು ನೋಡಿದ್ದೇನೆ’ ಎಂದು ಪ್ರಿಯಾಂಕಾ ಟ್ವಿಟರ್ನಲ್ಲಿ ಬರೆದುಕೊಂಡಿದ್ದಾರೆ.
‘ನೀವು ಹಾಕಿರುವ ಕಠಿಣ ಪರಿಶ್ರಮಗಳನ್ನು ನಾನು ನೋಡಿದ್ದೇನೆ. ಆಟಕ್ಕೆ ವಾಪಸ್ ನೀಡುವ ವಿಷಯ ಬಂದಾಗ ನೀವು ಯಾವಾಗಲೂ ನೀವಾಗಿರುವಿರಿ. ನಿಮ್ಮನ್ನು ಬೆಂಬಲಿಸಿದವರಿಗೆ ಮತ್ತು ನಿಮ್ಮ ಜೀವನಕ್ಕೆ ಶುಭಹಾರೈಸಿದವರ ವಿಷಯದಲ್ಲೂ ಅಷ್ಟೇ. ಜನರು ತೋರುವ ಪ್ರೀತಿ ಮತ್ತು ನಂಬಿಕೆಯನ್ನು ಪಡೆದುಕೊಳ್ಳಲು ನಾನು ಪುಣ್ಯ ಮಾಡಿರುವೆ ಎಂದು ಯಾವಾಗಲೂ ಹೇಳುತ್ತಿರುತ್ತೀರಿ. ಜತೆಗೆ ಜನರ ನಿರೀಕ್ಷೆಗಳಿಗೆ ತಕ್ಕಂತೆ ನಿಮ್ಮ ಶ್ರೇಷ್ಠ ನಿರ್ವಹಣೆಯನ್ನು ತೋರಲು ಯಾವಾಗಲೂ ಅವಿಶ್ರಾಂತ ಪರಿಶ್ರಮ ಹಾಕುತ್ತಿರುತ್ತೀರಿ’ ಎಂದು ಪ್ರಿಯಾಂಕಾ ಬರೆದುಕೊಂಡಿದ್ದಾರೆ.
‘ಈ ಜಗತ್ತಿನಲ್ಲಿ ಎಲ್ಲ ಸಮಯದಲ್ಲಿ ಪರಿಪೂರ್ಣವಾಗಿರಲು ಸಾಧ್ಯವಿಲ್ಲ ಎಂಬುದು ನಮಗೆಲ್ಲರಿಗೂ ಗೊತ್ತಿದೆ. ಆದರೂ ನೀವು ಎಂದಿಗೂ ನಿಮ್ಮಲ್ಲಿನ ಸಣ್ಣ ಕುಂದುಕೊರತೆಗಳ ವಿಚಾರದಲ್ಲೂ ರಾಜಿ ಆದವರಲ್ಲ. ನಿಮ್ಮ ಕೊಡುಗೆಗಳು, ದಾಖಲೆಗಳು ಮತ್ತು ಸಾಧನೆಗಳೂ ಇದನ್ನು ಹೇಳುತ್ತವೆ. ಟೀಕೆಗಳಿಗೆ ಎಂದೂ ತಲೆಕೆಡಿಸಿಕೊಳ್ಳದೆ ಯಾವಾಗಲೂ ಶಾಂತವಾಗಿರುವ ನಿಮ್ಮ ಮನೋಭಾವವನ್ನು ನಾನು ಮೆಚ್ಚುತ್ತೇನೆ. ನಾನು ಯಾವಾಗಲೂ ನಿಮ್ಮ ಬಗ್ಗೆ ಹೆಮ್ಮೆ ಪಡುತ್ತೇನೆ. ನೀವು ಉನ್ನತ ಸಾಧನೆ ಮಾಡಿರುವಿರಿ ಮತ್ತು ಇನ್ನಷ್ಟು ಸಾಧನೆಗಳಿಗೆ ಅರ್ಹರು. ಅದು ಇನ್ನೂ ನಿಮ್ಮಿಂದ ಸಾಧ್ಯವಿದೆ’ ಎಂದು ಪ್ರಿಯಾಂಕಾ ಪತಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
‘ಚಿನ್ನದ ಹೃದಯ ಹೊಂದಿರುವ ನೀವೊಬ್ಬ ಅಮೂಲ್ಯ ರತ್ನ. ಎಲ್ಲವನ್ನೂ ಪೂರ್ಣ ಹೃದಯದಿಂದ ನೀಡಲು ಬಯಸುತ್ತೀರಿ. ನೀವು ಈಗಿರುವಂತೆಯೇ ಇರಿ. ಶೈನಾಗುತ್ತಿರಿ. ಬೆಳೆಯುತ್ತಿರಿ. ಷರತ್ತುಗಳಿಲ್ಲದೆ ನಿಮ್ಮ ಶ್ರೇಷ್ಠ ನಿರ್ವಹಣೆ ತೋರುತ್ತಿರಿ. ಉಳಿದವು ತನ್ನಿಂದ ತಾನೇ ನಿಮ್ಮನ್ನು ಹಿಂಬಾಲಿಸುತ್ತವೆ. ನಾವು ನಿಮ್ಮನ್ನು ಪ್ರೀತಿಸುತ್ತೇವೆ. ನೀವು ಸಾಧಿಸಿರುವ ಎಲ್ಲದಕ್ಕೂ ನಾವು ಹೆಮ್ಮೆ ಪಡುತ್ತೇವೆ’ ಎಂದು ಪ್ರಿಯಾಂಕಾ ಅವರು ಪುತ್ರಿ ಗ್ರೇಸಿಯಾ ಮತ್ತು ಪುತ್ರ ರಿಯೋ ಹೆಸರನ್ನೂ ಸೇರಿಸಿದ್ದಾರೆ.
ರೈನಾ ಮೊದಲ ಏಕದಿನ ಪಂದ್ಯದಲ್ಲಿ ಶೂನ್ಯಕ್ಕೆ ಔಟಾಗಿದ್ದರು. ಆದರೆ ನಂತರದ ಪಂದ್ಯಗಳಲ್ಲಿ ಉತ್ತಮ ನಿರ್ವಹಣೆ ತೋರಿ ಭಾರತ ತಂಡದಲ್ಲಿ ಸ್ಥಾನ ಭದ್ರಪಡಿಸಿಕೊಂಡಿದ್ದರು. 33 ವರ್ಷದ ರೈನಾ ಭಾರತ ಪರ ಇದುವರೆಗೆ 226 ಏಕದಿನ ಪಂದ್ಯ ಆಡಿದ್ದು, 35.31ರ ಸರಾಸರಿಯಲ್ಲಿ 5,615 ರನ್ ಬಾರಿಸಿದ್ದಾರೆ. 2011ರ ಏಕದಿನ ವಿಶ್ವಕಪ್ ವಿಜೇತ ತಂಡದ ಸದಸ್ಯರೂ ಆಗಿರುವ ರೈನಾ, ಟೂರ್ನಿಯ ಕ್ವಾರ್ಟರ್ಫೈನಲ್ ಮತ್ತು ಸೆಮಿಫೈನಲ್ ಪಂದ್ಯಗಳಲ್ಲಿ ನಿರ್ಣಾಯಕ ಆಟವಾಡಿದ್ದರು. 18 ಟೆಸ್ಟ್ ಮತ್ತು 78 ಟಿ20 ಪಂದ್ಯಗಳಲ್ಲೂ ಅವರು ಭಾರತವನ್ನು ಪ್ರತಿನಿಧಿಸಿದ್ದಾರೆ. ಮುಂಬರುವ ಐಪಿಎಲ್ನಲ್ಲಿ ಅವರು ಚೆನ್ನೈ ಸೂಪರ್ಕಿಂಗ್ಸ್ ತಂಡವನ್ನು ಪ್ರತಿನಿಧಿಸಲಿದ್ದಾರೆ.
18-04-25 05:38 pm
HK News Desk
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
Chennaiyya Swamiji, Caste census: ಪರಿಶಿಷ್ಟ ಜಾ...
17-04-25 11:41 am
Shamanur, CM Siddaramaiah: ರಾಜ್ಯದಲ್ಲಿ ಲಿಂಗಾಯತ...
16-04-25 11:03 pm
18-04-25 02:21 pm
HK News Desk
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
14 ಸಾವಿರ ಕೋಟಿ ವಂಚನೆ ಎಸಗಿ ದೇಶ ಬಿಟ್ಟು ಹೋಗಿದ್ದ ಮ...
14-04-25 05:38 pm
18-04-25 10:17 pm
Mangalore Correspondent
Mangalore Waqf Protest, Adyar, Police, Live:...
18-04-25 12:54 pm
Waqf Protest, Mangalore, Traffic: ಎಪ್ರಿಲ್ 18...
17-04-25 11:06 pm
Karnataka High Court, Waqf protest Mangalore...
17-04-25 10:27 pm
ಸುರತ್ಕಲ್ ಎನ್ಐಟಿಕೆ ಸಂಸ್ಥೆಯಲ್ಲಿ ಮಹತ್ತರ ಫೈಲ್ ಡಿಲ...
17-04-25 04:39 pm
18-04-25 10:59 pm
Mangalore Correspondent
Hyderabad Murder, Mother suicide: ತೆಂಗಿನಕಾಯಿ...
18-04-25 08:14 pm
Dead Baby Found, Garbage, Bangalore crime: ಅಪ...
18-04-25 03:41 pm
Ullal Gang rape, Mangalore, Arrest: ಪಶ್ಚಿಮ ಬಂ...
17-04-25 09:56 pm
Gang Rape, Mangalore, Ullal, Crime: ಪಶ್ಚಿಮ ಬಂ...
17-04-25 03:19 pm