ಆರ್‌ಸಿಬಿಗೆ ಶಾಕ್ – ಎಬಿಡಿ, ಮೋರಿಸ್ ಐಪಿಎಲ್ ಆರಂಭದ ಪಂದ್ಯಗಳನ್ನಾಡುವುದು ಡೌಟ್?

31-07-20 06:40 pm       Headline Karnataka News Network   ಕ್ರೀಡೆ

ಕೊರೊನಾ ವೈರಸ್ ಕಾರಣದಿಂದ ಎಬಿಡಿ ವಿಲಿಯರ್ಸ್ ಸೇರಿದಂತೆ ಸೌತ್ ಆಫ್ರಿಕಾದ ಎಲ್ಲ ಆಟಗಾರರು ಐಪಿಎಲ್ ಆರಂಭದ ಪಂದ್ಯಗಳಿಗೆ ಅಲಭ್ಯವಾಗಲಿದ್ದಾರೆ ಎಂದು ವರದಿಯಾಗಿದೆ.

ನವದೆಹಲಿ: ಕೊರೊನಾ ವೈರಸ್ ಕಾರಣದಿಂದ ಎಬಿಡಿ ವಿಲಿಯರ್ಸ್ ಸೇರಿದಂತೆ ಸೌತ್ ಆಫ್ರಿಕಾದ ಎಲ್ಲ ಆಟಗಾರರು ಐಪಿಎಲ್ ಆರಂಭದ ಪಂದ್ಯಗಳಿಗೆ ಅಲಭ್ಯವಾಗಲಿದ್ದಾರೆ ಎಂದು ವರದಿಯಾಗಿದೆ.

ಕೊರೊನಾ ವೈರಸ್ ಲಾಕ್‍ಡೌನ್‍ನಿಂದ ಮಾರ್ಚ್ ತಿಂಗಳಿನಲ್ಲಿ ಆರಂಭವಾಗಬೇಕಿದ್ದ ಐಪಿಎಲ್ ಸೆಪ್ಟಂಬರ್ 19ರಿಂದ ಯುಎಇಯಲ್ಲಿ ನಡೆಸಲು ಬಿಸಿಸಿಐ ತೀರ್ಮಾನಿಸಿದೆ. ಆದರೆ ಇದೇ ಕೊರೊನಾ ವೈರಸ್ ಕಾರಣದಿಂದ ದಕ್ಷಿಣ ಆಫ್ರಿಕಾದ ಹಲವು ಆಟಗಾರರು ಐಪಿಎಲ್ ಆರಂಭದ ಪಂದ್ಯಗಳನ್ನು ಮಿಸ್ ಮಾಡಿಕೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಇದರಿಂದ ಬೆಂಗಳೂರು ತಂಡಕ್ಕೆ ಹೆಚ್ಚು ನಷ್ಟವಾಗಲಿದೆ.

ವಿಶ್ವಕ್ಕೆ ಕಂಟಕವಾಗಿರುವ ಕೊರೊನಾ, ದಕ್ಷಿಣ ಆಫ್ರಿಕಾದಲ್ಲಿ ಅಟ್ಟಹಾಸ ಮೆರೆಯುತ್ತಿದೆ. ಹೀಗಾಗಿ ಅಲ್ಲಿನ ಸರ್ಕಾರ ಸೆಪ್ಟಂಬರ್ ಅಂತ್ಯದವರೆಗೂ ಇಡೀ ದೇಶವನ್ನೇ ಲಾಕ್‍ಡೌನ್ ಮಾಡಿದೆ. ಜೊತೆಗೆ ಅಂತಾರಾಷ್ಟ್ರೀಯ ವಿಮಾನಯಾನವನ್ನು ಸಂಪೂರ್ಣವಾಗಿ ನಿರ್ಬಂಧ ಮಾಡಿದೆ. ದಕ್ಷಿಣ ಆಫ್ರಿಕಾದ ತಜ್ಞರು ಸೆಪ್ಟಂಬರ್ ಅಂತ್ಯದವರೆಗೂ ಲಾಕ್‍ಡೌನ್ ತೆರವು ಮಾಡುವುದು ಬೇಡ ಎಂದು ಸರ್ಕಾರ ಸಲಹೆ ನೀಡಿದ್ದಾರೆ. ಈ ಕಾರಣದಿಂದ ಸೆಪ್ಟಂಬರ್ ಮಧ್ಯಭಾಗದಿಂದ ಆರಂಭವಾಗುವ ಐಎಪಿಲ್ ಆರಂಭದ ಪಂದ್ಯಗಳಿಗೆ ಸೌತ್ ಆಫ್ರಿಕಾದ ಆಟಗಾರರು ಅಲಭ್ಯರಾಗಲಿದ್ದಾರೆ.

ಈ ನಡುವೆ ಐಪಿಎಲ್ ಪ್ರಾಂಚೈಸಿಗಳು ವಿಶೇಷ ವಿಮಾನ ಮೂಲಕ ಆಟಗಾರರನ್ನು ಕರೆಸಿಕೊಳ್ಳುವುದಾಗಿ ಹೇಳಿಕೊಂಡಿವೆ. ಆದರೆ ಸೌತ್ ಆಫ್ರಿಕಾ ಸರ್ಕಾರ ಈ ಬಗ್ಗೆ ಯಾವುದೇ ಅನುಮತಿಯನ್ನು ಈವರೆಗೆ ನೀಡಿಲ್ಲ. ಒಂದು ವೇಳೆ ಅಲ್ಲಿನ ಸರ್ಕಾರ ಅನುಮತಿ ನೀಡದಿದ್ದರೆ ಆರ್ಸಿಬಿ ತಂಡಕ್ಕೆ ಹೆಚ್ಚಿನ ನಷ್ಟವಾಗಲಿದೆ. ಆರ್‌ಸಿಬಿ ಸೌತ್ ಆಫ್ರಿಕಾದ ಮೂರು ಪ್ರಮುಖ ಆಟಗಾರರನ್ನು ಮಿಸ್ ಮಾಡಿಕೊಳ್ಳಲಿದೆ. ತಂಡದ ಸ್ಫೋಟಕ ಬ್ಯಾಟ್ಸ್ ಮ್ಯಾನ್ ಎಬಿಡಿ ವಿಲಿಯರ್ಸ್, ವೇಗಿ ಡೇಲ್ ಸ್ಟೇನ್ ಹಾಗೂ ಆಲ್‍ರೌಂಡರ್ ಕ್ರಿಸ್ ಮೋರಿಸ್ ಅವರು ಮಿಸ್ ಆಗಲಿದ್ದಾರೆ. ಮೋರಿಸ್ ಅವರನ್ನು ಆರ್ಸಿಬಿ 10 ಕೋಟಿ ಕೊಟ್ಟು ಖರೀದಿ ಮಾಡಿದೆ.

ಸ್ಪಿನ್ನರ್ ಇಮ್ರಾನ್ ತಹೀರ್ ಹೊರತುಪಡಿಸಿ ಸೌತ್ ಆಫ್ರಿಕಾದ ಎಲ್ಲ ಆಟಗಾರರು ಐಪಿಎಲ್ ಆರಂಭದ ಪಂದ್ಯಗಳನ್ನು ಮಿಸ್ ಮಾಡಿಕೊಳ್ಳಲಿದ್ದಾರೆ. ಎಬಿ ಡಿವಿಲಿಯರ್ಸ್ (ಆರ್‌ಸಿಬಿ), ಕ್ವಿಂಟನ್ ಡಿ ಕಾಕ್ (ಎಂಐ), ಡೇಲ್ ಸ್ಟೇನ್ (ಆರ್‌ಸಿಬಿ), ಕ್ರಿಸ್ ಮೋರಿಸ್ (ಆರ್‌ಸಿಬಿ), ಕಗಿಸೊ ರಬಾಡಾ (ಡಿಸಿ), ಲುಂಗಿ ಎನ್‍ಜಿಡಿ (ಸಿಎಸ್‍ಕೆ), ಫಾಫ್ ಡು ಪ್ಲೆಸಿಸ್ (ಸಿಎಸ್‍ಕೆ), ಇಮ್ರಾನ್ ತಾಹಿರ್ (ಸಿಎಸ್‍ಕೆ) , ಡೇವಿಡ್ ಮಿಲ್ಲರ್ (ಆರಾರ್), ಹಾರ್ಡಸ್ ವಿಲ್ಜೋಯೆನ್ (ಕೆಎಕ್ಸ್‍ಐಪಿ) ಈ ಎಲ್ಲ ಆಟಗಾರರು ಈ ಬಾರಿಯ ಐಪಿಎಲ್ ಆಡಲು ಸಿದ್ಧರಿದ್ದರು.