ಬ್ರೇಕಿಂಗ್ ನ್ಯೂಸ್
05-10-23 12:34 pm ರಾಜಕೀಯ ವಿಶ್ಲೇಷಣೆ ; ಆರ್.ಟಿ ವಿಠಲಮೂರ್ತಿ, ಹಿರಿಯ ಪತ್ರಕರ್ತರು ಅಂಕಣಗಳು
ಗೃಹ ಸಚಿವ ಡಾ.ಜಿ.ಪರಮೇಶ್ವರ್ ಮುಂದಿನ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಹೊರಹೊಮ್ಮುತ್ತಿದ್ದಾರೆ. ರಾಜ್ಯ ಕಾಂಗ್ರೆಸ್ ಪಾಳಯವನ್ನು ಹೊಕ್ಕು ನೋಡಿದರೆ ಇದು ಸ್ಪಷ್ಟವಾಗುತ್ತದೆ. ಅಷ್ಟೇ ಅಲ್ಲ, ಈ ಅಂಶವೇ ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಪಾಲಿಗೆ ಹೊಸ ತಲೆನೋವಾಗಿ ಪರಿಣಮಿಸಿದೆ.
ಅಂದ ಹಾಗೆ ಪರಮೇಶ್ವರ್ ಅವರು ತಮ್ಮ ಸೀನಿಯಾರಿಟಿಯನ್ನು ಮುಂದಿಟ್ಟುಕೊಂಡು ಮುಖ್ಯಮಂತ್ರಿ ಅಭ್ಯರ್ಥಿಯಾಗಲು ಹೊರಟಿದ್ದರೆ ಡಿ.ಕೆ.ಶಿವಕುಮಾರ್ ಅವರು ತಲೆ ಬಿಸಿ ಮಾಡಿಕೊಳ್ಳುವ ಅಗತ್ಯವಿರಲಿಲ್ಲ. ಆದರೆ ಅವರು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಹೊರಹೊಮ್ಮುತ್ತಿರುವುದರ ಹಿಂದೆ ತಮ್ಮ ಪವರ್ ಫುಲ್ ಎದುರಾಳಿಯ ಒತ್ತಾಸೆ ಇದೆ ಎಂಬುದು ಡಿಕೆಶಿ ಅನುಮಾನ.
ಈ ಅನುಮಾನ ಸುಖಾ ಸುಮ್ಮನೆ ಮೊಳೆತಿಲ್ಲ. ಬದಲಿಗೆ ಪರ್ಸನಲ್ ಗೂಢಚಾರರು ಡಿಕೆಶಿ ಅವರಿಗೆ ಒಂದರ ಹಿಂದೊಂದು ಸಾಕ್ಷ್ಯಾಧಾರಗಳನ್ನು ಕೊಡುತ್ತಿದ್ದಾರೆ. ಅವರ ಪ್ರಕಾರ, ಸರ್ಕಾರ ಅಸ್ತಿತ್ವಕ್ಕೆ ಬಂದ ಶುರುವಿನಲ್ಲಿ ಜಿ.ಪರಮೇಶ್ವರ್ ಕಂಫರ್ಟಬಲ್ ಆಗಿರಲಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಗೃಹ ಸಚಿವರಾದರೂ ತಮ್ಮ ಇಚ್ಚೆಯಂತೆ ಕೆಲಸ ಮಾಡಲು ಆಗುತ್ತಿಲ್ಲ.ಹೀಗೆ ಹಸ್ತಕ್ಷೇಪ ನಡೆದರೆ ನಾನು ಈ ಖಾತೆಯನ್ನು ನಿರ್ವಹಿಸುವುದು ಹೇಗೆ?ಎಂದು ತಮ್ಮ ಆಪ್ತರ ಬಳಿ ಅವರು ಅಸಮಾಧಾನ ತೋಡಿಕೊಳ್ಳುತ್ತಿದ್ದರು. ಅಂತಹ ಪರಮೇಶ್ವರ್ ಇದೀಗ ಇದ್ದಕ್ಕಿದ್ದಂತೆ ಸಾಫ್ಟ್ ಆಗಿದ್ದಾರೆ. ಹೀಗೆ ಅವರು ಸಾಫ್ಟ್ ಆಗಿದ್ದಾರೆ ಎಂದ ಮಾತ್ರಕ್ಕೆ ಗೃಹ ಇಲಾಖೆಯಲ್ಲಿ ಅವರು ಬಯಸಿದ್ದೆಲ್ಲ ನಡೆಯುತ್ತಿದೆ ಅಂತಲೂ ಅಲ್ಲ, ಆದರೂ ಈ ಬಗ್ಗೆ ಆಪ್ತರ ಮುಂದೆ ಅವರು ಚಕಾರ ಎತ್ತುತ್ತಿಲ್ಲ. ಅವರಿಗೆ ಸಿಕ್ಕ ಒಂದು ಪ್ರಾಮಿಸ್ಸೇ ಇದಕ್ಕೆ ಮುಖ್ಯ ಕಾರಣ.ಮುಂದಿನ ಮುಖ್ಯಮಂತ್ರಿ ಕ್ಯಾಂಡಿಡೇಟ್ ಆಗಿ ನೀವು ಎಮರ್ಜ್ ಆಗಲು ನಮ್ಮ ಸಹಮತವಿದೆ ಎಂಬುದೇ ಈ ಪ್ರಾಮಿಸ್ಸು. ಇದು ಸಿಕ್ಕ ನಂತರ ಪರಮೇಶ್ವರ್, ಹೆಚ್ಚುವರಿ ಡಿಸಿಎಂಗಳು ಬೇಕು ಅಂತ ಸಚಿವ ರಾಜಣ್ಣ ಶುರು ಮಾಡಿದ ರಾಗಕ್ಕೆ ಕೋರಸ್ ಕೊಡುತ್ತಿದ್ದಾರೆ ಎಂಬುದು ಗೂಢಚಾರರ ಮೆಸೇಜು. ಯಾವಾಗ ಈ ಮೆಸೇಜು ಮುಟ್ಟಿತೋ? ಇದಾದ ನಂತರ ಡಿಕೆಶಿ ಎಚ್ಚೆತ್ತಿದ್ದಾರೆ. ಅಷ್ಟೇ ಅಲ್ಲ, ಮುಂದೆ ಸಿಎಂ ಆಗಬೇಕಾದ ತಮ್ಮ ದಾರಿಗೆ ಅಡ್ಡಲಾಗಿ ಸೈಜುಗಲ್ಲು ಇಡುವ ಕೆಲಸವಾಗುತ್ತಿದೆ ಎಂಬ ತೀರ್ಮಾನಕ್ಕೆ ಬಂದಿದ್ದಾರೆ.ಈ ಬೆಳವಣಿಗೆ ಮುಂದಿನ ದಿನಗಳಲ್ಲಿ ಯಾವ್ಯಾವ ರೂಪ ಪಡೆಯುತ್ತದೋ ಗೊತ್ತಿಲ್ಲ. ಆದರೆ ಗೃಹ ಸಚಿವ ಜಿ.ಪರಮೇಶ್ವರ್ ಅವರು ಸಿಎಂ ಹುದ್ದೆಯ ರೇಸಿನಲ್ಲಿ ಸ್ಪಷ್ಟವಾಗಿ ಕಾಣಿಸಿದರೆ ರಾಜ್ಯ ಕಾಂಗ್ರೆಸ್ ನ ದೊಡ್ಡ ಶಾಸಕರ ಗುಂಪು ಅವರ ಬೆನ್ನಿಗೆ ನಿಲ್ಲುವ ಸಾಧ್ಯತೆಗಳು ಜಾಸ್ತಿ.
ಅಂದ ಹಾಗೆ ಇವತ್ತಿನ ಮಟ್ಟಿಗೆ ಇದು ಸಾಧ್ಯವೇ?ಎಂಬ ಪ್ರಶ್ನೆ ಕಾಡಬಹುದು.ಆದರೆ ಅಧಿಕಾರಕ್ಕೆ ಬಂದ ಸಂದರ್ಭದಲ್ಲಿ ಡಿಕೆಶಿ ಮನವೊಲಿಸಲು ಕಾಂಗ್ರೆಸ್ ವರಿಷ್ಟರು ಅಧಿಕಾರ ಹಂಚಿಕೆಯ ಮಾತನಾಡಿದ್ದರೂ ನಾಳೆ ಶಾಸಕಾಂಗ ಪಕ್ಷದಲ್ಲಿ ಹೆಚ್ಚು ಬಲವಿರುವವರೇ ಮುಖ್ಯಮಂತ್ರಿಯಾಗಬೇಕು ಎಂಬ ಕೂಗೆದ್ದರೆ ಅದನ್ನು ಸಾರಾಸಗಟಾಗಿ ನಿರಾಕರಿಸುವುದು ಅವರಿಗೆ ಕಷ್ಟವಾಗಲಿದೆ.ಎಷ್ಟೇ ಆದರೂ ಕರ್ನಾಟಕದಲ್ಲಿ ಪಕ್ಷವನ್ನು ಬಲಿಷ್ಟಗೊಳಿಸಲು ದುಡಿದವರು ಪರಮೇಶ್ವರ್,ಈ ಹಿಂದೆ ಕೆಪಿಸಿಸಿ ಅಧ್ಯಕ್ಷರಾಗಿ ಸತತವಾಗಿ ಏಳು ವರ್ಷಗಳ ಕಾಲ ದುಡಿದ ಪರಮೇಶ್ವರ್ 2013 ರಲ್ಲಿ ಪಕ್ಷ ಅಧಿಕಾರಕ್ಕೆ ಬರಲು ಕಾರಣರಾಗಿದ್ದರು.ಅಂತವರಿಗೆ ಈಗ ಒಂದು ಅವಕಾಶ ಸಿಗುತ್ತದೆ ಎಂದಾಗ ಹೈಕಮಾಂಡ್ ಅದಕ್ಕೆ ಅಡ್ಡಗಾಲು ಹಾಕಿತು ಎಂದರೆ ದಲಿತ ಮತ ಬ್ಯಾಂಕಿನ ಮೇಲೆ ಅದು ಪ್ರತಿಕೂಲ ಪರಿಣಾಮ ಬೀರಬಹುದು. ಹೀಗಾಗಿ ಮುಂದಿನ ಮುಖ್ಯಮಂತ್ರಿ ಹುದ್ದೆಯ ರೇಸಿನಲ್ಲಿ ಅವರ ಹೆಸರು ಕಾಣಿಸಿಕೊಳ್ಳಲಿದೆ ಎಂದರೆ ಅದು ಭವಿಷ್ಯದಲ್ಲಿ ನಾನಾ ರೀತಿಯ ಸಮಸ್ಯೆಗಳಿಗೆ ಕಾರಣವಾಗಬಹುದು ಎಂಬುದು ಡಿಕೆಶಿ ಲೆಕ್ಕಾಚಾರ. ಆದರೆ ಈ ಲೆಕ್ಕಾಚಾರವನ್ನು ಮಸುಕು ಮಾಡುವ ತಂತ್ರ ಅವರಿಗೂ ಹೊಳೆಯುತ್ತಿಲ್ಲ ಎಂಬುದು ಕಾಂಗ್ರೆಸ್ ಪಾಳಯದ ಮಾತು.
ಡಿಕೆಶಿ ದೂರಿಗೆ ವೇಣುಗೋಪಾಲ್ ಹಿಂಜರಿದಿದ್ದೇಕೆ?
-------------------------
ಅಂದ ಹಾಗೆ ಉಪ ಮುಖ್ಯಮಂತ್ರಿ ಪಟ್ಟವನ್ನು ಒಪ್ಪಿಕೊಂಡ. ದಿನದಿಂದಲೇ ತಮ್ಮ ಸುತ್ತ ಚಕ್ರವ್ಯೂಹ ಹೆಣೆಯುವ ಕೆಲಸ ಶುರುವಾಗಿದೆ ಅಂತ ಡಿ.ಕೆ.ಶಿವಕುಮಾರ್ ಅವರಿಗೆ ಗೊತ್ತು. ಹೀಗಾಗಿ ಮೊನ್ನೆ ಎಕ್ಸ್ ಟ್ರಾ ಡಿಸಿಎಂ ವಿವಾದ ಶುರುವಾದ ಕೂಡಲೇ ಅವರು ಕನಲಿದ್ದರು. ಈ ಪೈಕಿ ಸಹಕಾರ ಸಚಿವ ಕೆ.ಎನ್.ರಾಜಣ್ಣ,ಒಕ್ಕಲಿಗರ ಜತೆ ಲಿಂಗಾಯತ್ರು,ದಲಿತ್ರು,ಮುಸ್ಲಿಮರನ್ನೂ ಡಿಸಿಎಂ ಮಾಡಬೇಕು ಎಂದರೆ ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಅವರು,ಡಿಕೆಶಿ ಪ್ರಿನ್ಸಿಪಲ್ ಡಿಸಿಎಂ ಆಗಲಿ, ಉಳಿದಂತೆ ಮಹಿಳೆ ಸೇರಿ ಐದು ಮಂದಿ ಡಿಸಿಎಂ ಆಗಲಿ ಎಂದರು.
ಇದಕ್ಕೆ ಅವರು ಪಾರ್ಲಿಮೆಂಟ್ ಚುನಾವಣೆಯನ್ನು ತೋರಿಸಿದರಾದರೂ ಅದು ತಮ್ಮನ್ನು ದುರ್ಬಲಗೊಳಿಸುವ ತಂತ್ರ ಎಂಬುದು ಡಿಕೆಶಿಗೆ ಗೊತ್ತಿತ್ತು.
ಹಾಗಂತಲೇ ಪಕ್ಷದ ರಾಷ್ಟ್ರೀಯ ನಾಯಕ ಕೆ.ಸಿ.ವೇಣುಗೋಪಾಲ್ ಅವರನ್ನು ಸಂಪರ್ಕಿಸಿದ ಅವರು, ತಲಾ ಎರಡೂವರೆ ವರ್ಷ ಸಿದ್ದರಾಮಯ್ಯ, ನೀವು ಸಿಎಂ ಅಂತ ಹೈಕಮಾಂಡ್ ನಿರ್ಧರಿಸಿದರೂ ಇಲ್ಲಿ ನನ್ನನ್ನು ದುರ್ಬಲಗೊಳಿಸುವ ಆಟ ಶುರುವಾಗಿದೆ ಎಂದರು.
ಆಗೆಲ್ಲ ವೇಣುಗೋಪಾಲ್ ಅವರು,ಡೋಂಟ್ ವರಿ ಶಿವಕುಮಾರ್ ಜೀ. ಯಾರೇನೇ ಹೇಳಿದರೂ ನಿಮಗೆ ಸಿಗುವ ಪೋಸ್ಟು ಸಿಕ್ಕೇ ಸಿಗುತ್ತದೆ ಎಂದರು. ಆದರೆ ಅದನ್ನೊಪ್ಪದ ಡಿಕೆಶಿ,ನೋ ನೋ ಹಾಗಂದ್ರೆ ಹೇಗೆ ಸಾರ್?ಅವತ್ತು ಬಿ.ಕೆ.ಹರಿಪ್ರಸಾದ್ ಅವರು ಸಿದ್ದರಾಮಯ್ಯ ಅವರ ವಿರುದ್ಧ ಪರೋಕ್ಷ ಹೇಳಿಕೆ ನೀಡಿದ್ರು ಅಂತ ಹೈಕಮಾಂಡ್ ಅವರಿಗೆ ಷೋಕಾಸ್ ನೋಟೀಸ್ ಜಾರಿ ಮಾಡಿತು.ಆದರೆ ಈಗ ಮಂತ್ರಿ ಮಂಡಲದಲ್ಲಿರುವವರೇ ಅನಗತ್ಯವಾಗಿ ಡಿಸಿಎಂ ಹುದ್ದೆಯ ಬಗ್ಗೆ ಮಾತನಾಡುತ್ತಾ ಗೊಂದಲವೆಬ್ಬಿಸುತ್ತಿದ್ದಾರೆ.ಹೀಗಾಗಿ ವಿವರಣೆ ಕೇಳಿ ಅವರಿಗೂ ನೋಟೀಸ್ ಕೊಡಿ ಎಂದರು.
ಡಿಕೆಶಿ ಹೇಳಿದ್ದನ್ನು ಕೇಳಿದ ಕೆ.ಸಿ.ವೇಣುಗೋಪಾಲ್ ಅವರು;ಈಗ ನೋಟೀಸ್ ಕೊಡಬೇಕೆಂದರೆ ಐದಾರು ಮಂದಿ ಮಂತ್ರಿಗಳಿಗೆ ಕೊಡಬೇಕು.ಹಾಗೇನಾದರೂ ಮಾಡಿದರೆ ಸರ್ಕಾರದಲ್ಲಿ ದೊಡ್ಡ ಸಮಸ್ಯೆಯಿದೆ ಎಂಬ ಭಾವನೆ ಬರುತ್ತದೆ.ಹೀಗಾಗಿ ಈ ರೀತಿ ಯಾರೂ ಮಾತನಾಡಬಾರದು ಅಂತ ಟೈಟು ಮಾಡುತ್ತೇನೆ ಸುಮ್ಮನಿರಿ ಅಂತ ಹೇಳಿದವರು ಒಂದು ಹೋಲ್ ಸೇಲ್ ಸರ್ಕ್ಯುಲರ್ ಹೊರಡಿಸಿ ಸುಮ್ಮನಾದರು.
ಇಷ್ಟಾದ ಮೇಲೂ ಡಿ.ಕೆ.ಶಿವಕುಮಾರ್ ಅವರಿಗೆ ಸಮಾಧಾನವೇನೂ ಆಗಿಲ್ಲ.ಯಾಕೆಂದರೆ ಈ ಸರ್ಕ್ಯುಲರ್ ಬಂದ ನಂತರ ಎಲ್ಲರೂ ನಾಲ್ಕು ದಿನ ಸುಮ್ಮನಿರುತ್ತಾರೆ.ನಂತರ ಬೇರೆ ರೂಪದಲ್ಲಿ ಕಿರಿಕಿರಿ ಶುರುವಿಟ್ಟುಕೊಳ್ಳುತ್ತಾರೆ ಎಂಬುದು ಅವರಿಗೆ ಗೊತ್ತು.
ಗೃಹ ಸಚಿವ ಡಾ.ಜಿ.ಪರಮೇಶ್ವರ್ ಈಗ ಭವಿಷ್ಯದ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಎಮರ್ಜ್ ಆಗುತ್ತಿತರುವುದು ಇದಕ್ಕೆ ಸಾಕ್ಷಿ. ಆದರೆ ಹಾಗಂತ ವೇಣುಗೋಪಾಲ್ ಅವರಿಗೆ ಇದನ್ನು ಮತ್ತಷ್ಟು ಗಟ್ಟಿಯಾಗಿ ಹೇಳುವುದು ಕಷ್ಟ ಅಂತಲೂ ಡಿಕೆಶಿಗೆ ಗೊತ್ತಿದೆ.
ಕಾರಣ?ಇವತ್ತು ಹೈಕಮಾಂಡ್ ಮಟ್ಟದಲ್ಲಿ ಮೇಡಂ ಸೋನಿಯಾಗಾಂಧಿ ಮತ್ತು ಪ್ರಿಯಾಂಕ ಗಾಂಧಿ ತಮಗೆ ಫೆವರಬಲ್ ಆಗಿದ್ದರೂ ರಾಹುಲ್ ಗಾಂಧಿ,ಕೆ.ಸಿ.ವೇಣುಗೋಪಾಲ್ ಮತ್ತು ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರೆಲ್ಲ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಪರವಾಗಿದ್ದಾರೆ.
ಹೋಗಲಿ,ತಮಗಾಗುತ್ತಿರುವ ಕಿರಿಕಿರಿಯ ಬಗ್ಗೆ ಸೋನಿಯಾಗಾಂಧಿ ಇಲ್ಲವೇ ಪ್ರಿಯಾಂಕ ಗಾಂಧಿ ಬಳಿ ಹೇಳಿಕೊಳ್ಳೋಣ ಎಂದರೆ ಅವರು ತಕ್ಷಣ ವೇಣುಗೋಪಾಲ್ ಅವರ ಕಡೆ ಕೈ ತೋರಿಸುತ್ತಾರೆ.
ಒಂದು ಕಾಲದಲ್ಲಿ ಸೋನಿಯಾಗಾಂಧಿಯವರು ತಮ್ಮ ರಾಜಕೀಯ ಕಾರ್ಯದರ್ಶಿಯಾಗಿದ್ದ ಅಹ್ಮದ್ ಪಟೇಲ್ ಅವರನ್ನು ಎಷ್ಟರ ಮಟ್ಟಿಗೆ ನೆಚ್ಚಿಕೊಂಡಿದ್ದರೋ?ಇವತ್ತು ಅದೇ ಮಟ್ಟದಲ್ಲಿ ಕೆ.ಸಿ.ವೇಣುಗೋಪಾಲ್ ಅವರನ್ನು ನೆಚ್ಚಿಕೊಂಡಿದ್ದಾರೆ.
ಹೀಗಾಗಿ ವೇಣುಗೋಪಾಲ್ ವಿಷಯದಲ್ಲಿ ಡಿಕೆಶಿ ಎಚ್ಚರದಿಂದಿದ್ದಾರೆ.ಏನೋ ಮಾಡಲು ಹೋಗಿ ನಾಳೆ ಇನ್ನೇನೋ ಆಗಬಾರದಲ್ಲ?
ಅಮಿತ್ ಷಾ ಕೆರಳುತ್ತಾರಂತೆ
------------------------------
ಕಳೆದ ವಾರ ತಮ್ಮ ಮನೆಗೆ ಬಂದಿದ್ದ ಆಹಾರ ಸಚಿವ ಕೆ.ಹೆಚ್.ಮುನಿಯಪ್ಪ ಮತ್ತು ಹಿರಿಯ ನಾಯಕ ಬಿ.ಕೆ.ಹರಿಪ್ರಸಾದ್ ಅವರ ಜತೆ ಡಿಸಿಎಂ ಡಿಕೆಶಿ ಸುಧೀರ್ಘವಾಗಿ ಚರ್ಚಿಸಿದರಂತೆ. ಈ ಸಂದರ್ಭದಲ್ಲಿ ಬಿಜೆಪಿ-ಜೆಡಿಎಸ್ ಹೊಂದಾಣಿಕೆಯ ಕುರಿತೂ ಪ್ರಸ್ತಾಪವಾಗಿದೆ.
ಈ ಸಂದರ್ಭದಲ್ಲಿ ಡಿಕೆಶಿ:ನೋಡ್ತಾ ಇರಿ,ಬಿಜೆಪಿ ಜತೆ ಕೈ ಜೋಡಿಸಿರೋ ಜೆಡಿಎಸ್ ಪಕ್ಷದಿಂದ ಹೊರಬರಲು ಹದಿಮೂರು ಮಂದಿ ಶಾಸಕರು ರೆಡಿ ಆಗಿದ್ದಾರೆ.ಹೀಗೆ ಅವರು ಬಂದರೆ ಮೈತ್ರಿ ಕೂಟದ ಪವರ್ರೇ ಡೌನ್ ಆಗುತ್ತದೆ ಎಂದಿದ್ದಾರೆ.
ಆದರೆ ಅವರ ಮಾತು ಕೇಳಿದ ಬಿ.ಕೆ.ಹರಿಪ್ರಸಾದ್,ಯಾವ ಕಾರಣಕ್ಕೂ ಆಪರೇಷನ್ ಜೆಡಿಎಸ್ ಗೆ ಕೈ ಹಾಕಬೇಡಿ.ಯಾಕೆಂದರೆ ಅವರು ಯಾವತ್ತೂ ಕಾಂಗ್ರೆಸ್ ಪಕ್ಷವನ್ನು ಒಡೆಯಲು ಕೈ ಹಾಕಿಲ್ಲ.ಈಗ ನಾವು ಕೈ ಹಾಕಿದರೆ ಅದು ದುಬಾರಿಯಾಗಬಹುದು ಎಂದಿದ್ದಾರೆ.
ಹಾಗೆಯೇ ಮುಂದುವರಿದು,ಇವತ್ತು ಜೆಡಿಎಸ್ ಪಕ್ಷ ಏಕಾಂಗಿಯಲ್ಲ.ಅವರು ಈಗಾಗಲೇ ಬಿಜೆಪಿ ಜತೆ ಕೈ ಜೋಡಿಸಿದ್ದಾರೆ.ಹೀಗಾಗಿ ಇವತ್ತು ನಾವು ಜೆಡಿಎಸ್ ಗೂಡಿಗೆ ಕೈ ಹಾಕಿದರೆ ಬಿಜೆಪಿ ನಾಯಕ ಅಮಿತ್ ಷಾ ಕೆರಳುತ್ತಾರೆ.
ಎಷ್ಟೇ ಆದರೂ ಇವತ್ತು ರಾಷ್ಟ್ರ ಮಟ್ಟದಲ್ಲಿ ಬಿಜೆಪಿಯ ಶಕ್ತಿ ಕುಗ್ಗುತ್ತಿದೆ.ಮಹಾರಾಷ್ಟ್ರದಲ್ಲಿ ಕಳೆದ ಬಾರಿ ಶಿವಸೇನೆ ಜತೆ ಸೇರಿ ಬಿಜೆಪಿ ನಲವತ್ತೊಂದು ಪಾರ್ಲಿಮೆಂಟ್ ಸೀಟು ಗೆದ್ದಿತ್ತು.ಆದರೆ ಈ ಸಲ ಶಿವಸೇನೆಯ ಒಂದು ತುಂಡು ಬಿಜೆಪಿ ಜತೆಗಿದ್ದರೂ,ಮೂಲ ಶಿವಸೇನೆಯ ಪವರ್ರು ಉದ್ದವ್ ಠಾಕ್ರೆ ಜತೆಗಿದೆ.ಹೀಗಾಗಿ ಈ ಸಲ ಬಿಜೆಪಿ ಹತ್ತು ಪಾರ್ಲಿಮೆಂಟ್ ಸೀಟು ಗೆಲ್ಲುವುದೂ ಕಷ್ಟ.
ಇದೇ ರೀತಿ ಬಿಹಾರದಲ್ಲಿ ನಿತೀಶ್ ಕುಮಾರ್ ಅವರ ಸಂಯುಕ್ತ ಜನತಾದಳದ ಜತೆ ಸೇರಿ ಬಹುತೇಕ ಪಾರ್ಲಿಮೆಂಟ್ ಸೀಟುಗಳನ್ನು ಗೆದ್ದಿದ್ದರು.
ಆದರೆ ಬದಲಾದ ಸನ್ನಿವೇಶದಲ್ಲಿ ನಿತೀಶ್ ಕುಮಾರ್ ಬಿಜೆಪಿಯಿಂದ ದೂರ ಸರಿದು ನಿಂತಿದ್ದಾರೆ.ಹೀಗಾಗಿ ಈ ಸಲ ಅಲ್ಲಿ ಬಿಜೆಪಿಯ ಗಳಿಕೆ ಹತ್ತು ಸೀಟುಗಳ ಗಡಿ ತಲುಪುವುದು ಕಷ್ಟ.
ಇನ್ನು ಪಶ್ಚಿಮಬಂಗಾಳದಲ್ಲಿ ಕಳೆದ ಬಾರಿ ಬಿಜೆಪಿ ಹದಿನೆಂಟು ಸೀಟುಗಳನ್ನು ಗಳಿಸಿತ್ತು.ಆದರೆ ಈಗ ತೃಣಮೂಲ ಕಾಂಗ್ರೆಸ್ಸಿನ ಮಮತಾ ಬ್ಯಾನರ್ಜಿ ಅವರ ಗ್ರಾಫು ಎಷ್ಟು ಮೇಲೆದ್ದಿದೆ ಎಂದರೆ ಈ ಸಲ ಅಲ್ಲಿ ಬಿಜೆಪಿ ಐದು ಸೀಟು ಗೆಲ್ಲುವುದೂ ಕಷ್ಟ.
ಹೀಗೆ ಮೂರೇ ರಾಜ್ಯಗಳಲ್ಲಿ ಎಪ್ಪತ್ತರಷ್ಟು ಸೀಟುಗಳನ್ನು ಕಳೆದುಕೊಳ್ಳುವ ಆತಂಕ ಇರುವುದರಿಂದ ಮೋದಿ-ಅಮಿತ್ ಷಾ ಜೋಡಿ ದಕ್ಷಿಣ ಭಾರತದ ಕಡೆ ಗಮನ ಹರಿಸಿದೆ.
ಆಂಧ್ರಪ್ರದೇಶದಲ್ಲಿ ವೈ.ಎಸ್.ಅರ್ ಕಾಂಗ್ರೆಸ್ಸಿನ ಜಗನ್ ಮೋಹನ್ ರೆಡ್ಡಿ ಜತೆ,ತೆಲಂಗಾಣದಲ್ಲಿ ಕೆ.ಚಂದ್ರಶೇಖರರಾವ್ ಜತೆ ಸೇರಿ ಮಿನಿಮಮ್ ಮೂವತ್ತೈದು ಸೀಟುಗಳ ಗಿಫ್ಟು ನಿರೀಕ್ಷಿಸುತ್ತಿರುವ ಈ ಜೋಡಿ ಕರ್ನಾಟಕದಲ್ಲಿ ಇಪ್ಪತ್ತಕ್ಕೂ ಹೆಚ್ಚು ಸೀಟು ಗೆಲ್ಲುವ ಹವಣಿಕೆಯಲ್ಲಿದೆ.
ಇದಕ್ಕಾಗಿ ಈ ಜೋಡಿ ಯಾವ ಲೆವೆಲ್ಲಿಗೆ ಬೇಕಾದರೂ ಹೋಗಬಹುದು.ಹೀಗಿರುವಾಗ ತಮ್ಮ ಜತೆ ಮೈತ್ರಿ ಮಾಡಿಕೊಂಡಿರುವ ಜೆಡಿಎಸ್ ಪಕ್ಷವನ್ನು ಮುಟ್ಟಲು ಹೋದರೆ ಅವರು ಸುಮ್ಮನಿರುತ್ತಾರೆ ಅಂತ ಭಾವಿಸಬೇಡಿ.ಅಮಿತ್ ಷಾ ಬಗ್ಗೆ ನನಗೆ ಚೆನ್ನಾಗಿ ಗೊತ್ತು.
ಆ್ಯಕ್ಚುವಲಿ,ಅಸೆಂಬ್ಲಿ ಎಲೆಕ್ಷನ್ ಟೈಮಿನಲ್ಲೇ ನಮಗೆ ಕಿರುಕುಳ ಶುರುವಾಗಬೇಕಿತ್ತು.ಆದರೆ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ನಿರ್ಮಲಾನಂದ ಶ್ರೀಗಳ ಬಗೆಗಿನ ಗೌರವ ಮತ್ತು ಒಕ್ಕಲಿಗ ಮತ ಬ್ಯಾಂಕಿನ ಮೇಲೆ ಪ್ರತಿಕೂಲ ಪರಿಣಾಮವಾಗಬಹುದು ಅಂತ ಹಳೆ ಮೈಸೂರು ಪಾಕೇಟಿಗೆ ಅವರು ಕೈ ಹಾಕಿರಲಿಲ್ಲ. ಆದರೆ ಮುಂದಿನ ದಿನಗಳಲ್ಲಿ ಅವರು ಇದೇ ರಿಡಕ್ಷನ್ನು ತೋರಿಸುತ್ತಾರೆ ಅಂದುಕೊಳ್ಳಬೇಡಿ.ಹೀಗಾಗಿ ಜೆಡಿಎಸ್ ಒಡೆಯುವ ಸಾಹಸವೂ ಬೇಡ ಎಂದಿದ್ದಾರೆ ಹರಿಪ್ರಸಾದ್.
ಅವರಾಡಿದ ಮಾತು ಕೇಳಿದ ನಂತರ ಡಿಕೆಶಿ ಸ್ವಲ್ಪ ಹೊತ್ತು ಸುಮ್ಮನಿದ್ದರಂತೆ.
R T Vittal Murthy article on Chief Minister post, Parameshwara. Dk Shivakumar, KC Venugopal, BK Hariprasad.
22-12-24 10:23 am
HK News Desk
Bangalore Volvo Car Accident: ಕೋಟಿ ಬೆಲೆಯ ಕಾರಿ...
21-12-24 09:28 pm
CT Ravi Released: ಸಿ.ಟಿ.ರವಿ ಬಂಧನ ಖಂಡಿಸಿ ರಾಜ್ಯ...
20-12-24 10:43 pm
C T Ravi Arrested, Minister Lakshmi Hebbalkar...
19-12-24 08:05 pm
Chikkamagaluru, Elephant Attack: ಚಿಕ್ಕಮಗಳೂರಲ್...
19-12-24 06:36 pm
20-12-24 05:01 pm
HK News Desk
ಅಂಬೇಡ್ಕರ್ ಘೋಷಣೆ ಫ್ಯಾಶನ್ ಆಗಿಬಿಟ್ಟಿದೆ ಎಂದ ಅಮಿತ್...
19-12-24 05:40 pm
ಮುಂಬೈನಲ್ಲಿ ಪ್ರವಾಸಿಗರಿದ್ದ ಫೆರ್ರಿ ಹಡಗಿಗೆ ನೌಕಾಪಡ...
18-12-24 10:37 pm
One Nation, One Election Bill; ವಿಪಕ್ಷಗಳ ಗದ್ದಲ...
17-12-24 05:31 pm
ಹನಿಮೂನ್ ಮುಗಿಸಿ ಹಿಂತಿರುಗುತ್ತಿದ್ದ ವಧೂ- ವರರು ಮನೆ...
16-12-24 04:19 pm
22-12-24 06:04 pm
Udupi Correspondent
Celebrate Christmas and New Year in Style wit...
22-12-24 12:33 am
Mangalore Heli Tourism: ಮಂಗಳೂರು ನಗರ ದರ್ಶನಕ್ಕೆ...
21-12-24 08:16 pm
Praveen Nettaru Murder, NIA Arrest: ಪ್ರವೀಣ್ ನ...
21-12-24 11:30 am
Anil Lobo MCC Bank Arrest, Court: ಬ್ಯಾಂಕ್ ಸಾಲ...
20-12-24 09:48 pm
22-12-24 07:23 pm
Bangalore Correspondent
Mangalore Police, Cyber Fraud: ಕಮಿಷನ್ ಆಸೆಗೆ ಬ...
22-12-24 04:44 pm
Puttur, Gold Robbery, Mangalore Crime: ಪುತ್ತೂ...
21-12-24 07:45 pm
Mangalore, Fraud case, Odisha: ನಕಲಿ ಷೇರು ಮಾರು...
21-12-24 06:24 pm
Kodagu Fake Gold Bank Case; ಕೇರಳದಲ್ಲಿ ನಕಲಿ ಚಿ...
20-12-24 08:20 pm