ಬ್ರೇಕಿಂಗ್ ನ್ಯೂಸ್
01-11-21 09:50 pm N ShashiKumar, Mangaluru C.P ಅಂಕಣಗಳು
ಪ್ರೀತಿಯ ಅಪ್ಪು..
ನೆರಳಿಡೋ ಮರವಿದು
ಮುಳ್ಳಿನ ಜನ್ಮವ
ಬೇಡಲೇಬಾರ್ದಯ್ಯ ಮರ
ಮರವನೆ ಮರಿ ಹಾಕ್ಲಯ್ಯಾ...
ಇದು ದಿಗ್ಗಜರು ಚಿತ್ರದ ವಿಷ್ನುವರ್ಧನ್ ಮತ್ತು ಅಂಬರೀಷ್ ಜೋಡಿಯ 'ಕುಚಿಕು ಕುಚಿಕು ಕುಚಿಕು ' ಹಾಡಿನ ಕೆಲ ಸಾಲುಗಳು. ಅದರಂತೆ ಮನೆಮಂದಿಯೆಲ್ಲ ಜೊತೆಯಾಗಿ ಬಾಳುತ್ತಿರುವವರು ನಮ್ಮ ದೊಡ್ಮನೆಯ ಕುಟುಂಬ ಸದಸ್ಯರು.
ಕನ್ನಡಿಗರು, ಕರ್ನಾಟಕದವರು ಯಾರು? ಮತ್ತವರ ಗುಣ ನಡತೆ, ಹೃದಯ ವೈಶಾಲ್ಯತೆ ಹೇಗೆ ಎಂದು ನೋಡ ಬಯಸುವವರು ನಮ್ಮ ದೊಡ್ಮನೆ ಕುಟುಂಬದ ಬಗ್ಗೆ ತಿಳಿದರೆ ಸಾಕು ಮತ್ತೇನೂ ಬೇಡ ಅನಿಸತ್ತೆ.
ಕನ್ನಡ ನಾಡು, ನುಡಿ ಸಂಸ್ಕೃತಿ ಇತಿಹಾಸದ ಬಗ್ಗೆ ಪ್ರಪಂಚಕ್ಕೆ ಸಾರಿ ಹೇಳಿದವರು ನಿಮ್ಮ ತಂದೆ ಡಾ. ರಾಜ್ ಕುಮಾರ್ ಅವರು. ಅವರಂತೆಯೇ ಕನ್ನಡ ಚಿತ್ರರಂಗದಲ್ಲಿ ಹೆಮ್ಮರದಂತೆ ಇದ್ದು ನಿರ್ಮಾಪಕಿಯಾಗಿ ಸಹಸ್ರಾರು ಕುಟುಂಬಗಳನ್ನು ಸಾಕಿ ಸಲಹಿ ಹಲವು ನಟ ನಟಿಯರನ್ನು ಚಿತ್ರರಂಗಕ್ಕೆ ಅರ್ಪಿಸಿದವರು ನಿಮ್ಮ ತಾಯಿ ಪಾರ್ವತಮ್ಮ ರಾಜಕುಮಾರ್.
ತಮ್ಮ ಪ್ರತಿಭೆಯಷ್ಟೇ ಅಲ್ಲದೆ ತಮ್ಮ ನಯ, ವಿನಯ, ಸಹನೆ ಸರಳತೆಯಿಂದ ಕರ್ನಾಟಕದಲ್ಲಿ ಮನೆ ಮಾತಾದವರು ನಿಮ್ಮ ಅಣ್ಣಂದಿರಾದ ಶಿವರಾಜ್ ಕುಮಾರ್ ಮತ್ತು ರಾಘವೇಂದ್ರ ರಾಜ್ ಕುಮಾರ್ ರವರು. ಇವರೆಲ್ಲರ ನಡುವೆ ನಕ್ಷತ್ರಗಳ ನಡುವೆ ಹೊಳೆಯುವ ಚಂದ್ರನಂತೆ ಇದ್ದವರು ನೀವು. ನಮ್ಮ ಅಪ್ಪು, ನಮ್ಮ ರಾಜಕುಮಾರ, ನಮ್ಮ ಮನೆ ಮಗ ಪುನೀತ್ ರಾಜ್ ಕುಮಾರ್.
ನಿಮ್ಮ ಅಪ್ಪು ಚಿತ್ರದಿಂದ ಯುವರತ್ನದ ವರೆಗೂ ಒಂದೂ ಚಿತ್ರವನ್ನು ಬಿಡದೆ ನೋಡಿದವರು ನಾವು. ನಿಮ್ಮ ಸರಿಸುಮಾರು ಎಲ್ಲ ಹಾಡುಗಳನ್ನು ಕಲಿತು ಹಾಡಿದವರು ನಾವು. ದೊಡ್ಮನೆ ಕುಟುಂಬದ ಮಗನಾಗಿದ್ದರೂ ಯಾವುದೇ ಅಹಂಕಾರದ ನೆರಳು ನಿಮ್ಮ ಮೇಲೆ ಬೀಳದ್ದನ್ನು ಕಂಡು ಬೆರಗಾದವರು ನಾವು. ನಿಮ್ಮ ನಡೆ, ನುಡಿ, ಮಾತು, ಸಾರ್ವಜನಿಕವಾಗಿ ನೀವು ನಡೆದುಕೊಳ್ಳುತ್ತಿದ್ದ ರೀತಿ, ನಿಮ್ಮ ಸರಳತೆ, ಗುರು ಹಿರಿಯರಲ್ಲಿ ತಮಗಿದ್ದ ಗೌರವ, ದೇವರಲ್ಲಿ ತಮಗಿದ್ದ ಭಕ್ತಿ, ಎಲೆ ಮರೆಯ ಕಾಯಂತಿದ್ದು ತಾವು ಮಾಡಿದ ಸಮಾಜಮುಖಿ ಕಾರ್ಯಗಳು ಸದಾ ಅನುಕರಣೀಯ.
ಚಿಕ್ಕ ಮಕ್ಕಳಿಂದ ವಯಸ್ಸಾದ ವೃದ್ಧರ ವರೆಗೂ ನಾವು ನಿಮ್ಮನ್ನು ಇಷ್ಟಪಟ್ಟಿದ್ದು ನಟನೆಗೂ ಹೆಚ್ಚಿನದಾದ ನಿಮ್ಮ ವ್ಯಕ್ತಿತ್ವಕ್ಕೆ. ಇಂದು ಕನ್ನಡಿಗರ ಕರ್ನಾಟಕದ ಹಾಗೂ ತಮ್ಮ ಬಗ್ಗೆ ತಿಳಿದಿರುವ ಪ್ರತಿಯೊಬ್ಬರೂ ಕಂಬನಿ ಮಿಡಿಯುತ್ತಿರುವುದು, ತಮ್ಮ ಮನೆಯ ಮಗನೋ, ಅಣ್ಣನೋ, ತಮ್ಮನೋ ಹೀಗೆ ಕಾಣದಂತೆ ಏಕೆ ಮಾಯವಾದ ಎಂದು.
ಒಂದೆರಡು ಚಿತ್ರಗಳು ಯಶಸ್ವಿಯಾದೊಡನೆ ತಲೆ ನಿಲ್ಲದವರಂತೆ ವರ್ತಿಸುವ ಈಗಿನ ಕಲಾವಿದರ ನಡುವೆ ಅಪರೂಪವಾಗಿ ನಿಲ್ಲುವವರು ನೀವು ಮತ್ತು ನಿಮ್ಮ ಕುಟುಂಬ. ಅಪ್ಪು ನಮ್ಮ ನೆಚ್ಚಿನ ನಾಯಕ ಎಂದು ಹೇಳಿಕೊಳ್ಳಲು ಹೆಮ್ಮೆ ಪಡುತ್ತಿದ್ದ ಅಭಿಮಾನಿಗಳು ನಾವು. ಏಳೆಂಟು ದಶಕಗಳ ಇತಿಹಾಸ ನಿಮ್ಮ ದೊಡ್ಮನೆಗೆ ಇದ್ದರೂ ಸದಾ ನವ ನಟನಂತೆ ಸರಳತೆಯಿಂದ ಇರುತ್ತಿದ್ದುದು ಹೇಗೆ ಮರೆಯಲಾದೀತು.
ಅಪ್ಪು ನೀವು ಕನ್ನಡಿಗರ ಮತ್ತು ಕರ್ನಾಟಕದವರ ಸಾಂಸ್ಕೃತಿಕ ರಾಯಭಾರಿ. ನಮ್ಮೆಲ್ಲರ ಹೆಮ್ಮೆ. ಯುವಜನತೆಗೆ ದಾರಿದೀಪ ಆಗಿದ್ದವರು. ನಿಮ್ಮ ಅಗಲಿಕೆ ಇಡೀ ರಾಜ್ಯಕ್ಕೆ ತುಂಬಲಾರದ ನಷ್ಟ. ನಮ್ಮ ಭಾವನೆಯೇ ಹೀಗಿರುವಾಗ ನಿಮ್ಮ ಕುಟುಂಬದ ನೋವು ಯಾರ ಊಹೆಗೂ ನಿಲುಕುವಂತಹುದಲ್ಲ.
ಒಬ್ಬ ಅಪ್ಪಟ ಅಪ್ಪು ಅಭಿಮಾನಿಯಾಗಿ ನನ್ನ ಪ್ರಾರ್ಥನೆಯೊಂದೇ. ಈ ದುರಂತದಿಂದ ಹೊರಬರುವ ಶಕ್ತಿ ದೊಡ್ಮನೆಗೆ ಆ ಭಗವಂತ ನೀಡಲಿ. ಅಪ್ಪು,, ಶಿವಣ್ಣ, ವಿನಯ್ ಮತ್ತು ಯುವರಾಜ್ ಕುಮಾರ್ ಅವರಲ್ಲಿ ನಿಮ್ಮನ್ನು ಪರದೆಯ ಮೇಲೆ ನೋಡ ಬಯಸುತ್ತೇವೆ. ಗೀತಕ್ಕ, ಅಶ್ವಿನಿ ಅವರಲ್ಲಿ ಹಾಗೂ ನಿಮ್ಮ ಮತ್ತು ಶಿವಣ್ಣನ ಮಕ್ಕಳಲ್ಲಿ ನಿಮ್ಮ ಕನಸು ನನಸಾಗುವುದು ಕಾಣ ಬಯಸುತ್ತೇವೆ. ಸದಾ ಎಲ್ಲರಿಗೂ ಸ್ಫೂರ್ತಿಯಾಗಿದ್ದ ತಮಗೆ ಪದ್ಮಶ್ರೀ ನೀಡಿದಲ್ಲಿ ಪದ್ಮಶ್ರೀಗೆ ಗೌರವ ಬಂದಂತಾಗುತ್ತದೆ.
ಮತ್ತು ಅಪ್ಪು ನಮ್ಮ ಕೊನೆಯ ಆಸೆ..
ಅಪ್ಪು ನಮ್ಮೆಲ್ಲರಿಗಾಗಿ
ಮತ್ತೊಮ್ಮೆ ಹುಟ್ಟಿಬಾ
ಮತ್ತೊಮ್ಮೆ ಹುಟ್ಟಿ ಬಾ
ಮತ್ತೊಮ್ಮೆ ಹುಟ್ಟಿ ಬಾ...
ಶಶಿಕುಮಾರ್ ಎನ್
ನಿಮ್ಮ ಅಭಿಮಾನಿ.
27-03-25 06:41 pm
HK News Desk
Nandini Milk Rate: ಬೆಲೆ ಏರಿಕೆ ಬಿಸಿಯಿಂದ ತತ್ತರಿ...
27-03-25 04:49 pm
Yatnal, BJP, Karnataka Congress Twitter: ಈಗ '...
27-03-25 02:03 pm
BJP MLA Yatnal, Tweet: 'ಸತ್ಯವಂತರಿಗಿದು ಕಾಲವಲ್ಲ...
27-03-25 01:00 pm
BJP Yatnal Out, Vijayapura, BY Vijayendra: ಬಿ...
26-03-25 09:42 pm
27-03-25 04:07 pm
HK News Desk
ರಾಹುಲ್ ಗಾಂಧಿ ಭಾರತೀಯ ಪೌರತ್ವ ಹೊಂದಿದ್ದಾರೋ, ಇಲ್ಲ...
25-03-25 04:06 pm
Justice Yashwant Varma: ಭಾರೀ ಪ್ರಮಾಣದ ನೋಟು ಸುಟ...
24-03-25 03:54 pm
Delhi High Court judge Varma: ಹೈಕೋರ್ಟ್ ಜಡ್ಜ್...
23-03-25 02:40 pm
15 ವರ್ಷದ ಹುಡುಗನಿಂದ ಗರ್ಭವತಿ ; ಹರೆಯದಲ್ಲಿ ಮಾಡಿದ...
22-03-25 09:50 pm
27-03-25 08:45 pm
Mangalore Correspondent
Mangalore Kukke Subrahmanya Temple: ರಾಜ್ಯದ ಶ್...
27-03-25 07:53 pm
Bedra Bus Saudi, Mangalore, Moodbidri: ಸೌದಿಯಲ...
27-03-25 04:39 pm
U T Khader, Ullal, Cashew: ದೇಶದಲ್ಲಿ 90 ಶೇ. ಗೇ...
27-03-25 01:42 pm
Mangalore Anirvedha Organization: ಅನಿರ್ವೇದ ಸಂ...
26-03-25 10:02 pm
27-03-25 01:37 pm
HK News Desk
Bangalore Fake Marksheet, Arrest: ನಕಲಿ ಅಂಕಪಟ್...
26-03-25 11:19 pm
ಮನೆ ಮಾಲೀಕನ ಪತ್ನಿಯೊಂದಿಗೆ ಅಕ್ರಮ ಸಂಬಂಧ ಶಂಕೆ ; ಯೋ...
26-03-25 11:08 pm
Mangalore Dharmasthala PSI P Kishor, Wife Att...
26-03-25 08:38 pm
ಸೈಬರ್ ಕೇಸಿನಲ್ಲಿ ಆರೋಪಿಗಳನ್ನು ವಶಕ್ಕೆ ಪಡೆಯಲು ಲಂಚ...
26-03-25 08:00 pm